ಭಾರತದಲ್ಲಿ,೧೮೪೮ ರ ಮೊದಲೂ ಮಹಿಳೆಯರಿಗೆ ಶಿಕ್ಷಣ ಸಿಗುತ್ತಿತ್ತು !

ಹಿಂದಿನ ಕಾಲದಲ್ಲಿ ಸ್ತ್ರೀಯರಿಗೆ ಶಿಕ್ಷಣ ಸಿಗುತ್ತಿರಲಿಲ್ಲ. ಆಂಗ್ಲರು ಬಂದ ಬಳಿಕವೇ ಭಾರತದಲ್ಲಿ  ಮಹಿಳೆಯರಿಗಾಗಿ ಶಿಕ್ಷಣವನ್ನು ಮುಕ್ತಗೊಳಿಸಲಾಯಿತು’ ಎಂದು ಅನೇಕ ಬಾರಿ ಅಪಪ್ರಚಾರ ಮಾಡಲಾಗುತ್ತದೆ. ಅದನ್ನು ಅಲ್ಲ ಗಳೆಯುವ ಲೇಖನವನ್ನು ಇಲ್ಲಿ ನೀಡುತ್ತಿದ್ದೇವೆ.

ಬಹುಶಃ ೧೮೪೮ ರ ಮೊದಲು ಸ್ತ್ರೀಯರು ಗುರುಕುಲದ ಬದಲಾಗಿ ಸ್ವಕುಲದಲ್ಲಿಯೇ ಕಲಿಯುತ್ತಿರಬೇಕು. ಮನೆಯವರೇ ಯಾರಾದರೂ ಅವರಿಗೆ ಕಲಿಸುತ್ತಿರಬೇಕು ಅಥವಾ ಗುರು(ಶಿಕ್ಷಕ) ಮನೆಗೆ ಬಂದು ಕಲಿಸುತ್ತಿರಬೇಕು.

೧. ವೇದಕಾಲದಲ್ಲಿ ಅಗಸ್ತ  ಋಷಿಯ ಪತ್ನಿ ಲೋಪಾಮುದ್ರೆ, ಯಾಜ್ಞವಲ್ಕ  ಋಷಿಯ ಪತ್ನಿ ಮೈತ್ರೇಯಿ, ಬ್ರಹ್ಮವಾದಿನಿ ಗಾರ್ಗಿ ಈ ಸ್ತ್ರೀಯರು ಕೇವಲ ಅವರ  ಜ್ಞಾನಕ್ಕೆ ಮಾತ್ರ ಹೆಸರುವಾಸಿಯಾಗಿರಲಿಲ್ಲ, ಬದಲಾಗಿ ಅವರು ವಿದ್ವತ್ ಸಭೆಗಳಲ್ಲಿ  ವಿದ್ವಾಂಸರೊಂದಿಗೆ ಚರ್ಚಿಸುತ್ತಾ ವಾಕ್ಚಾತುರ್ಯವನ್ನು ಪ್ರದರ್ಶಿಸುತ್ತಿದ್ದರು.

೨. ವಿಜಯನಗರ ಸಾಮ್ರಾಜ್ಯದಲ್ಲಿಯಂತೂ ಸರಕಾರಿ ಕಾರ್ಯಾಲಯಗಳಲ್ಲಿ ಅನೇಕ ಮಹಿಳೆಯರು ಗುಮಾಸ್ತ (ಕ್ಲರ್ಕ) ಹುದ್ದೆಯಲ್ಲಿದ್ದರು.

೩. ಮುಂದೆ ೧೨ ನೇ ಶತಮಾನದಲ್ಲಿ ಮುಕ್ತಾಬಾಯಿ, ಮೀರಾಬಾಯಿ ಮುಂತಾದ ಮಹಿಳಾ ಸಂತರು ಸ್ವತಂತ್ರ ಕವನ(ಪದ್ಯ)ಗಳನ್ನು ರಚಿಸುತ್ತಿದ್ದರು. ಅವರ ಕವನ(ಪದ್ಯ)ಗಳನ್ನು ಬರೆಯಲು ಗುಮಾಸ್ತರು ಅವರೊಂದಿಗೆ ಇರುತ್ತಿದ್ದರೆ ?  ಅವರು ಲೇಖನವನ್ನು ಮಾಡುತ್ತಿದ್ದುದರಿಂದಲೇ ಅವರ ಅಭಂಗಗಳನ್ನು ಇಂದು ನಾವು ಓದುತ್ತಿದ್ದೇವೆ.

೪. ಇದಕ್ಕಿಂತ ಮುಂದೆ ಹೇಳುವುದಾದರೆ, ಸಂತ ಕನ್ಹೋಪಾತ್ರ್ರಾ, ಸಂತ ಚೋಖಮೇಳಾ ಅವರ ಪತ್ನಿ ಸೋಯರಾ ಮತ್ತು ಸಹೋದರಿ ನಿರ್ಮಲಾ ಇವರು ಪ್ರಚಲಿತವಿರುವ ಭಾಷೆಯಲ್ಲಿ ಅಭಂಗಗಳನ್ನು ರಚಿಸುತ್ತಿದ್ದರು. ಮನೆಯಲ್ಲಿ ತುಂಬಾ ಬಡತನವಿರುವ ಈ ಸ್ತ್ರೀಯರು ಗುಮಾಸ್ತರನ್ನು  ನೇಮಿಸಿಕೊಂಡಿರಬಹುದೇ ? ಅಥವಾ ಕಾವ್ಯ ಪ್ರತಿಭೆಯ ಅತ್ಯುನ್ನತ ಆವಿಷ್ಕಾರವೆಂದು ಅವರು ಅಕ್ಷರಗಳನ್ನು ಗುರುತಿಸಿಕೊಂಡಿರಬಹುದೇ ?

 ೫. ಸಮರ್ಥ ರಾಮದಾಸ  ಸಂಪ್ರದಾಯದ ಆಕ್ಕಾಸ್ವಾಮಿ ಮತ್ತು ವೇಣಾಸ್ವಾಮಿ ಇವರ ಸ್ಥಾನ ರಾಮದಾಸಿ ಸಂಪ್ರದಾಯದಲ್ಲಿ ಅತ್ಯುನ್ನತವಾಗಿತ್ತು. ಸಂತ ವೇಣಾಸ್ವಾಮಿಯವರಂತೂ ಮೀರಜ ಮಠದಲ್ಲಿ ಮಠಾಧಿಪತಿಗಳಾಗಿದ್ದರು. ಅಕ್ಷರಜ್ಞಾನವಿಲ್ಲದೆಯೇ ಅವರು ವಿದ್ವತ್ತಿನ ಅತ್ಯುನ್ನತ ಸ್ಥಾನವನ್ನು ಹೊಂದಿ ಅಷ್ಟು ಎತ್ತರಕ್ಕೆ ಬೆಳೆದಿರಬಹುದೇ ?

೬. ಛತ್ರಪತಿ ಶಿವಾಜಿ ಮಹಾರಾಜರನ್ನು ಬೆಳೆಸಿದ  ರಾಷ್ಟ್ರಮಾತಾ ಜೀಜಾಮಾತಾ,  ಛತ್ರಪತಿ ಸಂಭಾಜಿ ಮಹಾರಾಜರ ಬಳಿಕ ೮ ವರ್ಷಗಳ ಕಾಲ  ಔರಂಗಜೇಬನನ್ನು ಬೆವರು ಬರುವಂತೆ ಮಾಡಿದ ರಾಜಾರಾಮರ ಪತ್ನಿ ತಾರಾಬಾಯಿ ರಾಣಿಯು ಅಕ್ಷರಜ್ಞಾನವಿಲ್ಲದೇ ಕೇವಲ ಸೇವಕರ  ಭರವಸೆಯ ಮೇಲೆ ಆಡಳಿತದಲ್ಲಿ ನೈಪುಣ್ಯವನ್ನು ಸಾಧಿಸಿದರೇ ?

೭. ಪೇಶ್ವೆಯರು ಛತ್ರಪತಿಯ ರಾಜ್ಯವನ್ನು ವಿಸ್ತರಿಸಲು ನಿರಂತರ ಯುದ್ಧಗಳಲ್ಲಿ ನಿರತರಾಗಿರುವಾಗ ಪೇಶ್ವೆಯ ಮನೆಯ ಉಸ್ತುವಾರಿಯ ಬಗ್ಗೆ ಸ್ತ್ರೀಯರ ಸಂಪೂರ್ಣ ಗಮನವಿರುತ್ತಿತ್ತು. ಆವಶ್ಯಕತೆಯಿದ್ದಾಗ  ರಾಜ್ಯಾಡಳಿತದಲ್ಲಿಯೂ ಸಲಹೆಗಳನ್ನು ನೀಡುತ್ತಿದ್ದರು. ‘ಅವರು ಅನಕ್ಷರಸ್ಥರಾಗಿದ್ದರು’, ಎಂದು ಹೇಳುವ ಧೈರ್ಯವನ್ನು ನಾವು ಮಾಡಬಹುದೇ ?

೮. ಮಧ್ಯಭಾರತದ ಪ್ರತಿಷ್ಠಿತ ಹೋಳ್ಕರ್ ಸಾಮ್ರಾಜ್ಯವನ್ನು ಆದರ್ಶಮಯ ಪದ್ಧತಿಯಲ್ಲಿ ಮುನ್ನಡೆಸಿ ನಾಡಿನಾದ್ಯಂತದ ದೇವಸ್ಥಾನಗಳ  ಜೀರ್ಣೋದ್ಧಾರ ಮತ್ತು ನದಿಗಳಿಗೆ ಘಾಟಗಳನ್ನು ನಿರ್ಮಿಸಿ  ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಅತ್ಯಮೂಲ್ಯ ಕಾರ್ಯವನ್ನು ನಿರ್ವಹಿಸಿ ಶಿವಲಿಂಗವನ್ನು ಕೈಯಲ್ಲಿ ಹಿಡಿದು ನ್ಯಾಯ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರು ೧೮೪೮ ರ ಮೊದಲೇ ಆಗಿ ಹೋಗಿದ್ದಾರೆ. ಈ ಅಹಿಲ್ಯಾಬಾಯಿ ನಿಜವಾಗಿಯೂ ಅನಕ್ಷರಸ್ಥೆಯಾಗಿರಬಹುದೇ ?

೯.  ೧೮೨೮ರಲ್ಲಿ ಹುಟ್ಟಿದ್ದ  ಸಾಕ್ಷಾತ್ ರಣರಾಗಿಣಿಯಾಗಿದ್ದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ೧೮೪೨ರಲ್ಲಿ ಮದುವೆಯಾಗಿ ಝಾನ್ಸಿಗೆ ಹೋಗುವವರೆಗೆ ಅವರಿಗೆ ಅಕ್ಷರಜ್ಞಾನ ಸಿಕ್ಕಿರಲಿಲ್ಲವೇ ?

೧೦.  ‘ಭಾರತ  ದೇಶದಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಮಹಿಳೆಯರ ಮೊದಲ ಶಾಲೆಯನ್ನು ೧೮೪೮ ರಲ್ಲಿ ತೆರೆಯಲಾಯಿತು ಎಂದು ಹೇಳಿ ನಾವು ಏನನ್ನು ತೋರಿಸಲು ಪ್ರಯತ್ನಿಸುತ್ತಿದ್ದೇವೆ ? ಅಂದರೆ ಇದರರ್ಥ ‘೧೮೪೮ ರ ಪೂರ್ವದಲ್ಲಿಯೂ  ಮಹಿಳೆಯರಿಗೆ ಅಕ್ಷರಜ್ಞಾನವೇ ಇರಲಿಲ್ಲ’ ಎಂದು ಹೇಳುವುದಿದೆಯೇ ?

– ಶ್ರೀ. ಕಿಶೋರ ಪೌನಿಕರ, ನಾಗಪೂರ (೩.೧.೨೦೨೪)

(ಆಧಾರ: ಶ್ರೀ. ಕಿಶೋರ ಪೌನಿಕರ ಇವರ ‘ಫೇಸಬುಕ್‌ನಿಂದ)