ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇವರ ಇತ್ತೀಚಿನ ೨ ದಿನಗಳ ಭಾರತ ಪ್ರವಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಭರವಸೆ ನೀಡುವ ಮಹತ್ವದ ಚರ್ಚೆಗಳು ಮತ್ತು ಒಪ್ಪಂದಗಳು ನಡೆದಿವೆ. ಈ ಕ್ಷೇತ್ರಗಳಲ್ಲಿ ರಕ್ಷಣೆ, ವ್ಯಾಪಾರ, ಆರ್ಥಿಕ ಸಹಕಾರ, ಸೈಬರ್ ಭದ್ರತೆ, ತಂತ್ರಜ್ಞಾನ ಹಸ್ತಾಂತರ, ಪರಮಾಣು ಸಹಕಾರ, ಇಂಧನ ಭದ್ರತೆ ಮತ್ತು ಶಸ್ತ್ರಾಸ್ತ್ರಗಳ ವ್ಯಾಪಾರ ಸೇರಿವೆ. ವಿಶೇಷವೆಂದರೆ ಈ ದೃಢವಾಗುತ್ತಿರುವ ಸಂಬಂಧಗಳಿಂದಾಗಿ ಚೀನಾದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಭಾರತ-ರಷ್ಯಾದ ಬಲಗೊಂಡ ಸಂಬಂಧಗಳು ತನ್ನ ಪ್ರಾದೇಶಿಕ ಪ್ರಾಬಲ್ಯ ಮತ್ತು ಧೋರಣಾತ್ಮಕ ಹಿತಾಸಕ್ತಿಗಳಿಗೆ ಸಂಭಾವ್ಯ ಅಪಾಯವೆಂದು ಚೀನಾ ಭಾವಿಸುತ್ತದೆ. ಈ ಲೇಖನವು ಭಾರತ-ರಷ್ಯಾ ಸಹಕಾರದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ಏಷ್ಯಾದ ಭೂ-ರಾಜಕೀಯ ಪರಿಸ್ಥಿತಿಯ ಮೇಲಿನ ಪರಿಣಾಮಗಳನ್ನು ಶೋಧಿಸುತ್ತಾ ಚೀನಾದ ಪ್ರತಿಕ್ರಿಯೆಯ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

೧. ಭಾರತ-ರಷ್ಯಾ ಪರಸ್ಪರ ರಕ್ಷಣಾ ಸಹಕಾರ
ಐತಿಹಾಸಿಕವಾಗಿ ಭಾರತ-ರಷ್ಯಾ ಸಂಬಂಧಗಳ ಅಡಿಪಾಯ ರಕ್ಷಣೆಯಾಗಿದೆ. ಇತ್ತೀಚಿನ ಒಪ್ಪಂದಗಳು ಭಾರತವು ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳೂ ಸೇರಿದಂತೆ ರಷ್ಯಾದ ಮಿಲಿಟರಿ ಉಪಕರಣಗಳಲ್ಲಿ ಗಮನಾರ್ಹ ಹೂಡಿಕೆ ಮಾಡಿರುವುದನ್ನು ತೋರಿಸುತ್ತವೆ. ಈ ಸಹಕಾರವು ಕೇವಲ ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಈ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ಆಕ್ರಮಣಶೀಲತೆಯ ವಿರುದ್ಧ ಪ್ರತಿರೋಧವಾಗಿಯೂ ಕೆಲಸ ಮಾಡುತ್ತದೆ.
೨. ಆರ್ಥಿಕ ಮತ್ತು ವ್ಯಾಪಾರಿ ಸಂಬಂಧಗಳು
ಭಾರತ ಮತ್ತು ರಷ್ಯಾ ಸಾಂಪ್ರದಾಯಿಕ ಕ್ಷೇತ್ರಗಳ ವಲಯ ಗಳನ್ನು ಮೀರಿ ಕೃಷಿ, ತಂತ್ರಜ್ಞಾನ ಮತ್ತು ಔಷಧ ನಿರ್ಮಾಣ ಕ್ಷೇತ್ರಗಳ ವ್ಯಾಪಾರವನ್ನು ಒಳಗೊಂಡು ತಮ್ಮ ಆರ್ಥಿಕ ಸಂಬಂಧಗಳಲ್ಲಿ ವೈವಿಧ್ಯವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ಸಂಬಂಧಗಳಿಂದ ವ್ಯಾಪಾರೀ ಅಡೆತಡೆಗಳ ನಿವಾರಣೆ ಮತ್ತು ಹೂಡಿಕೆ ಸುಗಮಗೊಳಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರಕ್ಕೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಚೀನಾ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಾ ದೇಶದ ಆರ್ಥಿಕತೆಯನ್ನು ಬೆಳೆಸುವತ್ತ ಭಾರತ ಗಮನಹರಿಸಿದೆ.
೩. ರಾಜತಾಂತ್ರಿಕ ರಂಗದಲ್ಲಿ ಪರಸ್ಪರ ಬೆಂಬಲ
ರಾಜತಾಂತ್ರಿಕ ರಂಗದಲ್ಲಿ ಎರಡೂ ದೇಶಗಳು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲ ನೀಡುತ್ತಿವೆ. ಪ್ರಾದೇಶಿಕ ಸ್ಥಿರತೆಯಲ್ಲಿ ಅವರ ಕಾರ್ಯತಂತ್ರದ ಹಿತಾಸಕ್ತಿ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ಏಕಪಕ್ಷೀಯ ಕ್ರಮಗಳನ್ನು ಎದುರಿಸುವುದು ಅವರ ಕಾರ್ಯತಂತ್ರದ ಪಾಲುದಾರಿಕೆಗೆ ಒಂದು ಭದ್ರ ಅಡಿಪಾಯವನ್ನು ಒದಗಿಸುತ್ತದೆ. ಈ ಸಹಕಾರವು ಸಂಕೀರ್ಣ ಭೌಗೋಳಿಕ-ರಾಜಕೀಯ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.

೪. ಚೀನಾದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸೈಬರ್ ಭದ್ರತೆ
ಸೈಬರ ಸುರಕ್ಷೆ ಮತ್ತು ತಂತ್ರಜ್ಞಾನ ಹಸ್ತಾಂತರ ಇವುಗಳಿಂದಾಗಿ ಭಾರತದ ಚೀನಾ ಮೇಲಿನ ಅವಲಂಬನೆಯು ಕಡಿಮೆ ಆಗುವುದು. ವ್ಯಾಪಕ ಸೈಬರ್ ಬೆದರಿಕೆಗಳ ಯುಗದಲ್ಲಿ, ಭಾರತ ಮತ್ತು ರಷ್ಯಾ ಸೈಬರ್ ಭದ್ರತೆಯಲ್ಲಿ ಸಹಕಾರದ ಅಗತ್ಯವನ್ನು ಗುರುತಿಸಿವೆ. ತಂತ್ರಜ್ಞಾನ ವರ್ಗಾವಣೆಯಲ್ಲಿ ಜಂಟಿ ಉಪಕ್ರಮಗಳು ಸೈಬರ್ ಭದ್ರತೆಯಲ್ಲಿ ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಜೊತೆಗೆ, ಭಾರತವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬಹುದು, ಇದರಿಂದ ಚೀನೀ ತಂತ್ರಜ್ಞಾನದ ಅವಲಂಬನೆ ಕಡಿಮೆಯಾಗುತ್ತದೆ.
೫. ಇಂಧನ ಭದ್ರತೆಗಾಗಿ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಭಾರತದ ಪ್ರಯತ್ನಗಳು
ಪರಮಾಣು ಸಹಕಾರವು ಭಾರತ-ರಷ್ಯಾ ಸಂಬಂಧಗಳ ಮತ್ತೊಂದು ಪ್ರಮುಖ ಅಂಶವಾಗಿದೆ. ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆ ಸೇರಿದಂತೆ ನಡೆಯುತ್ತಿರುವ ಯೋಜನೆಗಳ ಮೂಲಕ ಭಾರತವು ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸುತ್ತಿದೆ. ಭಾರತವು ತನ್ನ ಇಂಧನ ಮೂಲಗಳನ್ನು ಹೇಗೆ ವೈವಿಧ್ಯಗೊಳಿಸುತ್ತಿದೆ ಎಂಬುದನ್ನು ಇದು ವಿವರಿಸುತ್ತದೆ. ಇದರ ಹೊರತಾಗಿ, ಇಂಧನ ಭದ್ರತೆಯು ಎರಡೂ ದೇಶಗಳಿಗೆ ಪ್ರಮುಖ ಕಾಳಜಿಯಾಗಿದೆ; ಚೀನಾದೊಂದಿಗಿನ ಸ್ಪರ್ಧೆಯಿಂದ ಪ್ರಭಾವಿತವಾದ ಜಾಗತಿಕ ಇಂಧನದ ಏರಿಳಿತಗಳ ಪರಿಣಾಮಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ.
೬. ಶಸ್ತ್ರಾಸ್ತ್ರ ಒಪ್ಪಂದಗಳ ಮೂಲಕ ಭಾರತದ ಸೇನಾ ಸಾಮರ್ಥ್ಯಗಳ ಆಧುನೀಕರಣ
ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದೆ ಮತ್ತು ರಷ್ಯಾ ಐತಿಹಾಸಿಕವಾಗಿ ಅದರ ಮುಖ್ಯ ಪೂರೈಕೆದಾರವಾಗಿದೆ. ಇತ್ತೀಚಿನ ಒಪ್ಪಂದಗಳು ಭಾರತದ ಸೇನಾ ಸಾಮರ್ಥ್ಯಗಳ ಆಧುನೀಕರಣಕ್ಕಾಗಿ ನಡೆಯುತ್ತಿರುವ ಬದ್ಧತೆಯನ್ನು ತೋರಿಸುತ್ತವೆ ಮತ್ತು ಅದೇ ಸಮಯದಲ್ಲಿ ರಷ್ಯಾಕ್ಕೆ ಅದರ ಭೌಗೋಳಿಕ-ರಾಜಕೀಯ ಪ್ರತ್ಯೇಕತೆಯ ಸಮಯದಲ್ಲಿ ಒಂದು ಮಹತ್ವದ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಶಸ್ತ್ರಾಸ್ತ್ರಗಳ ವ್ಯಾಪಾರವು ಕೇವಲ ಭಾರತದ ಭದ್ರತೆಯನ್ನು ಹೆಚ್ಚಿಸುವ ಕೆಲಸ ಮಾಡುವುದಿಲ್ಲ, ಬದಲಾಗಿ ಭಾರತ-ರಷ್ಯಾ ಪಾಲುದಾರಿಕೆಯ ಮೇಲಿನ ಆಳವಾದ ವಿಶ್ವಾಸವನ್ನೂ ಪ್ರತಿಬಿಂಬಿಸುತ್ತದೆ.
೭. ಭಾರತ-ರಷ್ಯಾದ ಹೆಚ್ಚುತ್ತಿರುವ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಚೀನಾ ಮಾಧ್ಯಮಗಳ ಕಥನ
ಚೀನಾದ ಅಧಿಕೃತ ಮಾಧ್ಯಮಗಳು, ವಿಶೇಷವಾಗಿ ‘ಗ್ಲೋಬಲ್ ಟೈಮ್ಸ್’, ಭಾರತ-ರಷ್ಯಾದ ಹೆಚ್ಚಿದ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಲು ಧ್ವನಿ ಎತ್ತುತ್ತಾ ಬಂದಿವೆ. ಏಷ್ಯಾದಲ್ಲಿ ಚೀನಾದ ಪ್ರಭಾವಕ್ಕೆ ಸವಾಲೆಂದು ಈ ಎರಡೂ ದೇಶಗಳ ಸಹಕಾರ ಒಪ್ಪಂದದ ಬಗ್ಗೆ ಚಿತ್ರಣವನ್ನು ವಿವಿಧ ಲೇಖನಗಳ ಮೂಲಕ ಸಿದ್ಧಪಡಿಸಲಾಗಿದೆ. ಈ ಲೇಖನಗಳ ಮೂಲಕ ‘ಅನೇಕ ಬಾರಿ ದಕ್ಷಿಣ ಏಷ್ಯಾದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯ ಸಂಭಾವ್ಯತೆಯ ಮೇಲೆ ಮತ್ತು ಭಾರತದ ಸೇನಾ ಆಧುನೀಕರಣವು ಪ್ರಾದೇಶಿಕ ಸ್ಥಿರತೆಗೆ ನೇರ ಅಪಾಯವಾಗಿದೆ’ ಎಂದು ಚೀನಾ ಬಿಂಬಿಸುತ್ತದೆ.
೮. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ
ಚೀನಾ ಇಂಟರ್ನೆಟ್ ಬಳಕೆದಾರರು ಸಾಮಾಜಿಕ ಮಾಧ್ಯಮ ಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಟರಿ ದೃಷ್ಟಿಯಿಂದ ಸಕ್ಷಮವಾಗಿರುವ ಭಾರತದ ಪರಿಣಾಮಗಳ ಬಗ್ಗೆ ಅಸುರಕ್ಷಿತತೆ ಮತ್ತು ಎಚ್ಚರಿಕೆಯ ವಿಷಯಗಳ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆಯುತ್ತವೆ. ಇದೇ ಸಮಯದಲ್ಲಿ ಚೀನಾ ವಿಶ್ಲೇಷಕರು ಮತ್ತು ವ್ಯಾಖ್ಯಾನಕಾರರು ವಿಕಸನಗೊಳ್ಳುತ್ತಿರುವ ‘ಇಂಡೋ-ರಷ್ಯನ್ ಎಕ್ಸಿಸ್’ ಅನ್ನು ಎದುರಿಸಲು ಚೀನಾ ತನ್ನದೇ ಆದ ಸೇನಾ ಮತ್ತು ರಾಜತಾಂತ್ರಿಕ ಧೋರಣೆಗಳನ್ನು ಬಲಪಡಿಸುವ ಅಂಶಕ್ಕೆ ಒತ್ತು ನೀಡುತ್ತಿದ್ದಾರೆ.
೯. ಹೆಚ್ಚುತ್ತಿರುವ ಭಾರತ ರಷ್ಯಾ ಸಹಕಾರದ ಮೇಲೆ ಚೀನಾದ ಕಾರ್ಯತಂತ್ರದ ಪ್ರತಿರೋಧದ ಕ್ರಮಗಳು
ಹೆಚ್ಚುತ್ತಿರುವ ಭಾರತ-ರಷ್ಯಾದ ಸಹಕಾರವನ್ನು ಎದುರಿಸಲು ಚೀನಾ ದಕ್ಷಿಣ ಏಷ್ಯಾದಲ್ಲಿ ತನ್ನ ರಾಜತಾಂತ್ರಿಕ ವ್ಯಾಪ್ತಿಯನ್ನು ವಿಸ್ತರಿಸಬಹುದು ಮತ್ತು ನೆರೆಯ ದೇಶಗಳಿಗೆ ಆರ್ಥಿಕ ಪ್ರೋತ್ಸಾಹ ಅಥವಾ ಭದ್ರತಾ ಭರವಸೆಯನ್ನು ನೀಡಬಹುದು.
ಇದರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳೊಂದಿಗೆ ಸಂಬಂಧವನ್ನು ದೃಢಗೊಳಿಸುವುದು ಮುಂತಾದ ಅಂಶಗಳು ಸೇರಿರಬಹುದು.
೧೦. ಸೇನಾ ನಿಲುವು
ಗಡಿ ಭಾಗಗಳಲ್ಲಿ ಹೆಚ್ಚುತ್ತಿರುವ ಸೈನ್ಯದ ನಿಯೋಜನೆ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಹಿಮಾಲಯದಲ್ಲಿ ಚೀನಾದ ಸೇನೆಯು ಹೆಚ್ಚು ಆಕ್ರಮಣಕಾರಿಯಾಗಬಹುದು. ಅಲ್ಲದೇ ಹೆಚ್ಚು ಆಕ್ರಮಣಕಾರಿ ಭಾರತದಿಂದ ಉದ್ಭವಿಸಬಹುದಾದ ಸಂಭಾವ್ಯ ಸವಾಲುಗಳನ್ನು ಹತ್ತಿಕ್ಕುವ ಆಯೋಜನೆಯು ಚೀನಾದ ಸೇನಾ ಕಾರ್ಯತಂತ್ರದಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.
೧೧. ಭಾರತ-ರಷ್ಯಾ ಪ್ರಭಾವದ ಪ್ರತಿರೋಧಕ್ಕಾಗಿ ಆರ್ಥಿಕ ಉಪಕ್ರಮಗಳಿಂದ ಪ್ರಭಾವ ಹೆಚ್ಚಿಸಲು ಚೀನಾದ ಪ್ರಯತ್ನ
ಚೀನಾ ಈಗಾಗಲೇ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಗಮನಾರ್ಹ ಹೂಡಿಕೆ ಮಾಡಿದೆ. ಇದರಿಂದ ಹೆಚ್ಚುತ್ತಿರುವ ಭಾರತ-ರಷ್ಯಾ ಪ್ರಭಾವವನ್ನು ಪ್ರತಿರೋಧಿಸುವ ಆರ್ಥಿಕ ಉಪ ಕ್ರಮಗಳ ಮೂಲಕ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ಅದು ಚೀನಾ ಹೂಡಿಕೆಯ ಲಾಭಗಳನ್ನು ತೋರಿಸಲು ಉದ್ದೇಶಿತ ಹೂಡಿಕೆಗಳೊಂದಿಗೆ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ನಂತಹ ಹೆಚ್ಚು ಆಕರ್ಷಕ ಆಯ್ಕೆಗಳನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಬಹುದು.
೧೨. ಸೈಬರ್ ಭದ್ರತೆಯಲ್ಲಿ ಭಾರತದ ಪ್ರಗತಿಯನ್ನು ದುರ್ಬಲಗೊಳಿಸಲು ರಹಸ್ಯ ಕಾರ್ಯಾಚರಣೆಗಳು
ಸೈಬರ್ ಸಾಮರ್ಥ್ಯಗಳಲ್ಲಿ ಚೀನಾದ ಹೆಚ್ಚುತ್ತಿರುವ ಹೂಡಿಕೆಯು ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯಲ್ಲಿ ಭಾರತದ ಪ್ರಗತಿಯನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ಚೀನಾದ ಸೈಬರ್ ಕಾರ್ಯಾಚರಣೆಗಳನ್ನು ತೀವ್ರಗೊಳಿಸಬಹುದು. ಚೀನಾ ತನ್ನ ಪ್ರತಿ ದಾಳಿಯನ್ನು ಹೆಚ್ಚಿಸುತ್ತಿದ್ದಂತೆ ಈ ಪ್ರದೇಶದಲ್ಲಿ ಮಿತ್ರ ರಾಷ್ಟ್ರಗಳ ನಡುವೆ ಗುಪ್ತಚರ ಹಂಚಿಕೆ ಹೆಚ್ಚಾಗುವ ಸಾಧ್ಯತೆಯಿದೆ.
೧೩. ತೀರ್ಮಾನ
ಭಾರತ ಮತ್ತು ರಷ್ಯಾ ನಡುವಿನ ಬಲವಾದ ಸಹಕಾರವು ಚೀನಾಕ್ಕೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ, ಇದು ಪ್ರಾದೇಶಿಕ ಅಧಿಕಾರ ಸಮತೋಲನವನ್ನು ಮೂಲಭೂತವಾಗಿ ಬದಲಾಯಿಸಬಹುದು. ಭಾರತ ತನ್ನ ರಕ್ಷಣೆ, ಆರ್ಥಿಕ ಮತ್ತು ರಾಜತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ ಮತ್ತು ಚೀನಾದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದು ಚೀನಾದ ಕಳವಳಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ವಿಕಸನಗೊಳ್ಳುತ್ತಿರುವ ಭಾರತ-ರಷ್ಯಾ ಮೈತ್ರಿಯನ್ನು ಎದುರಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ನಿಲುವು ಮತ್ತು ರಾಜತಾಂತ್ರಿಕ ಉಪಕ್ರಮಗಳಲ್ಲಿ ಚೀನಾ ಪ್ರತಿಕ್ರಿಯಿಸುತ್ತದೆ.
೧೪. ಭಾರತ-ರಷ್ಯಾ ಪಾಲುದಾರಿಕೆಯು ಕಾರ್ಯತಂತ್ರದ ವಿಶ್ಲೇಷಣೆಯ ಕೇಂದ್ರಬಿಂದುವಾಗಿರಲಿ !
ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಭೂದೃಶ್ಯವು ಹೊಸ ಹಂತವನ್ನು ಪ್ರವೇಶಿಸುತ್ತಿದೆ, ಇದರಲ್ಲಿ ಮೈತ್ರಿಗಳು ಮತ್ತು ಪಾಲುದಾರಿಕೆಗಳ ಚಲನವಲನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಈ ಬೆಳವಣಿಗೆಗಳು ಭಾರತವು ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸಲು ಮತ್ತು ಜಾಗತಿಕ ವೇದಿಕೆ ಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಅವಕಾಶವನ್ನು ಒದಗಿಸುತ್ತದೆ; ಆದರೆ ಅದು ವೇಗವಾಗಿ ಬೆಳೆಯುತ್ತಿರುವ ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರೆಯನ್ನು ಸಹ ಹೊರುತ್ತಿದೆ. ಈ ಸಂಕೀರ್ಣ ಸಂಬಂಧಗಳ ಜಾಲದಲ್ಲಿ ಪ್ರತಿಯೊಂದು ದೇಶವು ತನ್ನದೇ ಆದ ನೀತಿಗಳನ್ನು ಎಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂಬುದರ ಮೇಲೆ ಭವಿಷ್ಯವು ಅವಲಂಬಿತವಾಗಿರುತ್ತದೆ. ಜಾಗತಿಕ ಕ್ರಮವು ಬದಲಾದಂತೆ, ಪ್ರಮುಖ ಶಕ್ತಿಗಳ ಪ್ರತಿಕ್ರಿಯೆಗಳು ಈ ಪ್ರದೇಶ ದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಹಾದಿಯನ್ನು ರೂಪಿಸುತ್ತಲೇ ಇರುತ್ತವೆ. ಮುಂಬರುವ ವರ್ಷಗಳಲ್ಲಿ ಭಾರತ-ರಷ್ಯಾ ಪಾಲುದಾರಿಕೆಯು ಕಾರ್ಯತಂತ್ರದ ವಿಶ್ಲೇಷಣೆಯ ಪ್ರಮುಖ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ.
ಹೆಚ್ಚುತ್ತಿರುವ ಭಾರತ-ರಷ್ಯಾ ಪಾಲುದಾರಿಕೆಯ ಕಾರ್ಯತಂತ್ರದ ಪರಿಣಾಮಗಳು
ಭಾರತ-ರಷ್ಯಾ ನಡುವಿನ ಹೆಚ್ಚುತ್ತಿರುವ ಪಾಲುದಾರಿಕೆಯನ್ನು ಚೀನಾ ಕೇವಲ ದ್ವಿಪಕ್ಷೀಯ ವಿಷಯವಾಗಿ ನೋಡುತ್ತಿಲ್ಲ, ಬದಲಾಗಿ ಏಷ್ಯಾದಲ್ಲಿನ ಶಕ್ತಿ ಚಲನಶೀಲತೆಯ ಸಂಭಾವ್ಯ ಪುನರ್ ರಚನೆಯಾಗಿ ನೋಡುತ್ತಿದೆ. ದೂರದೃಷ್ಟಿಯ ಪರಿಣಾಮಗಳು ಬಹುಮುಖಿಯಾಗಿವೆ
೧. ಚೀನಾದ ಪ್ರಭಾವವನ್ನು ಎದುರಿಸುವುದು : ಸುದೃಢ ಭಾರತವು ದಕ್ಷಿಣ ಏಷ್ಯಾ ಮತ್ತು ಅದರಾಚೆ, ವಿಶೇಷವಾಗಿ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (ಬಿ.ಆರ್.ಐ. ವ್ಯಾಪಾರ, ಹೂಡಿಕೆ ಮತ್ತು ಮೂಲಭೂತ ಸೌಲಭ್ಯಗಳ ಮೂಲಕ ಏಶಿಯಾ, ಆಫ್ರಿಕಾ ಮತ್ತು ಯುರೋಪ ಖಂಡಗಳ ವಿವಿಧ ದೇಶಗಳಿಗೆ ಚೀನಾದೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆ)’ ನಂತಹ ಯೋಜನೆಗಳ ಸಂದರ್ಭದಲ್ಲಿ ಚೀನಾದ ಪ್ರಭಾವವನ್ನು ಪ್ರತಿರೋಧಿಸಬಹುದು.
೨. ಭಾರತದಲ್ಲಿ ಹೆಚ್ಚಿದ ಸೇನಾ ಸನ್ನದ್ಧತೆ : ಭಾರತವು ರಷ್ಯಾದ ತಂತ್ರಜ್ಞಾನದ ಮೂಲಕ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಗಡಿ ಭಾಗಗಳಲ್ಲಿನ ಚೀನಾದ ವಿಸ್ತರಣಾವಾದಿ ಪ್ರವೃತ್ತಿಗೆ ತಡೆ ಬೀಳಬಹುದು ಮತ್ತು ಚೀನಾ ತನ್ನ ಸೇನಾ ಸ್ಥಿತಿಗತಿಯನ್ನು ಮರುಮೌಲ್ಯಮಾಪನ ಮಾಡಲು ಅನಿವಾರ್ಯವಾಗಬಹುದು.
೩. ಭೌಗೋಳಿಕ – ರಾಜಕೀಯ ಜೋಡಣೆ : ಈ ಪಾಲುದಾರಿಕೆಯಿಂದಾಗಿ ಭಾರತ, ಅಮೇರಿಕ ಮತ್ತು ಅದರ ಮಿತ್ರರಾಷ್ಟ್ರಗಳ ನಡುವೆ ಹೆಚ್ಚು ಸ್ಪಷ್ಟವಾದ ಭದ್ರತಾ ಜೋಡಣೆಗೆ ಕಾರಣವಾಗಬಹುದು. ಇದರಲ್ಲಿ ಚೀನಾವನ್ನು ರಾಜತಾಂತ್ರಿಕವಾಗಿ ಮತ್ತಷ್ಟು ಪ್ರತ್ಯೇಕಿಸಬಹುದು.
೪. ಆರ್ಥಿಕ ಸ್ಪರ್ಧೆ : ಭಾರತ ಮತ್ತು ರಷ್ಯಾ ನಡುವಿನ ಬಲವಾದ ಆರ್ಥಿಕ ಸಂಬಂಧಗಳಿಂದಾಗಿ ತಂತ್ರಜ್ಞಾನ ಮತ್ತು ಇಂಧನದಂತಹ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗಬಹುದು, ಇಲ್ಲಿ ಎರಡೂ ದೇಶಗಳು ಈ ಹಿಂದೆ ಚೀನಾದೊಂದಿಗೆ ಮುಖಾಮುಖಿಯಾಗಿದ್ದವು.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು