ಸಂವಿಧಾನದ ಘಾತಕ ಕಲಂ ೩೦ ಅನ್ನು ರದ್ದುಗೊಳಿಸಿ !

ಅಶೋಕ ಸ್ತಂಭ    ಮತ್ತು    ಸಂವಿಧಾನ

ಭಾರತೀಯ ಸಂವಿಧಾನದಲ್ಲಿ ಎಲ್ಲಕ್ಕಿಂತ ದೊಡ್ಡ ಘಾತಕ ಕಲಂ ಅಂದರೆ, ಕಲಂ ೩೦. ಈ ಕಲಂಅನ್ನು ಮುಸಲ್ಮಾನರ ಓಲೈಕೆಗಾಗಿ ಪಂಡಿತ ನೆಹರೂ ಅವರು ಸಂವಿಧಾನದಲ್ಲಿ ಸೇರಿಸಿದರು. ಅದಕ್ಕೂ ಮೊದಲು ಸರದಾರ ಪಟೇಲರು ಈ ಕಲಂಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಧರ್ಮದ ಆಧಾರದಲ್ಲಿ ವಿಭಜನೆ ಆಗಿರುವಾಗ, ಮುಸಲ್ಮಾನರನ್ನು ಅತಿಯಾಗಿ ಓಲೈಸುವುದರ ಕಾರಣವೇನು ? ಹಾಗೂ ಅದರಿಂದ ಬಹುಸಂಖ್ಯಾತ ಹಿಂದೂಗಳಿಗೆ ಹಾನಿಯಾಗಬಹುದು, ಎಂಬುದು ಅವರ ಅಭಿಪ್ರಾಯವಾಗಿತ್ತು. ಸರದಾರ ಪಟೇಲರ ಅವರ ವಿರೋಧದಿಂದಾಗಿ ಈ ಕಲಂ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತ್ತು; ಆದರೆ ಅವರ ಮರಣಾ ನಂತರ ನೆಹರೂ ಅವರು ಅದನ್ನು ಸಂವಿಧಾನದಲ್ಲಿ ಸೇರಿಸಿದರು.

೧. ಕಲಂ ೩೦ ರಲ್ಲಿ ಏನಿದೆ ?

ಈ ಕಲಂನ ಮೂಲಕ ಅಲ್ಪಸಂಖ್ಯಾತರಿಗೆ ಅವರದ್ದೇ ಆದ ಧಾರ್ಮಿಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ‘ಮೈನಾರಿಟಿ ಕಮಿಷನ್’ (ಅಲ್ಪಸಂಖ್ಯಾತ ಆಯೋಗ)ಅನ್ನು ಸ್ಥಾಪಿಸಲಾಗಿದೆ. ಈ ಶಿಕ್ಷಣ ಸಂಸ್ಥೆಗಳ ಎಲ್ಲಾ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ ಎಂಬ ನಿಯಮವನ್ನೂ ಮಾಡಲಾಗಿದೆ. ಯಾವುದೇ ರಾಜ್ಯ ಸರಕಾರವು ಈ ಸಂಸ್ಥೆಗಳು ಕೇಳಿದ ಭೂಮಿ ಅಥವಾ ಆರ್ಥಿಕ ಸಹಾಯವನ್ನು ನಿರಾಕರಿಸುವಂತಿಲ್ಲ ಎಂದು ಕೂಡ ಕಾನೂನು ಮಾಡಲಾಗಿದೆ. ಇಂತಹ ಸಂಸ್ಥೆಗಳಲ್ಲಿ ಕುರಾನ್‌ ಅಥವಾ ಬೈಬಲ್‌ ಬೋಧನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಸ್ಥೆಗಳು ಗಳಿಸಿದ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮುಲ್ಲಾ-ಮೌಲ್ವಿಗಳ (ಇಸ್ಲಾಂ ಧರ್ಮದ ಧಾರ್ಮಿಕ ನೇತಾರರು) ಮತ್ತು ಪಾದ್ರಿ-ನನ್‌ಗಳ ವೇತನವನ್ನು ಸರಕಾರದ ಖಜಾನೆಯಿಂದ ನೀಡಲಾಗುತ್ತದೆ.

೨. ಬಹುಸಂಖ್ಯಾತ ಹಿಂದೂಗಳು ಮಾತ್ರ ನಿರ್ಲಕ್ಷಿತರು !

ಹಿಂದೂಗಳಿಗಾಗಿ ಮಾತ್ರ ಇಂತಹ ಯಾವುದೇ ಪ್ರತ್ಯೇಕ ಯೋಜನೆಯನ್ನು ಮಾಡಲಾಗಿಲ್ಲ. ಇಂದು ನಮ್ಮ ದೇಶದಲ್ಲಿ ೧೭ ಲಕ್ಷ ಮಸೀದಿಗಳು ಅಥವಾ ಮದರಸಾಗಳು ಮತ್ತು ೧೫ ಸಾವಿರಕ್ಕಿಂತ ಹೆಚ್ಚು ಚರ್ಚ್‌ಗಳಿವೆ. ಅವರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ; ಆದರೆ ದೇಶದಲ್ಲಿರುವ ೨೨ ಲಕ್ಷ ಹಿಂದೂ ದೇವಸ್ಥಾನಗಳಿಗೆ ಬಂದ ಸಂಪೂರ್ಣ ಹಣವನ್ನು ಸರಕಾರವು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಅರ್ಚಕರು ಮತ್ತು ಸಿಬ್ಬಂದಿಗೆ ಸರಕಾರವು ಯಾವುದೇ ವೇತನ ನೀಡುವುದಿಲ್ಲ ಅಥವಾ ‘ಗ್ರ್ಯಾಂಟ್’ (ಅನುದಾನ) ನೀಡುವುದಿಲ್ಲ. ರಾಮಾಯಣ, ಮಹಾಭಾರತ, ಭಗವದ್ಗೀತೆ ಅಥವಾ ಸನಾತನ ಹಿಂದೂ ಸಂಸ್ಕೃತಿಯ ಶಿಕ್ಷಣ ನೀಡುವುದು ಈ ದೇವಸ್ಥಾನಗಳಿಗೆ ಕಡ್ಡಾಯವಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವತಃ ‘ವಿದ್ಯಾಭಾರತಿ’, ‘ಸಂಸ್ಕಾರಭಾರತಿ’ಯಂತಹ ಸನಾತನ ಸಂಸ್ಕೃತಿಯ ಶಿಕ್ಷಣ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿದೆ; ಆದರೆ ಸರಕಾರವು ಅವುಗಳಿಗೆ ಒಂದು ರೂಪಾಯಿಯನ್ನೂ ಸಹಾಯ ಮಾಡುವುದಿಲ್ಲ. ಹಿಂದೂ ಧರ್ಮೀಯರು ತಮ್ಮ ಧರ್ಮವನ್ನು ಮರೆತುಬಿಡಬೇಕು ಎನ್ನುವ ರೀತಿಯ ನಿಯಮವನ್ನು ಭಾರತೀಯ ಸಂವಿಧಾನವು ಮಾಡಿಟ್ಟಿದೆ.

೩. ಕಲಂ ೩೦ ರ ಅಡಿಯಲ್ಲಿ ಸ್ಥಾಪಿಸಲಾದ ಕೆಲವು ಸಂಸ್ಥೆಗಳು

ಅ. ಅಲಿಗಡ ಮುಸ್ಲಿಂ ಯೂನಿವರ್ಸಿಟಿ, ಉತ್ತರಪ್ರದೇಶ

ಆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವ ದೆಹಲಿ

ಇ. ಆಲಿಯಾ ಯೂನಿವರ್ಸಿಟಿ, ಕೋಲಕಾತಾ

ಈ. ಬಿ.ಎಸ್. ಅಬ್ದುಲ್‌ ರಹಮಾನ್‌ ಕ್ರಿಸೆಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಎಂಡ್‌ ಟೆಕ್ನಾಲಜಿ, ವಂಡಲೂರ್, ತಮಿಳುನಾಡು.

ಉ. ಮೌಲಾನಾ ಆಝಾದ್‌ ನ್ಯಾಷನಲ್‌ ಉರ್ದು ಯೂನಿವರ್ಸಿಟಿ, ಭಾಗ್ಯನಗರ

ಊ. ಓಸ್ಮಾನಿಯಾ ಯೂನಿವರ್ಸಿಟಿ, ಭಾಗ್ಯನಗರ

ಎ. ದಾರುಲ್‌ ಉಲೂಮ್‌ ದೇವಬಂದ್, ಉತ್ತರಪ್ರದೇಶ

ಐ. ಜಮಿಯತ್‌ ಉಲ್‌ ಅಶ್ರಫಿಯಾ, ಉತ್ತರಪ್ರದೇಶ

ಓ. ಜಾಮಿಯಾ ನಿಜಾಮಿಯಾ, ಭಾಗ್ಯನಗರ

ಔ. ದಾರುಲ್‌ ಉಲೂಮ್‌ ನದವಾತುಲ ಉಲೇಮಾ, ಲಕ್ಷ್ಮಣಪುರಿ, ಉತ್ತರಪ್ರದೇಶ

ಕ. ಜಾಮಿಯಾ ಮರ್ಕಜ್, ಕೇರಳ

ಖ. ಅಲ್‌ ಅಮೀನ್‌ ಎಜ್ಯುಕೇಶನ್‌ ಸೊಸೈಟಿ, ಬೆಂಗಳೂರು

ಗ. ಜಾಮಿಯಾತುಲ್‌ ಕಾಸಿಮ್‌ ದಾರುಲ್‌ ಉಲುಮ್‌ ಅಲ್‌ ಇಸ್ಲಾಮಿಯಾ, ಬಿಹಾರ

ಘ. ಅಲ್‌ ಜಾಮೆ-ಅ-ತುಲ್‌-ಇಸ್ಲಾಮಿಯಾ, ಉತ್ತರಪ್ರದೇಶ ಇದು ಕೇವಲ ಒಂದು ಮಾದರಿ ಪಟ್ಟಿಯಾಗಿದೆ. ಈ ಸಂಸ್ಥೆಗಳಲ್ಲಿ ನಿಖರವಾಗಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತದೆ ಎಂಬುದು ಒಂದು ದೊಡ್ಡ ಸಂಶೋಧನೆಯ ವಿಷಯವಾಗಿದೆ.

೪. … ಇಲ್ಲದಿದ್ದರೆ ಬಲವಂತದ ಮತಾಂತರ ಮತ್ತು ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುವವು !

ತಾತ್ಪರ್ಯವೆಂದರೆ, ಕಳೆದ ೭೮ ವರ್ಷಗಳಿಂದ ಹಿಂದೂಗಳಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಮತ್ತು ಅಂದಾಜು ೨೫ ಕೋಟಿ ಜನಸಂಖ್ಯೆ ಇರುವ ಇಸ್ಲಾಂ ಧರ್ಮವು ಇನ್ನೂ ತನ್ನನ್ನು ತಾನು ‘ಅಲ್ಪಸಂಖ್ಯಾತ’ ಎನ್ನುತ್ತಾ ಎಲ್ಲಾ ಲಾಭಗಳನ್ನು ಕಸಿದುಕೊಳ್ಳುತ್ತಿದ್ದರೂ ಕೇಂದ್ರ ಸರಕಾರ ಮತ್ತು ಆಡಳಿತ ಏಕೆ ಕಣ್ಮುಚ್ಚಿ ಕುಳಿತಿದೆ ? ಎಂಬ ಪ್ರಶ್ನೆ ನಾಗರಿಕರಿಗೆ ಕಾಡುತ್ತದೆ. ಈ ಅನ್ಯಾಯ ಮತ್ತು ಪಕ್ಷಪಾತವನ್ನು ನಿಲ್ಲಿಸಲು ಕಲಂ ೩೦ ಮತ್ತು ಸಂಬಂಧಿತ ನಿಬಂಧನೆಗಳ ಕುರಿತು ಸಂಸತ್ತಿನಲ್ಲಿ ಕಾನೂನು ಅಂಗೀಕರಿಸಿ ತಕ್ಷಣವೇ ಅವುಗಳನ್ನು ರದ್ದುಗೊಳಿಸುವುದೊಂದೇ ದಾರಿ. ಇಲ್ಲದಿದ್ದರೆ ಈ ಅನ್ಯಾಯ ಹೀಗೆಯೇ ಮುಂದುವರಿಯುತ್ತದೆ ಮತ್ತು ಬಲವಂತದ ಮತಾಂತರ ಹಾಗೂ ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ !

– ಹರ್ಷದ ಸರಪೋತದಾರ, ಸನದಿ ಲೆಕ್ಕಪಾಲಕರು, ಪುಣೆ. (೧೧.೧೧.೨೦೨೫)