ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಮುಂದೆ ಅಸಹಾಯಕ ಕಾಂಗ್ರೆಸ್‌ !

ಜ್ಞಾನೇಶ ಕುಮಾರ

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ ಕುಮಾರ ಮೇಲೆ ಕಳೆದ ಹಲವು ತಿಂಗಳುಗಳಿಂದ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ನಾಲ್ಕೂ ಕಡೆಯಿಂದ ಆಕ್ರಮಣ ಮಾಡುತ್ತಿವೆ. ಒಂದು ಸಾಂವಿಧಾನಿಕ ಸಂಸ್ಥೆಯ ಮೇಲೆ ಈಗಿನ ವಿಪಕ್ಷಗಳು ಮುಗಿಬಿದ್ದಿವೆ ಎಂದರೆ ಆಗ ಆ ಸಂಸ್ಥೆಯು ತನ್ನ ‘ಮೂಲ ಕೆಲಸ’ವನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದೆ ಎಂದು ಅರ್ಥಮಾಡಿಕೊಳ್ಳಬೇಕು.

೧. ಚುನಾವಣಾ ಆಯೋಗದಲ್ಲಿನ ಕ್ರಾಂತಿಕಾರಿ ಬದಲಾವಣೆ 

ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ದೇಶದ ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆಯಾಗಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೀಡಿದ ಮತದಾನದ ಹಕ್ಕನ್ನು ವಾಸ್ತವ ರೂಪದಲ್ಲಿ ಅವನಿಗೆ ಉಪಯೋಗಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಸ್ವತಂತ್ರವಾಗಿ ನಿರ್ವಹಿಸುವ ಒಂದು ಪಾರದರ್ಶಕ ಸಂಸ್ಥೆಯಾಗಿದೆ. ಚುನಾವಣಾ ಆಯೋಗವು ಕಾಲಕಾಲಕ್ಕೆ ತನ್ನ ಕಾರ್ಯಕ್ಷಮತೆಯ ಪ್ರತಿಯೊಂದು ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರೈಸಿದೆ. ವರ್ಷ ೧೯೯೧ ರ ನಂತರ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ನಿಜವಾದ ಮಹತ್ವ ಬಂತು. ಆಗ ಟಿ.ಎನ್. ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾಗಿ, ಮತದಾರರ ಗುರುತಿನ ಚೀಟಿಯನ್ನು ಜಾರಿಗೊಳಿಸಿದರು. ಭಾರತದ ಪ್ರತಿಯೊಬ್ಬ ಮತದಾರನಿಗೆ ಈ ಗುರುತಿನ ಚೀಟಿ ಬಂದ ಮೇಲೆ, ಅವನಿಗೆ ಛಾಯಾಚಿತ್ರದೊಂದಿಗೆ ಸ್ಪಷ್ಟ ಗುರುತು ದೊರೆಯಿತು. ಇದರ ನಂತರ ಆಯೋಗವು ಕಾಗದದ ಮತಪತ್ರಗಳ ಬದಲಿಗೆ ‘ಎಲೆಕ್ಟ್ರಾನಿಕ್‌ ವೋಟಿಂಗ್‌ (ಮತದಾನ) ಯಂತ್ರಗಳನ್ನು (ಇವಿಎಮ್‌)’ ತಂದಿತು ಮತ್ತು ನಿಜವಾದ ಅರ್ಥದಲ್ಲಿ ಈ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ಆಯಿತು. ಭಾರತದ ಮತದಾರನಾಗಿರಲು ಇರುವ ಪ್ರಮುಖ ಷರತ್ತು ಏನೆಂದರೆ, ಆ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು. ಈ ಪೌರತ್ವವು ಜನನದಿಂದ (ಬೈ ಬರ್ತ್‌) ಅಥವಾ ವಂಶದಿಂದ (ಬೈ ಡಿಸೆಂಟ್) ದೊರೆಯುತ್ತದೆ, ಇದರಲ್ಲಿ ತಂದೆ-ತಾಯಿ ಇಬ್ಬರೂ ಅಥವಾ ಅವರಲ್ಲಿ ಒಬ್ಬರು ಭಾರತೀಯರಾಗಿರುವುದು ಅಗತ್ಯ. ಭಾರತದಲ್ಲಿಯೇ ಜನಿಸಿರುವುದು ಕಡ್ಡಾಯವಲ್ಲ.

೨. ಭಾರತದ ಗಡಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮುಸಲ್ಮಾನರ ಒಳನುಸುಳುವಿಕೆ

ಭಾರತದ ಮೂರೂ ಗಡಿಗಳಲ್ಲಿ ಕಳೆದ ೨ ರಿಂದ ೩ ದಶಕಗಳಿಂದ ಇತರ ದೇಶಗಳ ಜನರ, (ಮುಸಲ್ಮಾನ ರೋಹಿಂಗ್ಯಾ, ಬಾಂಗ್ಲಾದೇಶಿ, ಪಾಕಿಸ್ತಾನಿ) ಒಳನುಸುಳುವಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಭಾಜಪಯೇತರ ಸರಕಾರಗಳಿರುವ ಗಡಿ ರಾಜ್ಯಗಳು ಈ ಒಳನುಸುಳುವಿಕೆಗೆ ನೇರ ಸಹಾಯ ಮತ್ತು ಪ್ರೋತ್ಸಾಹ ನೀಡುತ್ತಿದ್ದವು. ಒಳನುಸುಳಿದವರಿಗೆ ಆಶ್ರಯ, ಸುಳ್ಳು ಪ್ರಮಾಣಪತ್ರಗಳನ್ನು (ಜನನ ಪ್ರಮಾಣಪತ್ರಗಳು, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ) ನೀಡುವುದು ಮತ್ತು ನಂತರ ಅವರ ಆಧಾರ ಕಾರ್ಡ್ ಮಾಡಿಸಿಕೊಡುವುದು ಮುಂತಾದ ಎಲ್ಲ ದುಷ್ಕೃತ್ಯಗಳನ್ನು ಮಾಡಲಾಯಿತು. ಇದರ ಉದ್ದೇಶವೆಂದರೆ, ಅವರಲ್ಲಿ ಅಡಗಿರುವ ಮತದಾರರನ್ನು ತಮ್ಮ ಮತಕ್ಷೇತ್ರಕ್ಕೆ ಸೇರಿಸುವುದು ಮತ್ತು ಆ ಪ್ರದೇಶದ ‘ಡೆಮೊಗ್ರಾಫಿ’ (ಜನಸಂಖ್ಯಾ ಸ್ವರೂಪವನ್ನು) ಬದಲಾಯಿಸುವುದು.

೩. ‘ವಿಶೇಷ ಆಳವಾದ ಪರಿಶೀಲನೆ’ ಪ್ರಕ್ರಿಯೆ

ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನವೀಕರಿಸಲು ‘ವಿಶೇಷ ಆಳವಾದ ಪರಿಶೀಲನೆ’ (ಎಸ್‌.ಐ.ಆರ್. -ಸ್ಪೆಶಲ್‌ ಇಂಟೆನ್ಸಿವ್‌ ರಿವಿಷನ್) ಪ್ರಯೋಗವನ್ನು ಪ್ರಾರಂಭಿಸಿದಾಗ ವಿರೋಧ ಪಕ್ಷಗಳಿಗೆ ನಡುಕ ಶುರುವಾಯಿತು. ಮತದಾರರ ಪಟ್ಟಿಯಲ್ಲಿ ಎರಡು ಮತದಾರ ಚೀಟಿಯನ್ನು ಹೊಂದಿರುವವರನ್ನು ಗುರುತಿಸಿ ಒಂದೇ ನೊಂದಣಿಯನ್ನು ಅಧಿಕೃತಗೊಳಿಸುವುದು, ಆಧಾರಕಾರ್ಡ್ ಬಳಸಿ ಮತದಾರರ ಗುರುತಿನ ದೃಢೀಕರಣ, ಇವೆಲ್ಲವÀನ್ನು ಆಯೋಗವು ಆರಂಭಿಸಿತು. ‘ಆಧಾರಕಾರ್ಡ್ನ್ನು ಪೌರತ್ವದ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಘೋಷಿಸಿದಾಗ, ಈ ‘ಎಸ್⃈ಆರ್’ ಪ್ರಕ್ರಿಯೆಯಲ್ಲಿ ‘ಪ್ರಜೆಯು ತನ್ನ ಪೌರತ್ವವನ್ನು ಸಾಬೀತುಪಡಿಸಲು ೧೧ ವಿವಿಧ ಸರಕಾರಿ ದಾಖಲೆಗಳನ್ನು (ಯಾವುದಾದರೂ ಒಂದನ್ನು) ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು’ ಎಂಬ ನಿಯಮ ಮಾಡಲಾಯಿತು. ಇದರಿಂದ ಮತದಾರನು ನಿಜವಾದ ಭಾರತೀಯ ಪ್ರಜೆ ಎಂದು ಸಾಬೀತಾಗುತ್ತದೆ ಮತ್ತು ಅವನ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುತ್ತದೆ.

೪. ಗಡಿ ಭದ್ರತಾ ಪಡೆ ಕಾನೂನಿನಲ್ಲಿ ಮಾಡಿದ ಬದಲಾವಣೆ

ಕಳೆದ ಲೋಕಸಭೆಯ ಅವಧಿಯಲ್ಲಿ, ಅಮಿತ ಶಾ ಗೃಹ ಸಚಿವರಾಗಿದ್ದಾಗ, ಅವರು ಗಡಿ ಭದ್ರತಾ ಪಡೆಯ ಕುರಿತಾದ ಒಂದು ಕಾನೂನನ್ನು ಬದಲಾಯಿಸಿ ಗಡಿ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ೧೫ ಕಿಲೋಮೀಟರ್‌ನಿಂದ ಹೆಚ್ಚಿಸಿ ಬರೋಬ್ಬರಿ ೫೦ ಕಿಲೋಮೀಟರ್‌ಗೆ ವಿಸ್ತರಿಸಿದರು. ಗಡಿ ರಾಜ್ಯಗಳಲ್ಲಿ ಒಳನುಸುಳುವಿಕೆಗೆ ಸಹಾಯ ಮಾಡುವ ಸರಕಾರಿ ವ್ಯವಸ್ಥೆಯು ತಮ್ಮ ಕೈಯಲ್ಲಿ ಇಲ್ಲದ ಕಾರಣ, ಗಡಿ ಭದ್ರತಾ ಪಡೆಯ ಸಹಾಯದಿಂದ ಗಡಿ ರಾಜ್ಯಗಳಲ್ಲಿನ ಒಳನುಸುಳುವಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಡೆಯಬಹುದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಗಡಿ ಭದ್ರತಾ ಪಡೆಯು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಒಳನುಸುಳಿದವರನ್ನು ಗುರುತಿಸಬಹುದು ಮತ್ತು ಅಂತಹ ಪ್ರಜೆಗಳನ್ನು ಗಡಿಪಾರು ಮಾಡಬಹುದು. ಈ ಬದಲಾವಣೆಯಿಂದಾಗಿ ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಮಮತಾ ಬ್ಯಾನರ್ಜಿಯವರು ಕಳೆದ ೧೪ ವರ್ಷಗಳಲ್ಲಿ ಲಕ್ಷಾಂತರ ಒಳನುಸುಳುಕೋರರಿಗೆ ರಕ್ಷಣೆ ನೀಡಿ, ಅವರನ್ನು ಮತದಾರರನ್ನಾಗಿ ಮಾಡಿಕೊಂಡಿದ್ದಾರೆ.

ಬಂಗಾಳದ ಗಡಿಯ ಬಳಿ ಕುಳಿತುಕೊಂಡಿರುವ ಬಾಂಗ್ಲಾದೇಶಿ ಒಳನುಸುಳುಕೋರರು

ಪೌರತ್ವ ಕಾನೂನಿನಲ್ಲಿ ಬದಲಾವಣೆ ಮಾಡಿದ ಕಾರಣ ಒಳನುಸುಳಿದವರ ಪಲಾಯನ

ವರ್ಷ ೨೦೨೪ ರಲ್ಲಿ ಭಾರತ ಸರಕಾರವು ‘ಪೌರತ್ವ ಕಾಯಿದೆ ೧೯೫೫’ ಮತ್ತು ‘ವಿದೇಶಿ ಕಾಯಿದೆ ೧೯೪೬’ ರಲ್ಲಿ ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡಿ, ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ ಸುಳ್ಳು ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ತೋರಿಸಿ ಲಾಭ ಪಡೆದ ಪ್ರಜೆಗಳ (ಭಾರತೀಯ ಮತ್ತು ಭಾರತೀಯರಲ್ಲದವರ) ಮೇಲೆ ಕಾನೂನು ಕ್ರಮ ಜರುಗಿಸುವ ಕಾಯಿದೆಯನ್ನು ಜಾರಿಗೊಳಿಸಿತು. ಇದರ ಪ್ರಕಾರ, ಅಂತಹ ಅಪರಾಧಗಳಲ್ಲಿ ಭಾಗಿಯಾದ ಜನರ ಮೇಲೆ ಕಾರಾಗೃಹವಾಸ ಮತ್ತು ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಎಲ್ಲದರ ಅತ್ಯಂತ ದೊಡ್ಡ ಹೊಡೆತವೆಂದರೆ, ಒಳನುಸುಳುಕೋರರ ವಿಷಯದಲ್ಲಿ ಈ ರೀತಿಯ ದಾಖಲೆಗಳು ಇರುವುದು ಮತ್ತು ಅವು ಚುನಾವಣಾ ಆಯೋಗಕ್ಕೆ ಲಭ್ಯವಾಗುವುದು – ಇದು ಅವರಿಗೆ ಎರಡು ರೀತಿಯ ಸಂಕಟವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಆಸ್ಸಾಂ, ಬಂಗಾಲ ರಾಜ್ಯಗಳಿಂದ ಅನೇಕ ಒಳನುಸುಳಿದವರು ನಿಜವಾಗಿಯೂ ಪಲಾಯನ ಮಾಡುತ್ತಿದ್ದಾರೆ ಎಂಬ ವರದಿಗಳು ಮತ್ತು ಸುದ್ದಿಗಳು ಬರುತ್ತಿವೆ.

೫. ‘ಎಸ್‌.ಐ.ಆರ್.’ ಪ್ರಕ್ರಿಯೆಯಿಂದಾಗುವ ಪರಿಣಾಮ

ಚುನಾವಣಾ ಆಯೋಗವು ‘ಎಸ್‌.ಐ.ಆರ್.’ ಪ್ರಕ್ರಿಯೆಯಿಂದ ಮೂಲಕ್ಕೇ ಪೆಟ್ಟು ನೀಡುತ್ತಿರುವುದರಿಂದ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಹತಾಶಗೊಂಡಿವೆ. ದೇಶದ ಮೂಲೆಮೂಲೆಗಳಲ್ಲಿ ನೆಲೆಸಿರುವ ಒಳನುಸುಳಿದ ಮತದಾರರು ಮತದಾರರ ಪಟ್ಟಿಯಿಂದ ರದ್ದುಗೊಳ್ಳುವುದು ವಿರೋಧ ಪಕ್ಷಗಳಿಗೆ ಇಷ್ಟವಿಲ್ಲ. ಈ ಒಳನುಸುಳಿದವರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ ಮತ್ತು ವಿರೋಧ ಪಕ್ಷಗಳ ಎಲ್ಲ ರಾಜಕಾರಣವೂ ಇದೇ ಮತ ಬ್ಯಾಂಕ್‌ ಮೇಲೆ ಅವಲಂಬಿತವಾಗಿದೆ. ಈ ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅದನ್ನು ನಿಲ್ಲಿಸಲು ಅಥವಾ ರದ್ದುಗೊಳಿಸಲು ಸಂಪೂರ್ಣ ‘ಇಕೋಸಿಸ್ಟಮ್ನ್ನು’ (ವ್ಯವಸ್ಥೆಯನ್ನು) ಬಳಸಲಾಯಿತು; ಆದರೆ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಚುನಾವಣಾ ಆಯೋಗದ ಅಧಿಕಾರ ಮತ್ತು ಪ್ರಕ್ರಿಯೆಗೆ ಯಾವುದೇ ಧಕ್ಕೆ ತರದೇ, ಈ ಪ್ರಕ್ರಿಯೆಯು ಸಂಪೂರ್ಣವಾಗಿ ಮಾನ್ಯವಾಗಿದೆ ಎಂದು ತೀರ್ಪು ನೀಡಿತು. ಇದರಿಂದ ವಿಪಕ್ಷಗಳಿಗೆ ದೊಡ್ಡ ಸಮಸ್ಯೆಯಾಯಿತು. ಆ ಬಳಿಕ, ‘ಮತಗಳ್ಳತನ’ ಎಂಬ ಬಾಲಿಶ ಕಲ್ಪನೆಯು ಹುಟ್ಟಿತು, ಇದರ ಗುಳ್ಳೆಯು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಒಡೆಯಿತು. ಈ ವಿಷಯದಲ್ಲಿ ಕಾಂಗ್ರೆಸ್ಸಿನ ಹಟ ಇನ್ನೂ ತೀರಿಲ್ಲ ಎಂಬುದು ಬೇರೆ ವಿಷಯ.ಜ್ಞಾನೇಶ ಕುಮಾರ ಅವರು ‘ಎಸ್‌.ಐ.ಆರ್.’ ಪ್ರಕ್ರಿಯೆಯನ್ನು ಆರಂಭಿಸಿದ ನಂತರ, ಬಿಹಾರವೊಂದರಲ್ಲೇ ೬೫ ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಲಾಯಿತು. ಇವರಲ್ಲಿ ಒಬ್ಬರೇ ಒಬ್ಬ ಮತದಾರನೂ ದೂರುದಾರನಾಗಿ ಮುಂದೆ ಬರಲಿಲ್ಲ. ಇದರಿಂದ ಮತದಾರನು ಮಾನ್ಯತೆ ಪಡೆದವನಾಗಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಈಗ ಇದೇ ಪ್ರಕ್ರಿಯೆಯು ದೇಶದ ಇತರ ರಾಜ್ಯಗಳಲ್ಲಿ (ಬಂಗಾಲ, ತಮಿಳುನಾಡು) ನಡೆಯಲಿದ್ದು, ಇದು ವಿರೋಧ ಪಕ್ಷಗಳ ಮತಗಳು ಮತ್ತು ಚುನಾವಣಾ ಫಲಿತಾಂಶಗಳ ಮೇಲೆ ನೇರ ಪರಿಣಾಮ ಬೀರಬಹುದು.

೬. ಮುಂದಿನ ಜನಗಣತಿ ಮತ್ತು ಮತಕ್ಷೇತ್ರಗಳ ಪುನಾರಚನೆ

ಜ್ಞಾನೇಶ ಕುಮಾರ ಅವರ ಅಧಿಕಾರಾವಧಿಯು ಜನವರಿ ೨೦೨೯ ರ ವರೆಗೆ, ಅಂದರೆ ಇನ್ನು ೩ ವರ್ಷಕ್ಕೂ ಹೆಚ್ಚು ಕಾಲ ಬಾಕಿ ಇದೆ. ಈ ಅವಧಿಯಲ್ಲಿ ದೇಶದ ಜನಗಣತಿಯು ವರ್ಷ ೨೦೨೬ ರಲ್ಲಿ ಪೂರ್ಣಗೊಂಡು, ನಂತರ ೨೦೨೭ ರಲ್ಲಿ ಮತಕ್ಷೇತ್ರಗಳ ಪುನರ್‌ ರಚನೆ ನಡೆಯಲಿದೆ. ಇದರಲ್ಲಿ ಅನೇಕ ಮತಕ್ಷೇತ್ರಗಳು ಇಲ್ಲವಾಗಲಿವೆ ಮತ್ತು ಅವುಗಳ ವಿಭಜನೆಯಾಗಲಿದೆ, ಇದಕ್ಕೆ ಜನಗಣತಿಯು ಆಧಾರವಾಗಿರುತ್ತದೆ. ಈ ಜನಗಣತಿಯು ಜಾತಿ ಆಧಾರಿತವಾಗಿರಲಿದೆ. ಆದ್ದರಿಂದ ಸರಕಾರಕ್ಕೆ ಲಭ್ಯವಾಗುವ ಮತ್ತು ಚುನಾವಣಾ ಆಯೋಗಕ್ಕೆ ದೊರೆಯುವ ಮಾಹಿತಿಯು ಎಷ್ಟು ಸಂವೇದನಾಶೀಲವಾಗಿರುತ್ತದೆ ಎಂಬುದನ್ನು ಕೇವಲ ಊಹಿಸಬಹುದು. ಇದರ ಆಧಾರದ ಮೇಲೆ ಮತಕ್ಷೇತ್ರಗಳ ಪುನರ್‌ರಚನೆಯಾಗುವಾಗ ಅನೇಕ ಪ್ರಬಲ ವ್ಯಕ್ತಿಗಳ ಸಂಸ್ಥಾನಗಳು ನಾಶವಾಗಲಿವೆ. ಮತಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಕಳೆದ ಹಲವಾರು ವರ್ಷಗಳಿಂದ ಲೋಕಸಭೆಯಲ್ಲಿ ೮೦೦ ಸಂಸದರು ಮತ್ತು ರಾಜ್ಯಸಭೆಯಲ್ಲಿ ೪೦೦ ಸಂಸದರು ಇರುತ್ತಾರೆ ಎಂದು ಹೇಳಲಾಗುತ್ತಿದೆ. (ಹೊಸ ಸಂಸತ್‌ ಭವನದಲ್ಲಿ ೧ ಸಾವಿರದ ೨೫೦ ಸಂಸದರು ಕೂರಲು ಮೋದಿ ಅವರು ಮೊದಲೇ ವ್ಯವಸ್ಥೆ ಮಾಡಿದ್ದಾರೆ. ‘ಸೆಂಟ್ರಲ್‌ ವಿಸ್ಟಾ’ ಯೋಜನೆಯಲ್ಲಿ ಇದು ಅನೇಕರಿಗೆ ತಿಳಿದಿಲ್ಲ.) ಈ ಹೆಚ್ಚುವರಿ ಮತಕ್ಷೇತ್ರಗಳನ್ನು ನಿರ್ಮಿಸುವ ಕೆಲಸವನ್ನು ಚುನಾವಣಾ ಆಯೋಗವು ಮಾಡಲಿದೆ. ಬಹುಶಃ ವರ್ಷ ೨೦೩೪ ರ ಲೋಕಸಭಾ ಚುನಾವಣೆಯು ಹೊಸ ಮತಕ್ಷೇತ್ರಗಳ ಪ್ರಕಾರ ನಡೆಯಬಹುದು.

೭. ವಿರೋಧ ಪಕ್ಷಗಳ ಯೋಜನೆಗಳನ್ನು ಹಾಳುಗೆಡವಿದ ಬಿಹಾರದ ಚುನಾವಣಾ ಫಲಿತಾಂಶ !

ಈ ಹಿನ್ನೆಲೆಯಲ್ಲಿ ಜ್ಞಾನೇಶ ಕುಮಾರ ಅವರು ಮುಖ್ಯ ಚುನಾವಣಾ ಆಯುಕ್ತರಾಗಿರುವುದು ಕಾಂಗ್ರೆಸ್ಸಿಗೆ ಅತ್ಯಂತ ಅನಾನುಕೂಲವಾಗಿದೆ. ‘ಬಿಹಾರ ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬರುತ್ತೇವೆ ಮತ್ತು ನಿತೀಶ ಕುಮಾರ ಸೋಲುತ್ತಾರೆ’ ಎಂಬುದು ವಿರೋಧ ಪಕ್ಷಗಳ ಅಂದಾಜು ಆಗಿತ್ತು. ಇದಕ್ಕಾಗಿ ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್‌ ಮತ್ತು ಕಾಂಗ್ರೆಸ್ಸಿನ ರಾಹುಲ ಗಾಂಧಿಗೆ ಸಂಪೂರ್ಣ ವ್ಯವಸ್ಥೆಯು ಬೆಂಬಲ ನೀಡಿತು. ಅವರು ಗೆದ್ದಿದ್ದರೆ, ನಿತೀಶ ಕುಮಾರ ಅವರು ಕೇಂದ್ರ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡು ಕೇಂದ್ರ ಸರಕಾರವನ್ನು ದುರ್ಬಲಗೊಳಿಸುವುದು ಅಥವಾ ಕೆಡವಿ ಹಾಕುವುದು, ಈ ಎರಡೂ ಆಯ್ಕೆಗಳನ್ನು ಕಾಂಗ್ರೆಸ್‌ ಹುಡುಕುತ್ತಿತ್ತು. ಹಾಗೇನಾದರೂ ಆಗಿದ್ದರೆ, ಜ್ಞಾನೇಶ ಕುಮಾರ ಅವರ ಮೇಲೆ ಮಹಾಭಿಯೋಗ ನಡೆಸಿ ಅವರನ್ನು ಪದಚ್ಯುತಗೊಳಿಸಿ, ತಮ್ಮ ಮಾತಿನಂತೆ ಕೇಳುವ ಒಬ್ಬ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕೆಂದು ಅವರಿಗೆ ಇತ್ತು. ಅವರು ನಡೆಯುತ್ತಿರುವ ಎಲ್ಲ ‘ಎಸ್⃈ಆರ್’ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ ವಿರೋಧ ಪಕ್ಷಗಳಿಗೆ ಸಹಾಯ ಮಾಡುತ್ತಿದ್ದರು. ಚುನಾವಣಾ ಫಲಿತಾಂಶದಿಂದ ಎಲ್ಲ ವಿರೋಧ ಪಕ್ಷಗಳು ಬಾಯಿ ಮುಚ್ಚಿಕೊಂಡವು ಮತ್ತು ಈ ಯೋಜನೆಗಳೂ ಹಾಳಾದವು.

೮. ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳ ದಯನೀಯ ಸ್ಥಿತಿ

ಬಿಹಾರ ಚುನಾವಣೆಯ ವಿಜಯದ ನಂತರ ಮೋದಿ ಸರಕಾರವು ಇನ್ನೂ ಹೆಚ್ಚು ಸಮರ್ಥವಾಗಿ ಜನಪರ ಆಡಳಿತ ನಡೆಸಲಿದೆ ಮತ್ತು ವರ್ಷ ೨೦೨೯ ರ ಲೋಕಸಭೆಗೆ ಇನ್ನಷ್ಟು ಜೋರಾಗಿ ಅಡಿಪಾಯ ಹಾಕಲಿದೆ ಎಂಬ ಭಯದಿಂದ ಕಾಂಗ್ರೆಸ್‌ ಇನ್ನೂ ಅಸಹಾಯಕವಾಗಿದೆ. ಸುಳ್ಳು ಧೈರ್ಯ ತಂದುಕೊಂಡು ಎಷ್ಟು ಕಥೆಗಳನ್ನು ಹೇಳಿದರೂ, ವಾಸ್ತವ ಪರಿಸ್ಥಿತಿ ಬದಲಾಗದ ಕಾರಣ ಕಾಂಗ್ರೆಸ್‌ನ ಸ್ಥಿತಿ ಇನ್ನೂ ದಯನೀಯವಾಗುತ್ತಿದೆ. ಜ್ಞಾನೇಶಕುಮಾರ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದರಿಂದ ವಿರೋಧ ಪಕ್ಷಗಳ ಹತಾಶೆ ಇನ್ನೂ ಹೆಚ್ಚಿದೆ ಮತ್ತು ಇದರ ಪರಿಣಾಮವಾಗಿ ಮುಂದೆ ಇನ್ನೂ ಹಿಂಸಾತ್ಮಕ ಆಂದೋಲನಗಳು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ. ಅವರಿಗೆ ಅರಾಜಕತೆ ಸೃಷ್ಟಿಸಿ ಹೇಗಾದರೂ ಮಾಡಿ ಅಧಿಕಾರ ಬದಲಾವಣೆ ಆಗಬೇಕು ಎಂಬ ಹಂಬಲವಿದೆ. ಜ್ಞಾನೇಶ ಕುಮಾರ ಅವರ ಹಿಂದೆ ಜನತೆ ಮತ್ತು ಮೋದಿ ಸರಕಾರ ಇರುವುದು, ಅವರಿಗೆ ಅರಗಿಸಿಕೊಳ್ಳಲಾಗದ ದುಃಖವಾಗಿದೆ.

– ಕೇದಾರ ಸರವಟೆ, ಪುಣೆ (೨೩.೧೧.೨೦೨೫)