ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣ ಮಾಡಿರಿ !

ಸ್ವಾತಂತ್ರ್ಯವೀರ ಸಾವರಕರ

ಸ್ವಾತಂತ್ರ್ಯವೀರ ಸಾವರಕರರು ಹಿಂದೂಗಳಿಗೆ, ‘ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕಿಕರಣ ಮಾಡಿ’ ಎಂಬ ಒಂದು ಮಂತ್ರವನ್ನು ಕೊಟ್ಟಿದ್ದರು ! ಎರಡನೇ ಮಹಾಯುದ್ಧದ ಸಮಯದಲ್ಲಿ ಸ್ವಾತಂತ್ರ್ಯವೀರ ಸಾವರಕರರು ಹಿಂದೂಗಳನ್ನು ಆಂಗ್ಲರ ಸೈನ್ಯದಲ್ಲಿ ಭರ್ತಿಯಾಗಲು ಹೇಳಿದರು. ಅದಕ್ಕಾಗಿ ದೇಶದಾದ್ಯಂತ ಪ್ರವಾಸ ಮಾಡಿದರು; ಅದರಿಂದ ಅವರನ್ನು ‘ರಿಕ್ರೂಟವೀರ’ (ಭರ್ತಿವೀರ) ಎಂದು ಅವಮಾನಿಸಲಾಯಿತು, ಆದರೂ ಅವರು ಹಿಂಜರಿಯಲಿಲ್ಲ. ಅವರು ತಮ್ಮ ಕಾರ್ಯಕ್ರಮವನ್ನು ಮುಂದುವರಿಸಿದರು. ನಮಗೆ ಅದರ ಪರಿಣಾಮ ಗೊತ್ತಿದೆ. ‘ಆಝಾದ್‌ ಹಿಂದ್‌ ಸೇನೆಯ’ ನೇತೃತ್ವವನ್ನು ಸ್ವೀಕರಿಸಿದ ನಂತರ ಸುಭಾಷ್‌ಬಾಬೂ ಸಿಂಗಾಪುರದಲ್ಲಿನ ಆಝಾದ್‌ ಹಿಂದ್‌ ರೇಡಿಯೋದಲ್ಲಿನ ಮೊದಲ ಭಾಷಣದಲ್ಲಿ ಆಝಾದ್‌ ಹಿಂದ್‌ ಸೇನೆಗೆ ಸಿಕ್ಕಿದ ಸೇನೆಯ ಶ್ರೇಯಸ್ಸನ್ನು ಅವರು ಸ್ವಾತಂತ್ರ್ಯವೀರ ಸಾವರಕರರಿಗೆ ನೀಡಿದರು. 

‘ಹಿಂದೂಗಳ ಸೈನಿಕಿಕರಣ’ದ ಮಂತ್ರದಿಂದ ಆಗಿರುವ ಲಾಭವೆಂದರೆ, ಆಂಗ್ಲ ಸೈನಿಕರಲ್ಲಿ ಮೊದಲು ಮುಸಲ್ಮಾನರ ಭರ್ತಿ ಹೆಚ್ಚು ಪ್ರಮಾಣದಲ್ಲಿತ್ತು. ಈ ಸ್ಥಿತಿ ಈಗ ಬದಲಾಗಿ ಈಗ ಸೈನ್ಯದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಯಿತು. ಅವರಲ್ಲಿ ‘ರಾಷ್ಟ್ರಭಕ್ತಿ’ಯ ಸಂಚಾರವಾಯಿತು ಮತ್ತು ಅದರ ಪರಿಣಾಮವೆಂದು ಭೂದಳ, ವಾಯುದಳ ಮತ್ತು ನೌಕಾದಳದಲ್ಲಿನ ಸೈನಿಕರು ಬಂಡಾಯ ಮಾಡಿದ್ದರಿಂದ ಆಂಗ್ಲರಿಗೆ ಈ ದೇಶವನ್ನು ಬಿಟ್ಟು ಹೋಗಬೇಕಾಯಿತು. 

ಇದು ಇತಿಹಾಸವಾಗಿದೆ; ಆದರೆ ಈಗ ನಾವು ಅದನ್ನು ಮರೆಯುತ್ತಿದ್ದೇವೆ. ನಾವು ಪುನಃ ದುರ್ಬಲರಾಗುತ್ತಿದ್ದೇವೆ. ಇಂದು ನಾವು ಪುನಃ ನಮ್ಮ ಸಶಕ್ತೀಕರಣವನ್ನು ನಿಲ್ಲಿಸಿದ್ದೇವೆ. ನಾವು ಪುನಃ ಪುನಃ ಶತ್ರುಗಳಿಂದ ಪೆಟ್ಟು ತಿನ್ನುತ್ತಿದ್ದೇವೆ. ನಮ್ಮ ಅಕ್ಕ-ತಂಗಿಯರನ್ನು ಅಪಹರಿಸಲಾಗುತ್ತಿದೆ. ದೇವತೆಗಳ ವಿಡಂಬನೆಯಾಗುತ್ತಿದೆ. ದೇವಸ್ಥಾನಗಳನ್ನು ಒಡೆಯಲಾಗುತ್ತಿದೆ. ದೇವತೆಗಳ ಮೆರವಣಿಗೆಗಳ ಮೇಲೆ ಕಲ್ಲುತೂರಾಟ ಮಾಡಲಾಗುತ್ತಿದೆ, ಆಕ್ರಮಗಳು ಆಗುತ್ತಿವೆ. ಸತ್ಯವನ್ನು ಅಡಗಿಸಲಾಗುತ್ತಿದೆ. ನಿಮಗೆ ಬಾಂಧವ್ಯದ ಡೋಸನ್ನು ಕುಡಿಸಲಾಗುತ್ತಿದೆ; ಏಕೆಂದರೆ ನೀವು ದುರ್ಬಲರಾಗಿದ್ದೀರಿ. ನೀವು ದುರ್ಬಲರಾಗಿದ್ದರಿಂದ ಮತ್ತೊಮ್ಮೆ ಸ್ವಾತಂತ್ರ್ಯವೀರ ಸಾವರಕರು ನೀಡಿದ ‘ಹಿಂದೂಗಳ ಸೈನಿಕೀಕರಣಗೊಳಿಸಿ !’ ಎಂಬ ಮಂತ್ರವನ್ನು ಆಚರಣೆಯಲ್ಲಿ ತರುವ ಸಮಯ ಬಂದಿದೆ. ಪೊಲೀಸರೂ ನಿಮ್ಮ ರಕ್ಷಣೆಯನ್ನು ಮಾಡಲಾರರು, ಸರಕಾರದವರು ರಾಜಕಾರಣ ಮಾಡುವಲ್ಲಿ ಮಗ್ನರಾಗಿದ್ದಾರೆ. ನಿಮ್ಮನ್ನು ಯಾರು ರಕ್ಷಿಸುವರು ?

ಡಾ. ನೀಲೇಶ ಲೋಣಕರ

 

 

೧. ರಾಜಕಾರಣದ ಹಿಂದೂಕರಣ

‘ಹಿಂದೂಹಿತದ ರಾಜಕಾರಣ ಮಾಡುವವರನ್ನೇ ಹಿಂದೂಗಳು ಬೆಂಬಲಿಸಬೇಕು ಅಥವಾ ರಾಜಕೀಯ ಪಕ್ಷಗಳು ಹಿಂದೂ ಹಿತದಕ್ಷವಾಗಿರಲು ಹಿಂದೂಗಳು ಅವರ ಮೇಲೆ ಒತ್ತಡವನ್ನು ಹೇರಬೇಕು’, ಎಂಬುದು ಸಾವರಕರರ ಅಭಿಪ್ರಾಯವಾಗಿತ್ತು. ಇದನ್ನೇ ರಾಜಕಾರಣದ ‘ಹಿಂದೂಕರಣ’ ಎಂದು ಹೇಳುತ್ತಾರೆ; ಆದರೆ ಜನರು ಸಾವರಕರರ ಮಾತನ್ನು ದುರ್ಲಕ್ಷಿಸಿದರು. ಅದರ ಪರಿಣಾಮವೆಂದು ಹಿಂದುಸ್ಥಾನದ ಆಡಳಿತ ಹಿಂದೂಯೇತರರ ಹಿತಕಾಯುವ ರಾಜಕೀಯ ಪಕ್ಷಗಳ ಕೈಯಲ್ಲಿ ಹೋಯಿತು ಮತ್ತು ಹಿಂದೂಗಳು ವಿಭಜನೆಯನ್ನು ಎದುರಿಸಬೇಕಾಯಿತು. ವಿಭಜನೆಯಾದ ಪಾಕಿಸ್ತಾನ ಇಸ್ಲಾಮೀ ದೇಶವಾಯಿತು ಆದರೆ ಉಳಿದ ದೇಶ ‘ಹಿಂದೂ ರಾಷ್ಟ್ರ’ವಾಗದೆ ‘ಧರ್ಮನಿರಪೇಕ್ಷ’ (ಜಾತ್ಯತೀತ) ದೇಶವಾಯಿತು. ಹಿಂದೂಗಳ ನ್ಯಾಯಯುತ ಹಕ್ಕನ್ನು ಕಸಿದುಕೊಳ್ಳಲಾಯಿತು; ಏಕೆಂದರೆ ನಾವು ರಾಜಕಾರಣವನ್ನು ಹಿಂದೂಕರಣ ಮಾಡಲಿಲ್ಲ. ಈಗ ನಾವು ಕ್ರಮೇಣ ಆ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ. ‘ರಾಜಕಾರಣದ ಹಿಂದೂಕರಣ’ ಈ ಮಂತ್ರದ ಆಚರಣೆಯನ್ನು ನಾವು ಮಾಡಲೇ ಬೇಕಾಗುವುದು, ಹಾಗೆ ಮಾಡಿದರೆ ಮಾತ್ರ ನಮ್ಮ ರಾಷ್ಟ್ರ ‘ಹಿಂದೂ ರಾಷ್ಟ್ರ’ ಆಗಬಹುದು.

೨. ಅದಕ್ಕೂ ಮೊದಲು ಹಿಂದೂಕರಣವನ್ನು ಮಾಡಿ !

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕಿಕರಣ ಮಾಡಿರಿ, ಈ ಮಂತ್ರವನ್ನು ಆಚರಿಸುವ ಮೊದಲು ‘ಹಿಂದೂಗಳ ಹಿಂದೂಕರಣ’ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಇಂದು ನಾವು ಕೇವಲ ಜನ್ಮದಿಂದ ಹಿಂದೂಗಳಾಗಿದ್ದೇವೆ. ನಮಗೆ ನಮ್ಮ ಧರ್ಮದ ಜ್ಞಾನವೂ ಇಲ್ಲ ಮತ್ತು ನಾವು ಸಾಧನೆಯನ್ನೂ ಮಾಡುವುದಿಲ್ಲ. ಪ್ರತಿಯೊಂದು ಜಾತಿಯ ಸಂಘಟನೆಗಳ ನಾಯಕರು ಹಿಂದೂ ಧರ್ಮಕ್ಕೆ ಹೆಸರಿಡುತ್ತಿದ್ದಾರೆ, ದೇವತೆಗಳ ತಮಾಷೆಯನ್ನು ಮಾಡುತ್ತಿದ್ದಾರೆ ಮತ್ತು ಮನೆಯಲ್ಲಿ ದೇವತೆಗಳ ಪೂಜೆಯನ್ನು ಮಾಡುವ ನಾವು ಅದನ್ನು ಸುಮ್ಮನಿದ್ದು ಕೇಳುತ್ತಿರುತ್ತೇವೆ ಮತ್ತು ಚಪ್ಪಾಳೆ ತಟ್ಟುತ್ತೇವೆ. ಇಂತಹ ಈ ಮೂರ್ಖತನ ನಮ್ಮಲ್ಲಿ ಎಲ್ಲಿಂದ ಬಂದಿತು ? ಅದಕ್ಕೆ ಕಾರಣ ಧರ್ಮಶಿಕ್ಷಣದ ಅಭಾವ ! ನಮಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಧರ್ಮದ ಬಗ್ಗೆ ಆಕ್ಷೇಪವನ್ನು ಎತ್ತುವವರಿಗೆ ಉತ್ತರಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಮತ್ತು ಧರ್ಮಾಚರಣೆ ಇಲ್ಲದ ಕಾರಣ ಅವರಿಗೆ ಉತ್ತರ ನೀಡುವ ಧೈರ್ಯ ನಮ್ಮಲ್ಲಿಲ್ಲ. ಧರ್ಮಮಾರ್ತಾಂಡರು ಜನರಿಗೆ ಧರ್ಮಶಿಕ್ಷಣವನ್ನು ನೀಡಲಿಲ್ಲ ಮತ್ತು ಧರ್ಮನಿರಪೇಕ್ಷ (ಜಾತ್ಯತೀತ) ಸಂವಿಧಾನ ಹಿಂದೂ ಧರ್ಮದ ಶಿಕ್ಷಣವನ್ನು ಸರಕಾರಿ ಮಟ್ಟದಲ್ಲಿ ನೀಡದಂತೆ ಬಂಧನಗಳನ್ನು ಹಾಕಿತು. ಈಗ ಎಲ್ಲ ಹಿಂದೂಗಳು ಧರ್ಮಶಿಕ್ಷಣ ಪಡೆದು ಸ್ವತಃ ಹಿಂದೂ ಸಮಾಜವನ್ನು ಹಿಂದೂಕರಣ ಮಾಡಬೇಕು.

೩. ಹಿಂದೂವಿರೋಧಿ ಕಲಮ್‌ ೨೮ ಮತ್ತು ೩೦ ರದ್ದುಪಡಿಸಿರಿ !

ಸಂವಿಧಾನದಲ್ಲಿ ಕಲಂ ೩೦ ಕ್ಕನುಸಾರ ಯಾವುದೇ ಮುಸಲ್ಮಾನ ಮತ್ತು ಕ್ರೈಸ್ತ ಸಂಸ್ಥೆಗಳು ಸರಕಾರದಿಂದ ಅನುದಾನ ಪಡೆದು ಧಾರ್ಮಿಕ ಶಿಕ್ಷಣವನ್ನು ನೀಡಬಹುದು. ಮುಸಲ್ಮಾನರು ಮತ್ತು ಕ್ರೈಸ್ತರು ಶಾಲೆಗಳನ್ನು ಸ್ಥಾಪಿಸಿದರೆ ಅದು ‘ಕಲಮ್‌ ೩೦’ರ ಅಂತರ್ಗತ ಬರುತ್ತದೆ ಮತ್ತು ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಶೇ. ೧೦೦ ರಷ್ಟು ಹಿಂದೂಗಳಿದ್ದರೂ, ಅವರು ಕುರಾನ್‌ ಮತ್ತು ಬೈಬಲ್‌ ಕಲಿಯಬಹುದು, ಆದರೆ ಹಿಂದೂಗಳು ಹಿಂದೂ ಶಾಲೆಯನ್ನು ಸ್ಥಾಪಿಸಿದರೆ ಅದು ‘ಕಲಮ್‌ ೨೮’ರ ಅಂತರ್ಗತ ಬರುತ್ತದೆ ಮತ್ತು ಅಲ್ಲಿ ಕಲಿಯುವ ಶೇ. ೧೦೦ ರಷ್ಟು ವಿದ್ಯಾರ್ಥಿಗಳು ಹಿಂದೂಗಳಾಗಿದ್ದರೂ, ಅವರಿಗೆ ವೇದ ಅಥವಾ ಭಗವದ್ಗೀತೆಯನ್ನು ಕಲಿಸುವ ಹಾಗಿಲ್ಲ. ಇಂತಹ ಭಯಾನಕ ಕಾನೂನಿನಿಂದ ಹಿಂದೂಗಳು ಧರ್ಮಶಿಕ್ಷಣದಿಂದ ವಂಚಿತರಾದರು. ಈಗಿನ ಕೇಂದ್ರ ಸರಕಾರ ಇವೆರಡೂ ಕಲಂಗಳನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣದ ಮಾರ್ಗವನ್ನು ತೆರೆಯಬೇಕು. ಇದರಿಂದ ನಮಗೆ ‘ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕಿಕರಣ’, ಈ ಮಂತ್ರ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಷ್ಟು ಮಹತ್ವದ್ದಾಗಿದೆ, ಎಂಬುದು ಗಮನಕ್ಕೆ ಬರುತ್ತದೆ.

– ಡಾ. ನೀಲೇಶ ನಿವೃತ್ತಿ ಲೋಣಕರ, ಅಧ್ಯಕ್ಷರು, ಸ್ವಾತಂತ್ರ್ಯವೀರ ಸಾವರಕರ ಯುವಾ ವಿಚಾರ ಮಂಚ (ಆಧಾರ : ಮಾಸಿಕ ‘ಸ್ವಯಂಭೂ’, ದೀಪಾವಳಿ ಸಂಚಿಕೆ ೨೦೨೨)