ಕೇರಳ ಉಚ್ಚ ನ್ಯಾಯಾಲಯದ ಆಶ್ಚರ್ಯಕರ ತೀರ್ಪು ಮತ್ತು ನ್ಯಾಯವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಮಾಡುವುದರ ಆವಶ್ಯಕತೆ !

೧. ಕೇರಳದ ಓರ್ವ ಮಹಿಳೆಯು ಮಾಡಿದ ಅಶ್ಲೀಲ ಕೃತ್ಯದ ಚಿತ್ರಸುರುಳಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು

‘ಕೇರಳ ರಾಜ್ಯದಲ್ಲಿ ೩೩ ವರ್ಷದ ಕಾರ್ಯಕರ್ತೆ ಎಂದು ಕರೆಸಿಕೊಳ್ಳುವ ಒಬ್ಬ ಮಹಿಳೆ ಒಂದು ಅತೀ ಧೈರ್ಯಶಾಲಿ  ಕೃತ್ಯ ಮಾಡಿದಳು ಹಾಗೂ ಅದರ ಚಿತ್ರಸುರುಳಿಯನ್ನು ‘ಯೂಟ್ಯೂಬ್’, ‘ಫೇಸ್‌ಬುಕ್’ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದಳು. ಅದರಲ್ಲಿ ಅವಳ ಅರ್ಧನಗ್ನ ಶರೀರದ ಮೇಲೆ ಅವಳ ಮಕ್ಕಳು ಚಿತ್ರಗಳನ್ನು ತೆಗೆಯುತ್ತಿರುವುದನ್ನು ತೋರಿಸಲಾಗಿದೆ. ಅವಳ ೧೪ ವರ್ಷದ ಮಗ ಅವಳ ವಕ್ಷಸ್ಥಳದ ಮೇಲೆ ಕೈಯಿಟ್ಟು ಅದರ ಸುತ್ತಲೂ ಹೂವುಗಳನ್ನು ಅಂಟಿಸುತ್ತಿದ್ದಾನೆ ಅಥವಾ ನಕ್ಷೆಗಳನ್ನು ಬಿಡಿಸುತ್ತಾನೆ. ಅವಳ ೮ ವರ್ಷದ ಮಗಳು ಕೂಡ ಈ ಕಾರ್ಯದಲ್ಲಿ ಭಾಗವಹಿಸುತ್ತಾಳೆ. ಇದರಿಂದ ಆ ಮಹಿಳೆ ಏನು ಸಂದೇಶ ನೀಡಲು ಬಯಸುತ್ತಾಳೆ ಎಂದರೆ, ಯುವ ವಯಸ್ಸಿನ ಯಾವ ಹುಡುಗ ತನ್ನ ತಾಯಿ ಯನ್ನು ಅರೆನಗ್ನಾವಸ್ಥೆಯಲ್ಲಿ ನೋಡುತ್ತಾನೊ, ಅವನು ಇತರ ಸ್ತ್ರೀಯರೊಂದಿಗೆ ಕಾಮವಾಸನೆಯನ್ನು ಇಟ್ಟುಕೊಳ್ಳುವುದಿಲ್ಲ ಅಥವಾ ಇತರ ಅನೈತಿಕ ವ್ಯವಹಾರ ಮಾಡಲಿಕ್ಕಿಲ್ಲ.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಮಹಿಳೆಯ ವಿರುದ್ಧ ವಿವಿಧ ಕಾನೂನುಗಳ ಅಂತರ್ಗತ ಮಾರ್ಗದಲ್ಲಿ ಕ್ರಿಮಿನಲ್ ಅಪರಾಧ ದಾಖಲು

ಈ ಚಿತ್ರಸುರುಳಿ ‘ಯೂ ಟ್ಯೂಬ್’ನಲ್ಲಿ ಪ್ರಸಾರವಾದ ನಂತರ ಅವಳ ವಿರುದ್ಧ ಕೇರಳದಲ್ಲಿ ಕ್ರಿಮಿನಲ್ ಅಪರಾಧವನ್ನು ದಾಖಲಿಸಲಾಯಿತು. ಈ ಕ್ರಿಮಿನಲ್ ಅಪರಾಧ ‘ಅಟ್ರಾಸಿಟೀಸ್ ಎಂಡ್ ಸೆಕ್ಸುವಲ್ ವೈಲೆನ್ಸ್ ಅಗೈನ್ಸ್ ವುಮನ್ ಎಂಡ್ ಚಿಲ್ಡ್ರನ್’, ‘ಜುವೆನಾಯಿಲ್ ಜಸ್ಟೀಸ್ (ಕೇಅರ್ ಎಂಡ್ ಪ್ರೊಟೆಕ್ಶನ್ ಆಫ್ ಚಿಲ್ಡ್ರೆನ್)’, ‘ಪೊಕ್ಸೋ’ ಕಾನೂನು, ಮಾಹಿತಿ ಮತ್ತು ತಂತ್ರಜ್ಞಾನ ಕಾನೂನು ಮತ್ತು ಭಾರತೀಯ ದಂಡಸಂಹಿತೆ ಕಾನೂನು ಇತ್ಯಾದಿ ವಿವಿಧ ಕಾನೂನಿಗನ್ವಯ ಕ್ರಿಮಿನಲ್ ಅಪರಾಧವನ್ನು ದಾಖಲಿಸಲಾಯಿತು. ಪೊಲೀಸರ ಅಭಿಪ್ರಾಯದಲ್ಲಿ ಈ ಕೃತ್ಯ ಅಶ್ಲೀಲವಾಗಿದೆ. ಈ ರೀತಿ ತಾರುಣ್ಯದಲ್ಲಿರುವ ಮಕ್ಕಳ ಮುಂದೆ ಯಾವುದೇ ಸ್ತ್ರೀ ಅರೆನಗ್ನಳಾಗಿ ಅವಳ ಮೈ ಮೇಲೆ ಚಿತ್ರವನ್ನು ಬಿಡಿಸುವುದು, ವಕ್ಷಸ್ಥಳದ ಮೇಲೆ ಕೈಯಿಡಲು ಬಿಡುವುದು ಹಾಗೂ ಉದ್ದೇಶಪೂರ್ವಕ ಅದನ್ನು ಸಮಾಜಮಾಧ್ಯಮದ ಮೂಲಕ ಜನರ ಮುಂದಿಡುವುದು, ಇದು ಅನೇಕ ಕಾನೂನಿನ ಉಲ್ಲಂಘನೆಯಾಗಿದೆ. ಈ ಮಹಿಳೆ ಭಾರತೀಯ ಸಂಸ್ಕೃತಿ ಹಾಗೂ ಸ್ತ್ರೀಧರ್ಮವನ್ನು ಎಲ್ಲ ರೀತಿಯಲ್ಲಿ ಅವಮಾನಿಸಿದ್ದಾಳೆ. ಇದರಲ್ಲಿ ಸಣ್ಣ ಮಕ್ಕಳ ಲೈಂಗಿಕ ಹಿಂಸೆಯೂ ಇದೆ.

೩. ಮಹಿಳೆಯ ಧರ್ಮದ್ರೋಹಿ ಹಿನ್ನೆಲೆ

ಈ ಮಹಿಳೆಯ ಹಿನ್ನೆಲೆಯನ್ನು ನೋಡಿದರೆ,  ೨೦೧೪ ರಲ್ಲಿ ತಾನೇ ತನ್ನ ಸಂಗಾತಿಯನ್ನು ಆಯ್ದು ‘ಕಿಸಿಂಗ್’ ಸ್ಪರ್ಧೆ ಯಲ್ಲಿ (ಚುಂಬನದ ಸ್ಪರ್ಧೆ) ಈ ಮಹಿಳೆ ಉತ್ಸುಕತೆಯಿಂದ ಭಾಗವಹಿಸಿದ್ದಳು. ಆಗ ಅವಳನ್ನು ಸೆರೆಮನೆಗೆ ತಳ್ಳಿ ಜಾಮೀನು ನಿರಾಕರಿಸುತ್ತಿದ್ದರೆ, ಈಗ ಅವಳು ಇಂತಹ ಹೀನ ಕೃತ್ಯ ಮಾಡುತ್ತಿರಲಿಲ್ಲ. ಅದೇ ರೀತಿ ಅವಳು ಕೇರಳದಲ್ಲಿನ ಶಬರಿಮಲೈ ದೇವಸ್ಥಾನದಲ್ಲಿ (ಈ ದೇವಸ್ಥಾನದಲ್ಲಿ ೧೦ ರಿಂದ ೫೦ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ) ಉದ್ದೇಶಪೂರ್ವಕ ಒಳಗೆ ನುಗ್ಗಲು ಪ್ರಯತ್ನಿಸಿದ್ದಳು, ಆದರೆ ಕೇರಳದ ಹಿಂದೂ ಭಕ್ತರು ಅವಳನ್ನು ಹಿಮ್ಮೆಟ್ಟಿಸಿದ್ದರು. ಹಿಂದೂಗಳ ಪವಿತ್ರ ದೇವಸ್ಥಾನದಲ್ಲಿ ಸಾವಿರಾರು ವರ್ಷಗಳ ಪರಂಪರೆಯನ್ನು ಭಂಗಗೊಳಿಸಿದ ಪ್ರಕರಣದಲ್ಲಿ ಅವಳ ವಿರುದ್ಧ ಭಾರತೀಯ ದಂಡಸಂಹಿತೆಯ ಕಲಮ್ ೧೫೩ ಅ ಮತ್ತು ಬ ಹಾಗೂ ೨ ವಿಚಾರಶೈಲಿ ಮತ್ತು ೨ ಧರ್ಮಗಳ ನಡುವೆ ದ್ವೇಷ ಮೂಡಿಸುವುದು ಇತ್ಯಾದಿ ಕಲಮ್‌ಗಳ ಅನ್ವಯ ಅವಳನ್ನು ಸೆರೆಮನೆಗೆ ತಳ್ಳಬೇಕಿತ್ತು. ಕೇರಳದಲ್ಲಿ ‘ಓಣಂ’ ಈ ಧಾರ್ಮಿಕ ಉತ್ಸವದ ಸಮಯದಲ್ಲಿ ‘ಪುಲಿಕಲಿ’ ಎಂಬ ನೃತ್ಯವನ್ನು ಪ್ರಸ್ತುತಪಡಿಸಲಾಗುತ್ತದೆ. ಅದರಲ್ಲಿ ಕಳೆದ ಅನೇಕ ದಶಕಗಳಿಂದ ಕೇರಳದಲ್ಲಿನ ಹಿಂದೂ ಭಕ್ತರು ತಮ್ಮ ಶರೀರದ ಮೇಲೆ ಹುಲಿಯ ಹಾಗೆ ಬಣ್ಣ ಹಾಕಿಕೊಂಡು ರಸ್ತೆಯಲ್ಲಿ ನೃತ್ಯ ಮಾಡುತ್ತಾರೆ. ಅದರಲ್ಲಿ ಮಹಿಳೆಯರಿಗೆ ಭಾಗವಹಿಸಲು ಅವಕಾಶವಿಲ್ಲ; ಆದರೆ ಈ ಮಹಿಳೆ ಈ ‘ಪುಲಿಕಲಿ’ಯಲ್ಲಿಯೂ ಭಾಗವಹಿಸಿದ್ದಳು.

೪. ಮುಸಲ್ಮಾನರು ಮತ್ತು ಕ್ರೈಸ್ತ ಪಂಥದಲ್ಲಿನ ಲಿಂಗಭೇದದ ಬಗ್ಗೆ ಬಾಯಿಗೆ ಬೀಗ ಏಕೆ ?

ಈ ಮಹಿಳೆ ಈ ಚಿತ್ರವನ್ನು ಪ್ರಸಾರ ಮಾಡುವುದರ ಬಗ್ಗೆ, ‘ಇದು ಪುರುಷರ ವಿರುದ್ಧ ಮಹಿಳೆ, ಹೀಗೆ ಲಿಂಗಭೇದವಾಗಿದೆ. ಪುರುಷರು ಅರೆನಗ್ನರಾಗಿದ್ದರೆ ಅಪರಾಧವಾಗುವುದಿಲ್ಲ, ಮಹಿಳೆಯರ ಮೇಲೆ ಮಾತ್ರ ಇಂತಹ ಅಪರಾಧವನ್ನು ದಾಖಲಿಸುವುದು ಹಾಗೂ ಅವರನ್ನು ವಕ್ರದೃಷ್ಟಿಯಿಂದ ನೋಡುವುದು ತಪ್ಪಾಗುತ್ತದೆ.’ ಈ ಮಹಿಳೆ ಲಿಂಗಭೇದದ ಬಗ್ಗೆ ಮಾತನಾಡುವಾಗ ಅವರ ಕ್ರೈಸ್ತ ಪಾದ್ರಿಗಳು ಅಥವಾ ಧರ್ಮ ಗುರುಗಳು ಮಹಿಳೆಯರ, ಹುಡುಗಿಯರ ಮತ್ತು ಬಾಲಕರ ಲೈಂಗಿಕ ಶೋಷಣೆ ಮಾಡಿದ್ದಕ್ಕಾಗಿ ವ್ಯಾಟಿಕನ್ ಚರ್ಚ್‌ಗೆ ಅನೇಕ ಬಾರಿ ಕ್ಷಮೆ ಕೇಳಬೇಕಾಯಿತು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಯಿತು. ಅದರ ವಿರುದ್ಧ ಅವರು ಯಾವತ್ತೂ ಏಕೆ ಮಾತನಾಡುವುದಿಲ್ಲ ? ಮುಸಲ್ಮಾನ ಮಹಿಳೆಯರಿಗೆ ಹಿಜಾಬ್ ಧರಿಸಬೇಕಾಗುತ್ತದೆ, ಬಹುಪತ್ನಿತ್ವದಿಂದಾಗಿ ಮುಸಲ್ಮಾನ ಮಹಿಳೆಯರಿಗೆ ೩ ಸವತಿಯರೊಂದಿಗೆ ಜೀವಿಸಬೇಕಾಗುತ್ತದೆ, ತ್ರಿವಳಿ ತಲಾಕ್ ಇತ್ಯಾದಿ ಅನೇಕ ವಿಷಯಗಳಲ್ಲಿ ಕೇವಲ ಮುಸಲ್ಮಾನ ಮಹಿಳೆಯರಿಗೆ ಹಿಂಸಾಚಾರವಾಗುತ್ತದೆ. ಈ ಮಹಿಳೆ ಅದರ ವಿರುದ್ಧ ಧ್ವನಿಯೆತ್ತಿರುವುದು ಕಂಡುಬಂದಿಲ್ಲ. ಹಾಗಾದರೆ ಈ ಮೇಲಿನ ಉದಾಹರಣೆಗಳು ಲಿಂಗಭೇದದ್ದಲ್ಲವೇ ?

೫. ಕೇರಳ ಉಚ್ಚ ನ್ಯಾಯಾಲಯದ ಎರ್ನಾಕುಲಮ್ ವಿಭಾಗೀಯ ಪೀಠದಿಂದ ಈ ಮಹಿಳೆಯ ವಿರುದ್ಧದ ಅಪರಾಧ ರದ್ದು

ಈ ಮಹಿಳೆಯ ಮೇಲೆ ಕ್ರಿಮಿನಲ್ ಅಪರಾಧ ದಾಖಲಾದ ನಂತರ ಅದನ್ನು ರದ್ದುಪಡಿಸಲು ಅವಳು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಸತ್ರ ನ್ಯಾಯಾಲಯ ಅವಳ ಅರ್ಜಿಯನ್ನು ವಿವಿಧ ಕಾರಣಗಳನ್ನು ನೀಡಿ ನಿರಾಕರಿಸಿತು. ಆದ್ದರಿಂದ ಅವಳು ಕೇರಳ ಉಚ್ಚ ನ್ಯಾಯಾಲಯದ ಎರ್ನಾಕುಲಮ್ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿದಳು. ಅದರ ಆಲಿಕೆ ನ್ಯಾಯಾಧೀಶ ಡಾ. ಕೌಸರ ಎಡಪಗತ್ಥ ಇವರ ಮುಂದೆ ನಡೆಯಿತು. ಅವರು ಈ ಮಹಿಳೆಯ ಅಪರಾಧವನ್ನು ಕಲೆ, ಲಿಂಗಭೇದ, ಅಭಿವ್ಯಕ್ತಿಸ್ವಾತಂತ್ರ್ಯ, ಸಂವಿಧಾನದ ಕಲಮ್ ೧೯ ರ ದೃಷ್ಟಿಕೋನದಿಂದ ನೋಡಿದರು ಹಾಗೂ ದೊಡ್ಡ ಮನಸ್ಸು ಮಾಡಿ ಅವಳ ವಿರುದ್ಧದ ಅಪರಾಧವನ್ನು ರದ್ದುಪಡಿಸಿದರು. ಅಂದರೆ ಈ ನಿರ್ಣಯಪತ್ರವನ್ನು ನೀಡುವಾಗ ನ್ಯಾಯಾಧೀಶರು ಅಭಿವ್ಯಕ್ತಿಸ್ವಾತಂತ್ರ್ಯ, ಲಿಂಗಭೇದ, ಪಾಶ್ಚಿಮಾತ್ಯ ದೇಶಗಳಲ್ಲಿನ ನ್ಯಾಯಪದ್ಧತಿ, ಅದರಲ್ಲಿನ ಅಶ್ಲೀಲತೆ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆಯ ಪ್ರದರ್ಶನ ಹಾಗೂ ಅದರಲ್ಲಿ ಮಹಿಳೆಯರ ಅಧಿಕಾರ ಇತ್ಯಾದಿ ವಿವಿಧ ಸಂದರ್ಭಗಳನ್ನು ನೀಡಿದರು. ಅದೇ ರೀತಿ ನ್ಯಾಯಾಧೀಶರು ‘ಮೈ ಬಾಡಿ, ಮೈ ಚಾಯಿಸ್ (ನನ್ನ ಶರೀರ ನನ್ನ ಆಯ್ಕೆ)’, ಈ ವಾಕ್ಯಗಳನ್ನು ಕೂಡ ಹೇಳಿದರು; ಆದರೆ ದುಃಖದಾಯಕ ವಿಷಯವೆಂದರೆ, ಇದರಲ್ಲಿ ಒಬ್ಬ ವಿದೇಶಿ ವಿಚಾರವಂತರ ಆಂಗ್ಲ ವಾಕ್ಯವನ್ನೂ ನಮೂದಿಸಿದರು. ಅದು ಈ ಮುಂದಿನಂತೆ ಇದೆ, ‘ಯಾವಾಗ ನೀವು ನಿಮ್ಮ ತಾಯಿಯ ಕಣ್ಣುಗಳನ್ನು ನೋಡುವಿರೊ, ಆಗ ನಿಮಗೆ ಈ ಪೃಥ್ವಿಯಲ್ಲಿ ಎಲ್ಲಕ್ಕಿಂತ ಶುದ್ಧ ಪ್ರೀತಿ ಸಿಗುವುದರ ಅರಿವಾಗುವುದು,’ ಇಲ್ಲಿಯೂ ನ್ಯಾಯಾಧೀಶರು ಈ ಮಹಿಳೆ ಅರೆನಗ್ನ ಆಗಿರುವದನ್ನು ನೋಡಿಯೂ ನೋಡದಂತೆ ಇದ್ದರು. ತರುಣ ವಯಸ್ಸಿನ ಮಕ್ಕಳಿಗೆ ತನ್ನ ವಕ್ಷಸ್ಥಳದಲ್ಲಿ ಕೈಯಿಟ್ಟು ಬಣ್ಣ ಬಳಿಯಲು ನೀಡುವುದು ಹಾಗೂ ಆ ಚಿತ್ರಸುರುಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು, ಇದು ಇನ್ನೆಲ್ಲಿಯೂ ನಡೆಯಲು ಸಾಧ್ಯವಿಲ್ಲ; ಆದರೆ ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಕುಕೃತ್ಯಗಳು ಸ್ವೀಕಾರಾರ್ಹವಲ್ಲ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮನ್ತೆ ತತ್ರ ದೇವತಾಃ |’ (ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೫೬) ಅಂದರೆ ‘ಎಲ್ಲಿ ನಾರಿಯನ್ನು ಪೂಜಿಸಲಾಗುತ್ತದೆಯೋ, ಅಲ್ಲಿ ದೇವತೆಗಳ ಅಸ್ತಿತ್ವವಿರುತ್ತದೆ. ಈ ಪವಿತ್ರ ಭೂಮಿಯಲ್ಲಿ ಮೈತ್ರೇಯಿ ಹಾಗೂ ಗಾರ್ಗಿಯಂತಹ ಶ್ರೇಷ್ಠ ವಿಭೂತಿಗಳು ಜನಿಸಿದರು, ಅಲ್ಲಿ ಲಿಂಗ ಭೇದ ಸ್ವೀಕರಿಸಲು ಸಾಧ್ಯವಿಲ್ಲ. ಭಾರತದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಪ್ರಧಾನಮಂತ್ರಿಗಳಿಂದ ಹಿಡಿದು ರಾಷ್ಟ್ರಪತಿಗಳ ವರೆಗೆ ಅನೇಕ ಮಹತ್ವದ ಹುದ್ದೆಗಳಲ್ಲಿ ಮಹಿಳೆಯರು ಅಲಂಕರಿಸುತ್ತಾರೆ. ಅದೇ ರೀತಿ ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ರಾಣಿ ತಾರಾಮತಿ, ರಾಣಿ ಚೆನ್ನಮ್ಮಾ, ಅಹಿಲ್ಯಾದೇವಿ ಹೋಳಕರ್ ಮುಂತಾದ ತೇಜಸ್ವಿ ವೀರಾಂಗನೆಯರು ಅನೇಕ ದಶಕಗಳ ಕಾಲ ಪರಕೀಯರನ್ನು ಎದುರಿಸಿ ಯುದ್ಧ ಮಾಡಿದ್ದರು. ಇಂತಹ ಭೂಮಿಯಲ್ಲಿ ಇಂತಹ ಅಶ್ಲೀಲ ಕೃತ್ಯ ಎಷ್ಟರ ಮಟ್ಟಿಗೆ ಯೋಗ್ಯ ?

೬. ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಆಗುವುದು ಆವಶ್ಯಕ

ಇಂತಹ ಅನೇಕ ನಿರ್ಣಯಪತ್ರಗಳು ಬರಬಹುದು ಹಾಗೂ ಹೋಗಬಹುದು; ಆದರೆ ನಮ್ಮ ವೇದ, ಪುರಾಣಗಳು, ಶ್ರುತಿ-ಸ್ಮೃತಿ, ಗ್ರಂಥಗಳಲ್ಲಿ ಹೇಳಿರುವ ‘ಕರ್ಮಫಲನ್ಯಾಯ’ ಸಿದ್ಧಾಂತ ಈ ಪ್ರಕರಣಕ್ಕೆ ಸಂಬಂಧಿಸಿದವರಿಗೂ ಯೋಗ್ಯವಾದ ದಂಡವನ್ನು ನೀಡುವುದು. ನ್ಯಾಯಾಧೀಶರು ಭಾರತೀಯ ಪರಂಪರೆ ಹಾಗೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ, ಎಂಬುದರ ವಿಚಾರ ಮಾಡುವ ಬದಲು ಪಾಶ್ಚಾತ್ಯರ ಕಡೆಗೆ ಮುಖ ಮಾಡಿ ಕುಳಿತುಕೊಳ್ಳುವುದು ಯೋಗ್ಯವಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ನಿರ್ಣಯ ಹಾಗೂ ಇಂತಹ ಇತರ ನಿರ್ಣಯಪತ್ರಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ರದ್ದುಪಡಿಸಿಕೊಳ್ಳಬೇಕು ಹಾಗೂ ಕಠೋರ ಕಾನೂನು ಮಾಡಬೇಕು. ‘ಈ ರೀತಿ ಸಂವಿಧಾನದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಹಾಗೂ ಕಲಮ್ ೧೯ ರ ವಿಷಯವನ್ನು ಹೇಳಿ ಸತ್ರ ನ್ಯಾಯಾಲಯ ನೀಡಿದ ನಿರ್ಣಯಪತ್ರವನ್ನು ಯಾರಾದರೂ ರದ್ದುಪಡಿಸುತ್ತಿದ್ದರೆ, ಇಂತಹ ನ್ಯಾಯಾಧೀಶರನ್ನು ಇನ್ನೆಷ್ಟು ಸಮಯ ಅವರ ಹುದ್ದೆಯಲ್ಲಿಟ್ಟುಕೊಳ್ಳಬೇಕು ?’, ಎಂಬ ಪ್ರಶ್ನೆಗೂ ಉತ್ತರಿಸದೆ ಇರಬಾರದು. ನಮ್ಮ ನ್ಯಾಯವ್ಯವಸ್ಥೆಯಲ್ಲಿ ಬಹಳ ಬದಲಾವಣೆಯಾಗಬೇಕಿದೆ.’

 – ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೬.೬.೨೦೨೩)