ಇಂತಹವರಿಗೆ ಗಲ್ಲು ಶಿಕ್ಷೆಯೇ ಆಗಬೇಕು !

ಫಲಕ ಪ್ರಸಿದ್ಧಿಗಾಗಿ

ಬಾಗಪತ್‌ (ಉತ್ತರಪ್ರದೇಶ)ದ ಢಿಕೋಲಿ ಗ್ರಾಮದ ಪ್ರಾಥಮಿಕ ಶಾಲೆ

೧. ಮತಾಂಧ ಮುಸಲ್ಮಾನರ ಹಿಂದೂದ್ವೇಷ ತಿಳಿಯಿರಿ !

ಬಾಗಪತ್‌ (ಉತ್ತರಪ್ರದೇಶ)ದ ಢಿಕೋಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮೂವರು ಮುಸಲ್ಮಾನ ಮಕ್ಕಳು ಇಬ್ಬರು ಹಿಂದೂ ಮಕ್ಕಳ ನೀರಿನ ಬಾಟಲಿಗೆ ಮೂತ್ರ ಬೆರೆಸಿದ್ದಾರೆ. ಮುಖ್ಯೋಪಾಧ್ಯಾಯರ ದೂರಿನ ಮೇರೆಗೆ ಸಂಬಂಧಪಟ್ಟ ಮುಸಲ್ಮಾನ ಮಕ್ಕಳ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

೨. ಹಿಂದೂ ರಾಷ್ಟ್ರದ ಅವಶ್ಯಕತೆ ತಿಳಿಯಿರಿ !

ಶಿವಮೊಗ್ಗದಲ್ಲಿ ನಾಲ್ವರು ಮುಸಲ್ಮಾನರು ಹರೀಶ ಎಂಬ ಹಿಂದೂ ಯುವಕನನ್ನು ಧರ್ಮ ಕೇಳಿ ಥಳಿಸಿದ್ದಾರೆ. ಹರೀಶನು ರಾತ್ರಿ ೧೧.೧೫ ರ ಸುಮಾರಿಗೆ ನಗರದ ಒಂದು ವೃತ್ತದ ಮೂಲಕ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

೩. ‘ತಬ್ಲಿಘಿ ಜಮಾತ್’ ಮೇಲೆ ನಿಷೇಧ ಹೇರಿ !

ದೆಹಲಿ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಡಾಕ್ಟರ್‌ ಶಾಹೀನ್‌ ಇವಳಿಗೆ ‘ತಬ್ಲಿಘಿ ಜಮಾತ್‌’ನಿಂದ ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಕೆಯಾಗುತ್ತಿತ್ತು. ಇದೇ ಹಣದಿಂದ ಬಾಂಬ್‌ ತಯಾರಿಸಲು ಸ್ಫೋಟಕಗಳನ್ನು ಖರೀದಿಸಲಾಗಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ.

೪. ಕಾಂಗ್ರೆಸ್‌ನ ಹಿಂದೂ ವಿರೋಧಿ ಕೃತಿಗಳನ್ನು ತಿಳಿಯಿರಿ !

ಹಿಂದಿನ ಭಾಜಪ ಸರಕಾರ ಜಾರಿಗೆ ತಂದಿದ್ದ ‘ಗೋಹತ್ಯೆ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ದೆ’ಗಳನ್ನು ಮುಂಬರುವ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸೂಕ್ತ ಕ್ರಮಗಳ ಮೂಲಕ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

೫. ಮಮತಾ ಬ್ಯಾನರ್ಜಿ ಅವರ ರಾಷ್ಟ್ರಘಾತಕ ಬೇಡಿಕೆ ತಿಳಿಯಿರಿ !

ಮತದಾರರ ಪಟ್ಟಿಯ ವಿಶೇಷ ಆಳವಾದ ಪುನರಾವಲೋಕನವು ಬಂಗಾಲಕ್ಕೆ ಅಪಾಯಕಾರಿಯಾಗಿದ್ದು, ಅದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ ಕುಮಾರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

೬. ಇಂತಹವರಿಗೆ ಗಲ್ಲು ಶಿಕ್ಷೆಯೇ ಆಗಬೇಕು !

ಮದ್ಯದ ಅಂಗಡಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಮಧ್ಯರಾತ್ರಿ ಜೆಸಿಬಿ ತಂದ ಸಮಾಜಘಾತುಕರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ.

೭. ಇಂತಹ ಮತಾಂಧರನ್ನು ವಜಾ ಮಾಡುವುದರ ಜೊತೆಗೆ ದೂರು ದಾಖಲಿಸಿ ಜೈಲಿಗೆ ಕಳುಹಿಸಬೇಕು !

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಮಿಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಮದರಸಾ ಮಕಂದಾರ ಎಂಬ ಮುಸಲ್ಮಾನ ಶಿಕ್ಷಕನನ್ನು ನೌಕರಿಯಿಂದ ವಜಾ ಮಾಡಲಾಗಿದೆ. ನವೆಂಬರ್‌ ೧೭ ರಂದು ಈ ಘಟನೆಯಾಗಿತ್ತು.