
‘ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ೭ – ೮ ವರ್ಷಗಳ ಹಿಂದೆ ಹೇಳಿದ್ದರು, ”ಆಪತ್ಕಾಲವು ಹತ್ತಿರ ಬರುತ್ತಿದ್ದಂತೆ, ಈಶ್ವರನು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಸಾಧನೆಯೆಂದು ಪಾಲ್ಗೊಳ್ಳುವ ಸಾಧಕರ ಸಂಖ್ಯೆಗೆ ಜರಡಿ ಹಿಡಿಯುವನು. (ಸಾಧಕರ ಸಂಖ್ಯೆ ಕಡಿಮೆಯಾಗುವುದು.) ಶ್ರದ್ಧೆಯ ಬಲದಿಂದ ನಿಲ್ಲುವವರು ಮಾತ್ರ ಮುಂದೆ ಸಾಗುವರು. ಕೆಲವರು ಮಾಯೆಯ ಕರ್ತವ್ಯಗಳನ್ನು ನಿರ್ವಹಿಸಲು ಹೋಗುವರು, ಇನ್ನೂ ಕೆಲವರು ನೌಕರಿ ಮತ್ತು ವ್ಯಾಪಾರ ಮಾಡಲು ಹೋಗುವರು, ಮತ್ತೆ ಕೆಲವರು ವಿವಾಹಬಂಧನಕ್ಕೆ ಸಿಲುಕಿ ಸಾಧನೆಯ ಚಕ್ರದಿಂದ ಹೊರಬೀಳುವರು. ಕೆಲವರು ಮಕ್ಕಳ ಗೊಂದಲದಲ್ಲಿ ಸಿಲುಕುವರು ಮತ್ತೆ ಕೆಲವರು ವಿಕಲ್ಪ ಬಂದು ಹೊರಗೆ ಹೋಗುವರು.’’ ಈಗ ನಿಜವಾಗಿಯೂ ಇದೇ ದೃಶ್ಯ ಕಾಣಿಸುತ್ತಿದೆ. ಗುರುದೇವರು ಮೊದಲೇ ಏನು ಹೇಳಿದ್ದರೋ, ಅದೇ ಈಗ ನಡೆಯುತ್ತಿದೆ. ಅನೇಕ ಜನರು ‘ನಾವು ಮಾಯೆಯಲ್ಲಿ ಇದ್ದರೂ ಸಾಧನೆ ಮಾಡುತ್ತಿದ್ದೇವೆ’ ಎಂಬ ಭ್ರಮೆಯಲ್ಲಿದ್ದಾರೆ. ಅನೇಕ ಜನರಿಗೆ ‘ಮಾಯೆಗೆ ಹೋದರೆ ಏನಾಯಿತು ? ಅಲ್ಲಿಯೂ ನಮ್ಮ ಸಾಧನೆ ಆಗುವುದು’ ಎಂದು ಅನಿಸುತ್ತದೆ. ಆಪತ್ಕಾಲದಲ್ಲಿ ಸಾಧನೆ ಮಾಡುವುದು ಮತ್ತು ಅದರಲ್ಲಿ ಸಾತತ್ಯವನ್ನು ಕಾಪಾಡುವುದು ಬಹಳ ಕಷ್ಟಕರವಾಗಿದೆ. ಅದೇ ಪರಿಸ್ಥಿತಿ ಈಗ ಎಲ್ಲೆಡೆ ಕಂಡುಬರುತ್ತಿದೆ. ಎಲ್ಲಾ ಸಂಪ್ರದಾಯಗಳಲ್ಲಿಯೂ ಇದೇ ಸ್ಥಿತಿ ಇದೆ.

ಒಮ್ಮೆ ನಾನು ಗುರುದೇವರನ್ನು ಕೇಳಿದೆ, ”ಆಶ್ರಮದಲ್ಲಿದ್ದರೂ ಎಲ್ಲರೂ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ತಳಮಳದಿಂದ ಪ್ರಯಾಣಿಸುತ್ತಿರುವುದು ಕಾಣಿಸುತ್ತಿಲ್ಲ, ಇದಕ್ಕೆ ಕಾರಣವೇನು ?’’ ಆಗ ಗುರುದೇವರು ಹೇಳಿದರು, ”ಒಂದು ಕಚೇರಿಯಲ್ಲಿ ಕೆಲವರು ಗುಮಾಸ್ತರಾಗಿರುತ್ತಾರೆ, ಕೆಲವರು ‘ಮ್ಯಾನೇಜರ್’ ಆಗಿರುತ್ತಾರೆ, ಮತ್ತೆ ಕೆಲವರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ; ಆದರೆ ಎಲ್ಲರೂ ‘ಬಾಸ್’ ಆಗುವುದಿಲ್ಲ. ಕೆಲವರು ಅನೇಕ ವರ್ಷಗಳವರೆಗೆ ಅದೇ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗುತ್ತಾರೆ, ಅದೇ ರೀತಿ ಇದೂ ಆಗಿದೆ.’’
ಆಗ ನನಗೆ ಅರ್ಥವಾಯಿತು, ‘ಸಾಧನೆಯ ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ಎಲ್ಲರಿಗೂ ಈಶ್ವರಪ್ರಾಪ್ತಿ ಸಾಧ್ಯವಿದೆ. ‘ಪ್ರಯತ್ನದಿಂದ ಪರಮೇಶ್ವರ ಪ್ರಾಪ್ತಿ’ ಎಂಬ ಈ ನಾಣ್ಣುಡಿಯು ಇಲ್ಲಿಯೂ ಅನ್ವಯಿಸುತ್ತದೆ. ‘ಸಾಧನೆ ಮಾಡುವುದು’ ನಮ್ಮ ನಿತ್ಯದ ಕ್ರಿಯೆಯಾಗಿಯೇ ಇರಬೇಕು; ಆದರೆ ಕಲಿಯುಗದಲ್ಲಿ ಈ ಗುರಿಯಿಂದ ದೂರ ಹೋಗುವವರೇ ಹೆಚ್ಚಿದ್ದಾರೆ. ಕೊನೆಗೆ, ಕಲಿಯುಗದ ಮಹಿಮೆಯಲ್ಲಿ ಇದೂ ಒಂದಾಗಿದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚೀಪುರಮ್, ತಮಿಳುನಾಡು (೨೭.೧೦.೨೦೨೫)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!