೨೬ ಜನವರಿ : ಭಾರತದ ಇತಿಹಾಸದಲ್ಲಿನ ಸುವರ್ಣಾಧ್ಯಾಯ !

ಅಶೋಕ ಸ್ತಂಭ                                                       ಭಾರತೀಯ ಸಂವಿಧಾನ

೧. ಸ್ವಾತಂತ್ರ್ಯದ ಪ್ರತಿಜ್ಞೆ ಹಾಗೂ ಸಾವಿರಾರು ಜನರ ಪ್ರಯತ್ನ, ತಾಳ್ಮೆ ಮತ್ತು ತ್ಯಾಗದ ಪರಿಣಾಮ !

‘ಶಕೆ ೧೮೭೧ ರ ಮಾಘ ಶುಕ್ಲ ಅಷ್ಟಮಿಯಂದು ಭಾರತದಲ್ಲಿ ಸಾರ್ವಭೌಮ ಪ್ರಜಾಗಣರಾಜ್ಯ ಸ್ಥಾಪನೆಯಾಗಿ ಭರತಖಂಡ ಸ್ವತಂತ್ರವಾಯಿತು. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕಾಗಿದೆ’, ಎಂಬ ಲೋಕಮಾನ್ಯ ಟಿಳಕರ ಘೋಷಣೆ ಪೂರ್ಣಗೊಂಡಿತು. ೨೬ ಜನವರಿ ೧೯೩೦ ರಂದು ನೆಹರುರವರ ಸಂದೇಶಕ್ಕನುಸಾರ ಸ್ವಾತಂತ್ರ್ಯದ ಪ್ರತಿಜ್ಞೆ ಮಾಡಲಾಯಿತು. ಸಾವಿರಾರು ಜನರ ಪ್ರಯತ್ನ, ತಾಳ್ಮೆ ಮತ್ತು ತ್ಯಾಗದಿಂದ ಭಾರತದ ಭಾಗ್ಯದ ದಿನ ಉದಯಿಸಿತು. ೧೫ ಅಗಸ್ಪ್ಟ್ಪ್ ೧೯೪೭ ರಂದು ಆಂಗ್ಲರು ಭಾರತವನ್ನು ಬಿಟ್ಟು ಹೋಗಿ ಭಾರತ ಸ್ವತಂತ್ರವಾಯಿತು.

೨. ಸಿದ್ಧ ಸಂವಿಧಾನಕ್ಕನುಸಾರ ಭಾರತವು ರಾಜ್ಯವನ್ನು ನಡೆಸಲು ಪ್ರಾರಂಭಿಸಿತು !

ಭಾರತ ಸ್ವತಃ ಸಿದ್ಧಪಡಿಸಿದ ಸಂವಿಧಾನಕ್ಕನುಸಾರ ರಾಜ್ಯಾಡಳಿತ ಆರಂಭವಾಯಿತು. ರಾಜಧಾನಿ ದೆಹಲಿಯಲ್ಲಿ ಅಪೂರ್ವ ಸಮಾರಂಭ ನಡೆಯಿತು. ಭಾರತದ ಕೊನೆಯ ಗವರ್ನರ್‌ ಜನರಲ್‌ (ರಾಜ್ಯಪಾಲ) ರಾಜಗೋಪಾಲಾಚಾರಿ ಇವರು ಬೆಳಗ್ಗೆ ೧೦.೧೮ ಕ್ಕೆ ‘ಭರತಖಂಡ ಸಂಪೂರ್ಣ, ಸ್ವತಂತ್ರ ಹಾಗೂ ಪ್ರಜಾರಾಜ್ಯಗಣತಂತ್ರವಾಯಿತು’, ಎಂದು ಘೋಷಣೆ ಮಾಡಿದರು. ಭಾರತದ ಮೊದಲ ರಾಷ್ಟ್ರಪತಿಯೆಂದು ದೇಶರತ್ನ ಬಾಬೂ ರಾಜೇಂದ್ರಪ್ರಸಾದ ಇವರು ಪ್ರತಿಜ್ಞೆ ಮಾಡಿದರು. ೩೧ ತೋಫುಗಳ ಸನ್ಮಾನದೊಂದಿಗೆ ರಾಷ್ಟ್ರಪತಿಗಳಿಂದ ಧ್ವಜ ಹಾರಿಸಲ್ಪಟ್ಟಿತು.

೩. ಪ್ರಜಾರಾಜ್ಯಗಣತಂತ್ರದ ದಿನ ಸಿಕ್ಕಿದ ಸಂಪತ್ತನ್ನು ಜೋಪಾನ ಮಾಡಲು ನೆಹರುರವರಿಂದ ಜನರಿಗೆ ಸಂದೇಶ !

ಪಾಂಡವರ ಇಂದ್ರಪ್ರಸ್ಥ ರಾಜಧಾನಿಯು ವೈಭವಶಾಲಿ, ಪ್ರಾಚೀನ ಕಾಲದಿಂದಲೂ ಭಾರತದ ರಾಜಧಾನಿ ವೈಭವ, ಉನ್ನತಿ, ಉತ್ಕರ್ಷ ಹಾಗೂ ಏಳ್ಗೆಯ ಅನೇಕ ದಿನಗಳನ್ನು ನೋಡಿತು. ಭಾರತದ ಪ್ರಭುತ್ವಸಂಪನ್ನ ಜನತಂತ್ರಾತ್ಮಕ ಗಣರಾಜ್ಯದ ಪ್ರಸ್ಥಾವನೆಯ ಸೂಯೋರ್ದಯದ ಈ ದಿನ ಭಾರತದ ಇತಿಹಾಸದಲ್ಲಿ ಅಪೂರ್ವವಾಗಿದೆ. ಉದ್ಘಾಟನೆಯ ಸಮಯದಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ ನೆಹರುರವರು ಭಾರತೀಯರಿಗೆ ಸಂದೇಶ ನೀಡಿದರು, ”ಈ ದಿನ ಭಾರತ ಮತ್ತು ಭಾರತೀಯರ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಇಂದು ಸಿಕ್ಕಿದ ಸಂಪತ್ತು ದೊಡ್ಡ ಹೊಣೆಗಾರಿಕೆಯದ್ದಾಗಿದ್ದು ಅದನ್ನು ನಾವು ಸತ್ಕೃತ್ಯಗಳ ಮೂಲಕ ಕಣ್ಣುಗಳಿಗೆ ಎಣ್ಣೆ ಹಾಕಿ ಜೋಪಾನ ಮಾಡಬೇಕು; ಏಕೆಂದರೆ ನಮ್ಮ ಪ್ರಯತ್ನ ಕಡಿಮೆಯಾದರೆ ಅಥವಾ ನಾವು ಮಾರ್ಗ ತಪ್ಪಿದರೆ ಅದು ನಮ್ಮ ಕೈಯಿಂದ ಜಾರಿಹೋಗಬಹುದು.”

(ಆಧಾರ : ದಿನವಿಶೇಷ, ೨೬ ಜನವರಿ ೧೯೫೦)