ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಆಧ್ಯಾತ್ಮಿಕ ಮಟ್ಟವು ಹೆಚ್ಚಾದಂತೆ ಸಾಧಕರಿಗೆ ಪ್ರಶ್ನೆಗಳಿಗೆ ಯೋಗ್ಯ ಉತ್ತರಗಳು ಸಿಗುತ್ತವೆ. ಸಾಧಕರು ಉತ್ತರಗಳನ್ನು ಸ್ವತಃ ಹುಡುಕುವ ಬದಲು ಮಾರ್ಗದರ್ಶಕ ಸಾಧಕರಲ್ಲಿ ಕೇಳಿ ಕೃತಿ ಮಾಡುವುದು ಅವಶ್ಯಕ.

ಸೌ. ನಮಿತಾ ಸಾಳುಂಖೆ, ರತ್ನಾಗಿರಿ : ಈ ಮೊದಲು ನನಗೆ ನನ್ನ ಮನಸ್ಸಿನಲ್ಲಿರುವ ಎಲ್ಲ ಪ್ರಶ್ನೆಗಳ ಉತ್ತರಗಳು ಸಿಗುತ್ತಿದ್ದವು; ಆದರೆ ಕಳೆದ ೨-೩ ತಿಂಗಳಿಂದ ಪ್ರಯತ್ನ ಮಾಡಿದರೂ ನನಗೆ ಉತ್ತರಗಳು ಸಿಗುತ್ತಿಲ್ಲ. ಆಗ ನನಗೆ ಕಿರಿಕಿರಿಯಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಆಧ್ಯಾತ್ಮಿಕ ಮಟ್ಟವು ಹೆಚ್ಚಾದರೆ, ನಮಗೆ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿಲ್ಲವೆಂದರೆ, ನಮ್ಮ ಸಾಧನೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಸಾಧನೆಯನ್ನು ಹೆಚ್ಚಿಸಬೇಕು.

ಸೌ. ನಮಿತಾ ಸಾಳುಂಖೆ : ನಾನು ಮಲಗುವುದಿಲ್ಲ. ನಾನು ಕುಳಿತುಕೊಂಡೇ ಇರುತ್ತೇನೆ ಮತ್ತು ಸತತವಾಗಿ ನಿಮ್ಮ ಬಳಿ ‘ನಾನು ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?’ ಎಂದು ಕೇಳುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಒಬ್ಬ ರೋಗಿಯು ‘ನಾನು ನಿದ್ರೆಯಿಂದ ಎದ್ದು ‘ನಾನು ಯಾಕೆ ಅನಾರೋಗ್ಯಕ್ಕೆ ಒಳಗಾಗಿದ್ದೇನೆ ?’ ಎಂದು ಯೋಚಿಸುತ್ತೇನೆ’, ಎನ್ನುವಂತಿದೆ. ಇದರ ಬಗ್ಗೆ ಚಿಕಿತ್ಸೆ ನೀಡುವ ವೈದ್ಯರೇ ಹೇಳುತ್ತಾರಲ್ಲವೇ ? ಅವರು ಏನು ಹೇಳುತ್ತಾರೋ ಹಾಗೆ ಮಾಡಬೇಕು. ಸಾಧನೆಗಾಗಿ ನೀವು ನಿಮ್ಮ ಮಾರ್ಗದರ್ಶಕ ಸಾಧಕರಲ್ಲಿ ಕೇಳಬೇಕು ಮತ್ತು ಅವರು ಹೇಳಿದಂತೆ, ಮಾಡುತ್ತಾ ಹೋಗಬೇಕು. ಆಶ್ರಮಕ್ಕೆ ಬಂದ ನಂತರ ಸಾಧನೆಯಲ್ಲಿ ಅತ್ಯಂತ ಹೆಚ್ಚು ಪ್ರಗತಿ ಏಕೆ ಆಗುತ್ತದೆ ? ಏಕೆಂದರೆ ಅಲ್ಲಿ ಪ್ರತಿದಿನ ಸತ್ಸಂಗ ಸಿಗುತ್ತದೆ. ಸಾಧನೆಯ ವಿಷಯದಲ್ಲಿ ಜವಾಬ್ದಾರ ಸಾಧಕರಲ್ಲಿ ಪ್ರಶ್ನೆಗಳನ್ನು ಕೇಳಿ ಅದರಂತೆ ಮಾಡಲು ಸಾಧ್ಯವಾಗುತ್ತದೆ. ಮನೆಯಲ್ಲಿ ಹಾಗೆ ಆಗುವುದಿಲ್ಲ. ಆದ್ದರಿಂದ ಮನೆಗಿಂತ ಆಶ್ರಮದಲ್ಲಿ ಸಾಧನೆಯಲ್ಲಿ ಬೇಗನೆ ಪ್ರಗತಿಯಾಗುತ್ತದೆ.

‘ನಮ್ಮ ಉತ್ತರಗಳು ಸರಿಯಾಗಿವೆ ?’ ಎಂದು ತಿಳಿಯಲು ಇತರರ ಸಹಾಯ ಪಡೆಯುವುದು ಅವಶ್ಯಕ !

ಸೌ. ನಮಿತಾ ಸಾಳುಂಖೆ : ಈ ಮೊದಲು ನನಗೆ ಎಲ್ಲ ಪ್ರಶ್ನೆಗಳ ಉತ್ತರಗಳು ತಕ್ಷಣ ಸಿಗುತ್ತಿದ್ದವು. ಅದಕ್ಕೆ ಸಮಯ ತಗಲುತ್ತಿರಲಿಲ್ಲ. ಈಗ ನಾನು ಪ್ರತಿಯೊಂದು ಕೃತಿ ಮಾಡುವ ಮೊದಲು ‘ನಾನು ಎಲ್ಲಿ ತಪ್ಪುತ್ತಿದ್ದೇನೆ ?’, ಎನ್ನುವುದನ್ನು ದೇವರಿಗೆ ಕೇಳುತ್ತೇನೆ ಮತ್ತು ಅದರ ಉತ್ತರವನ್ನೂ ಹುಡುಕುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು; ಆದರೆ ‘ನನ್ನ ಉತ್ತರಗಳು ಸರಿಯಿದೆಯೇ’, ಎನ್ನುವುದನ್ನು ಆರಂಭದ ಕೆಲವು ತಿಂಗಳುಗಳ ಕಾಲ ಇತರರಲ್ಲಿ ಕೇಳಿ ಖಚಿತಪಡಿಸಿಕೊಳ್ಳಬೇಕು. ಉತ್ತರಗಳು ತಪ್ಪಾಗಿದ್ದರೆ, ನಾವು ಅದರಲ್ಲೇ ಮುಳುಗಿ ಹೋಗುತ್ತೇವೆ; ಆದ್ದರಿಂದ ಉತ್ತರ ಯೋಗ್ಯವಾಗಿದೆಯೇ ? ಎಂದು ಖಚಿತಪಡಿಸಿಕೊಳ್ಳುತ್ತಾ ಹೋಗಿ. ನಮಗೆ ‘ನಮ್ಮ ತಪ್ಪು ಯಾವುದು ಅಥವಾ ಸರಿಯಾವುದು ? ಗೊತ್ತಾಗುವುದಿಲ್ಲ. ‘ನನ್ನದು ಸರಿಯಾಗಿದೆ’ ಹೀಗೆ ನಮ್ಮ ಮನಸ್ಸಿನಲ್ಲಿ ಇರುತ್ತದೆ. ಅದಕ್ಕಾಗಿ ಇತರರ ಸಹಾಯವನ್ನು ಪಡೆಯಬೇಕು !’