ವಿಶೇಷ ಸಂಪಾದಕೀಯ… !
ಮಾರ್ಗಶಿರ ಶುಕ್ಲ ಪಂಚಮಿಯಂದು ರ್ಷ ೮ ಸಾವಿರದ ೮೦೦ ವರ್ಷಗಳ ನಂತರ ಬಂದಿರುವ ಸೀತಾ ಸ್ವಯಂವರದ ಮುಹೂರ್ತದಲ್ಲಿ ಭಾರತದ ರಾಷ್ಟ್ರನಿರ್ಮಾಣದ ದಿವ್ಯ ಅಂಶವನ್ನು ಪ್ರದಾನಿಸುವ ಅಯೋಧ್ಯಾ ನಗರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ದೇವಸ್ಥಾನದ ಸ್ಥಾಪನೆಯು ಪೂರ್ಣಗೊಂಡು ಅಂತಿಮವಾಗಿ ಕಲಶದ ಮೇಲೆ ಸುವರ್ಣ ಅಂಚಿರುವ ಚೈತನ್ಯಮಯ ಧರ್ಮಧ್ವಜದ ಸ್ಥಾಪನೆಯಾಯಿತು. ಈ ಅಲೌಕಿಕ ದೈವೀ ಧರ್ಮಧ್ವಜವು ಸನಾತನ ಧರ್ಮದ ಪುನರುತ್ಥಾನದ, ಪುನರ್ಜಾಗೃತಿಯ ಆರಂಭದ ಪ್ರತೀಕವಾಗಲಿದೆ. ಸನಾತನ ಧರ್ಮದಲ್ಲಿ ಧರ್ಮಧ್ವಜಕ್ಕೆ ಅಸಾಧಾರಣ ಮಹತ್ವವಿದೆ.

ಧ್ವಜವು ರಾಷ್ಟ್ರದ ಅಸ್ತಿತ್ವದ ಗೌರವ ಚಿಹ್ನೆಯಾಗಿದೆ. ‘ರಾಷ್ಟ್ರವು ರಾಮರಾಜ್ಯದ ಪ್ರತೀಕವಾಗಿರಬೇಕು’ ಎಂದು ನಮ್ಮ ಸನಾತನ ಪರಂಪರೆಯು ಹೇಳುತ್ತದೆ. ಶ್ರೀರಾಮನ ಸೈನ್ಯಧ್ವಜದಂತೆ ದೈವೀ ಕೋವಿದಾರ ವೃಕ್ಷ, ಸೂರ್ಯವಂಶಿ ರಘುವಂಶದ ಪ್ರತೀಕವಾಗಿರುವ ತೇಜೋಮಯ ಸೂರ್ಯ ಮತ್ತು ಬ್ರಹ್ಮಾಂಡದ ಬೀಜಾಕ್ಷರ, ಬೀಜಮಂತ್ರ, ಬೀಜಧ್ವನಿ ‘ಓಂ’ಚಿಹ್ನೆಯನ್ನು ಹೊಂದಿರುವ ಧರ್ಮಧ್ವಜವು ಶ್ರೀರಾಮ ದೇವಸ್ಥಾನದ ಕಲಶದ ಮೇಲೆ ಸ್ಥಾನಪನ್ನವಾಗುವುದು, ಇದು ಮುಂಬರುವ ಕಾಲದಲ್ಲಿ ಭಾರತದಲ್ಲಿ ರಾಷ್ಟ್ರೀಯತ್ವದ ಭಾವನೆಯ ಪರಿಪೋಷವಾಗುವ ನಾಂದಿಯಾಗಿದೆ. ಈಗ ರಾಮಲಲ್ಲಾ ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲದೇ, ಅವರು ದರಬಾರಿನಲ್ಲಿ ಸ್ಥಾನಪನ್ನರಾಗಿದ್ದಾರೆ. ಮುಂಬರುವ ಕಾಲದಲ್ಲಿ ಹಿಂದೂ ರಾಷ್ಟ್ರದ ಮಾಧ್ಯಮದಿಂದ ನಡೆಯುವ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಶ್ರೀರಾಮ ದೇವಸ್ಥಾನದ ಕಲಶದಲ್ಲಿರುವ ಈ ಧರ್ಮಧ್ವಜವು ಶ್ರೀರಾಮನ ಚೈತನ್ಯಮಯ ದೈವೀ ತತ್ತ್ವವನ್ನು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಾ ಇರಲಿದೆ ಮತ್ತು ರಾಮನ ಕೃಪಾಶೀರ್ವಾದದಿಂದ ಶೀಘ್ರದಲ್ಲಿಯೇ ರಾಮರಾಜ್ಯದ ಸ್ಥಾಪನೆಯೂ ಆಗಲಿದೆ, ಇದರಲ್ಲಿ ಸಂದೇಹವಿಲ್ಲ !
ದಿವ್ಯ, ಭವ್ಯ ಮತ್ತು ಹೊಸ ಅಯೋಧ್ಯಾನಗರಿಯಲ್ಲಿ ಸಂತ-ಮಹಂತರ ಉಪಸ್ಥಿತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರೊಂದಿಗೆ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರ ಶುಭಹಸ್ತದಿಂದ ೨೫ ನವೆಂಬರ್ ೨೦೨೫ ಈ ದಿನದಂದು ಆದ ಧರ್ಮಧ್ವಜದ ಸ್ಥಾಪನೆಯು ಶ್ರೀರಾಮನ ಭಕ್ತರು ಮತ್ತು ದೇಶಭಕ್ತರಿಗಾಗಿ ಪರಮ ಸೌಭಾಗ್ಯದ ದಿನವಾಗಿದೆ. ಈ ದಿನವು ನಿಜವಾದ ಅರ್ಥದಲ್ಲಿ ಐತಿಹಾಸಿಕ ಆಗಲು ಕಾರಣವೇನೆಂದರೆ, ಈ ಧರ್ಮಧ್ವಜದ ಸಾಕ್ಷಿಯಿಂದ, ಈ ಧರ್ಮಧ್ವಜದ ಚೈತನ್ಯದಿಂದ, ಈ ಧರ್ಮಧ್ವಜದ ಪರಮಪಾವನ ದರ್ಶನದಿಂದ ಮತ್ತು ಈ ಧರ್ಮಧ್ವಜದ ಅಲೌಕಿಕ ದೈವೀ ಅಸ್ತಿತ್ವದಿಂದ ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ರಾಷ್ಟ್ರದ ಪುನರುತ್ಥಾನ, ಪುನರುಜ್ಜೀವನ ಮತ್ತು ಪುನರ್‌ರಚನೆ ಮಾಡುವ ಪ್ರೇರಣೆ ದೊರೆಯಲಿದೆ. ರಾಮನಿಗೆ ಅಪೇಕ್ಷಿತವಾಗಿರುವ ಸನಾತನ ರಾಷ್ಟ್ರವು ನಿಜವಾದ ಅರ್ಥದಲ್ಲಿ ಆಗಲೇ ಅಸ್ತಿತ್ವದಲ್ಲಿ ಬರಲಿದೆ, ಯಾವಾಗ ಅದು ಮತ್ತೊಂದು ಬಾರಿ ರಾಮರಾಜ್ಯ ಆಗಲಿದೆ.
ಈ ರಾಷ್ಟ್ರವು ‘ರಾಮರಾಜ್ಯ’ ಅಂದರೆ ‘ಆದರ್ಶ ರಾಜ್ಯ’ವಾಗಲು ಆವಶ್ಯಕವಾಗಿರುವ ದೈವೀ ಶಕ್ತಿಯನ್ನು ಈ ಧರ್ಮಧ್ವಜವು ಅಖಂಡವಾಗಿ ನೇರವಾಗಿ ರಾಮನಿಂದ ಪೂರೈಸಲಿದೆ. ಹೇಗೆ ಶ್ರೀರಾಮ ದೇವಸ್ಥಾನದ ಸ್ಥಾಪನೆಯಾದ ನಂತರ ಕೋಟ್ಯಂತರ ದೇಶಭಕ್ತರ ಮನಸ್ಸಿನಲ್ಲಿ ಹಿಂದೂ ರಾಷ್ಟ್ರದ ಪುನರ್ಸ್ಥಾಪನೆಯ ನಿಶ್ಚಿತತೆಯಾಯಿತೋ, ಹಾಗೆಯೇ ಈಗ ಅದರದೇ ಕಲಶದ ಮೇಲಿನ ಧರ್ಮಧ್ವಜದ ಸ್ಥಾಪನೆಯಿಂದ ಹಿಂದೂ ರಾಷ್ಟ್ರದ ಕಾರ್ಯಕ್ಕೆ ಗತಿ ಸಿಗಲಿದೆ, ಇದರ ನಿಶ್ಚಿತತೆ ಆಗಿದೆ. ಈ ನಿಮಿತ್ತದಿಂದ ಪ್ರಧಾನಮಂತ್ರಿ ಮೋದಿ ಅವರು ಕೂಡ ನಿಖರತೆಯಿಂದ ಪರಕೀಯ ದಾಸ್ಯದ ಮನೋಭಾವನೆಯನ್ನು ಉರುಳಿಸಿ ಸ್ವಂತದ, ಸ್ವದೇಶದ, ಈ ಮಣ್ಣಿನಲ್ಲಿರುವ ಮೂಲ ತತ್ತ್ವಗಳ ಅರಿವನ್ನು ದೃಢಗೊಳಿಸುವ ಕೇವಲ ಆಹ್ವಾನವನ್ನೇ ಮಾಡಿಲ್ಲ, ಆದರೆ ಸಮಯಮಿತಿಯನ್ನೂ ನೀಡಿದರು, ಇದು ಒಳ್ಳೆಯದಾಯಿತು.

ಆಂತರ್ಯದಲ್ಲಿ ಶ್ರೀರಾಮನನ್ನು ಸ್ಥಾಪಿಸಿ !
ಪ್ರಧಾನಮಂತ್ರಿ ಮೋದಿ ಅವರು ಈ ಪಾವನ ಪ್ರಸಂಗಕ್ಕೆ ರಾಷ್ಟ್ರ ನಿರ್ಮಾಣದ ದಾರಿಯಿಂದ ಸಹಜವಾಗಿ ಜೋಡಿಸಿ ಭಾರತೀಯರಿಗೆ ಅತ್ಯಂತ ವ್ಯಾಪಕವಾದ ರಾಷ್ಟ್ರನಿರ್ಮಾಣದ ಧ್ಯೇಯವನ್ನು ನೀಡಿದರು. ರಾಮನ ಅಲೌಕಿಕ ಗುಣವರ್ಣನೆಯಿಂದ ಅವರು ರಾಮಭಕ್ತರಲ್ಲಿ ಭಾವಸುಮನಗಳನ್ನು ಪ್ರಜ್ವಲಿಸಿದರು; ಆದರೆ ಹಾಗೆಯೇ ಅವರಲ್ಲಿ ರಾಷ್ಟ್ರಭಕ್ತಿಯ ಹೊಸ ಬೀಜಗಳನ್ನು ಸಹ ಬಿತ್ತಿದರು. ಮುಂದಿನ ೧೦ ವರ್ಷಗಳಲ್ಲಿ ಪಾಶ್ಚಾತ್ಯರ ಮಾನಸಿಕ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸುವ ಮೋದಿ ಅವರು ನೀಡಿದ ಧ್ಯೇಯದ ಆಯಾಮಗಳು ರಾಷ್ಟ್ರದ ಶೈಕ್ಷಣಿಕ ಪಠ್ಯಕ್ರಮದ ಬದಲಾವಣೆಯಿಂದ ಪ್ರಾರಂಭವಾಗುತ್ತವೆ ಮತ್ತು ನಾಗರಿಕರ ದಿನನಿತ್ಯದ ಆಹಾರ-ವಿಹಾರದಿಂದ ಹಿಡಿದು ನೇರವಾಗಿ ಧರ್ಮಾಚರಣೆಯವರೆಗೆ ಹೋಗಿ ತಲುಪುತ್ತವೆ. ಮೋದಿ ಅವರು ಅಂತರಂಗದಲ್ಲಿ ಶ್ರೀರಾಮನ ತತ್ತ್ವವನ್ನು ಜಾಗೃತಗೊಳಿಸುವ ಆಹ್ವಾನವನ್ನು ನೀಡಿದರು, ಅದು ಭವಿಷ್ಯದ ಸ್ವಯಂಪೂರ್ಣ ಭಾರತದ ಅಡಿಪಾಯವಾಗಿದೆ. ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು, ಜಗತ್ತು ಇಂದು ಭಾರತದತ್ತ ‘ಮಾರ್ಗದರ್ಶನ ಮಾಡುವ ದೇಶ’ ಎಂದು ಆಶಾಭಾವನೆಯಿಂದ ನೋಡುತ್ತಿದೆ. ಈ ಜವಾಬ್ದಾರಿಯನ್ನು ಭಾರತವು ತನ್ನಲ್ಲಿಯೇ ನಿರ್ಮಿಸಬೇಕಾಗಿದ್ದರೆ ಮರ್ಯಾದಾಪುರುಷೋತ್ತಮ ಶ್ರೀರಾಮ ತತ್ತ್ವದ ಧರ್ಮಧ್ವಜವನ್ನು ಪ್ರತಿಯೊಬ್ಬ ಭಾರತೀಯನು ತನ್ನ ಮನಮಂದಿರದಲ್ಲಿ ಸ್ಥಾಪಿಸಬೇಕು. ‘ಶ್ರೀರಾಮನ ದರಬಾರು’ ಈಗ ಅಸ್ತಿತ್ವದಲ್ಲಿ ಬಂತು, ಅಂದರೆ ಅವರ ರಾಜ್ಯವು ಪ್ರಾರಂಭವಾಗಿದೆ. ಆದ್ದರಿಂದ ಈಗ ನಿಜವಾದ ಅರ್ಥದಲ್ಲಿ ಭಾರತದಲ್ಲಿ ರಾಮರಾಜ್ಯವನ್ನು ಅವತರಿಸುವ ಜವಾಬ್ದಾರಿಯು ಆಡಳಿತದ ಜೊತೆಗೆ ಪ್ರಜೆಗಳ ಮೇಲಿದೆ. ಪ್ರಧಾನಮಂತ್ರಿ ಅವರು ವಿಶೇಷವಾಗಿ ಹೊಸದಾಗಿ ನಿರ್ಮಿಸಲಾದ ಸಪ್ತರ್ಷಿ ಸಹಿತ ರಾಮ ಪರಿವಾರದಲ್ಲಿನ ಇತರ ದೇವಸ್ಥಾನಗಳಿಗೆ ಹೋಗುವ ಆಹ್ವಾನವನ್ನು ನೀಡಿದರು. ಮಾತಾ ಶಬರಿ, ನಿಷಾದರಾಜ, ಪರಮಭಕ್ತ ಹನುಮಾನ, ಶೇಷಾವತಾರ ಲಕ್ಷ್ಮಣ ಇತ್ಯಾದಿ ಎಲ್ಲರೂ ಅತ್ಯುಚ್ಚ ಗುಣಗಳ ಆದರ್ಶವಾಗಿದ್ದಾರೆ, ಯಾರಿಂದ ರಾಮರಾಜ್ಯವು ಅವತರಿಸಿತೋ. ಮುಂಬರುವ ಸಮಯದಲ್ಲಿ ಭಾರತದಲ್ಲಿ ರಾಮರಾಜ್ಯವು ಬರಲು ಈ ಗುಣಗಳನ್ನು ಹೊಂದಿರುವ ವ್ಯಕ್ತಿಗಳ ಸಾಮೂಹಿಕ ಶಕ್ತಿಯ ಚೇತನವು ಆವಶ್ಯಕವಾಗಿದೆ ಎಂದು ಅವರು ಉಲ್ಲೇಖಿಸಿದರು. ‘ಮುಂದಿನ ೧ ಸಾವಿರ ವರ್ಷಗಳ ವಿಚಾರವನ್ನು ನಾವು ಮಾಡಬೇಕಾಗಿದೆ’, ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅದಕ್ಕಾಗಿ ಎಷ್ಟು ಸಂಕಟಗಳು ಬಂದರೂ, ಅದರಿಂದ ವಿಚಲಿತರಾಗದೇ ಕಾರ್ಯನಿರತವಾಗಿರಬೇಕು ಎಂಬ ಆಹ್ವಾನವನ್ನು ಸರಸಂಘಚಾಲಕರು ಮಾಡಿದರು. ಆಧ್ಯಾತ್ಮಿಕವಾಗಿ ಕೂಡ ಮುಂದಿನ ೧ ಸಾವಿರ ವರ್ಷಗಳು ಬರುವ ಹಿಂದೂ ರಾಷ್ಟ್ರವು ನೆಲೆನಿಲ್ಲಲಿದೆ. ಅಂತಹ ಆದರ್ಶ ರಾಜ್ಯವು ನಡೆಯುವ ಆದರ್ಶ ವ್ಯವಸ್ಥೆಯನ್ನು ನಿರ್ಮಿಸಲು ಹಿಂದೂಗಳು ಈಗ ಆರಂಭಿಸಬೇಕು. ಅದನ್ನು ತನ್ನಿಂದಲೇ ಮೊದಲು ಮಾಡಬೇಕು. ಅದಕ್ಕಾಗಿ ರಾಮಭಕ್ತಿಯ ಅಡಿಪಾಯವು ಭದ್ರವಾಗಿರಬೇಕು, ಆಗಲೇ ಶ್ರೀರಾಮನ ಕೃಪೆಯಿಂದ ಅವರಿಗೆ ಅಪೇಕ್ಷಿತವಾದ ರಾಮರಾಜ್ಯದ ಕಡೆಗೆ ನಮ್ಮ ಹೆಜ್ಜೆ ಖಚಿತವಾಗಲಿದೆ.

ರಾಮ ಮಂದಿರದಿಂದ ರಾಷ್ಟ್ರ ಮಂದಿರದ ಕಡೆಗೆ !
ಅಶ್ವಮೇಧ ಯಜ್ಞ ಮಾಡಿ ಪೂರ್ಣ ಭೂಮಿಯನ್ನು ವಶಪಡಿಸಿಕೊಂಡ ಶ್ರೀರಾಮನು ೧೦ ಸಾವಿರ ವರ್ಷಗಳು ರಾಜ್ಯ ಮಾಡಿದನು. ಪೂರ್ಣ ವಿಶ್ವವು ರಾಮರಾಜ್ಯಕ್ಕೆ ಮಾನ್ಯತೆಯನ್ನು ನೀಡಿತ್ತು. ಈಗಿನ ಭಾರತಕ್ಕೆ ಕೇವಲ ಆರ್ಥಿಕ ಮಾತ್ರವಲ್ಲ, ಆಧ್ಯಾತ್ಮಿಕ ವಿಕಾಸವನ್ನು ಸಾಧಿಸಿದರೆ ಮಾತ್ರ ಮುಂದಿನ ಸಾವಿರಾರು ವರ್ಷಗಳ ಅಡಿಪಾಯವನ್ನು ರಚಿಸಲು ಸಾಧ್ಯವಾಗಲಿದೆ. ನೀತಿವಂತ ಪ್ರಜೆ ಮತ್ತು ಧರ್ಮಾಚರಣೆಯ ರಾಜ, ಇವು ರಾಮರಾಜ್ಯದ ಮೂಲಭೂತ ಆಧಾರಸ್ತಂಭಗಳಾಗಿದ್ದವು. ಮೂರನೇ ಶತಮಾನದಲ್ಲಿ ವಿಕ್ರಮಾದಿತ್ಯನು ಮತ್ತು ೬ ನೇ ಶತಮಾನದಲ್ಲಿ ಸ್ಕಂಧಗುಪ್ತ ರಾಜನು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನವನ್ನು ಕಟ್ಟಿಸಿದ್ದನು, ೧೨ ನೇ ಶತಮಾನದಲ್ಲಿ ಮೇಘಸೇತು ರಾಜನು ಇಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದನು, ಅದನ್ನು ಬಾಬರನು ಧ್ವಂಸ ಮಾಡಿದನು. ಕಳೆದ ೫೦೦ ವರ್ಷಗಳಲ್ಲಿ ಕೋಟ್ಯಂತರ ರಾಮಭಕ್ತರು, ದೇಶಭಕ್ತರು ಮತ್ತು ಸಂತರು ಶ್ರೀರಾಮ ದೇವಸ್ಥಾನದ ಸ್ಥಾಪನೆಗಾಗಿ ಮಾಡಿದ ಅಸೀಮ ತ್ಯಾಗದಿಂದ ಇಂದಿನ ಶ್ರೀರಾಮ ದೇವಸ್ಥಾನವು ನಿಂತಿದೆ. ಶ್ರೀರಾಮ ದೇವಸ್ಥಾನಕ್ಕಾಗಿ ಸಂಘರ್ಷ ಮತ್ತು ಪ್ರಾಣಗಳ ಬಲಿದಾನ ಮಾಡಿದ ನೂರಾರು ನಾಗರಿಕರ ಆತ್ಮಗಳಿಗೆ ಈಗ ಶಾಂತಿ ದೊರೆತಿರಬಹುದು, ಇದರಲ್ಲಿ ಸಂದೇಹವೇ ಇಲ್ಲ; ಆದರೆ ಹೇಗೆ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಸಮಾಧಾನವನ್ನು ಮಾತ್ರ ಮಾಡಿಕೊಂಡು ಇರಲು ಸಾಧ್ಯವಿರಲಿಲ್ಲವೋ, ಬದಲಿಗೆ ದೇಶವನ್ನು ರೂಪಿಸುವ ಕಾರ್ಯವು ಮಹತ್ವದ್ದಾಗಿತ್ತು, ಹಾಗೆಯೇ ಕೇವಲ ದೇವತೆಯ ತತ್ತ್ವವು ಕಾರ್ಯನಿರತವಾಯಿತು, ಆದ್ದರಿಂದ ದೇವರ ಮತ್ತು ದೇಶ ಭಕ್ತರು ಸಮಾಧಾನವನ್ನು ಮಾತ್ರ ಮಾಡಿಕೊಂಡು ಇರಲು ಸಾಧ್ಯವಿಲ್ಲ, ಬದಲಿಗೆ ಈಗ ನಿಜವಾದ ಅರ್ಥದಲ್ಲಿ ಅವರು ಆದರ್ಶ ರಾಷ್ಟ್ರ ರಚನೆಗಾಗಿ ಕಾಯಾ ಮತ್ತು ಮನಸ್ಸುಗಳನ್ನು ಅರ್ಪಿಸಬೇಕಾಗಿದೆ.

ದೇಶದ ಪ್ರತಿ ಮೂಲೆಯಲ್ಲಿ ‘ಆದರ್ಶ ವ್ಯವಸ್ಥೆ’ಯನ್ನು ನಿರ್ಮಿಸಲು ಅವರಿಗೆ ಕಾರ್ಯನಿರತವಾಗಿರಬೇಕು. ರಾಮರಾಜ್ಯದಲ್ಲಿ ಎಲ್ಲರಿಗೂ ಸಮಾನ ನ್ಯಾಯವಿತ್ತು, ಮಹಿಳೆಯರು ಸುರಕ್ಷಿತರಾಗಿದ್ದರು ಮತ್ತು ಕಠೋರ ಆಜ್ಞಾಪಾಲನೆ ಇತ್ತು. ಇದನ್ನು ಆಡಳಿತವು ವಾಸ್ತವದಲ್ಲಿ ಇಳಿಸಲು ಕಠೋರ ಪರಿಶ್ರಮವನ್ನು ಮಾಡಬೇಕಾಗಿದೆ. ರಾಜನಿಗೆ ಪ್ರಜೆಗಳ ಬಗ್ಗೆ ಮತ್ತು ಪ್ರಜೆಗಳಿಗೆ ರಾಜನ ಬಗ್ಗೆ ಭಯ ಮತ್ತು ಪ್ರೀತಿ ಎರಡೂ ಇತ್ತು. ಅಂತಹ ಸ್ಥಿತಿಯನ್ನು ತರಲು ಆಡಳಿತ ಮತ್ತು ಜನತೆ ಇಬ್ಬರೂ ಶ್ರಮಿಸಬೇಕಾಗಿದೆ.
ಸುರಕ್ಷೆಯು ರಾಷ್ಟ್ರದ ಪ್ರಥಮ ಕರ್ತವ್ಯವಾಗಿರುತ್ತದೆ, ಆ ದಿಕ್ಕಿನಲ್ಲಿ ಭಾರತದ ಪ್ರಯತ್ನಗಳು ಪ್ರಾರಂಭವಾಗಿವೆ; ಆದರೆ ಇನ್ನೂ ಕೂಡ ಎಲ್ಲಾ ಪ್ರಕಾರದ ಆಂತರಿಕ ಜಿಹಾದರೂಪಿ ರಾವಣರನ್ನು ಮುಗಿಸಲು ಆಡಳಿತದ ‘ಶೂನ್ಯ ಸಹನಶಕ್ತಿ’ಯ ನಿಲುವನ್ನು ತೀವ್ರಗೊಳಿಸಿಲ್ಲ. ಹತ್ಯೆ, ಅತ್ಯಾಚಾರ, ಅಪರಾಧಗಳು ಮತ್ತು ಭ್ರಷ್ಟಾಚಾರಗಳು ತುತ್ತ ತುದಿಯನ್ನು ತಲುಪಿವೆ.
ಈ ಅಪರಾಧಿಗಳಿಗೆ ಅಖಂಡ ರಾಮನಾಮ ಜಪಿಸುವ ಶಿಕ್ಷೆಯನ್ನು ನೀಡಿದರೆ, ಆಗಲೇ ಅವರಲ್ಲಿ ಅಂತರ್ಬಾಹ್ಯ ಬದಲಾವಣೆ ಆಗಲು ಸಾಧ್ಯವಿದೆ. ‘ಈಗ ಶ್ರೀರಾಮ ದೇವಸ್ಥಾನದ ಮೇಲೆ ಹಾರಿದ ಧರ್ಮಧ್ವಜವೇ ಈ ಪ್ರೇರಣೆಯನ್ನು ಆಡಳಿತ, ಆಡಳಿತಾಧಿಕಾರಿಗಳು ಮತ್ತು ಜನತೆಗೆ ನೀಡಲಿದೆ’, ಎಂಬ ಆಶೆ ಯನ್ನು ಈ ನಿಮಿತ್ತದಿಂದ ಮಾಡುವುದರಲ್ಲಿ ತಪ್ಪಿಲ್ಲ. ‘ಮೋದಿ ಅವರಿಗೆ ೨೦೪೭ ರಲ್ಲಿ ಅಪೇಕ್ಷಿತವಾಗಿರುವ ‘ವಿಕಸಿತ ಭಾರತವು’ ‘ವಿಶ್ವಗುರು ಭಾರತ’ ಆಗಿರಬೇಕು’, ಎಂದು ಈ ಧರ್ಮಧ್ವಜದಿಂದ ಬರುವ ವಾಯು ಲಹರಿಗಳು ಹೇಳುತ್ತಿವೆ. ‘ಮುಂಬರುವ ಕೆಲವು ವರ್ಷಗಳಲ್ಲಿ ‘ಆರ್ಥಿಕ ಮಹಾಧಿಕಾರ’ ಆಗುವ ಭಾರತವು ‘ಆಧ್ಯಾತ್ಮಿಕ ಮಹಾಧಿಕಾರ’ ಎಂದು ಪರಿಗಣಿಸಲ್ಪಡಬೇಕು’, ಎಂದು ಈ ವೈಭವದಿಂದ ಹಾರುವ ಧರ್ಮಧ್ವಜವು ಹೇಳುತ್ತಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು