
೧. ಹಿಂದೂಗಳ ಶೌರ್ಯದ ಇತಿಹಾಸ
‘ಹಿಂದೂ ರಾಜರು ಮತ್ತು ಮಹಾರಾಜರು ನಮಗೆ ಶೌರ್ಯ ಮತ್ತು ಪರಾಕ್ರಮದ ಇತಿಹಾಸವನ್ನು ನೀಡಿದ್ದಾರೆ. ಅದೇ ನಮ್ಮ ನಿಜವಾದ ಗತವೈಭವವಾಗಿದೆ. ‘ಮಾತೃಭೂಮಿ ಮತ್ತು ಮಾತೃ ಸಂಸ್ಕೃತಿಗಾಗಿ ಬದುಕುವುದು’, ಇದೇ ನಮ್ಮ ಪೂರ್ವಜರು ನಮಗೆ ನೀಡಿದ ಸಂದೇಶವಾಗಿದೆ. ನಮ್ಮಲ್ಲಿ ಹರಿಯುತ್ತಿರುವುದು ಪರಾಕ್ರಮದ ರಕ್ತವೇ ಹೊರತು, ಹೇಡಿಗಳದ್ದಲ್ಲ ! ಇಂದಿನ ಹಿಂದೂಗಳು ಇತಿಹಾಸದಿಂದ ಪಾಠ ಕಲಿಯದೆ ಭವಿಷ್ಯದ ಬಗ್ಗೆ ಮಾತನಾಡುತ್ತಾರೆ, ಕರ್ತವ್ಯವನ್ನು ಮರೆತು ಮೋಜುಮಸ್ತಿಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ರಾಷ್ಟ್ರಧರ್ಮದ ಬಗ್ಗೆ ಚಿಂತೆ ಅಥವಾ ವಿಚಾರವಿಲ್ಲ. ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಪೀಳಿಗೆಗೆ ಕೂಲಿಯಾಳುಗಳಂತೆ ‘ಹಣವೇ ಸರ್ವಸ್ವ’ ಎಂದು ಬಿಂಬಿಸುವ ಪಾಲಕರು ಇರುವುದು ನಮ್ಮ ದುರದೃಷ್ಟ !’

೨. ಹಿಂದೂಗಳೇ, ನಾಯಕರಾಗಿರಿ !
ಹಿಂದೂಗಳ ರಕ್ತವೇ ನಾಯಕತ್ವದ್ದಾಗಿದೆ. ಇಡೀ ವಿಶ್ವಕ್ಕೆ ನಾಯಕತ್ವ ನೀಡಿದ ಶ್ರೇಷ್ಠ ಹಿಂದೂ ರಾಜ ಮಹಾರಾಜರ ಸ್ವಾಭಿಮಾನವನ್ನು ಉಳಿಸಿಕೊಂಡು ಹೋಗುವುದು ಹಿಂದೂಗಳ ಆದ್ಯ ಕರ್ತವ್ಯವಾಗಿದೆ. ‘ಈ ವಿಶ್ವವೇ ನನ್ನ ಮನೆ’ ಎಂದು ಹೇಳುವ ನಮ್ಮ ಧರ್ಮ, ಇಡೀ ಚರಾಚರ ಜಗತ್ತು ಸುಖವಾಗಿ ಬದುಕಬೇಕು ಎಂಬುದೇ ನಮ್ಮ ಉದ್ದೇಶ ! ನಾವು ಅಂತಹ ಶ್ರೇಷ್ಠ ಧರ್ಮದ ಸೇನಾಪತಿಗಳು. ಸೈನಿಕನ ಪಾತ್ರ ನಮಗೆ ಶೋಭೆ ನೀಡುವುದಿಲ್ಲ. ನಮ್ಮ ರಾಜ ಪರಂಪರೆಯು ನಮಗೆ ನಾಯಕತ್ವವನ್ನು ನೀಡಿದೆ, ಇದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ.
೩. ಹಿಂದೂಗಳೇ, ಹಿಂದೂ ರಾಷ್ಟ್ರ ಸ್ಥಾಪನೆಯೇ ನಮ್ಮ ಧ್ಯೇಯ !
‘ಪ್ರತಿಯೊಬ್ಬ ಹಿಂದೂವಿಗೆ ಸ್ವಧರ್ಮವೇ ಶ್ರೇಷ್ಠ ಮತ್ತು ಧರ್ಮಾಧಿಷ್ಠಿತ ಆದರ್ಶ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದು’ ಇದೇ ಅವನ ಧ್ಯೇಯವಾಗಿದೆ; ಆದರೆ ಹಿಂದೂಗಳು ಧ್ಯೇಯವನ್ನೇ ಮರೆತಿರುವುದು ನಿಜವಾಗಿಯೂ ದುರದೃಷ್ಟಕರ ಎಂದು ಹೇಳಬೇಕಾಗುತ್ತದೆ. ದಾರಿ ತಪ್ಪಿದ ದೋಣಿಯ ಹಾಗೆ, ಹಳಿ ತಪ್ಪಿದ ರೈಲಿನಂತೆ ದಿಶಾಹೀನನಾಗಿರುವ ಹಿಂದೂಗಳೇ, ನೀವೇ ನಿಮ್ಮನ್ನು ತಿಳಿದುಕೊಳ್ಳಿ, ಭವಿಷ್ಯದ ಅರಿವಿನೊಂದಿಗೆ ಧ್ಯೇಯನಿಷ್ಠರಾಗಿರಿ !’
– ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !