ತಾಜ ಮಹಲನ ಕಥೆ, ಭಾರತ ಮಾತೆಯ ವ್ಯಥೆ !

ಅಕ್ಟೋಬರ್‌ ೩೧ ರಂದು ‘ದಿ ತಾಜ್‌ ಸ್ಟೋರಿ’ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ‘ಮೊಘಲ ಬಾದಷಾಹ ಶಹಜಹಾನ ತನ್ನ ಪ್ರಾಣಪ್ರಿಯ ಬೇಗಂ ಮುಮ್ತಾಜಳ ನೆನಪಿಗಾಗಿ ತಾಜ ಮಹಲಾನ್ನು ನಿರ್ಮಿಸಿದನು, ತಾಜ ಮಹಲ ಅವನ ಪ್ರೀತಿಯ ಸಂಕೇತವಾಗಿದೆ’ ಎಂಬ ಗಾಳಿಸುದ್ದಿಯನ್ನು ಹಲವು ವರ್ಷಗಳಿಂದ ಹಬ್ಬಿಸಲಾಗಿದೆ. ಶಹಜಹಾನನಂತಹ ಸ್ತ್ರೀಲೋಲುಪನು ತಾಜ ಮಹಲ ಅನ್ನು ಕಟ್ಟಿಸಿದನು ಎಂಬ ಮಾತು ಹಾಸ್ಯಾಸ್ಪದವಾಗಿದೆ. ಯಾರ ಶಬ್ದಕೋಶದಲ್ಲಿ ವಾಸ್ತುಶಿಲ್ಪ, ಖಗೋಳಶಾಸ್ತ್ರ, ಯೋಗಶಾಸ್ತ್ರ, ವೈದ್ಯಕೀಯ ಶಾಸ್ತ್ರದಂತಹ ಪದಗಳೂ ಸಿಗುವುದಿಲ್ಲವೋ, ಅವರನ್ನು ನಿರ್ಮಾಣಕಾರರೆಂದು ಗೌರವಿಸಲಾಗಿದೆ. ಅವರು ಭಾರತಕ್ಕೆ ಬಂದಿದ್ದು ಕಟ್ಟಡಗಳನ್ನು ನಿರ್ಮಿಸುವುದಕ್ಕಲ್ಲ, ಬದಲಿಗೆ ವಿಧ್ವಂಸ ಮಾಡಲು.

೧. ಶಹಜಹಾನನ ದರ್ಬಾರಿನ ದಾಖಲೆಯಲ್ಲಿ ‘ತಾಜ ಮಹಲ’ ಉಲ್ಲೇಖವೇ ಇಲ್ಲ !

ಶಹಜಹಾನನ ದರ್ಬಾರಿನ ‘ಬಾದಷಾಹಾನಾಮಾ’ ಎಂಬ ದಾಖಲೆಯಲ್ಲಿ ‘ತಾಜ ಮಹಲ’ ಎಂಬ ಹೆಸರಿನ ಸಾಮಾನ್ಯ ಉಲ್ಲೇಖವೂ ಇಲ್ಲ. ಔರಂಗಜೇಬ ಅಥವಾ ಸಮಕಾಲೀನ ಮೊಘಲರ ಯಾವುದೇ ದಾಖಲೆಗಳಲ್ಲಿ ‘ತಾಜ ಮಹಲ’ ಬಗ್ಗೆ ಅಥವಾ ‘ತಾಜ ಮಹಲ’ನ್ನು ಶಹಜಹಾನ ಕಟ್ಟಿಸಿದನು ಎಂಬ ಉಲ್ಲೇಖವಿಲ್ಲ.

ಶ್ರೀ ಪ್ರೀತಮ್ ನಾಚಂಕರ್

೨. ಸಿಂಬುಳಬುರುಕ ಮಗುವೂ ಇದನ್ನು ನಂಬುವುದಿಲ್ಲ

ಕ್ರಿ.ಶ. ೧೬೩೧ ರಲ್ಲಿ ಮುಮ್ತಾಜ ಮರಣ ಹೊಂದಿದಳು. ಅವಳ ದೇಹವನ್ನು ಬುರ್ಹಾನಪುರದಲ್ಲಿ ಸಮಾಧಿ ಮಾಡಲಾಯಿತು. ನಂತರ ಒಂದು ವರ್ಷದ ಬಳಿಕ ಆಕೆಯ ಗೋರಿಯನ್ನು ಅಗೆದು ಅವಳ ಶವವನ್ನು ಆಗ್ರಾಕ್ಕೆ ಕೊಂಡೊಯ್ಯಲಾಯಿತು. ಆಗ್ರಾದಲ್ಲಿ ಮುಮ್ತಾಜಳ ಶವವನ್ನು ಮತ್ತೆ ಹೂಳಿದ ಸ್ಥಳದ ಕುರಿತು ‘ಬಾದಷಾಹನಾಮಾ’ದ ದಾಖಲೆಯಲ್ಲಿ, ‘ಶವವನ್ನು ಹೂಳಲು ಆರಿಸಿದ ಜಾಗದಲ್ಲಿ ಒಂದು ಸುಂದರವಾದ, ರಮಣೀಯವಾದ ಉದ್ಯಾನವಿತ್ತು. ಅದರಲ್ಲಿ ಗುಮ್ಮಟಾಕಾರದ, ಅಪ್ರತಿಮ ಸುಂದರವಾದ ‘ಮಾನಸಿಂಗ್‌ ಮಹಲ’ ಎಂಬ ಕಟ್ಟಡವಿತ್ತು. ಮರುವರ್ಷ ಅದರಲ್ಲಿ ಮುಮ್ತಾಜಳನ್ನು ಹೂಳಲಾಯಿತು. ಆ ಉದ್ಯಾನದ ಬದಲಿಗೆ ಜೈಪುರದ ರಾಜ ಜೈಸಿಂಗ್‌ರಿಗೆ ಸರಕಾರಿ ಖಾಲಿ ಭೂಮಿಯನ್ನು ನೀಡಲಾಯಿತು’ ಎಂಬ ಸ್ಪಷ್ಟ ಉಲ್ಲೇಖವಿದೆ. ಇದರಿಂದ ‘ತಾಜ ಮಹಲ’ ಎಂದರೆ ಮಾನಸಿಂಗ ಮಹಲ ಎಂದೇ ಸ್ಪಷ್ಟ ಅರ್ಥವಾಗುತ್ತದೆ.

೩. ‘ಮಾನಸಿಂಹ ಮಹಲ’ಅನ್ನು ಶಹಜಹಾನ ಹೆಸರಿಗೆ ಸೇರಿಸಲು ಬರೆದ ಬರಹ !

ಟ್ಯಾವರ್ನಿಯೆ ಎಂಬ ಫ್ರೆಂಚ್‌ ವಜ್ರಗಳ ವ್ಯಾಪಾರಿಯ ಪ್ರವಾಸ ಕಥನದಲ್ಲಿ ತಾಜ ಮಹಲ ಬಗ್ಗೆ ಸುಳ್ಳು ಇತಿಹಾಸ ಕಂಡುಬರುತ್ತದೆ. ಬೇಗಂ ಮರಣ ಹೊಂದಿದ ೧೦ ವರ್ಷಗಳ ನಂತರ ಅವಳ ಗೋರಿಯ ಮೇಲೆ ಅರಮನೆಯನ್ನು ಕಟ್ಟಲು ಪ್ರಾರಂಭಿಸುವುದು ಮೂಲತಃ ತರ್ಕಬದ್ಧವಲ್ಲ. ಆದ್ದರಿಂದ, ಈ ಬರಹವನ್ನು ‘ಮಾನಸಿಂಗ ಮಹಲ’ಅನ್ನು ಶಹಜಹಾನನ ಹೆಸರಿನಲ್ಲಿ ಸೇರಿಸಲಿಕ್ಕಾಗಿಯೇ ಮಾಡಲಾಗಿದೆ ಎಂದು ಕಂಡುಬರುತ್ತದೆ.

೪. ಅಂತಃಪುರದಲ್ಲಿ (ಜನಾನಖಾನೆಯಲ್ಲಿ) ೫ ಸಾವಿರ ಮಹಿಳೆಯರು ಮತ್ತು ಮುಮ್ತಾಜಗಾಗಿ ‘ತಾಜ ಮಹಲ’ಅಂತೆ !

ಶಹಜಹಾನನ ಅಂತಃಪುರದಲ್ಲಿ ೫ ಸಾವಿರ ಸ್ತ್ರೀಯರನ್ನು ಇಟ್ಟುಕೊಂಡಿದ್ದ, ತನ್ನ ದೊಡ್ಡ ಮಗಳು ಜಹಾನಾರಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಂಗೀಲಾ ಮತ್ತು ವ್ಯಭಿಚಾರಿ ಶಹಜಹಾನ ಮುಮ್ತಾಜಗಾಗಿ ‘ತಾಜ ಮಹಲ’ ಕಟ್ಟಿಸುತ್ತಾನೆ ಎಂಬುದನ್ನು ಬೆರಳು ಚೀಪುವ ಮಗು ಸಹ ನಂಬುವುದಿಲ್ಲ.

೫. ಸುಳ್ಳು ಇತಿಹಾಸದ ಸರಣಿ !

‘ತಾಜ ಮಹಲ’ನ ನಿರ್ಮಾಣ ಕ್ರಿ.ಶ. ೧೬೪೧ ರಲ್ಲಿ ಪ್ರಾರಂಭವಾಗಿ ಅದು ಕ್ರಿ.ಶ. ೧೬೬೩ ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು; ಆದರೆ ಔರಂಗಜೇಬ ಶಹಜಹಾನನನ್ನು ಕ್ರಿ.ಶ. ೧೬೫೮ ರಲ್ಲಿ ಕಾರಾಗೃಹದಲ್ಲಿ ಇಟ್ಟಿದ್ದರೆ, ತಾಜ ಮಹಲನ ಕೆಲಸವನ್ನು ಮುಂದಿನ ೫ ವರ್ಷಗಳ ಕಾಲ ಔರಂಗಜೇಬ ಮುಂದುವರಿಸುತ್ತಿದ್ದನೇ? ಅದು ಎಂದಿಗೂ ಸಾಧ್ಯವಿಲ್ಲ.

೬. ಕಬಳಿಸುವುದೇ ಇವರ ಇತಿಹಾಸ !

ಪುಣೆಯ ಲೋಹಗಡದ ಮೇಲಿನ ಸಮಾಧಿ, ಠಾಣೆ ಜಿಲ್ಲೆಯ ಮಲಂಗಗಡದಂತಹ ಅನೇಕ ಸ್ಥಳಗಳಲ್ಲಿ ಮಜಾರ (ಗೋರಿ)ಗಳನ್ನು ನಿರ್ಮಿಸಿ ಅವುಗಳ ಇಸ್ಲಾಮೀಕರಿಸಿದ ಅಸಂಖ್ಯಾತ ಉದಾಹರಣೆಗಳಿವೆ. ಶ್ರೀರಾಮಜನ್ಮಭೂಮಿ, ಕಾಶಿ, ಮಥುರಾ, ಕೆಂಪುಕೋಟೆ, ಕುತುಬ್‌ ಮಿನಾರ್, ಅಜ್ಮೇರ್‌ ದರ್ಗಾ, ಜಾಮಾ ಮಸೀದಿಯಂತಹ ಅಸಂಖ್ಯಾತ ಹಿಂದೂಗಳ ಸ್ಥಳಗಳನ್ನು ಮುಸಲ್ಮಾನರು ಇದೇ ರೀತಿ ಕಬಳಿಸಿದ್ದಾರೆ.

೭. …ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ !

ಪರಾಧೀನತೆಯ ಚಿಹ್ನೆಗಳನ್ನು ನಾಶಪಡಿಸಿ, ತಮ್ಮದೇ ಆದ ಪ್ರತೀಕಗಳನ್ನು ಮರಳಿ ಪಡೆಯುವುದೇ ರಾಷ್ಟ್ರ ಮತ್ತು ಧರ್ಮದ ಸ್ವಾಭಿಮಾನವಾಗಿದೆ.

ಇನ್ನಾವ ಪುರಾವೆ ಬೇಕು ?

ತಾಜ ಮಹಲನ ಕೆತ್ತನೆಗಳಲ್ಲಿರುವ ‘ಓಂ’, ‘ಶಂಖಾಕೃತಿಯ ಎಲೆಗಳು’, ‘ನಾಗಯುಗಲ’, ‘ತ್ರಿಶೂಲ’, ‘ಕಮಲ’, ‘ಗುಮ್ಮಟದ ಮೇಲಿನ ತೆಂಗಿನಕಾಯಿಯ ಸುವರ್ಣ ಕಲಶ’, ‘ಗೋರಿಯ ಜಾಲರಿಯ ಮೇಲಿನ ಕಲಶ’ – ಇವೆಲ್ಲವೂ ವೈದಿಕ ಸಂಸ್ಕೃತಿಯ ಶುಭಚಿಹ್ನೆಗಳು ಸ್ಪಷ್ಟವಾಗಿವೆ. ಮೊಘಲ್‌ ಬಾದಷಾಹನು ತನ್ನ ವಾಸ್ತುಶಿಲ್ಪದಲ್ಲಿ ಈ ರೀತಿಯ ವೈದಿಕ ಚಿಹ್ನೆಗಳನ್ನು ಕೆತ್ತಿಸಲು ಸಾಧ್ಯವೇ ಇಲ್ಲ. ‘ತಾಜ ಮಹಲ ಹಿಂದೂಗಳ ವಾಸ್ತುಶಿಲ್ಪ’ ಎಂಬುದಕ್ಕೆ ಮತ್ಯಾವ ಪುರಾವೆಯ ಅಗತ್ಯವಿದೆ ?

– ಶ್ರೀ. ಪ್ರೀತಮ ನಾಚಣಕರ, ವಿಶೇಷ ಪ್ರತಿನಿಧಿ, ದೈನಿಕ ‘ಸನಾತನ ಪ್ರಭಾತ’, ಮುಂಬಯಿ.