ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

‘ಸಾಧನೆಯೆಂದರೆ ಈಶ್ವರಪ್ರಾಪ್ತಿಗಾಗಿ ನಿರಂತರ ಮಾಡುವ ಪ್ರಯತ್ನ ! ಸಾಧನೆಯೆಂದರೆ ಈಶ್ವರನೊಂದಿಗೆ ಜೋಡಿಸಲ್ಪಡುವ ನಿರಂತರ ಪ್ರಕ್ರಿಯೆ ! ಅನೇಕ ಬಾರಿ ಗಮನಕ್ಕೆ ಬರುವ ವಿಷಯವೆಂದರೆ, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧನೆಯಲ್ಲಿ ಮೇಲಿಂದ ಮೇಲೆ ಬರುವ ಅಡೆತಡೆಗಳಿಂದಾಗಿ ಸಾಧಕರು ಒಂದೇ ಹಂತದಲ್ಲಿ ಸಿಲುಕಿರುತ್ತಾರೆ. ಮುಂದೆ ಹೋಗುವ ಮಾರ್ಗವನ್ನು ಭಗವಂತನು ನಮಗೆ ಆಗಾಗ ತೋರಿಸುತ್ತಿದ್ದರೂ ಅದು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ‘ಸಾಧನೆಯಲ್ಲಿ ಮುಂದೆ ಹೋಗಲು ನಿರ್ದಿಷ್ಟವಾಗಿ ಯಾವ ಪ್ರಯತ್ನ ಮಾಡುವುದು ಅಪೇಕ್ಷಿತವಿದೆ ?, ಎಂದು ಹೊಳೆಯುವುದಿಲ್ಲ. ಆ ಸಮಯದಲ್ಲಿ ಸಾಧಕರು ‘ಸಾಧನೆಯಲ್ಲಿ ಮುಂದೆ ಹೋಗಲು ಬಯಸಿದರೂ ನಾವು ಒಂದೇ ಹಂತದಲ್ಲಿ ಏಕೆ ಸಿಲುಕಿಕೊಂಡಿದ್ದೇವೆ ?, ಎಂಬ ಬಗ್ಗೆ ಚಿಂತನೆ ಮಾಡಿ ಪ್ರಯತ್ನಿಸುವುದು ಅಪೇಕ್ಷಿತವಿರುತ್ತದೆ. ‘ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಯಾವ ಅಡಚಣೆಗಳು ಇರಬಹುದು ? ಮತ್ತು ಆ ಅಡಚಣೆಗಳನ್ನು ದೂರ ಮಾಡಲು ಏನು ಮಾಡಬೇಕು ?, ಈ ಬಗೆಗಿನ ಮಾರ್ಗದರ್ಶನವನ್ನು ಪ್ರತಿ ಗುರುವಾರ ನಡೆಯುವ ಭಕ್ತಿಸತ್ಸಂಗದ ಅಂತರ್ಗತ ‘ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಮಾಡಲಾಗುತ್ತಿದೆ. ‘ಈ ಹೊಸ ಭಕ್ತಿಸತ್ಸಂಗ ಶೃಂಖಲೆಯಿಂದ ಸಾಧಕರಿಗೆ ಮತ್ತು ವಾಚಕರಿಗೆ ಹೆಚ್ಚೆಚ್ಚು ಲಾಭ ಆಗಬೇಕೆಂದು ಅದರಲ್ಲಿನ ಅಂಶಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
೨೭/೧೧ ರ ಸಂಚಿಕೆಯಲ್ಲಿ ‘ವಿಚಾರಿಸದಿರುವುದರ ಹಿಂದಿನ ಅಯೋಗ್ಯ ಮಾನಸಿಕತೆಯಿಂದ ಸಾಧನೆಯಲ್ಲಿ ಬರುವ ಅಡೆತಡೆಗಳು ಮತ್ತು ಅದಕ್ಕೆ ಉಪಾಯಯೋಜನೆ’, ಇದರ ಬಗ್ಗೆ ಅರಿತುಕೊಂಡೆವು. ಈ ವಾರದ ಲೇಖನದಲ್ಲಿ ನಾವು ಅದರ ಮುಂದಿನ ವಿಷಯವನ್ನು ತಿಳಿದುಕೊಳ್ಳಲಿದ್ದೇವೆ. (ಲೇಖನ ೪)

‘ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸದ್ಯ ಕಾಲಾನುಸಾರ ಸಾಕ್ಷಾತ್ ಭಗವಂತನ ಇಚ್ಛೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವ ಡಾ. ಆಠವಲೆಯವರ ಕೃಪೆಯಿಂದ ವಿಶೇಷ ಭಕ್ತಿಸತ್ಸಂಗ ಶೃಂಖಲೆಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಸಿಗುತ್ತಿದೆ. ಈ ಮಾರ್ಗದರ್ಶನ ಸಾಧಕರಿಗಾಗಿ ಅತ್ಯಂತ ಅಮೂಲ್ಯ ಮತ್ತು ಮಹತ್ವಪೂರ್ಣವಾಗಿದೆ. ‘ಭಕ್ತಿಸತ್ಸಂಗದ ಈ ವಿಷಯದಿಂದಾಗಿ ಎಲ್ಲೆಡೆಯ ಸಾಧಕರ ಶುದ್ಧಿಯಾಗಬೇಕು, ಹಾಗೆಯೇ ಅವರ ಅಂತಃಕರಣದಲ್ಲಿನ ಸ್ವಭಾವದೋಷಗಳ ಮಲೀನತೆ ನಾಶವಾಗಿ ಅವರು ಶುದ್ಧ ಮತ್ತು ಪವಿತ್ರರಾಗಬೇಕು, ಎಂಬುದಕ್ಕಾಗಿ ಇದು ಭಕ್ತಿಯಜ್ಞವೇ ಆಗಿದೆ. ಸಾಧಕರು ಈ ಲೇಖನವನ್ನು ತಮ್ಮ ಬಳಿ ಸಂಗ್ರಹದಲ್ಲಿಟ್ಟುಕೊಳ್ಳಬೇಕು, ಹಾಗೆಯೇ ಈ ಅಂಶಗಳಿಗನುಸಾರ ತಳಮಳದಿಂದ ಪ್ರಯತ್ನಿಸಿ ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅದರಿಂದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬೇಕು !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
೮. ‘ಹೇಗೆ ಕೇಳಬಾರದು ?’ ಮತ್ತು ‘ಹೇಗೆ ಕೇಳಬೇಕು ?’ ಎಂಬುದರ ಕುರಿತು ಮಾರ್ಗದರ್ಶನ !
ಇದು ವರೆಗಿನ ಲೇಖನಗಳಲ್ಲಿ, ‘ಕೇಳುವುದು’ ಈ ಕ್ರಿಯೆ ಮಾಡುವಾಗ ಎದುರಾಗುವ ಅಡೆತಡೆಗಳು ಮತ್ತು ಅವುಗಳಿಗೆ ಪರಿಹಾರೋಪಾಯಗಳ ಬಗ್ಗೆ ತಿಳಿದುಕೊಂಡೆವು. ಕೆಲವು ಬಾರಿ ಕೇಳುವ ಕ್ರಿಯೆ ನಡೆಯುತ್ತದೆ; ಆದರೆ ಸ್ವಭಾವದೋಷಗಳು ಮತ್ತು ಅಹಂಕಾರದ ಅಡೆತಡೆಗಳಿಂದಾಗಿ ಕೇಳುವ ವಿಷಯದಲ್ಲಿ ತಪ್ಪುಗಳು ಆಗುತ್ತವೆ. ಇದಕ್ಕಾಗಿ, ‘ಕೇಳಿ ಮಾಡುವ’ ಗುಣವನ್ನು ಮೈಗೂಡಿಸಿ ಕೊಳ್ಳುವಾಗ, ಯಾವ ರೀತಿಯಲ್ಲಿ ಕೇಳಿದರೆ ನಾವು ಗುರುಕೃಪೆಯ ಅನುಭೂತಿ ಪಡೆಯಬಹುದು ? ಸಂಕ್ಷಿಪ್ತವಾಗಿ, ‘ಹೇಗೆ ಕೇಳಬಾರದು ?’ ಮತ್ತು ‘ಹೇಗೆ ಕೇಳಬೇಕು ?’, ಎಂಬುದನ್ನು ತಿಳಿದುಕೊಳ್ಳೋಣ.
‘ವಿಚಾರಿಸುವ ಕೃತಿ ಮಾಡುವಾಗ ‘ಹೇಗೆ ಇರಬಾರದು ?’ ಮತ್ತು ಅದರ ಬದಲು ‘ಹೇಗೆ ಇರಬೇಕು ?’ ಇದರ ಸಂದರ್ಭದಲ್ಲಿ ಅಂಶಗಳಿಂದ ದಿಶೆ ಪಡೆದು ಪ್ರಯತ್ನಿಸಿ ತಪ್ಪನ್ನು ತಡೆಗಟ್ಟಲು ಮತ್ತು ಶುದ್ಧ ಮನಸ್ಸಿನಿಂದ ವಿಚಾರಿಸುವ ಕೃತಿ ಮಾಡಿದರೆ ನಮ್ಮ ಸಾಧನೆ ಆಗುತ್ತದೆ’, ಇದನ್ನು ಅಂತರ್ಮನಸ್ಸಿನಲ್ಲಿ ಅಂಕಿತಗೊಳಿಸೋಣ.

೯. ‘ವಿಚಾರಿಸಿ ಮಾಡುವುದು’ ಈ ಗುಣವನ್ನು ಅಳವಡಿಸಿಕೊಳ್ಳುವಾಗ ಮಾಡಬೇಕಾದ ಇನ್ನಿತರ ಪ್ರಯತ್ನಗಳು
ಅ. ಕೇವಲ ವಿಚಾರಿಸುವುದಲ್ಲ, ಅಭ್ಯಾಸಪೂರ್ವಕ ವಿಚಾರಿಸುವ ವೃತ್ತಿ ಮೂಡಲು ಸಾಧಕರು ತಮ್ಮಲ್ಲಿನ ಚಿಂತನಶೀಲತೆಯನ್ನು ಹೆಚ್ಚಿಸಬೇಕು. ಕೆಲವೊಮ್ಮೆ ನಮ್ಮಲ್ಲಿ ಯಾವುದಾದರೂ ಸೇವೆ ಅಥವಾ ಯಾವುದಾದರೂ ವಿಷಯ ಬಂದಿದ್ದರೆ ಅದರ ಬಗ್ಗೆ ಯಾವುದೇ ವಿಚಾರ ಅಥವಾ ಅಭ್ಯಾಸ ಮಾಡದೇ ನೇರ ಅದನ್ನು ಜವಾಬ್ದಾರ ಸಾಧಕರಿಗೆ ಕೇಳುತ್ತೇವೆ. ಹೀಗೆ ಮಾಡದೇ ಮೊದಲಿಗೆ ನಮ್ಮ ಮಟ್ಟದಲ್ಲಿ ಅಭ್ಯಾಸ ಮಾಡಬಹುದು. ‘ಆ ಸೇವೆಯ ಅಭ್ಯಾಸಕ್ಕಾಗಿ ಆವಶ್ಯಕ ಇರುವ ಜ್ಞಾನವನ್ನು ಭಗವಂತನೇ ನಮಗೆ ನೀಡುವವನಿದ್ದಾನೆ’, ಈ ಭಾವದಿಂದ ಚಿಂತನೆ ತೆಗೆಯೋಣ. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅದೇ ರೀತಿ ಇನ್ನಷ್ಟು ಅಭ್ಯಾಸಪೂರ್ಣ ಕೇಳಬಹುದು. ‘ನಾವು ಏನೆಲ್ಲಾ ಚಿಂತನೆ ಮಾಡಿದ್ದೇವೆ, ಅದರ ಬಗ್ಗೆ ಮುಂದೆ ವಿಚಾರಿಸುವುದರಿಂದ ಇನ್ನೂ ಮುಂದಿನ ದಿಶೆ ದೊರೆಯುಲಿದೆ ಎಂದು ವಿಚಾರ ಮಾಡೋಣ. ಈ ರೀತಿ ಚಿಂತನೆ ಮಾಡಿ ಕೇಳಿದರೆ ನಾವು ನಿಜವಾದ ಅರ್ಥದಲ್ಲಿ ಸ್ವಾವಲಂಬಿಯಾಗಬಹುದು.’
ಆ. ನೀವು ಮಾಡುತ್ತಿರುವ ಸೇವೆಗಳು ಇತರ ಕೆಲವು ಸೇವೆಗಳೊಂದಿಗೆ ಜೋಡಿಸಲ್ಪಟ್ಟಿರುತ್ತವೆ. ಆ ಕುರಿತಾದ ಕಾರ್ಯವಿಧಾನಗಳು ಆಯಾ ಸಂಬಂಧಿತ ಸಾಧಕರಿಗೆ ಹೆಚ್ಚು ಚೆನ್ನಾಗಿ ತಿಳಿದಿರುವುದರಿಂದ, ಅವರನ್ನು ಕೇಳಿ ಅಧ್ಯಯನ ಮಾಡಿದರೆ, ನಮಗೆ ಸೇವೆಯ ಬಗ್ಗೆ ಇನ್ನಷ್ಟು ಉತ್ತಮ ಮಾಹಿತಿ ಸಿಗುತ್ತದೆ. ಆದ್ದರಿಂದ, ಅಗತ್ಯವಿದ್ದಲ್ಲಿ ಸಹಸಾಧಕರು ಅಥವಾ ಇತರ ಸೇವೆಗಳನ್ನು ಮಾಡುವ ಸಾಧಕರ ಸಹಾಯವನ್ನು ಪಡೆದು, ನಮ್ಮ ಅಧ್ಯಯನವು ಪರಿಪೂರ್ಣವಾಗಲು ನಾವು ಪ್ರಯತ್ನಿಸಬಹುದು; ಆದರೆ ಅಧ್ಯಯನ ಮಾಡಿ ಜವಾಬ್ದಾರ ಸಾಧಕರಲ್ಲಿಯೇ ಕೇಳಬೇಕು.
ಇ. ನಿಮ್ಮ ಕುಟುಂಬದ ಸದಸ್ಯರು ಸಾಧಕರಾಗಿದ್ದರೆ, ಸಾಧನೆಯ ಪ್ರಯತ್ನಗಳ ಬಗ್ಗೆ ನೀವು ಅವರಲ್ಲಿಯೂ ವಿಚಾರಿಸಬಹುದು.
ಈ. ‘ನಾವು ಗುರುತತ್ತ್ವಕ್ಕೆ ಆತ್ಮನಿವೇದನೆ ಮಾಡುತ್ತಿದ್ದೇವೆ’ ಎಂಬ ಭಾವದಿಂದ ವಿಷಯವನ್ನು ಕೇಳಬೇಕು.
ವಿಚಾರಿಸಿ ಕೃತಿ ಮಾಡುವುದರಿಂದ ನಮ್ಮ ಜ್ಞಾನವೃದ್ಧಿಯಾಗಿ, ಗುರುದೇವರು ನಮಗೆ ನೀಡಿದ ಸಮಷ್ಟಿ ಕಾರ್ಯವನ್ನು ಇನ್ನಷ್ಟು ವ್ಯಾಪಕವಾಗಿ, ಅಧ್ಯಯನಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಮಾಡಲು ಸಾಧ್ಯವಾಗುತ್ತದೆ. ವಿಚಾರಿಸಿ ಕೃತಿ ಮಾಡುವುದು ಎಂದರೆ ಸಮಷ್ಟಿಯಲ್ಲಿ ವೇಗವಾಗಿ ಮುಂದುವರಿಯಲು ಒಂದು ಸುವರ್ಣಾವಕಾಶವಾಗಿದೆ. ‘ಈ ಗುಣದ ಮೂಲಕ ಭಗವಂತನು ನಮ್ಮನ್ನು ಸಮಷ್ಟಿಯ ದೃಷ್ಟಿಯಿಂದ ಪರಿಪಕ್ವಗೊಳಿಸುವ ಸುಂದರ ಲೀಲೆ ಇದು’ ಎಂಬುದನ್ನು ಮನಗಂಡು, ಸಾಧನೆ ಮತ್ತು ಸೇವೆಯಲ್ಲಿನ ಪ್ರತಿಯೊಂದು ಕೃತಿಯನ್ನು ಗುರುವಿನ ಸಮಷ್ಟಿ ರೂಪಕ್ಕೆ, ಅಂದರೆ ಜವಾಬ್ದಾರ ಸಾಧಕರು ಅಥವಾ ವರದಿ ಸೇವಕರಿಗೆ ಕೇಳಿ ಮಾಡಬೇಕು.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೪.೮.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !