ವೇದ, ಉಪನಿಷತ್ತುಗಳು ಮತ್ತು ಭಾರತೀಯ ಜೀವನಪದ್ಧತಿಯ ಕುರಿತು ಪಾಶ್ಚಿಮಾತ್ಯ ವಿಚಾರವಂತರ ಗೌರವೋದ್ಗಾರ !

ಪ್ರಸ್ತುತ ಪಾಶ್ಚಿಮಾತ್ಯ ಜೀವನಶೈಲಿಯು ನಮ್ಮ ಜೀವನದ ಮೇಲೆ ಬಹಳ ಪ್ರಭಾವ ಬೀರಿದೆ. ನಮ್ಮ ಜೀವನಶೈಲಿಗೆ ಪೂರಕವಿಲ್ಲದಿರುವ ಅನೇಕ ಪಾಶ್ಚಿಮಾತ್ಯ ವಿಷಯಗಳನ್ನು ನಾವು ಕಣ್ಮುಚ್ಚಿ ಸ್ವೀಕರಿಸಿದ್ದೇವೆ. ಇದರಿಂದ ನಾವು ನಮ್ಮ ಸಂಸ್ಕೃತಿ ಮತ್ತು ಜೀವನಪದ್ಧತಿಗೆ ಹಾನಿ ಮಾಡಿದ್ದೇವೆ. ‘ಪಾಶ್ಚಿಮಾತ್ಯರಿಂದ ಬಂದಿರುವುದೆಲ್ಲ ಉತ್ತಮವಾಗಿದೆ’, ಎಂಬುದು ನಮ್ಮ ಭ್ರಮೆಯಾಗಿದೆ. ಇದರ ಹಿಂದಿನ ಕಾರಣವೆಂದರೆ, ನಮ್ಮ ಮಾನಸಿಕ ಮತ್ತು ಬೌದ್ಧಿಕ ಗುಲಾಮಗಿರಿ ! ‘ದೇಶ ಸ್ವತಂತ್ರವಾಯಿತು; ಆದರೆ ಮಾನಸಿಕ ಮತ್ತು ಬೌದ್ಧಿಕ ಗುಲಾಮಗಿರಿಯಿಂದ ನಾವು ಸ್ವತಂತ್ರರಾಗಿದ್ದೇವೆ’, ಎನ್ನಲಾಗದು 

೧. ವಿವಾಹವಿಚ್ಛೇದನೆಯು ಭಾರತೀಯ ಜೀವನಶೈಲಿಯನ್ನು ಬೇಧಿಸುವ ಪದ್ಧತಿ !

ನಮ್ಮ ದೇಶದಲ್ಲಿ ವಿವಾಹವಿಚ್ಛೇದನೆಯ ಕಾನೂನು ಅಸ್ತಿತ್ವದಲ್ಲಿ ಬಂದಿತು. ಅದು ನಮ್ಮ ಜೀವನಶೈಲಿಗೆ ಹಾನಿಕರವಾಗಿದ್ದರೂ ನಾವು ಅದನ್ನು ಸ್ವೀಕರಿಸಿದೆವು. ವಿವಾಹವಿಚ್ಛೇದನೆ ಕಾನೂನು ಅಸ್ತಿತ್ವಕ್ಕೆ ಬಂದಾಗ ಅದು ಹಿಂದೂ ಸಂಸ್ಕೃತಿ ಮತ್ತು ಭಾರತೀಯ ಜೀವನಶೈಲಿಗೆ ಹಾನಿಕರವಾಗಿದೆ, ಎಂದು ಹಿಂದೂಗಳು ನಮ್ಮ ಮನಸ್ಸಿಗೆ ತಿಳಿಸಿ ಹೇಳಲಿಲ್ಲ; ಆದ್ದರಿಂದ ಅದರ ಆಧಾರವನ್ನು ಎಂದಿಗೂ ಪಡೆಯಬಾರದು ಅಥವಾ ಅದನ್ನು ಬಳಸಬಾರದು. ಒಂದು ವೇಳೆ ಈ ಕಾನೂನನ್ನು  ನಾವು ಉಪಯೋಗಿಸಿದರೆ, ನಮ್ಮ ವಿವಾಹ ಸಂಸ್ಥೆಗಳು ಹಾಳಾಗುವವು. ಪ್ರಸ್ತುತ ದೇಶದಲ್ಲಿ ವಿವಾಹವಿಚ್ಛೇದನೆಯ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ.

‘ವಿವಾಹವು ೭ ಜನ್ಮಗಳ ಬಂಧನವಾಗಿದೆ’, ಎಂದು ನಮ್ಮ ಭಾರತೀಯ ಜೀವನಶೈಲಿ ಹೇಳುತ್ತದೆ. ನಮ್ಮ ಜೀವನಶೈಲಿಗೆ ಧಕ್ಕೆಯನ್ನುಂಟು ಮಾಡುವ ವಿವಾಹವಿಚ್ಛೇದನೆ ಪದ್ಧತಿಯನ್ನು ನಾವು ಸ್ವೀಕರಿಸಿದ್ದೇವೆ. ವಿವಾಹವು ಒಂದು ಸಂಸ್ಕಾರವಾಗಿದ್ದು ಪಾಶ್ಚಿಮಾತ್ಯರಂತೆ ಅದು ಕರಾರು ಅಲ್ಲ. ಅಗ್ನಿ, ದೇವರು ಮತ್ತು ಬ್ರಾಹ್ಮಣರ ಸಾಕ್ಷಿಯಿಂದ ಪತಿ-ಪತ್ನಿಯರು ‘೭ ಜನ್ಮಗಳ ವರೆಗೆ ಪರಸ್ಪರರು ಜೊತೆಯಲ್ಲಿರುತ್ತೇವೆ’ ಎಂದು ಪ್ರತಿಜ್ಞೆ ಮಾಡಿರುತ್ತಾರೆ. ಈ ವಚನವನ್ನು ವಿವಾಹವಿಚ್ಛೇದನೆಯ ಕಾನೂನು ನೆನಪು ಮಾಡಿಕೊಡಲಿಲ್ಲ. ‘ಮದುವೆ ಎಂದರೆ ಒಪ್ಪಂದವಲ್ಲ’, ಎಂಬುದನ್ನೂ ನಾವು ಮರೆತಿದ್ದೇವೆ. ಅಂತಹದರಲ್ಲಿ ‘ಲಿವ್ ಇನ್ ರಿಲೇಶನ್‌ಶಿಪ್’ಅನ್ನೂ ನಾವು ಸ್ವೀಕರಿಸುತ್ತಿದ್ದೇವೆ. ಜಗತ್ತಿನಲ್ಲಿನ ಎಲ್ಲ ವಿದ್ವಾಂಸರು ಮತ್ತು ಬುದ್ಧಿಜೀವಿಗಳು ‘ಭಾರತೀಯ ಜೀವನ ಶೈಲಿ ಸರ್ವಶ್ರೇಷ್ಠವಾಗಿದೆ’, ಎಂದು ಗೌರವಿಸುತ್ತಾರೆ. ಅದರ ಅರಿವೂ ನಮಗಿಲ್ಲ.

ಶ್ರೀ. ದುರ್ಗೇಶ ಪರುಳಕರ

೨. ಭಾರತಭೂಮಿಗೆ ಪೂರಕವಾದ ವಾನಪ್ರಸ್ಥಾಶ್ರಮ !

ವಾಸ್ತವವಾಗಿ ನಮ್ಮಲ್ಲಿ ವಾನಪ್ರಸ್ಥಾಶ್ರಮ ಈ ಕಲ್ಪನೆಯು ತುಂಬಾ ಹಿಂದಿನ ಕಾಲದಿಂದ ಬಂದಿದೆ. ಒಟ್ಟಿಗಿರುವ ಕುಟುಂಬ ವ್ಯವಸ್ಥೆ ಅಥವಾ ಗೃಹಸ್ಥಾಶ್ರಮವು ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದ ಅಡಿಪಾಯವಾಗಿದೆ. ಪಾಶ್ಚಿಮಾತ್ಯ ಜೀವನಶೈಲಿಯನ್ನು ಸ್ವೀಕರಿಸಿರುವುದರಿಂದ ನಾವು ಇದರತ್ತ ಗಮನ ಕೊಡಲಿಲ್ಲ. ಅದರ ಪರಿಣಾಮದಿಂದ ಅನಾಥ ಆಶ್ರಮ, ವೃದ್ಧಾಶ್ರಮ ಇಂತಹ ಸಂಸ್ಥೆಗಳು ಭಾರತದ ಪವಿತ್ರ ಭೂಮಿಯಲ್ಲಿ ಅಸ್ತಿತ್ವದಲ್ಲಿ ಬಂದವು. ಭಾರತೀಯ ಜೀವನಶೈಲಿಗೆ ಇಂತಹ ಸಂಸ್ಥೆಗಳ ಅಸ್ತಿತ್ವವು ಲಜ್ಜಾಸ್ಪದವಾಗಿದೆ, ಎಂಬ ಅರಿವೂ ನಮಗಿಲ್ಲ. ಇಷ್ಟೊಂದು ನಾವು ಪಾಶ್ಚಿಮಾತ್ಯ ಜೀವನಶೈಲಿಯನ್ನು ಸ್ವೀಕರಿಸಿರುವುದರಿಂದ ಬೌದ್ಧಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ನಾವು ಮರಗಟ್ಟಿದ್ದೇವೆ. ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿರುವವರ ಕಾರ್ಯವು ಸಮಾಜವನ್ನು ಪುನಃಸ್ಥಾಪಿಸುವುದು ಮತ್ತು ಮಾರ್ಗದರ್ಶನ ಮಾಡುವುದಾಗಿದೆ. ಅನುಭವವಿರುವ ಜೇಷ್ಠ ನಾಗರಿಕರು ಭಾರತೀಯ ಸಂಸ್ಕೃತಿಯಲ್ಲಿನ ಉನ್ನತ ಮೌಲ್ಯಗಳನ್ನು ರಕ್ಷಿಸಲು ತಮ್ಮ ಜೀವನವನ್ನು ಕಳೆಯಬೇಕು. ಹೊಸ ಪೀಳಿಗೆಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಸಂಪೂರ್ಣ ಜಗತ್ತನ್ನು ಸುಸಂಸ್ಕೃತಗೊಳಿಸುವ ವೇದಗಳ ಘೋಷಣೆಯು ಎಷ್ಟು ಮಹತ್ವದ್ದಾಗಿದೆ, ಎಂಬುದನ್ನು ಅವರಿಗೆ ತಿಳಿಸಿ ಹೇಳುವ ಮಹಾನ ಕಾರ್ಯವನ್ನು ಜೇಷ್ಠ ನಾಗರಿಕರು ಮಾಡಬೇಕಾಗಿದೆ. ಇಂದು ಅದನ್ನೂ ನಾವು ಮರೆತಿದ್ದೇವೆ. ಭಾರತಭೂಮಿಗೆ ಪೂರಕವಾಗಿರುವ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸದೇ ನಾವು ಬೇರೆ ಮಾರ್ಗದಿಂದ ಹೋಗುತ್ತಿದ್ದೇವೆ.

೩. ಪಾಶ್ಚಿಮಾತ್ಯ ಜೀವನಶೈಲಿಯ ಅಂಗೀಕಾರ, ಎಂದರೆ ಅದು ಬುದ್ಧಿಹೀನತೆಯ ಲಕ್ಷಣ  !

ನಾವು ನಮ್ಮ ಸಂಸ್ಕೃತಿಯ ಅಧ್ಯಯನ ಮಾಡುವುದನ್ನು ಯಾವಾಗಲೋ ಬಿಟ್ಟುಕೊಟ್ಟಿದ್ದೇವೆ. ನಮಗೆ ನಮ್ಮ ವೇದ ಮತ್ತು ಉಪನಿಷತ್ತುಗಳ ಬಗ್ಗೆ ಆವಶ್ಯಕವಿದ್ದಷ್ಟೂ ಆಳವಾದ ಜ್ಞಾನವಿಲ್ಲ. ಅದರ ಪರಿಣಾಮ ಇಂದು ನಮ್ಮ ಜೀವನಶೈಲಿಯು ದಿನದಿಂದ ದಿನಕ್ಕೆ ಲಯವಾಗುತ್ತಿದೆ. ಸಹನೆ ಮತ್ತು ಸಾತ್ತ್ವಿಕತೆ ಇವುಗಳನ್ನು ನಾವು ಯಾವಾಗಲೋ ಬಿಟ್ಟುಕೊಟ್ಟಿದ್ದೇವೆ. ನಾವು ಆಚರಿಸುತ್ತಿರುವ ಹಬ್ಬ ಮತ್ತು ಉತ್ಸವಗಳಲ್ಲಿ ಸಾತ್ತ್ವಿಕತೆ ಮತ್ತು ಸಜ್ಜನತೆ ಕಂಡು ಬರುವುದಿಲ್ಲ. ಅಲ್ಲಿ ಭಕ್ತಿಭಾವವೂ ಕಂಡುಬರುವುದಿಲ್ಲ. ನಾವೇ ನಮ್ಮಲ್ಲಿನ ಈ ದೋಷಗಳನ್ನು ದೂರಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ, ಹಾಗೆಯೇ ನಾವು ಕುರುಡುತನದಿಂದ ಪಾಶ್ಚಿಮಾತ್ಯ ಜೀವನಶೈಲಿಯನ್ನು ಅಂಗೀಕರಿಸಿದ್ದೇವೆ. ಅದನ್ನು ನಾವು ತ್ಯಜಿಸಲು ಪ್ರಾರಂಭಿಸಬೇಕು. ‘ಅತ್ಯುತ್ತಮ ಶ್ರೇಷ್ಠವಾಗಿರುವ ನಮ್ಮ ಜೀವನಶೈಲಿಯನ್ನು ಬಿಟ್ಟು ಆ ತುಲನೆಯಲ್ಲಿ ಅತ್ಯಂತ ಗೌಣವಾದ ಜೀವನಶೈಲಿಯನ್ನು ಅಂಗೀಕರಿಸುವುದು’, ಇದು ಬುದ್ಧಿಹೀನತೆಯ ಲಕ್ಷಣವಾಗಿದೆ.

೪. ಭಾರತೀಯ ಜೀವನಶೈಲಿಯ ಕುರಿತು ಪಾಶ್ಚಿಮಾತ್ಯ ವಿಚಾರವಂತರ ಗೌರವೋದ್ಗಾರ !

ಕೆಲವೇ ಪಾಶ್ಚಿಮಾತ್ಯ ವಿಚಾರವಂತರ ಅಭಿಪ್ರಾಯಗಳ ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇದನ್ನು ಓದಿ ನಮ್ಮಲ್ಲಿನ ದೋಷಗಳನ್ನು ದೂರಗೊಳಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸೋಣ.

ಅ. ಅಲ್ಬರ್ಟ ಐನ್‌ಸ್ಟೈನ್, ಜಗತ್ಪ್ರಸಿದ್ಧ ವಿಜ್ಞಾನಿ : ಅಲ್ಬರ್ಟ ಐನ್‌ಸ್ಟೈನ್ ಇವರು; ‘‘We owe a lot to Indians who taught us how to count, no worth while scientific discovery could have been made.’’ ಎಂದು ಹೇಳುತ್ತಾರೆ.

ಅರ್ಥ : ನಮಗೆ ಎಣಿಕೆಯನ್ನು ಕಲಿಸಿದ ಭಾರತೀಯರಿಗೆ ನಾವು ಬಹಳ ಋಣಿಯಾಗಿದ್ದೇವೆ, ಅವರಿಲ್ಲದಿದ್ದರೆ ಯಾವುದೇ ಸಾರ್ಥಕ ವೈಜ್ಞಾನಿಕ ಸಂಶೋಧನೆ ಸಾಧ್ಯವಾಗುತ್ತಿರಲಿಲ್ಲ.

ಇದರ ಅರ್ಥ ಅಲ್ಬರ್ಟ ಐನ್‌ಸ್ಟೈನ್ ಇವರು, ‘ವೈಜ್ಞಾನಿಕ ಪ್ರಗತಿಯು  ಜಗತ್ತಿನ ಇತರ  ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಅತ್ಯುತ್ತಮ ಸ್ಥಾನದಲ್ಲಿ ತಲುಪಿತ್ತು’ , ಎಂದು ಹೇಳುತ್ತಾರೆ.

ಆ. ಮಾರ್ಕ ಟ್ವೈನ್ (೧೮೩೫ ರಿಂದ ೧೯೧೦) : ಅಲ್ಬರ್ಟ ಐನ್‌ಸ್ಟೈನ್ ಇವರನ್ನು ಬೆಂಬಲಿಸುವ ವಿಚಾರಗಳನ್ನು ಮಾರ್ಕ ಟ್ವೈನ್ ಇವರು ಮಂಡಿಸಿದ್ದಾರೆ. ಅವರು, ‘‘Land of religions, cradle of human race, birthplace of human speech, grandmother of legend, great grandmother of tradition. The land that men with intellectual bent desire to see and having seen once even by a glimpse would not give that glimpse for the shows of the rest of the globe combined.’’ ಎಂದು ಹೇಳುತ್ತಾರೆ.

ಅರ್ಥ : ಭಾರತದ ಭೂಮಿಯು ಧರ್ಮಗಳ ತವರು, ಮಾನವ ಕುಲದ ತೊಟ್ಟಿಲು, ಮನುಷ್ಯನ ವಾಣಿಯ ಜನ್ಮಸ್ಥಳ, ದಂತಕಥೆಗಳ ಅಜ್ಜಿ ಮತ್ತು ಸಂಪ್ರದಾಯಗಳ ಮುತ್ತಜ್ಜಿ. ಬೌದ್ಧಿಕ ಹಸಿವುಳ್ಳವರು ನೋಡಲೇಬೇಕೆಂದು ಬಯಸುವ ನಾಡಿದು; ಇಂತಹ ವಿನಮ್ರ ಜನರನ್ನು ಹುಡುಕಲು ನಿರ್ಧರಿಸಿದರೂ ಸಂಪೂರ್ಣ ಜಗತ್ತಿನಲ್ಲಿ ಎಲ್ಲಿಯೂ ನಮಗೆ ಕಾಣಿಸುವುದಿಲ್ಲ. ಇಷ್ಟೇ ಅಲ್ಲ, ಸರಿಯಾಗಿ ಅದರ ದರ್ಶನವೂ ಆಗುವುದಿಲ್ಲ.

ಈ ರೀತಿಯ ನಮ್ಮ ಪರಿಚಯವಿರುವಾಗ ನಮಗೆ ನಮಗಿಂತಲೂ ಹೀನ ವಿಚಾರಗಳ ಆಕರ್ಷಣೆ ಅನಿಸುತ್ತದೆ. ಇದರ ಅರ್ಥ ‘ನಮಗೆ ನಮ್ಮ ನಿಜವಾದ ಪರಿಚಯವಾಗಲಿಲ್ಲ’, ಎಂದಾಗುತ್ತದೆ. ಜಗತ್ತಿನಲ್ಲಿನ ತಿಳುವಳಿಕೆ ಇರುವ ಹಿರಿಯ ಜನರು ನಮ್ಮನ್ನು ಶ್ರೇಷ್ಠರೆಂದು ನಂಬುತ್ತಾರೆ. ಈ ವಿಷಯವು ನಮಗೆ ತಿಳಿಯಲೇ ಇಲ್ಲ. ‘ಮಾರ್ಕ ಟ್ವೈನ್ ಇವರು ಮೇಲಿನಂತೆ ಮಾಡಿದ ಉದ್ಗಾರವು ಈ ಭಾರತ ದೇಶವು ಪಾರತಂತ್ರ್ಯದಲ್ಲಿರುವಾಗ ಮಾಡಿದ ಉದ್ಗಾರವಾಗಿದೆ’, ಇದನ್ನು ನಾವು ಉದ್ದೇಶಪೂರ್ವಕವಾಗಿ ತಿಳಿದುಕೊಳ್ಳುವುದು ಮಹತ್ವದ್ದಾಗಿದೆ.

ಇ. ಜ್ಯುಲಿಯಸ್ ರಾಬರ್ಟ ಓಪನ್‌ಹೈಮರ್, ಅಣುಬಾಂಬಿನ ನಿರ್ಮಾತ (ಸಂಶೋಧಕ) (೧೯೦೪ ರಿಂದ ೧೯೬೭) : ಓಪನ್‌ಹೈಮರ್ ಇವರು  ‘‘Access of the Vedas is the greatest privilege this country may claim over all previous centuries.’’ ಎಂದು ಹೇಳುತ್ತಾರೆ.

ಅರ್ಥ : ಹಲವಾರು ಶತಮಾನಗಳಿಂದ ವೇದಗಳ ಅಧ್ಯಯನ ಮಾಡುವ ಸವೋಚ್ಚ ಅಧಿಕಾರ (ಭಾರತದ) ಈ ದೇಶಕ್ಕೆ ಇದೆ, ಎಂದು ಹೇಳಬಹುದು.

ಇದನ್ನು ಉದ್ಗರಿಸುವ ವ್ಯಕ್ತಿಯು ಅಣುಬಾಂಬಿನ ಸಂಶೋಧಕರಾಗಿದ್ದಾರೆ, ಎಂಬುದನ್ನು ನಾವು ಗಮನದಲ್ಲಿಡಬೇಕು.

ಈ. ಜಾರ್ಜ ಬರ್ನಾರ್ಡ ಶಾ, ನಾಟಕಕಾರರು ಮತ್ತು ‘ನೋಬೆಲ್’ ಪ್ರಶಸ್ತಿ ವಿಜೇತ (೧೮೫೬ ರಿಂದ ೧೯೫೦) : ಜಾರ್ಜ ಬರ್ನಾರ್ಡ ಶಾ ಇವರು,  ‘‘The Indian way of life provides the vision of the natural real way of life we western veil ourselves with unnatural masks. On the face of India are the tender expressions which carry the mark of creators hand.’’ ಎಂದು ಹೇಳುತ್ತಾರೆ.

ಅರ್ಥ : ಭಾರತೀಯ ಜೀವನಶೈಲಿಯು ನಿಜವಾದ ಜೀವನಶೈಲಿಯ ನೈಸರ್ಗಿಕ ದೃಷ್ಟಿಯನ್ನು ನೀಡಿದೆ. ನಾವು ಪಾಶ್ಚಿಮಾತ್ಯರು ಮಾತ್ರ ಅನೈಸರ್ಗಿಕ ಮುಖವಾಡವನ್ನು ಧರಿಸಿದ್ದೇವೆ. (ಅದನ್ನು ನೋಡಿ) ಭಾರತದ ಮುಖದ ಮೇಲೆ ಸೌಮ್ಯ ಭಾವ ವ್ಯಕ್ತವಾಯಿತು. ಅದು ನಿರ್ಮಾಪಕರ ಸಂಕೇತವಾಗಿದೆ.

ಇದನ್ನು ಉದ್ಗರಿಸುವ ವ್ಯಕ್ತಿಯು ನಾಟಕಕಾರನಾಗಿದ್ದು ಅವರು ಸಾಹಿತ್ಯಕ್ಕಾಗಿ ‘ನೋಬೆಲ್’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ವಿಚಾರದ ಪ್ರಕಾರ ಭಾರತದ ಜೀವನಶೈಲಿ ನೈಸರ್ಗಿಕವಾಗಿದೆ. ಈ ಜೀವನಶೈಲಿಗೆ ಕೃತ್ರಿಮತೆಯ ಸ್ಪರ್ಶವೂ ಆಗಿರುವುದಿಲ್ಲ, ಹಾಗೆಯೇ ‘ಪಾಶ್ಚಿಮಾತ್ಯರ ಜೀವಶೈಲಿಯು ಕೃತಕವಾಗಿದೆ’, ಎಂದು ಬರ್ನಾರ್ಡ ಶಾ ಇವರು ಮನಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ, ನಾವು ಮಾತ್ರ ಈ ಕೃತಕ ಜೀವನಶೈಲಿಯನ್ನು ಸ್ವೀಕರಿಸಿ ನಮ್ಮ ಶ್ರೇಷ್ಠವಾಗಿರುವ ನೈಸರ್ಗಿಕ ಜೀವನಶೈಲಿಯನ್ನು ಎಸೆದಿದ್ದೇವೆ. ಈಗ ನಾವು ಮಾಡುತ್ತಿರುವುದು ಜಾಣತನದ ಲಕ್ಷಣವಾಗಿದೆಯೇ ? ಎಂಬುದನ್ನು ನಾವೇ ವಿಚಾರ ಮಾಡಬೇಕು.

ಉ. ಸರ್ ವಿಲ್ಯಮ್ ಜೋನ್ಸ್, ಭಾಷಾಶಾಸ್ತ್ರಜ್ಞರು : ‘ಜಗತ್ತಿನಲ್ಲಿನ ವಂಚಕರು ‘ಸಂಸ್ಕೃತ’ ಭಾಷೆಯನ್ನು ‘ಮೃತ ಭಾಷೆ’ ಎಂದು ಘೋಷಿಸಿದ್ದಾರೆ. ನಾವು ಸಹ ಅದನ್ನು ತಿರಸ್ಕರಿಸಿದೆವು. ಇಂದು ನಮಗೆ ಸಂಸ್ಕೃತ ಭಾಷೆ ಬರುವುದಿಲ್ಲ. ಸಂಸ್ಕೃತ ಭಾಷೆಯ ಶ್ರೇಷ್ಠತ್ವದ ಬಗ್ಗೆ ಭಾಷಾಶಾಸ್ತ್ರಜ್ಞರಾದ ಸರ್ ವಿಲ್ಯಮ್ ಜೋನ್ಸ್ ಇವರು, ‘‘The Sanskrit language whatever be it antiquity is of a wonderful structure, more perfect than the Greek more copious than the Latin and more exquisitely refined than either.’’ ಎಂದು ಹೇಳುತ್ತಾರೆ.

ಅರ್ಥ : ಸಂಸ್ಕೃತ ಭಾಷೆಯು ಗ್ರೀಕ್ ಭಾಷೆಯ ತುಲನೆಯಲ್ಲಿ ಪ್ರಾಚೀನ, ಸುಂದರ ಮತ್ತು ಹೆಚ್ಚು ಪರಿಪೂರ್ಣವಾಗಿದೆ. ಅದು ಲ್ಯಾಟಿನ್ ಭಾಷೆಗಿಂತಲೂ ಸಮೃದ್ಧವಾಗಿದೆ. ಇದರೊಂದಿಗೆ ಈ ಎರಡೂ ಭಾಷೆಗಳಿಗಿಂತ ಸಂಸ್ಕೃತ ಭಾಷೆಯು ಅತ್ಯುತ್ತಮ ಮತ್ತು ಸುಸಂಸ್ಕೃತವಾಗಿದೆ. ಇದೇ ಅದರ ಪ್ರಾಚೀನತೆಯಾಗಿದೆ.

ಹೀಗೆ ನೂರಾರು ಪಾಶ್ಚಿಮಾತ್ಯ ವಿಚಾರವಂತರು, ಲೇಖಕರು, ಭಾಷಾ ಶಾಸ್ತ್ರಜ್ಞರು, ವೈಜ್ಞಾನಿಕರು ನಮ್ಮ ದೇಶದ ಜೀವನಶೈಲಿಯ ಮತ್ತು ವೇದ-ಉಪನಿಷತ್ತುಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮಾಡುತ್ತಾರೆ ಮತ್ತು ಅವುಗಳ ಶ್ರೇಷ್ಠತೆಯನ್ನು ಮನಮುಕ್ತತೆಯಿಂದ ಹಾಗೆಯೇ ಸಂಪೂರ್ಣ ಜಗತ್ತಿಗೆ ಮಾತನಾಡಲು ಹೇಳುತ್ತಾರೆ. ನಾವು ಮಾತ್ರ ಅವರ ಮಾತಿನ ಕಡೆಗೆ ದುರ್ಲಕ್ಷಿಸುತ್ತಿದ್ದೇವೆ. ನಮ್ಮಿಂದ ಈ ರೀತಿ ದುರ್ಲಕ್ಷವಾಗಿ ನಾವೇ ನಮ್ಮ ಆತ್ಮವಂಚನೆಯನ್ನು ಮಾಡಿಕೊಳ್ಳುವುದು ಸರಿಯಲ್ಲ. ನಾನು ನನ್ನ ಬಾಂಧವರಲ್ಲಿ ವಿನಮ್ರ ವಿನಂತಿಸುತ್ತೇನೆ, ಅವರು ‘ಗೂಗಲ್’ನಲ್ಲಿ ‘opinions of historical figures on Indian culture, religion and achievements’ ಇದರಲ್ಲಿ ಹುಡುಕಬೇಕು. ನಮ್ಮಲ್ಲಿನ ದೋಷಗಳನ್ನು ದೂರಗೊಳಿಸಲು ವಿದ್ವಾಂಸರ ಅಭಿಪ್ರಾಯಗಳು ನಮಗೆ ಉಪಯುಕ್ತವಾಗುತ್ತವೆ, ಎಂದು ನನಗೆ ಖಾತ್ರಿಯಿದೆ.

– ಶ್ರೀ. ದುರ್ಗೇಶ ಜಯವಂತ ಪರುಳಕರ, ಭಾಷಣಕಾರರು ಮತ್ತು ಲೇಖಕರು, ಡೊಂಬಿವಲಿ. (೧೦.೧೦.೨೦೨೩)