ಪತ್ರಿಕೆಯ ಸೇವೆಯ ಮೂಲಕ ಸಾಧಕರಲ್ಲಿ ಗುಣವೃದ್ಧಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ೧೯೯೮ ರಲ್ಲಿ ಅಧ್ಯಾತ್ಮ ಪ್ರಸಾರ, ರಾಷ್ಟ್ರ ಮತ್ತು ಧರ್ಮ ಜಾಗೃತಿಯ ವಿಷಯಗಳ ಕುರಿತು ತಮ್ಮ ಕಾರ್ಯವನ್ನು ಸಾಪ್ತಾಹಿಕ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ವಿಸ್ತರಿಸಿದರು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಪ್ರಾರಂಭದಲ್ಲಿ ಸ್ವತಃ ೧೯೯೮ ರಲ್ಲಿ ಪ್ರಾರಂಭವಾದ ಮರಾಠಿ / ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ ಮತ್ತು ೧೯೯೯ ರಲ್ಲಿ ಪ್ರಾರಂಭವಾದ ಮರಾಠಿ ದೈನಿಕ ‘ಸನಾತನ ಪ್ರಭಾತ’ ದಿನಪತ್ರಿಕೆಯ ೪ ಆವೃತ್ತಿಗಳು, ಹಾಗೆಯೇ ಹಿಂದಿ ಮತ್ತು ಆಂಗ್ಲ ಮಾಸಿಕ ‘ಸನಾತನ ಪ್ರಭಾತ’ ಇವುಗಳ ಸಮೂಹ ಸಂಪಾದಕರಾಗಿದ್ದರು.’ ಈ ಕಾಲಾವಧಿಯಲ್ಲಿ ನಾನು (ಡಾ. ದುರ್ಗೇಶ ಸಾಮಂತ) ಸಂಪಾದಕೀಯ ವಿಭಾಗದಲ್ಲಿ ಸೇವೆಯನ್ನು ಮಾಡುತ್ತಿದ್ದೆ. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ನನಗೆ ಕಲಿಯಲು ಸಿಕ್ಕಿದ ವೈಶಿಷ್ಟ್ಯಪೂರ್ಣ ಅಂಶಗಳನ್ನು ನೀಡುತ್ತಿದ್ದೇನೆ. (ಭಾಗ ೧)

೧. ಅಗತ್ಯವಿರುವಷ್ಟನ್ನೇ ಸಂಗ್ರಹಿಸಲು ಕಲಿಸಿದರು
೧೯೯೮ ರಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ ಪ್ರಾರಂಭವಾಯಿತು. ಆ ಸಮಯದಲ್ಲಿ ನಾನು ಸಾಂಗ್ಲಿಯ ನನ್ನ ಮನೆಯಲ್ಲಿ ಇದ್ದೆನು. ಕೆಲವು ವಿಷಯಗಳ ಬಗ್ಗೆ ನಾನು ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿ ಲೇಖನವನ್ನು ಬರೆಯಲು ಪ್ರಾರಂಭಿಸಿದೆನು. ‘ದೇಶ, ಸಮಾಜ ಮುಂತಾದ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯಬೇಕಾದರೆ, ಕೆಲವು ಸರಿಯಾದ ಸಂದರ್ಭ ಮಾಹಿತಿ ನಮ್ಮ ಬಳಿ ಇರಬೇಕು’ ಎಂದು ಅನಿಸಿದ್ದರಿಂದ, ನಾನು ನನ್ನಲ್ಲಿಗೆ ಬರುವ ವಾರ್ತಾಪತ್ರಿಕೆಗಳನ್ನು ಓದಿ, ಅವುಗಳಲ್ಲಿ ಯಾವ ವಿಷಯದ ಮೇಲೆ ಉಪಯುಕ್ತ ಬರವಣಿಗೆ ಇದೆ ? ಎಂದು ನೋಡಿ, ಆಯಾ ಪುಟಗಳ ಮೇಲೆ ಸಂಬಂಧಿತ ಗುರುತುಗಳನ್ನು ಮಾಡಿ, ಆ ದಿನಪತ್ರಿಕೆಗಳನ್ನು ಸಂಗ್ರಹಿಸಿಡಲು ಪ್ರಾರಂಭಿಸಿದೆನು. ಕೆಲವು ಸಮಯದ ನಂತರ ಪ.ಪೂ. ಡಾಕ್ಟರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವಾಗ ನಾನು ಅವರಿಗೆ ಈ ಅಂಶವನ್ನು ತಿಳಿಸಿದೆನು. ಆ ಸಮಯದಲ್ಲಿಯೇ ಅವರು ನನಗೆ ‘ಅಗತ್ಯವಿರುವಷ್ಟು ವಿಷಯದ ಭಾಗವನ್ನು ಕತ್ತರಿಸಿಡಬೇಕು. ಸುಮ್ಮನೆ ವಾರ್ತಾಪತ್ರಿಕೆಯ ಪುಟಗಳನ್ನು ಏಕೆ ಸಂಗ್ರಹಿಸುತ್ತೀರಿ ? ಎಂದು ಹೇಳಿದರು, ಆಗ ನನ್ನ ಗ್ರಹಿಸುವ ಸಾಮರ್ಥ್ಯ, ನನ್ನೊಳಗಿನ ಅಹಂಕಾರ, ಸೋಮಾರಿತನ ಮುಂತಾದ ಕಾರಣಗಳಿಂದ ನಾನು ಅವರು ಹೇಳಿದಂತೆ ಮಾಡಲಿಲ್ಲ. ನಂತರ ಸಾಂಗ್ಲಿಯನ್ನು ಬಿಡುವಾಗ ಸ್ವಾಭಾವಿಕವಾಗಿ ಆ ಎಲ್ಲ ವಾರ್ತಾಪತ್ರಿಕೆಗಳು ರದ್ದಿಯಲ್ಲಿ ಸೇರಿಕೊಂಡವು. ನಂತರ ಮುಂದೆ ಪ.ಪೂ. ಡಾಕ್ಟರರೊಂದಿಗೆ ಪ್ರತ್ಯಕ್ಷ ಸೇವೆ ಮಾಡುವ ಅವಕಾಶ ಸಿಕ್ಕಿತು, ಆ ಸಮಯದಲ್ಲಿ ‘ಅವರು ನಿಖರವಾಗಿ ಹೇಗೆ ಮಾಡುತ್ತಾರೆ ?’ ಎಂದು ಕಲಿಯಲು ಸಿಕ್ಕಿತು. ಇದರಿಂದ ‘ಅಗತ್ಯವಿರುವಷ್ಟನ್ನೇ ಸಂಗ್ರಹಿಸಬೇಕು’ ಎಂಬ ಈ ಪಾಠವು ಜೀವನದ ಇತರ ಆಯಾಮಗಳಿಗೂ ಉಪಯುಕ್ತವಾಯಿತು.

‘ಕಾರ್ಯಾಲಯಕ್ಕೆ ಭೇಟಿ ನೀಡಿದ ಇತರ ವಾರ್ತಾಪತ್ರಿಕೆಯ ಸಂಪಾದಕರಿಗೆ ನಿಖರವಾಗಿ ಏನು ಹೇಳಬೇಕು ?’ ಈ ಸಂಬಂಧದಲ್ಲಿ ನೀಡಿದ ವಿಶೇಷ ದೃಷ್ಟಿಕೋನ !
ಒಮ್ಮೆ ಒಂದು ಸುಪ್ರಸಿದ್ಧ ಮರಾಠಿ ದಿನಪತ್ರಿಕೆಯ ಸಂಪಾದಕರು ನಮ್ಮ ಕಚೇರಿಗೆ ಬಂದರು. ಅವರು ಬರುವುದಕ್ಕಿಂತ ಮೊದಲು, ಅವರಿಗೆ ಎಂದಿನಂತೆ ಸನಾತನ ಸಂಸ್ಥೆಯ ಕಾರ್ಯ ಮತ್ತು ದೈನಿಕ ‘ಸನಾತನ ಪ್ರಭಾತ’ದ ಕಾರ್ಯಾಲಯವನ್ನು ತೋರಿಸುವುದರೊಂದಿಗೆ ಇನ್ನೇನು ತೋರಿಸಬೇಕು ಅಥವಾ ಹೇಳಬೇಕು ? ಎಂದು ನಾನು ಪ.ಪೂ. ಡಾಕ್ಟರರಲ್ಲಿ ಕೇಳಲು ಹೋದೆನು. ಅದಕ್ಕೆ ಅವರು ನಾವು ನಮ್ಮ ದಿನಪತ್ರಿಕೆಯಲ್ಲಿ ಶುದ್ಧಲೇಖನ ಚೆನ್ನಾಗಿ ಇರಬೇಕೆಂದು ಏನು ಮಾಡುತ್ತೇವೆ ? ಅದನ್ನು ಅವರಿಗೆ ಹೇಳಿ. ಹಾಗೆಯೇ ಅವರದೇ ವಾರ್ತಾಪತ್ರಿಕೆಯಲ್ಲಿ ತುಂಬಾ ಒಳಗಿನ ಪುಟದಲ್ಲಿ ಒಂದು ಕಾಲಂನಲ್ಲಿರುವ ಹಾಗೆ ನೋಡಿದರೆ ಬಹಳ ಕಡಿಮೆ ಮಹತ್ವದ್ದು ಅನಿಸುವ ಸುದ್ದಿಯನ್ನು ಓದಿ, ಇದರ ಮೇಲೆ ನಮ್ಮ ವಿಚಾರಗಳನ್ನು ನಮ್ಮ ದೈನಿಕದಲ್ಲಿ ಹೇಗೆ ಮಂಡಿಸುತ್ತೇವೆ ಎಂಬುದನ್ನು ತೋರಿಸಿ ಎಂದು ಹೇಳಿದರು. ಆ ಸಂಪಾದಕರು ಕಚೇರಿಗೆ ಬಂದ ಮೇಲೆ ಅವರಿಗೆ ನಾನು ಎಲ್ಲ ಕಚೇರಿಯನ್ನು ತೋರಿಸಿದೆ ಮತ್ತು ನಂತರ ಮೇಲಿನ ಎರಡು ಅಂಶಗಳನ್ನು ತಿಳಿಸಿದೆನು. ಶುದ್ಧಲೇಖನಕ್ಕೆ ಸಂಬಂಧದಲ್ಲಿ ಮಾಹಿತಿಯನ್ನು ಕೇಳಿ ಆ ಸಂಪಾದಕರು, ಇದು ವಿಶೇಷವಾಗಿದೆ. ಇತ್ತೀಚೆಗೆ ಶುದ್ಧಲೇಖನ ಅಂದರೆ ಏನು ? ಎಂಬುದು ದಿನಪತ್ರಿಕೆಯ ಕಾರ್ಯಾಲಯದಲ್ಲಿನ ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ ಎಂದು ಹೇಳಿದರು. ಅವರ ವಾರ್ತಾಪತ್ರಿಕೆಯ ಚಿಕ್ಕ ಸುದ್ದಿಯ ಮೇಲೆಯೂ ನಾವು ಯಾವ ರೀತಿ ದೃಷ್ಟಿಕೋನ ನೀಡುತ್ತೇವೆ, ಎಂಬುದನ್ನು ನೋಡಿ ಅವರಿಗೆ ತುಂಬಾ ಆಶ್ಚರ್ಯವಾಯಿತು. ಇದರಿಂದ ನನಗೆ, ‘ನಮ್ಮ ಬಳಿ ಯಾರಾದರೂ ಬಂದಾಗ, ಅವರಿಗೆ ನಿಖರವಾಗಿ ವಿಶೇಷವಾಗಿ ಏನು ತೋರಿಸಬೇಕು ಅಥವಾ ಹೇಳಬೇಕು ?’ಎಂಬುದು ಕಲಿಯಲು ಸಿಕ್ಕಿತು.
೨. ಅಲ್ಪ ಸಮಯದಲ್ಲಿಯೇ ಇತರ ವಾರ್ತಾಪತ್ರಿಕೆಗಳನ್ನು ಓದಿ, ಅದರಲ್ಲಿನ ಆಯ್ದ ಬರವಣಿಗೆಗಳಿಗೆ ಗುರುತು ಮಾಡಿಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ನಂತರ ೧೯೯೯ ರಲ್ಲಿ ಗೋವಾದಿಂದ ದೈನಿಕ ‘ಸನಾತನ ಪ್ರಭಾತ’ ದಿನಪತ್ರಿಕೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಗೋವಾದ ಎಲ್ಲ ಸ್ಥಳೀಯ ಮರಾಠಿ ಮತ್ತು ಆಂಗ್ಲ ವಾರ್ತಾಪತ್ರಿಕೆಗಳನ್ನು ಸಂಪಾದಕೀಯ ವಿಭಾಗಕ್ಕೆ ತರಿಸಲಾಗುತ್ತಿತ್ತು. ಅಲ್ಪಾವಧಿಯಲ್ಲಿಯೇ ಪ.ಪೂ. ಡಾಕ್ಟರರು ಆಂಗ್ಲ ವಾರ್ತಾಪತ್ರಿಕೆಗಳನ್ನು ಸ್ಥಗಿತಗೊಳಿಸುವಂತೆ ಹೇಳಿದರು. ‘ಸನಾತನ ಪ್ರಭಾತ’ ದಿನಪತ್ರಿಕೆಗಾಗಿ ಜಾಹೀರಾತುಗಳನ್ನು ತೆಗೆದುಕೊಳ್ಳುವ ಸೇವೆ ಮಾಡುತ್ತಿದ್ದ ಸಾಧಕರಿಗೆ ಆಂಗ್ಲ ವಾರ್ತಾಪತ್ರಿಕೆಗಳು ಬೇಕಾಗಿದ್ದವು, ಅವು ಮಾತ್ರ ಸ್ವಲ್ಪ ಸಮಯದ ವರೆಗೆ ಮುಂದುವರಿದವು. ಆ ಕಾಲದಲ್ಲಿ ಪ.ಪೂ. ಡಾಕ್ಟರರು ಎಲ್ಲ ವಾರ್ತಾಪತ್ರಿಕೆಗಳನ್ನು ಓದುತ್ತಿದ್ದರು ಮತ್ತು ಅವುಗಳ ಮೇಲೆ ಕೆಲವು ಗುರುತುಗಳನ್ನು ಮಾಡುತ್ತಿದ್ದರು. ಇದರಿಂದ ಬಹಳಷ್ಟು ವಿಷಯಗಳು ಕಲಿಯಲು ಸಿಕ್ಕವು.
ಪ.ಪೂ. ಡಾಕ್ಟರರು ವಾರ್ತಾಪತ್ರಿಕೆಗಳನ್ನು ಓದುವಾಗ ಮೊದಲ ಪುಟದಿಂದ ಕೊನೆಯ ಪುಟದ ವರೆಗಿನ ಎಲ್ಲ ಬರವಣಿಗೆಯನ್ನು ಓದುತ್ತಿದ್ದರು ಮತ್ತು ಅವರಿಗೆ ಉಪಯುಕ್ತವೆಂದು ಅನಿಸುವ ಬರವಣಿಗೆಗಳಿಗೆ ಗುರುತು ಹಾಕಿಡುತ್ತಿದ್ದರು. ಪ್ರತಿಯೊಂದು ಗುರುತಿನ ಮೇಲೂ ‘ಅದು ಯಾವುದಕ್ಕೋಸ್ಕರ ಇದೆ ?’ ಎಂದು ಗುರುತು ಮಾಡಿರುತ್ತಿದ್ದರು. ಉದಾಹರಣೆಗೆ, ‘ಬೀದಿ ನಾಯಿಯು ಚಿಕ್ಕ ಮಗುವನ್ನು ಕಚ್ಚಿತು’, ಇದು ಸುದ್ದಿಯಾಗಿದ್ದರೆ, ಆ ಸುದ್ದಿಯನ್ನು ಗುರುತು ಮಾಡಿ ಅಲ್ಲಿಯೇ ಮೂಲೆಯಲ್ಲಿ ‘ಬೀದಿ ನಾಯಿಗಳು’ ಎನ್ನುವ ವಿಷಯವನ್ನು ಬರೆದಿರುತ್ತಿದ್ದರು. ಈ ಗುರುತುಗಳಿಗೆ ಸಂಬಂಧಿಸಿದ ಉಲ್ಲೇಖಗಳಿಂದ ಮತ್ತು ಗುರುತು ಮಾಡಿದ ಬರವಣಿಗೆಯಿಂದ ‘ಪ.ಪೂ. ಡಾಕ್ಟರರು ಒಂದೇ ಸಮಯದಲ್ಲಿ ವಿವಿಧ ವಿಷಯಗಳ ಕಡೆಗೆ ಎಷ್ಟು ವ್ಯಾಪಕ ದೃಷ್ಟಿಕೋನದಿಂದ ನೋಡುತ್ತಾರೆ’ ಎಂಬುದು ತಿಳಿಯಿತು ಮತ್ತು ಇದರಿಂದ ‘ನಾವು ಒಂದು ವಿಷಯದ ಅಭ್ಯಾಸವನ್ನು ಮಾಡಬೇಕೆಂದು ನಿರ್ಧರಿಸಿದರೆ, ಎಷ್ಟು ವ್ಯಾಪಕವಾಗಿ, ವಿವಿಧ ದೃಷ್ಟಿಕೋನಗಳಿಂದ ಅದರ ಕಡೆಗೆ ನೋಡಬೇಕು’ ಎಂಬುದು ಕಲಿಯಲು ಸಿಕ್ಕಿತು. ಎಲ್ಲಕ್ಕಿಂತ ವಿಶೇಷವೆಂದರೆ, ಅವರು ೫-೬ ವಾರ್ತಾಪತ್ರಿಕೆಗಳನ್ನು ಕೇವಲ ೧೫ ರಿಂದ ೨೦ ನಿಮಿಷಗಳಲ್ಲಿ ಓದಿ ಗುರುತುಗಳನ್ನು ಹಾಕಿ ಪೂರ್ಣಗೊಳಿಸುತ್ತಿದ್ದರು. ‘ಯಾವ ಪುಟದಲ್ಲಿ ಏನು ಓದಬೇಕು ?’ ಎಂಬುದು ಅವರಿಗೆ ತನ್ನಿಂತಾನೇ ಮತ್ತು ಅದರಲ್ಲಿನ ೨ ರಿಂದ ೪ ವಾಕ್ಯಗಳನ್ನು ಓದಿದ ತಕ್ಷಣವೇ ಗಮನಕ್ಕೆ ಬರುತ್ತಿರಬೇಕು. ಈ ರೀತಿ ‘ಸಮಾಜ’, ‘ರಸ್ತೆಗಳು’, ‘ಸಂಶೋಧನೆ’, ‘ಅಧ್ಯಾತ್ಮ’, ‘ಧರ್ಮ’, ‘ಯುದ್ಧ’, ‘ಸ್ತ್ರೀ’ ಈ ರೀತಿ ವಿವಿಧ ಏಕಶಬ್ದಗಳ ಗುರುತುಗಳನ್ನು ಹೊಂದಿದ್ದ ವಿಷಯಗಳನ್ನು ಕತ್ತರಿಸಿ ಅವುಗಳ ವರ್ಗೀಕರಿಸಿ ಅವುಗಳನ್ನು ಮುಂದೆ ಸಂಗ್ರಹಿಸಿ ಇಡಲಾಯಿತು. ನಂತರ ಆ ಲೇಖನಗಳು ವಿವಿಧ ವಿಷಯಗಳ ಮೇಲಿನ ಗ್ರಂಥಗಳ ರಚನೆಯ ಸಮಯದಲ್ಲಿ ಉಪಯೋಗವಾದವು.
– ಡಾ. ದುರ್ಗೇಶ ಸಾಮಂತ, ‘ಸನಾತನ ಪ್ರಭಾತ’ ನಿಯತಕಾಲಿಕಗಳ ಮಾಜಿ ಸಮೂಹ ಸಂಪಾದಕರು
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !