ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದೂಗಳ ಜವಾಬ್ದಾರಿ


ಹಲವು ಬಾರಿ ಹಿಂದೂದ್ವೇಷಿಗಳು ಸನಾತನ ಹಿಂದೂ ಧರ್ಮವನ್ನು ಮುಗಿಸುವ ಅಥವಾ ನಾಶಪಡಿಸುವ ಮಾತನ್ನು ಬಳಸುತ್ತಾರೆ. ನಿಜ ಹೇಳಬೇಕೆಂದರೆ, ಅನಾದಿ ಅನಂತ ಕಾಲದಿಂದಲೂ ದೈವೀ ಶಕ್ತಿ ಮತ್ತು ಚೈತನ್ಯ ನೆಲೆಸಿರುವ ಈ ಭಾರತ ಭೂಮಿಯಲ್ಲಿನ ಸನಾತನ ಹಿಂದೂ ಧರ್ಮ ನಾಶವಾಗಲು ಸಾಧ್ಯವಿದೆಯೇ ? ಖಂಡಿತವಾಗಿಯೂ ಇಲ್ಲ ! ಸ್ಥೂಲ ಮತ್ತುಸೂಕ್ಷ್ಮ ಮಾಧ್ಯಮಗಳ ಮೂಲಕ ಎಷ್ಟೋ ನಕಾರಾತ್ಮಕ ಶಕ್ತಿಗಳು ಹಿಂದೂ ಧರ್ಮವನ್ನು ನಾಶಮಾಡಲು ಷಡ್ಯಂತ್ರ ಹೆಣೆಯುತ್ತಿವೆ; ಆದರೆ ಅವುಗಳ ಪ್ರಯತ್ನಗಳು ವಿಫಲವಾಗುತ್ತಿವೆ. ಆ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಕಾರ್ಯನಿರತವಾಗಿರುವುದೇ ಇದರ ಫಲಿತಾಂಶವಾಗಿದೆ. ಪ್ರಸ್ತುತ ಕಾಲದಲ್ಲಿ ಭಾರತದ ‘ಹಿಂದುತ್ವ’ದ ಗುರುತನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಈ ವರ್ಷ ೧೦೦ ವರ್ಷಗಳು ಪೂರ್ಣಗೊಂಡಿವೆ, ಹಾಗೆಯೇ ಮನುಷ್ಯ ಜನ್ಮದ ಮುಖ್ಯ ಉದ್ದೇಶ ಈಶ್ವರಪ್ರಾಪ್ತಿ ಎಂದು ಕಲಿಸುವ ಹಿಂದೂ ಧರ್ಮವನ್ನು ಈ ಘೋರ ಕಲಿಯುಗದಲ್ಲಿ ಉಳಿಸಿ ಬೆಳೆಸುವ ದೈವೀ ಕಾರ್ಯ ಮಾಡುತ್ತಿರುವ ಸನಾತನ ಸಂಸ್ಥೆಗೆ ಕೂಡ ಈ ವರ್ಷ ೨೫ ವರ್ಷಗಳು ಪೂರ್ಣಗೊಂಡಿವೆ. ಇದರೊಂದಿಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಶ್ರೀಶಿವಪ್ರತಿಷ್ಠಾನ ಹಿಂದೂಸ್ಥಾನ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳು ಇಂದು ಕಾರ್ಯನಿರತವಾಗಿವೆ. ಈ ಎಲ್ಲ ಸಂಘಟನೆಗಳು ಮಾಡಿದ ಮತ್ತು ಮಾಡುತ್ತಿರುವ ಶ್ರಮವು ಭಾರತ ‘ಹಿಂದೂ ರಾಷ್ಟ್ರ’ ಎಂದು ಘೋಷಣೆಯಾದಾಗ ಸಾರ್ಥಕವಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ನಡೆದ ಅನೇಕ ಬೆಳವಣಿಗೆಗಳಿಂದಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರವು ಈಗ ದೃಷ್ಟಿ ವ್ಯಾಪ್ತಿಯಲ್ಲಿ ಕಾಣಿಸುತ್ತಿದೆ; ಆದರೆ ಕೆಲವು ಬುದ್ಧಿಜೀವಿಗಳಿಗೆ, ವಿಜ್ಞಾನವು ಇಷ್ಟು ಪ್ರಗತಿ ಸಾಧಿಸುತ್ತಿದೆ, ಮನುಷ್ಯನಿಗಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ, ಹಾಗಾಗಿ ವೈಜ್ಞಾನಿಕ ಆವಿಷ್ಕಾರಗಳಿಂದ ನಿರ್ಮಾಣ ಗೊಂಡಿರುವ ಈ ಸುಖಸೌಕರ್ಯಗಳ ಲಾಭವನ್ನು ಪಡೆದುಕೊಳ್ಳುವ ಬದಲು ಧರ್ಮದ ವಿಷಯಗಳ ಬಗ್ಗೆ ಮಾತನಾಡುವುದು ನಿರರ್ಥಕ ಎಂದು ಅನಿಸುತ್ತದೆ; ಆದರೆ ಮನುಷ್ಯನಿಗೆ ನಿರಂತರ ಆತ್ಮದ ಆನಂದದ ಅನುಭೂತಿ ಉಂಟಾಗುವಂತಹ ಯಾವುದೇ ವಸ್ತುವನ್ನು ವಿಜ್ಞಾನದಿಂದ ನಿರ್ಮಿಸಲು ಸಾಧ್ಯವಾಗಿಲ್ಲ. ಆತ್ಮದ ಆನಂದದ ಅನುಭೂತಿಯು ವಿಜ್ಞಾನದಿಂದ ನಿರ್ಮಿಸಿದ ಎಲ್ಲ ಸುಖಸೌಕರ್ಯಗಳಿಗಿಂತ ಶ್ರೇಷ್ಠವಾಗಿದೆ. ಅದನ್ನು ಪಡೆಯಲು ಯಾವುದೇ ಸಾಧನವಿಲ್ಲ, ಬದಲಾಗಿ ಕೇವಲ ಅಂತಃಕರಣದಿಂದ ಭಗವಂತನ ನಿಸ್ವಾರ್ಥ ಭಕ್ತಿ ಅವಶ್ಯಕವಾಗಿದೆ. ಇಂತಹ ಭಕ್ತಿ ಮತ್ತು ಅಧ್ಯಾತ್ಮದ ಜ್ಞಾನವು ಪ್ರತಿಯೊಬ್ಬ ಮನುಷ್ಯ ಜೀವಿಗೆ ಆಗಬೇಕು, ಇದಕ್ಕಾಗಿ ಕೇವಲ ಭೌತಿಕ ವಿಕಾಸ ಮಾಡುವ ರಾಷ್ಟ್ರವಾಗದೆ ಧರ್ಮಾಧಿಷ್ಠಿತ ಸನಾತನ ರಾಷ್ಟ್ರವೇ ಬೇಕು. ಕೆಲವು ಭಯಭೀತ ಹಿಂದೂಗಳು, ಈ ಧರ್ಮದ ವಿಷಯಗಳನ್ನು ಮಾತನಾಡುವುದರಿಂದ ಧಾರ್ಮಿಕ ವೈಷಮ್ಯ ನಿರ್ಮಾಣ ಮಾಡಬಾರದು ಎಂದು ವಿಚಾರ ಮಾಡುತ್ತಾರೆ; ಆದರೆ ಮೂಲತಃ ಸನಾತನ ಹಿಂದೂ ಧರ್ಮಕ್ಕನುಸಾರ ಆಚರಣೆ ಮಾಡುವುದು, ಅಧ್ಯಾತ್ಮವನ್ನು ತಿಳಿದುಕೊಳ್ಳುವುದು, ಭಗವದ್ಭಕ್ತಿಯ ಆನಂದವನ್ನು ಪಡೆಯುವುದು, ಧರ್ಮಾಚರಣೆ ಮಾಡುವುದು ಇದರಲ್ಲಿಯೇ ಮನುಷ್ಯ ಜನ್ಮದ ಹಿತ ಅಡಗಿದೆ.

ದೇವದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುವುದರ ಜೊತೆಗೆ ಸಮಷ್ಟಿ ಮಟ್ಟದಲ್ಲಿ ಭಗವಂತನ ಕಾರ್ಯವನ್ನು ಮುಂದುವರಿಸುವುದು ಕೂಡ ಅವಶ್ಯಕವಾಗಿದೆ. ಎಲ್ಲ ಹಿಂದೂಗಳು ಹಿಂದುತ್ವನಿಷ್ಠ ಸಂಘಟನೆಗಳ ಮಾಧ್ಯಮದಿಂದ ಸಮಷ್ಟಿ ಕಾರ್ಯದಲ್ಲಿ ಭಾಗವಹಿಸಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು.

– ಶ್ರೀ. ಋಷಿಕೇಶ ಗಾಯಕವಾಡ, ಸನಾತನ ಆಶ್ರಮ, ದೇವದ, ಪನವೇಲ.