
‘ಜಗತ್ತಿನಲ್ಲಿನ ಎಲ್ಲ ಸಮಸ್ಯೆಗಳ ಉತ್ತರ ಸನಾತನ ಧರ್ಮದಲ್ಲಿದೆ. ಅನೇಕ ಜನರು ಇತರರಿಗೆ ವಿವಿಧ ವಿಷಯಗಳನ್ನು ದಾನ ಮಾಡುತ್ತಿರುತ್ತಾರೆ. ಅದರ ಬದಲು ಎಲ್ಲರಿಗೂ ಸನಾತನ ಧರ್ಮದಲ್ಲಿನ ಸಕಾರಾತ್ಮಕ ಇರುವುದರ ಕಲಿಕೆಯನ್ನು ನೀಡಬೇಕು. ಯಾವುದೇ ರೀತಿಯ ಸಂಕಟ ಬಂದರೆ, ಅಡಚಣೆಗಳು ಬಂದರೆ ನಾವು ಸಕಾರಾತ್ಮಕವಾಗಿರಬೇಕು. ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡರೆ ಜೀವನದಲ್ಲಿನ ಎಲ್ಲ ಸಮಸ್ಯೆಗಳು ಹಾಗೂ ಅಡಚಣೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ, ಎಂದು ಅಮೇರಿಕಾದ ‘ಸಿನೆಮೆಟೋಗ್ರಾಫರ್’ (ಚಲನಚಿತ್ರ ನಿರ್ಮಾಪಕ) ಹಾಗೂ ‘ಇನ್ ಕ್ವೆಸ್ಟ್ ಆಫ್ ಗುರು’ ಈ ಪುಸ್ತಕದ ಲೇಖಕ ಆನಂದಾ ಮ್ಯಾಥ್ಯು ಇವರು ಉದ್ಗಾರ ತೆಗೆದರು.
‘ಹಿಂದೂಸ್ಥಾನ ಪೋಸ್ಟ್’ನ ಸಂಪಾದಕ ಶ್ರೀ. ಸ್ವಪ್ನಿಲ್ ಸಾವರಕರ ಇವರು ಆನಂದಾ ಮ್ಯಾಥ್ಯು ಇವರ ಸಂದರ್ಶನ ತೆಗೆದುಕೊಂಡರು. ಆ ಸಂದರ್ಭದಲ್ಲಿ ಅವರು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಆನಂದಾ ಮ್ಯಾಥ್ಯು ಇವರು ಜೀವನವನ್ನು ಸಕಾರಾತ್ಮಕವಾಗಿ ನೋಡಬಹುದು, ಎನ್ನುವ ವಿಷಯವನ್ನೂ ಹೇಳಿದರು.
ಕ್ರೈಸ್ತ ಮೂಲದ, ಅಮೇರಿಕನ್ ಆಗಿರುವ ಆನಂದಾ ಮ್ಯಾಥ್ಯು ಇವರಿಗೆ ಅರಿವಾದ ಸನಾತನ ಧರ್ಮದ ಮಹತ್ವ ಭಾರತದ ತಥಾಕಥಿತ ಬುದ್ಧಿಜೀವಿಗಳು, ಪ್ರಗತಿಪರರು ಹಿಂದೂದ್ವೇಷಿಗಳಿಗೆ ತಿಳಿಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಅವರು ಕೇವಲ ಹಿಂದೂ ಧರ್ಮವನ್ನು ದ್ವೇಷಿಸಲು ಹಾಗೂ ಅದನ್ನು ಟೀಕೆ ಮಾಡುವುದರಲ್ಲಿಯೆ ಧನ್ಯರೆನಿಸಿಕೊಳ್ಳುತ್ತಾರೆ !
೧. ಆನಂದಮಯ ಜೀವನ ನಡೆಸಲು ಉಪಯೋಗವಾಗುವ ೫ ಸುಲಭ ಸೂಚನೆಗಳು
ಆನಂದಾ ಮ್ಯಾಥ್ಯು ಇವರು ಹೇಳಿದ ಆನಂದಮಯ ಜೀವನ ನಡೆಸಲು ಉಪಯೋಗವಾಗುವ ೫ ಸುಲಭ ಸೂಚನೆಗಳು ಈ ಮುಂದಿನಂತಿವೆ.
ಅ. ಬೆಳಗ್ಗೆ ಎದ್ದ ತಕ್ಷಣ ಮೊಟ್ಟಮೊದಲು ‘ಈಶ್ವರ’, ‘ಭಗವಂತ’, ‘ದೇವರೆ’ ಇಂತಹ ಯಾವುದಾದ್ರು ಸಕಾರಾತ್ಮಕ ಶಬ್ದವನ್ನು ಉಚ್ಚರಿಸಬೇಕು.
ಆ. ‘ದೇವರು ನಮಗೆ ಜೀವನದಲ್ಲಿ ಇನ್ನೊಂದು ದಿನವನ್ನು ದಯಪಾಲಿಸಿದ್ದಾನೆ’, ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಬೇಕು.
ಇ. ದೇವರೆ ‘ನನಗೆ ಇದನ್ನು ಕೊಡು, ಅದನ್ನು ಕೊಡು’ ಎಂದು ಏನನ್ನೂ ಬೇಡಬಾರದು. ಅದಕ್ಕಿಂತ ‘ನನಗೆ ಏನು ಆವಶ್ಯಕವಿದೆಯೋ, ಅದನ್ನು ನೀನೇ ಕೊಡು’, ಎಂದು ಪ್ರಾರ್ಥನೆ ಮಾಡಬೇಕು.
ಈ. ಕೆಲವೊಮ್ಮೆ ನಾವು ಏನನ್ನು ಇಚ್ಛಿಸುತ್ತೇವೆಯೋ, ಅದರ ವಿರುದ್ಧ ಘಟಿಸುತ್ತದೆ. ಅಂತಹ ಪ್ರಸಂಗವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕು.
ಉ. ಇತರರಿಗೆ ಸಹಾಯ ಮಾಡುವಾಗ ಅವರಿಗೆ ಸಕಾರಾತ್ಮಕ ದೃಷ್ಟಿಯನ್ನು ನೀಡಬೇಕು.
(ಆಧಾರ : ಸಾಪ್ತಾಹಿಕ ‘ಹಿಂದುಸ್ಥಾನ ಪೋಸ್ಟ್, ಮರಾಠಿ’ ಜಾಲತಾಣ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು