
ದೇವಸ್ಥಾನಗಳ ವ್ಯವಸ್ಥಾಪನೆ ಇದೊಂದು ಮುಖ್ಯ ವಿಷಯವಾಗಿದೆ. ಇದರಲ್ಲಿ ದೇವಸ್ಥಾನದಲ್ಲಿ ಭಕ್ತರ ಮತ್ತು ಇತರ ಮಾಧ್ಯಮಗಳಿಂದ ಬರುವ ಅರ್ಪಣೆ ನಿಧಿ, ಚಿನ್ನ-ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳು, ಆಭರಣಗಳು, ದಾನ ಮಾಡಿದ ಭೂಮಿ, ಕಟ್ಟಡ (ವಾಸ್ತು) ಇವುಗಳ ಸರಿಯಾಗಿ ವಿನಿಯೋಗ ಮಾಡುವುದು, ಅವುಗಳ ಲೆಕ್ಕವನ್ನಿಡುವುದು ಮುಂತಾದ ಅನೇಕ ಆರ್ಥಿಕ ಅಂಶಗಳನ್ನು ಸೇರಿಸಿಕೊಳ್ಳಬಹುದು. ಭಾವಿಕರ ದೃಷ್ಟಿಯಿಂದ ದೇವಸ್ಥಾನಗಳಿಂದ ಯಾವ ಸೌಕರ್ಯಗಳನ್ನು ಲಭ್ಯ ಗೊಳಿಸಬಹುದು ? ಎಂಬ ವಿಚಾರವನ್ನು ಮುಂದಿನ ಅಂಶಗಳ ಮೂಲಕ ನೀಡಲಾಗಿದೆ.
೧. ದೇವಸ್ಥಾನ ಪ್ರವೇಶಿಸುವ ಸಂದರ್ಭದಲ್ಲಿ
ಅ. ಪ್ರವೇಶದ್ವಾರಗಳು, ವಸ್ತ್ರಸಂಹಿತೆ, ಹಾಗೆಯೇ ಇತರ ನಿಯಮಗಳು, ಉಪದೇವಸ್ಥಾನಗಳು ಪ್ರದಕ್ಷಿಣೆಯ ಮಾರ್ಗ, ಬೆಲೆಬಾಳುವ ವಸ್ತುಗಳನ್ನು ಇಡಲು ಲಾಕರ್ ಮುಂತಾದ ವ್ಯವಸ್ಥಾಪನೆಗಳ ಮಾಹಿತಿಯನ್ನು ನೀಡಬೇಕು.
ಆ. ದೇವಸ್ಥಾನದ ಇತಿಹಾಸ, ದೇವತೆಯ ವಿವಿಧ ವಸ್ತ್ರಾಲಂಕಾರದಲ್ಲಿನ ಭಾವ ಜಾಗೃತಗೊಳಿಸುವ ಚಿತ್ರಗಳು, ದೇವತೆಯ ಅಧ್ಯಾತ್ಮಶಾಸ್ತ್ರೀಯ ಮಾಹಿತಿಗಳಿರಬೇಕು.
೨. ದೇವಸ್ಥಾನದ ಸ್ವಚ್ಛತೆಯ ಸಂದರ್ಭದಲ್ಲಿ
ಅ. ದೇವಸ್ಥಾನದ ಚೈತನ್ಯ ಉಳಿಯಲು ಛಾವಣಿಯ ಮೇಲಿನ ಜೇಡರ ಬಲೆಗಳು, ಸ್ತಂಭಗಳು, ಗೋಪುರ, ಕಳಸಗಳ ನಿಯಮಿತ ಸ್ವಚ್ಛತೆ ಮಾಡುವುದು ಆವಶ್ಯಕವಾಗಿದೆ.
ಆ. ದೇವಸ್ಥಾನವು ಸಾತ್ತ್ವಿಕ ಮತ್ತು ಆಕರ್ಷಿಕವಾಗಿರಲು ಆಗಾಗ ಬಣ್ಣವನ್ನು ಹಚ್ಚಿಸಬೇಕು.
ಇ. ದೇವಸ್ಥಾನದಲ್ಲಿ ನಾಯಿ ಮತ್ತು ಪಾರಿವಾಳಗಳಿಂದ ದೇವಸ್ಥಾನವು ಅಸ್ವಚ್ಛ ಮತ್ತು ಭಾವಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಬೇಕು.
೩. ಪಾವಿತ್ರ್ಯವನ್ನು ಉಳಿಸಿಕೊಳ್ಳಲು
ಅ. ದೇವಸ್ಥಾನಗಳ ಪ್ರವೇಶದ್ವಾರದಲ್ಲಿ ಭಾವಿಕರಿಗೆ ಕೈ-ಕಾಲು ತೊಳೆಯಲು ಸೌಲಭ್ಯವಿರಬೇಕು.
ಆ. ದೇಹಶುದ್ಧಿಗಾಗಿ ಗೋಮೂತ್ರವನ್ನು ಸೇರಿಸಿದ ತೀರ್ಥವನ್ನು ಮೈಮೇಲೆ ಸಿಂಪಡಿಸಿಯೇ ದೇವಸ್ಥಾನ ಪ್ರವೇಶಿಸುವ ನಿಯಮ ಮಾಡಬೇಕು.
೩. ದರ್ಶನಾರ್ಥಿಗಳಿಗೆ ಸೌಲಭ್ಯ
ಮಕ್ಕಳು, ವೃದ್ಧ ವ್ಯಕ್ತಿಗಳು, ಅಂಗವಿಕಲರಿಗೆ ಪ್ರತ್ಯೇಕ ಸುಲಭ ದರ್ಶನದ ಸೌಲಭ್ಯವಿರಬೇಕು.
೪. ಭಕ್ತರಿಂದ ಸಾಧನೆ ಮಾಡಿಸುವುದು
ಅ. ಗರ್ಭಗುಡಿಯ ನೇರವಾಗಿ (ಲೈವ್) ಪ್ರಕ್ಷೇಪಣೆ ನೋಡಲು ದೊಡ್ಡ ಸ್ಕ್ರೀನ್ ವ್ಯವಸ್ಥೆ
ಆ. ಸಾಲಿನಲ್ಲಿ ನಿಂತ ಭಾವಿಕರಿಂದ ದೇವತೆಯ ಸ್ತೋತ್ರ, ನಾಮಜಪವನ್ನು ಪಠಿಸಿಕೊಳ್ಳುವುದು
ಇ. ಸಾಲಿನಲ್ಲಿ ನಿಂತ ದರ್ಶನಾರ್ಥಿಗಳಿಗೆ ದೇವತೆಗೆ ಸಂಬಂಧಿಸಿದ ಮಾಹಿತಿ ಪುಸ್ತಕಗಳನ್ನು ಕೊಟ್ಟರೆ ಅವರಿಗೆ ಸಾಂಸಾರಿಕ ಮಾತುಕತೆಯ ಬದಲು ದೇವತೆಯ ಮಾಹಿತಿ ಸಿಗುತ್ತದೆ.
ಈ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ, ದೇವಸ್ಥಾನದ ಪರಿಸರದಲ್ಲಿನ ಗೋಡೆಗಳ ಮೇಲೆ ಪುರಾಣದ ಕಥೆಗಳು, ಸಾತ್ತ್ವಿಕ ಚಿತ್ರಗಳನ್ನು ಹಾಕಿರಬೇಕು. ಭಾವಿಕರ ದೃಷ್ಟಿ ಬೀಳುವಲೆಲ್ಲ, ಅಲ್ಲಿ ಸಾತ್ತ್ವಿಕ ಕಲಾಕೃತಿಗಳು ಕಾಣಿಸಿದರೆ ಅವರಲ್ಲಿ ಸಾತ್ತ್ವಿಕತೆಯ ಸಂಸ್ಕಾರವಾಗುವುದು.
ಉ. ದರ್ಶನ ಪಡೆದ ನಂತರ ಭಾವಿಕರಿಗೆ ನಾಮಜಪ, ಧ್ಯಾನಕ್ಕಾಗಿ ಸ್ಥಳ ಲಭ್ಯಗೊಳಿಸಬೇಕು.
೫. ಧಾರ್ಮಿಕ ವಿಧಿಗಳ ಸಂದರ್ಭದಲ್ಲಿ
ಅ. ದೇವಸ್ಥಾನದಲ್ಲಿ ಮಾಡಲಾಗುವ ಧಾರ್ಮಿಕ ವಿಧಿ (ಅಭಿಷೇಕ, ಹೋಮ-ಹವನ, ಇ.) ಗಳ ಮಾಹಿತಿ ಫಲಕಗಳು ಇರಬೇಕು. ಇದರೊಂದಿಗೆ ಮೋಸವಾಗದಿರಲು ವಿಧಿಗಳ ದರ ಪಟ್ಟಿ ಮತ್ತು ಅರ್ಚಕರ ಸಂಪರ್ಕ ಕ್ರಮಾಂಕಗಳೂ ಅಲ್ಲಿರಬೇಕು.
ಆ. ಭಾವಿಕರಿಗೆ ಆಧ್ಯಾತ್ಮಿಕ ಲಾಭ ಸಿಗಲು ದೇವಸ್ಥಾನದಲ್ಲಾಗುವ ಧಾರ್ಮಿಕ ವಿಧಿಗಳ ಶಾಸ್ತ್ರ, ಅವುಗಳ ಲಾಭ, ಸಮಯ ಇವುಗಳ ಮಾಹಿತಿ ಇರಬೇಕು.
ಇ. ವಿಧಿಗಳ ಪೂರ್ವಸಿದ್ಧತೆಗಾಗಿ ಭಾವಿಕರು ಉಪವಾಸ ಮುಂತಾದ ಅನುಷ್ಠಾನಗಳನ್ನು ಮಾಡುವ ಆಗತ್ಯವಿದ್ದಲ್ಲಿ ಆ ಕುರಿತು ವಿಸ್ತಾರವಾದ ಮಾಹಿತಿ ಫಲಕ ಅಥವಾ ಪುಸ್ತಕಗಳಿಂದ ಲಭ್ಯಗೊಳಿಸಬೇಕು.
೬. ದೇವತೆಯ ಮಾಹಿತಿ
ಅ. ದೇವಸ್ಥಾನದಲ್ಲಿನ ದೇವತೆಯ ಮೂರ್ತಿವಿಜ್ಞಾನ (ವಿಗ್ರಹಗಳ ಕೈಗಳಲ್ಲಿನ ಆಯುಧಗಳು, ವಿಗ್ರಹದ ಅಕ್ಕ-ಪಕ್ಕದಲ್ಲಿ ಕೆತ್ತಿದ ದೇವತೆಗಳ ಆಕೃತಿಗಳು, ವಿಗ್ರಹದ ಮೇಲಿನ ಧಾರ್ಮಿಕ ಚಿಹ್ನೆಗಳು ಮತ್ತು ಅವುಗಳ ಅರ್ಥ) ಮುಂತಾದ ಪೌರಾಣಿಕ ಸಂದರ್ಭದ ಮಾಹಿತಿಯಿದ್ದರೆ ಭಾವಿಕರಲ್ಲಿ ದೇವರ ಬಗ್ಗೆ ಭಾವ ಹೆಚ್ಚಾಗುತ್ತದೆ.
ಆ. ದೇವತೆಯ ಪ್ರಸಿದ್ಧ ಭಕ್ತರ ಮಾಹಿತಿಯನ್ನು ನೀಡಿದರೆ ಭಕ್ತಿಯನ್ನು ಹೆಚ್ಚಿಸಲು ಭಕ್ತರಿಗೆ ಸ್ಫೂರ್ತಿ ಸಿಗುತ್ತದೆ.
೭. ಪ್ರಸಾದದ ವ್ಯವಸ್ಥೆ
ಅ. ದೇವತೆಗೆ ಅರ್ಪಿಸಿದ ಹೂವುಗಳು, ಹಣ್ಣುಗಳು ಅಥವಾ ವಸ್ತ್ರಗಳನ್ನು ಪ್ರಸಾದವೆಂದು ಭಾವಿಕರಿಗೆ ಕೊಡುವ ವ್ಯವಸ್ಥೆಯನ್ನು ಮಾಡಬೇಕು.
ಆ. ದೇವಸ್ಥಾನದಲ್ಲಿನ ಹೂವುಗಳು, ಹಣ್ಣುಗಳು ಮತ್ತು ಪೇಡಾಗಳನ್ನು ಭಾವಿಕರಿಗೆ ಹಂಚಿದರೆ ಭಾವಿಕರಿಗೆ ದೇವತೆಯ ಚೈತನ್ಯ ಸಿಗುತ್ತದೆ.
ಇ. ದೇವಿಯ ದೇವಸ್ಥಾನದಲ್ಲಿ ದೇವಿಗೆ ಅರ್ಪಿಸಿದ ಸೀರೆಗಳು, ಖಣಗಳು ದೊರಕುವ ವ್ಯವಸ್ಥೆ ಇರಬೇಕು.
೮. ಇತರ ವ್ಯವಸ್ಥೆ
ಅ. ದೇವಸ್ಥಾನದಲ್ಲಿ ಹಿಂದೂ ಧರ್ಮಶಾಸ್ತ್ರ, ಸಂಸ್ಕೃತಿಯ ಮಾಹಿತಿಯನ್ನು ನೀಡುವ ಸುಸಜ್ಜಿತ ಗ್ರಂಥಾಲಯವು ಅವಶ್ಯ ಇರಬೇಕು. ಗ್ರಂಥಾಲಯದಲ್ಲಿ ಭಾವಿಕರಿಗಾಗಿ ಹಿಂದೂ ಧರ್ಮಕ್ಕೆ ಸಂಬಂಧಿತ ಪ್ರಾಥಮಿಕ ಮತ್ತು ಜ್ಞಾನ ನೀಡುವ ಗ್ರಂಥಗಳಿರಬೇಕು.
ಆ. ಭಾವಿಕರಿಗೆ ದೇವಸ್ಥಾನದ ವ್ಯವಸ್ಥೆ, ಕಟ್ಟಡ, ಸೌಕರ್ಯದ ಸಂದರ್ಭದಲ್ಲಿ ಏನಾದರೂ ಸೂಚಿಸುವುದಾದರೆ. ಭಾವಿಕರ ಸೂಚನೆ ಪುಸ್ತಕದಲ್ಲಿ ಅದರ ನೋಂದಣಿಯನ್ನು ಮಾಡಬಹುದು.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !