`ದೇವರ ಬಗ್ಗೆ ಹೇಗೆ ಭಾವವಿರಬೇಕು ?’, ಎಂಬುದನ್ನು ಕೃತಿಯಿಂದ ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಾಧಕರು ಶ್ರೀಕೃಷ್ಣನ ಚಿತ್ರವನ್ನು ತಲೆಕೆಳಗಾಗಿ ಇಟ್ಟಿರುವುದನ್ನು ನೋಡಿ ಅದು ಅಕ್ಷಮ್ಯ ತಪ್ಪಾಗಿದೆ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಹೇಳಿ ದುಪ್ಪಟ್ಟು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳುವುದು ಮತ್ತು ಅದಕ್ಕಾಗಿ ಬೆಂಬೆತ್ತುವುದು

‘ಹಿಂದೆ ಒಮ್ಮೆ ಒಂದು ವಾಹಿನಿಗಾಗಿ ಸತ್ಸಂಗದ ಚಿತ್ರೀಕರಣವನ್ನು ಮಾಡಲಿಕ್ಕಿತ್ತು. ಆ ಚಿತ್ರೀಕರಣದ ಹಿನ್ನೆಲೆಗಾಗಿ (ಬ್ಯಾಕ್‌ಗ್ರೌಂಡ್‌ಗಾಗಿ) ಶ್ರೀಕೃಷ್ಣನ ಚಿತ್ರವಿರುವ ‘ಫ್ಲೆಕ್ಸ್‌’ ಅನ್ನು ಮುದ್ರಿಸ ಲಾಗಿತ್ತು. ಸಾಧಕರು ಚಿತ್ರೀರಣವಾದ ನಂತರ ಆ ‘ಫ್ಲೆಕ್ಸ್‌’ಅನ್ನು ತೆಗೆದು ತಲೆಕೆಳಗೆ ಮಾಡಿಟ್ಟರು. ಆದ್ದರಿಂದ ಶ್ರೀಕೃಷ್ಣನ ಚಿತ್ರವೂ ತಲೆಕೆಳಗಾಗಿತ್ತು. ಒಂದು ಸೇವೆಗಾಗಿ ಪರಾತ್ಪರ ಗುರು ಡಾಕ್ಟರರು ಚಿತ್ರೀಕರಣದ ಕಕ್ಷೆಗೆ ಬಂದರು. ಆಗ ಅವರು ತಲೆಕೆಳಗಾಗಿ ಇಟ್ಟಿರುವ ಶ್ರೀಕೃಷ್ಣನ ಚಿತ್ರವನ್ನು ನೋಡಿದರು ಮತ್ತು ‘ಇದು ಎಲ್ಲ ಸಾಧಕರ ಅಕ್ಷಮ್ಯ ತಪ್ಪಾಗಿದೆ’, ಎಂದು ಹೇಳಿದರು. ಅನಂತರ ಅವರು ಸಾಧಕರಿಗೆ ತಕ್ಷಣವೇ ಆ ಚಿತ್ರವನ್ನು ಸರಿಯಾಗಿ ಇಡಲು ಹೇಳಿದರು. ಅದಕ್ಕಾಗಿ ಅವರು ಎಲ್ಲ ಸಾಧಕರಿಗೆ ಎರಡು ಪಟ್ಟು ಪ್ರಾಯಶ್ಚಿತ್ತವನ್ನೂ ತೆಗೆದುಕೊಳ್ಳಲು ಹೇಳಿದರು. ಪರಾತ್ಪರ ಗುರು ಡಾಕ್ಟರರು ‘ಸಾಧಕರು ತೆಗೆದುಕೊಂಡ ಪ್ರಾಯಶ್ಚಿತ್ತವು ಪೂರ್ಣ ಆಗಿದೆಯಲ್ಲ ?’, ಎಂಬುದರ ಬಗ್ಗೆಯೂ ಬೆಂಬೆತ್ತಿದರು. ಈ ಪ್ರಸಂಗದಿಂದ ಅವರು ‘ದೇವರ ಬಗ್ಗೆ ಭಾವ ಹೇಗಿರಬೇಕು ?’, ಎಂಬುದನ್ನು ಕಲಿಸಿದರು.

೨. ಗ್ರಂಥದ ಮುಖಪುಟದ ಮೇಲಿನ ದೇವತೆಯ ಚಿತ್ರದ ಮೇಲೆ ಸಾಧಕನು ವಸ್ತುಗಳನ್ನು ಇಡುವುದು ಮತ್ತು ಅದನ್ನು ನೋಡಿ ಪರಾತ್ಪರ ಗುರು ಡಾಕ್ಟರರು ಆ ತಪ್ಪನ್ನು ಕಾರ್ಯ ವರದಿಯಲ್ಲಿ (ಶಿಬಿರದಲ್ಲಿ) ಹೇಳಲು ಹೇಳುವುದು

ಒಮ್ಮೆ ಪರಾತ್ಪರ ಗುರು ಡಾಕ್ಟರರು ಧ್ವನಿಚಿತ್ರೀಕರಣದ ಕಕ್ಷೆಯಲ್ಲಿ ಒಂದು ವಿಷಯದ ಚಿತ್ರೀಕರಣವನ್ನು ನೋಡಲು ಬಂದಿದ್ದರು. ಆಗ ಒಂದು ಮೇಜಿನ ಮೇಲೆ ‘ಶಿವ’ ದೇವತೆಯ ಗ್ರಂಥವನ್ನು ಇಟ್ಟಿದ್ದರು. ಆ ಗ್ರಂಥದ ಮುಖಪುಟದ ಮೇಲೆ ಶಿವನ ಚಿತ್ರ ಇತ್ತು. ಆ ಸಾಧಕನು ಸೇವೆಯನ್ನು ಮಾಡುವಾಗ ಆ ಚಿತ್ರದ ಮೇಲೆ ಒಂದು ವಸ್ತುವನ್ನು ಇಟ್ಟಿದ್ದನು. ಅದನ್ನು ಪರಾತ್ಪರ ಗುರು ಡಾಕ್ಟರರು ನೋಡಿದರು ಮತ್ತು ಆ ಅಂಶವನ್ನು ಪ್ರತಿದಿನ ನಡೆಯುವ ಸೇವೆಯ ವರದಿಯಲ್ಲಿ ತಪ್ಪು ಹೇಳಲು ಹೇಳಿದರು. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಒಟ್ಟುಗೂಡಿ ಕಾರ್ಯನಿರತವಾಗಿರುತ್ತದೆ. ಈ ಸಿದ್ಧಾಂತಕ್ಕನುಸಾರ ‘ಯಾವ ಸ್ಥಳದಲ್ಲಿ ದೇವತೆಗಳ ಚಿತ್ರಗಳು ಇರುತ್ತವೆಯೋ, ಆ ಜಾಗದಲ್ಲಿ ಆ ದೇವತೆಯ ಶಕ್ತಿಯೂ ಕಾರ್ಯನಿರತವಾಗಿರುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ಭಾವನೆಯಿಂದ ಕೃತಿ ಮಾಡಬೇಕು’, ಎಂಬುದನ್ನು ಪರಾತ್ಪರ ಗುರು ಡಾಕ್ಟರರು ಗಮನಕ್ಕೆ ತಂದು ಕೊಟ್ಟರು.

೩.’ದೇವರ ಪೂಜೆಯನ್ನು ಮಾಡುವಾಗ ದೇವತೆಗಳ ಚಿತ್ರಗಳನ್ನು ಹೇಗೆ ಒರೆಸಬೇಕು ?’, ಎಂಬುದನ್ನು ತಮ್ಮ ಕೃತಿಯಿಂದ ಸಾಧಕಿಗೆ ಕಲಿಸುವುದು

ಈ ಹಿಂದೆ ಒಮ್ಮೆ ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಓರ್ವ ಸಾಧಕಿಯು ದೇವರ ಪೂಜೆಯನ್ನು ಮಾಡುತ್ತಿದ್ದಳು. ಅವಳು ದೇವರ ಪೂಜೆಯನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರು ಅವಳು ‘ದೇವತೆಗಳ ಚಿತ್ರಗಳನ್ನು ಹೇಗೆ ಒರೆಸುತ್ತಾಳೆ’, ಎಂದು ನೋಡುತ್ತಿದ್ದರು. ಒಮ್ಮೆ ಆ ಸಾಧಕಿಯು ದೇವತೆಗಳ ಚಿತ್ರಗಳನ್ನು ಯಾವುದೋ ಒಂದು ಚಿಕ್ಕ ಫಲಕವನ್ನು ಒರೆಸುವಂತೆ ಒಂದೇ ಸಮನೆ ಒರೆಸುತ್ತಿದ್ದಳು. ಅದನ್ನು ನೋಡಿ ಪರಾತ್ಪರ ಗುರು ಡಾಕ್ಟರರು ಅವಳಿಗೆ ಕರೆದರು ಮತ್ತು ‘ದೇವತೆಗಳ ಚಿತ್ರಗಳನ್ನು ಹೇಗೆ ಒರೆಸಬೇಕು ?’, ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದರು. ಮೊದಲು ಚಿತ್ರದಲ್ಲಿನ ದೇವತೆಯ ಮುಖ, ನಂತರ ದೇವತೆಯ ಮೈ, ಅನಂತರ ದೇವತೆಯ ಚಿತ್ರದ ಸುತ್ತಮುತ್ತಲಿನ ಭಾಗ ಮತ್ತು ಎಲ್ಲಕ್ಕಿಂತ ಕೊನೆಗೆ ಚಿತ್ರದ ಫ್ರೇಮ್‌ ಮತ್ತು ಅನಂತರ ಅದರ ಹಿಂದಿನ ಭಾಗ ಈ ಕ್ರಮವಾಗಿ ಅವರು ಆ ಚಿತ್ರವನ್ನು ಒರೆಸಿ ತೋರಿಸಿದರು. ಅಂದು ನನಗೆ ‘ದೇವರಪೂಜೆಯನ್ನು ಮಾಡುವಾಗ ನಾವು ಅದನ್ನು ಭಾವಪೂರ್ಣ ಹೇಗೆ ಮಾಡಬೇಕು ?’, ಎಂಬುದು ಪ್ರತ್ಯಕ್ಷವಾಗಿ ನೋಡಲು ಸಿಕ್ಕಿತು.’

೪.’ದೇವರೊಂದಿಗೆ ಹೇಗೆ ಸಾಮೀಪ್ಯವನ್ನು ಬೆಳೆಸಬೇಕು ?’ ಎಂಬುದರ ಬಗ್ಗೆ ಪರಾತ್ಪರ ಗುರು ಡಾಕ್ಟರರು ಹೇಳುವುದು

ಒಮ್ಮೆ ಓರ್ವ ಸಾಧಕಿಯು ಪರಾತ್ಪರ ಗುರು ಡಾಕ್ಟರರೊಂದಿಗೆ ಮಾತನಾಡುತ್ತಿದ್ದಳು. ಅವಳು ತನಗೆ ಬಂದ ಅನುಭೂತಿಯನ್ನು ಹೇಳುತ್ತಿದ್ದಳು. ಅವಳು ಅನುಭೂತಿಯನ್ನು ಹೇಳುವಾಗ ದೇವತೆಗಳಿಗೆ ‘ಬನ್ನಿರಿ-ಹೋಗಿರಿ’ ಎಂದು ಗೌರವದಿಂದ ಬಹುವಚನಗಳಿಂದ ಉಲ್ಲೇಖಿಸುತ್ತಿದ್ದಳು. ಅವಳ ಅನುಭೂತಿಯನ್ನು ಹೇಳಿದ ನಂತರ ಪರಾತ್ಪರ ಗುರು ಡಾಕ್ಟರರು ಅವಳಿಗೆ, ‘ನಾವು ನಮ್ಮ ತಾಯಿಯನ್ನು ಬನ್ನಿರಿ-ಹೋಗಿರಿ’ ಎಂದು ಕರೆಯುವುದಿಲ್ಲ. ಹಾಗಾದರೆ ದೇವತೆಗಳನ್ನು ಹೀಗೆ ಬಹುವಚನದಲ್ಲಿ ಏಕೆ ಕರೆಯಬೇಕು ?’ ಎಂದು ಹೇಳಿದರು. ಈ ಪ್ರಸಂಗದಿಂದ ‘ದೇವರೊಂದಿಗೆ ನಮ್ಮ ಸಾಮಿಪ್ಯ ಹೇಗಿರಬೇಕು ?’, ಎಂಬುದನ್ನು ಪರಾತ್ಪರ ಗುರು ಡಾಕ್ಟರರು ಕಲಿಸಿದರು.

ನಮ್ಮೆಲ್ಲ ಸಾಧಕರಿಗೆ ಪ್ರತಿಯೊಂದು ವಿಷಯದಲ್ಲಿ ಕೈಯ ಬೆರಳುಗಳನ್ನು ಹಿಡಿದು ಕಲಿಸುವ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಸೌ. ಶ್ರದ್ಧಾ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೬.೨೦೨೫)