೧. ಆಧ್ಯಾತ್ಮಿಕ ಉಪಾಯವಾಗಿ ನಾಮಜಪ ಮಾಡುವವರು ಆರಂಭದಲ್ಲಿ ‘ಪ್ರಾಣಶಕ್ತಿವಹನ ಪದ್ಧತಿ’ಯ ಪ್ರಕಾರ ಕಂಡುಹಿಡಿದ ಜಪವನ್ನು ಮಾಡಿ, ನಂತರ ರಾಮನಾಮದ ಜಪವನ್ನು ಮಾಡಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಕಾಲಕ್ಕನುಗುಣವಾಗಿ ಸಾಧನೆಯಾಗಿ ಪ್ರತಿದಿನ ಶ್ರೀರಾಮನ ನಾಮಜಪವನ್ನು ಕನಿಷ್ಠ ಪಕ್ಷ ೧೦ ಮಾಲೆಯನ್ನಾದರೂ ಮಾಡಲು ತಿಳಿಸಿದ್ದಾರೆ. ಮುಖ್ಯವಾಗಿ ಈ ನಾಮಜಪವನ್ನು ‘ಆಪತ್ಕಾಲದ ಸಂಕಟಗಳಿಂದ ರಕ್ಷಣೆ ಸಿಗಲಿ ಮತ್ತು ರಾಮರಾಜ್ಯದ ಸ್ಥಾಪನೆಯಾಗಲಿ’ ಎಂಬ ಉದ್ದೇಶಗಳಿಗಾಗಿ ಹೇಳಲಾಗಿದೆ.
ಆಧ್ಯಾತ್ಮಿಕ ತೊಂದರೆ ಇರುವವರು ಉಪಾಯವೆಂದು ನಾಮಜಪ ಮಾಡುವಾಗ, ಆರಂಭದಲ್ಲಿ ‘ಪ್ರಾಣಶಕ್ತಿವಹನ ಪದ್ಧತಿ’ಯ ಪ್ರಕಾರ ತಮಗೆ ಅಗತ್ಯವಿರುವ ಜಪವನ್ನು ಕಂಡುಹಿಡಿದು ಅದನ್ನು ಮಾಡಬೇಕು ಮತ್ತು ಆ ನಂತರ ಶ್ರೀರಾಮನ ನಾಮಜಪವನ್ನು ಮಾಡುವುದು ಹೆಚ್ಚು ಯೋಗ್ಯವಾಗಿದೆ.
ಏಕೆಂದರೆ, ಪಂಚತತ್ತ್ವಗಳು (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ) ಅಥವಾ ನಿರ್ಗುಣ ಇವುಗಳಲ್ಲಿ ಯಾವ ತತ್ತ್ವಕ್ಕೆ ಸಂಬಂಧಿಸಿದ ತೊಂದರೆ ನಮಗಿರುತ್ತದೆಯೋ, ಆ ತತ್ತ್ವದ ನಾಮಜಪವನ್ನು ಕಂಡುಹಿಡಿದು ಅದನ್ನು ಮಾಡುವುದ ರಿಂದ ತೊಂದರೆಯು ಬೇಗನೆ ದೂರವಾಗುತ್ತದೆ. ಇದರ ನಂತರ ರಾಮನಾಮದ ಜಪವನ್ನು ಮಾಡುವುದರಿಂದ, ಕಾಲಕ್ಕನುಸಾರ ಅಗತ್ಯವಿರುವ ರಾಮತತ್ತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.
೨. ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಆವರಣ ತೆಗೆಯುವುದು ಮತ್ತು ನ್ಯಾಸ ಮಾಡುವುದು ಸ್ಥೂಲವಾಗಿ ಸಾಧ್ಯವಾಗದಿದ್ದರೆ, ಸೂಕ್ಷ್ಮವಾಗಿ ಮಾಡಬೇಕು !
‘ಆಧ್ಯಾತ್ಮಿಕ ಉಪಾಯ ಮಾಡುವಾಗ ಮೊದಲು ತನ್ನ ದೇಹದ ಮೇಲಿನ (ಕಪ್ಪು ಶಕ್ತಿಯ) ಆವರಣವನ್ನು ತೆಗೆಯುವುದು, ಹಾಗೆಯೇ ನಾಮಜಪ ಮಾಡುವಾಗ ನ್ಯಾಸವಿದ್ದರೆ ಅದನ್ನು ಮಾಡುವುದು ಮಹತ್ವದ್ದಾಗಿದೆ; ಏಕೆಂದರೆ ಇದರಿಂದ ಉಪಾಯಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಆದರೆ ಕೆಲವು ಬಾರಿ ವ್ಯಕ್ತಿಗೆ ಅತಿಯಾದ ಆಯಾಸದಿಂದಾಗಿ ಅಥವಾ ಕೈ ನೋವಿನಿಂದಾಗಿ ಆವರಣ ತೆಗೆಯಲು ಅಥವಾ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರಯಾಣ ಮಾಡುವಾಗ, ಯಾವುದಾದರೂ ಕಚೇರಿಗೆ ಹೋದಾಗ ಅಲ್ಲಿ ನಾಮಜಪ ಮಾಡುವಾಗಲೂ ಆವರಣ ತೆಗೆಯುವುದು ಮತ್ತು ನ್ಯಾಸ ಮಾಡುವುದು ಬಹುತೇಕ ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಸೂಕ್ಷ್ಮವಾಗಿ ಆವರಣವನ್ನು ತೆಗೆಯಬೇಕು ಮತ್ತು ನ್ಯಾಸವನ್ನು ಮಾಡಬೇಕು. ಈ ಎರಡೂ ಕ್ರಿಯೆಗಳನ್ನು ಸೂಕ್ಷ್ಮವಾಗಿ ಮಾಡುವುದೆಂದರೆ, ನಾವು ಪ್ರತ್ಯಕ್ಷ ಮಾಡುವಂತೆಯೇ ಮನಸ್ಸಿನಲ್ಲಿಯೇ ಮಾಡುವುದು. ‘ನಾವು ಈ ಕ್ರಿಯೆಗಳನ್ನು ಪ್ರತ್ಯಕ್ಷವಾಗಿ ಮಾಡಿದಾಗ ಎಷ್ಟು ಲಾಭವಾಗುತ್ತದೆಯೋ, ಅಷ್ಟೇ ಲಾಭವು ಈ ಕ್ರಿಯೆಗಳನ್ನು ಸೂಕ್ಷ್ಮವಾಗಿ ಮಾಡಿದರೂ ಆಗುತ್ತದೆ ಎಂಬುದನ್ನು ನಾನು ಹಲವು ಬಾರಿ ಅನುಭವಿಸಿದ್ದೇನೆ.
– (ಪೂ.) ಸಂದೀಪ ಆಳಶಿ (೨೪.೫.೨೦೨೬)
‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಶರೀರದ ‘ಪರಿವರ್ತನೆ’ಯ ನಿಯಮ !
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |