ಸಾಧಕರು, ಧರ್ಮಕಾರ್ಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಠಿಣ ದೈವಿ ಪ್ರವಾಸ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ರಾಪ್ತ ಮಾಡಿಕೊಂಡ ಆಧ್ಯಾತ್ಮಿಕ ಅಧಿಕಾರಕ್ಕಾಗಿ ಅವರು ಯಾವೆಲ್ಲ ಕಷ್ಟಗಳನ್ನು ಸಹಿಸಿರುವರೋ, ಅವುಗಳ ಪೈಕಿ ಸೂಕ್ಷ್ಮಜ್ಞಾನಪ್ರಾಪ್ತಿಯ ಸೇವೆ ಮಾಡುವಾಗ ಅವರ ಮೇಲಾದ ಕೆಟ್ಟ ಶಕ್ತಿಗಳ ದಾಳಿಗಳಿಂದಾಗಿ ಅವರಿಗಾದ ತೊಂದರೆ, ಅದರಲ್ಲಿ ಅವರು ಪಟ್ಟುಹಿಡಿದು ಮಾಡಿದ ಸಾಧನೆ, ಅವರಲ್ಲಿನ ಪ್ರಬಲ ಇಚ್ಛಾಶಕ್ತಿ ಮತ್ತು ಗುರುಗಳ ಮೇಲಿನ ದೃಢ ಶ್ರದ್ಧೆ’ ಈ ದೈವೀ ಗುಣಗಳಿಂದಾಗಿ ಅವರು ಹಗಲುರಾತ್ರಿ ನಿರಂತರವಾಗಿ ಮಾಡಿದ ಸೇವೆ, ಇತ್ಯಾದಿ ವಿಷಯಗಳನ್ನು ನಾವು ವಿಶೇಷಾಂಕದ ಪುಟ ೩ ರ ಲೇಖನದಲ್ಲಿ ನೋಡಿದೆವು. ಇಲ್ಲಿ ಅವರು ಸಮಷ್ಟಿಗಾಗಿ ಅಂದರೆ ಸಾಧಕರು, ಧರ್ಮಕಾರ್ಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತೆಗೆದುಕೊಂಡ ತೊಂದರೆಗಳ ಬಗ್ಗೆ ನೀಡುತ್ತಿದ್ದೇವೆ.

ಸಂಗೀತದ ಮಾಧ್ಯಮದಿಂದ ಸೇವೆ ಮಾಡುವಾಗ ಪಟ್ಟ ಶ್ರಮ ಮತ್ತು ಅನುಭವಿಸಿದ ತೊಂದರೆಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಅ. ದೇವತೆಗಳ ಜಪವನ್ನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಅಪೇಕ್ಷಿತ ರೀತಿ ಆಗುವ ವರೆಗೆ ಪ್ರಯತ್ನಿಸುವುದು: ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಸಂಗೀತದ ಶಿಕ್ಷಣ ಪಡೆದಿದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊದಲು ಅವರಿಗೆ ಸಂಗೀತದ ಸೇವೆ ಮಾಡಲು ಹೇಳಿದರು. ಸಮಷ್ಟಿಗೆ ಉಪಯುಕ್ತ ಇರುವ ವಿವಿಧ ದೇವತೆಗಳ ನಾಮಜಪವನ್ನು ಅವರ ಧ್ವನಿಯಲ್ಲಿ ಧ್ವನಿಮುದ್ರಣ ಮಾಡಿಸಿಕೊಂಡರು. ಒಂದೊಂದು ದೇವತೆಯ ನಾಮಜಪ ಸಿದ್ಧ ಮಾಡುವಾಗ ಅವರಿಗೆ ಒಂದೊಂದು ಜಪವನ್ನು ಅನೇಕ ಬಾರಿ ಹೇಳಬೇಕಾಗುತ್ತಿತ್ತು. ಎಲ್ಲಿಯವರೆಗೆ ಆ ಜಪದಿಂದ ಅಪೇಕ್ಷಿತ ತಾರಕ ಅಥವಾ ಮಾರಕ ಸ್ಪಂದನಗಳು ಪ್ರಕ್ಷೇಪಣೆ ಆಗುತ್ತಿರಲಿಲ್ಲವೋ, ಅಲ್ಲಿಯವರೆಗೆ ಆ ಜಪವು ಅಂತಿಮವಾಗುತ್ತಿರಲಿಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಿಗೆ ‘ನಾಮಜಪದ ವೇಗ, ಲಯ, ಎರಡು ಶಬ್ದಗಳಲ್ಲಿನ ಅಂತರ’ ಇತ್ಯಾದಿ ಅನೇಕ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಸುಧಾರಣೆ ಹೇಳುತ್ತಿದ್ದರು. ಅದಕ್ಕಾಗಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಆ ನಾಮಜಪವನ್ನು ಅನೇಕ ಬಾರಿ ಪುನಃಪುನಃ ಹೇಳಬೇಕಾಗುತ್ತಿತ್ತು.

ಶ್ರೀ. ಯೋಗೇಶ ಜಲತಾರೆ

ಆ. ಸಂಗೀತದಲ್ಲಿನ ರಾಗಗಳ ಬಗ್ಗೆ ಸಂಶೋಧನೆ ಮಾಡುವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಸೂಕ್ಷ್ಮ-ಯುದ್ಧದ ಅನೇಕ ಪರಿಣಾಮಗಳನ್ನು ಸಹಿಸಬೇಕಾಯಿತು: ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದ ‘ಸಂಗೀತದಲ್ಲಿನ ವಿವಿಧ ರಾಗಗಳಿಂದ ಸಮಷ್ಟಿಯ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನವನ್ನೂ ಮಾಡಿಸಿ ಕೊಂಡರು. ಸಂಗೀತದಲ್ಲಿನ ರಾಗಗಳ ಸಂಶೋಧನೆ ಮಾಡುವಾಗ ಸಮಷ್ಟಿಯ ಜೊತೆಗೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಮೇಲೆಯೂ ಆ ರಾಗಗಳ ಪರಿಣಾಮವಾಗುತ್ತಿತ್ತು ಮತ್ತು ಅದರಿಂದ ಅವರಿಗೆ ಬಹಳ ತೊಂದರೆ ಸಹಿಸಬೇಕಾಗುತ್ತಿತ್ತು. ಉದಾ. ಒಮ್ಮೆ ‘ದೀಪ’ ರಾಗದ ಸಂಶೋಧನೆ ನಡೆದಿತ್ತು. ಈ ರಾಗವನ್ನು ಹೇಳುವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಶರೀರದಲ್ಲಿ ಉಷ್ಣತೆ ಉತ್ಪನ್ನವಾಯಿತು ಮತ್ತು ಆ ತೊಂದರೆ ಸಹಿಸಬೇಕಾಯಿತು. ಕೊನೆಗೆ ಅವರಿಗೆ ಆ ಉಷ್ಣತೆಯನ್ನು ಸಹಿಸಲು ಸಾಧ್ಯವಾಗದೇ ಪ್ರಯೋಗವನ್ನು ನಿಲ್ಲಿಸಬೇಕಾಯಿತು. ಆ ಕಾಲಾವಧಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಈ ರೀತಿಯ ಬಹಳಷ್ಟು ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳೆಂದರೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳೊಂದಿಗೆ ಒಂದು ರೀತಿಯ ಸೂಕ್ಷ್ಮಯುದ್ಧವೇ ಆಗಿತ್ತು. ರಾಗಗಳ ಸೂಕ್ಷ್ಮದಲ್ಲಿನ ಪರಿಣಾಮಗಳಿಂದಾಗಿ ಬಹಳಷ್ಟು ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾದವು. ಬಹುಶಃ ನಮಗೆ ‘ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರದೇ ಕೃಪೆಯಿಂದ ಸೇವೆ ಮಾಡಲು ಆಗುತ್ತಿದೆ’, ಎಂದು ಅನಿಸುತ್ತದೆ.

ಸಾಧಕರು ಮತ್ತು ಧರ್ಮಕಾರ್ಯಕ್ಕಾಗಿ ಇಂದಿಗೂ ಮುಂದುವರಿದ ಕಠಿಣ ದೈವಿ ಪ್ರವಾಸ! 

ಉತ್ತರಾಖಂಡರಾಜ್ಯದ ಬದ್ರಿನಾಥ ದೇವಸ್ಥಾನದ ಸಮೀಪದ ‘ವಸುಧಾರಾ ಎಂಬಲ್ಲಿಗೆ ತಲುಪಲು ಕಲ್ಲುಬಂಡೆಗಳಿಂದ ಕೂಡಿದ ಮಾರ್ಗದಿಂದ ಸಾಗುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ! (ವರ್ಷ ೨೦೧೭)

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಕಷ್ಟ ಇಲ್ಲಿಗೇ ನಿಲ್ಲಲಿಲ್ಲ. ಇಂದಿಗೂ ಅವರು ವಿವಿಧಡೆಗಳಿಗೆ ದೈವೀ ಪ್ರವಾಸ ಮಾಡಿ ‘ಸಾಧಕರಿಗೆ ಮತ್ತು ಧರ್ಮಕಾರ್ಯಕ್ಕೆ ಸಂತರು ಮತ್ತು ದೇವತೆಗಳ ಆಶೀರ್ವಾದ ಸಿಗಲು’, ಶ್ರಮಿಸುತ್ತಿದ್ದಾರೆ. ಅವರ ಪ್ರವಾಸವು ತಿಳಿದುಕೊಂಡಷ್ಟು ಸುಲಭವಾಗಿಲ್ಲ. ಅವರಿಗೆ ಮಹರ್ಷಿಗಳಿಂದ ಯಾವಾಗ ಬೇಕಾದರೂ ಆಜ್ಞೆ ಬರುತ್ತದೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಆಜ್ಞಾ ಪಾಲನೆಯೆಂದು ಹಗಲು-ರಾತ್ರಿ ಎನ್ನದೇ ಆ ಕ್ಷಣವೇ ಪ್ರವಾಸವನ್ನು ಆರಂಭಿಸುತ್ತಾರೆ. ಕೆಲವು ಸ್ಥಳಗಳ ಪ್ರವಾಸವು ಅತ್ಯಂತ ದುರ್ಗಮ, ಮುಳ್ಳು-ಕಂಟಿಗಳ ನಡುವೆ, ಹಾಗೆಯೇ ಬೆಟ್ಟ-ಕಣಿವೆಗಳ ಮೂಲಕ ಸಾಗಬೇಕಾಗುತ್ತದೆ. ಅಲ್ಲಿ ಸಾಮಾನ್ಯವಾಗಿ ಯುವಕರಿಗೂ ಏರಲು-ಇಳಿಯಲು ಕಷ್ಟವಾಗುತ್ತದೆ. ಇಂತಹ ಸ್ಥಳಗಳಲ್ಲೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಈ ವಯಸ್ಸಿನಲ್ಲಿ ಅವಿರತವಾಗಿ ಪ್ರವಾಸ ಮಾಡುತ್ತಿದ್ದಾರೆ. ಇದನ್ನು ಮಾಡುತ್ತಿರುವಾಗ ಅವರಿಗೆ ಬಹಳ ಶಾರೀರಿಕ ತೊಂದರೆಯಾಗುತ್ತದೆ. ಇಂದಿಗೂ ಕೆಟ್ಟ ಶಕ್ತಿಗಳ ಅನೇಕ ದಾಳಿಗಳು ಆಗುತ್ತಿರುವುದರಿಂದ ಅವರ ಅವಯವಗಳು ಸವೆಯುತ್ತಿವೆ, ಆದರೂ ಸಮಷ್ಟಿಗಾಗಿ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಇಲ್ಲಿಯವರೆಗೆ ‘ಕಣ್ಣುಗಳು ಉರಿಯುವುದು, ಕಣ್ಣುಗಳಿಗೆ ಮಂಜಾಗಿ ಕಾಣಿಸುವುದು, ಬಾಯಿ ಹುಣ್ಣು, ಹಲ್ಲುಗಳ ತೊಂದರೆ, ಕಿವಿಯ ತೊಂದರೆ, ಕಡಿಮೆ ಕೇಳಿಸುವುದು, ಮೈಮೇಲೆ ಊತ ಬರುವುದು’, ಹೀಗೆ ಅನೇಕ ರೀತಿಯ ತೊಂದರೆಗಳನ್ನು ಸಹಿಸಿಕೊಂಡಿದ್ದಾರೆ. ಇವೆಲ್ಲವನ್ನು ನೋಡಿದಾಗ ಸಹಜವಾಗಿಯೇ ನನ್ನ ಮನಸ್ಸಿನಲ್ಲಿ, ‘ಯಾರಲ್ಲಿ ದೊಡ್ಡತನವಿರುತ್ತದೆಯೋ, ಅವರ ಕಷ್ಟಗಳು ಕಠಿಣವಾಗಿರುತ್ತವೆ’, ಎಂಬ ವಿಚಾರ ಬರುತ್ತದೆ.

ಜನರೊಂದಿಗೆ ಆತ್ಮಿಯತೆ ಸಾಧಿಸುವ ಕಲೆ ಇರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ

ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (ಬಲಬದಿಗೆ) ಇವರಿಗೆ ಉಡುಗೊರೆ ನೀಡಿ ಸನ್ಮಾನ ಮಾಡುತ್ತಿರುವ ಆಂಧ್ರಪ್ರದೇಶದ ವಿಜಯವಾಡಾ ಕನಕದುರ್ಗಾ ದೇವಸ್ಥಾನದ ವಿಶ್ವಸ್ಥರಾದ ಸೌ. ಸುಶೀಲಮ್ಮಾ (೨೦೧೯)

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಇತರರೊಂದಿಗೆ ಆತ್ಮೀಯತೆ ಸಾಧಿಸುವ ಕಲೆಯೂ ಬಹಳ ಭಿನ್ನವಾಗಿದೆ. ಕೆಲವು ಸ್ಥಳಗಳಲ್ಲಿ ತಪ್ಪು ತಿಳುವಳಿಕೆಯಿಂದ ಸನಾತನವನ್ನು ವಿರೋಧಿಸುವ ಜನರಿದ್ದರು; ಆದರೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರನ್ನು ಭೇಟಿಯಾಗಲು ಹೋದ ನಂತರ ಅವರು ವಿರೋಧ ಕಡಿಮೆಯಾಗಿ ಅವರು ಸನಾತನದ ವಿಷಯವನ್ನು ಆತ್ಮೀಯತೆಯಿಂದ ಕೇಳಿಸಿಕೊಳ್ಳುತ್ತಿದ್ದರು ಮತ್ತು ಸನಾತನದ ಕಾರ್ಯಕ್ಕಾಗಿ ಸಹಾಯ ಮಾಡಲೂ ಸಿದ್ಧರಾಗುತ್ತಿದ್ದರು.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಗುರುಕಾರ್ಯದಿಂದ ಹಿಂದೆ ಸರಿದರು ಎಂದು ನಾನು ಯಾವತ್ತೂ ಕೇಳಿಲ್ಲ. ಗುರುಕಾರ್ಯಕ್ಕಾಗಿ ಅವರು ಸದಾ ಸಿದ್ಧರಿರುತ್ತಿದ್ದರು. ಅನೇಕ ಸ್ಥಳಗಳಲ್ಲಿ ದೇವಸ್ಥಾನಗಳಲ್ಲಿ ಅಥವಾ ತೀರ್ಥಕ್ಷೇತ್ರಗಳಲ್ಲಿ ಆಯಾ ಸ್ಥಳಗಳ ಕಾರ್ಯಪದ್ಧತಿಗನುಸಾರ ಅಥವಾ ಕೆಲವು ಧರ್ಮದ್ರೋಹಿ ಜನರಿಂದಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿರಲಿಲ್ಲ ಅಥವಾ ಅಪೇಕ್ಷಿತ ರೀತಿಯಲ್ಲಿ ಮತ್ತು ಆವಶ್ಯಕವಾಗಿರುವ ಮಾಹಿತಿ ಸಿಗುತ್ತಿರಲಿಲ್ಲ; ಆದರೆ ಆ ಪರಿಸ್ಥಿತಿಯಲ್ಲಿಯೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ‘ಏನು ಮಾಡಿದರೆ ಇತರ ಜನರೊಂದಿಗೆ ಆತ್ಮೀಯತೆ ಸಾಧಿಸಿ ಆಧ್ಯಾತ್ಮಿಕ ಮಾಹಿತಿಯನ್ನು ಪಡೆಯಬಹುದು’, ಎಂದು ನೋಡಿ ಕಾರ್ಯವನ್ನು ಪೂರ್ತಿಗೊಳಿಸುತ್ತಿದ್ದರು. ಆ ಜನರಿಗೆ ಆಧ್ಯಾತ್ಮಿಕ ಸಂಶೋಧನೆಯ ಭಾಗವನ್ನು ತಿಳಿಸಿ ಹೇಳುತ್ತಿದ್ದರು ಮತ್ತು ‘ಅವರು ಅನುಮತಿ ನೀಡಿದರೆ ಮುಂದಿನ ಅನೇಕ ಪೀಳಿಗೆಗಳ ಉದ್ಧಾರವಾಗಿ ಹೊಸ ಪೀಳಿಗೆಗಳಿಗೆ ಆ ಮಾಹಿತಿ ಸಿಗಲಿದೆ’, ಎಂಬ ಬೋಧನೆಯನ್ನು ನೀಡಿ ಜನರಿಂದ ಧರ್ಮಕಾರ್ಯ ಮಾಡಿಸಿಕೊಳ್ಳುತ್ತಿದ್ದರು. ಶ್ರೀಚಿತ್‌ಶಕ್ತಿ ಕಾಕು ಇವರ ಪ್ರೀತಿಯಿಂದಾಗಿ ಅವರು ಸಂಪರ್ಕಿಸಿದ ಜನರು ನಿಜವಾಗಿಯೂ ಸನಾತನದ ಹಿತಚಿಂತಕರಾಗಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಂಪರೆಯನ್ನು ಮುಂದುವರೆಸುವುದು

ತಿರುವಟ್ಟಾರ್ (ತಮಿಳುನಾಡು) ನಲ್ಲಿನ ಆದಿಕೇಶವ ದೇವಸ್ಥಾನದಲ್ಲಿ ಸೇವೆ ಮಾಡುವ ಪೂ. ವಸುಮತಿಅಜ್ಜಿ (ಬಲಬದಿಗೆ) ಇವರ ಸಂತತ್ವ ಗುರುತಿಸಿ ಅವರನ್ನು ಸನ್ಮಾನಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ! (೨೦೧೯) (೧ ಮೇ ೨೦೧೯ ರಂದು ಪೂ. ವಸುಮತಿ ಅಜ್ಜಿಯವರು ದೇಹತ್ಯಾಗ ಮಾಡಿದರು.)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯಾವಾಗ ಧರ್ಮಪ್ರಸಾರಕ್ಕಾಗಿ ಹೊರಗೆ ಹೋಗುತ್ತಿದ್ದರೋ ಆಗ ಅವರು ಸಮಾಜದಲ್ಲಿನ ಅನೇಕ ಸಾಧಕರನ್ನು ಹುಡುಕಿ ತೆಗೆದು ಅವರನ್ನು ಸಾಧನೆಯಲ್ಲಿ ಮುಂದೆ ಕೊಂಡೊಯ್ಯುತ್ತಿದ್ದರು. ಇದರ ಹೊರತಾಗಿ ‘ಸಮಾಜದಲ್ಲಿ ಯಾರು ಸಂತರಿದ್ದಾರೆ?’, ಎಂಬುದನ್ನು ಸಹ ಅವರು ನಿರ್ದಿಷ್ಟವಾಗಿ ಗುರುತಿಸಿ ಅವರ ಸನ್ಮಾನ ಮಾಡುತ್ತಿದ್ದರು. ಇದೇ ಭಾಗವನ್ನು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಮುಂದುವರೆಸಿದರು. ಅವರು ಸಹ ಅನೇಕ ಸಾಧಕರ ಸಾಧನೆಯನ್ನು ಪರೀಕ್ಷಿಸಿ ಅವರನ್ನು ಸಮಷ್ಟಿಯ ಮುಂದೆ ತಂದರು. ಸಮಾಜದ ಅನೇಕ ಸಂತರನ್ನು ಗುರುತಿಸಿ ಅವರ ಆಶೀರ್ವಾದವನ್ನು ಸನಾತನ ಸಂಸ್ಥೆಗೆ ಪ್ರಾಪ್ತಮಾಡಿಕೊಟ್ಟರು. ಪ್ರತಿಯೊಬ್ಬ ಸಂತರು ತಮ್ಮ ಸಾಧನಾಮಾರ್ಗಕ್ಕನುಸಾರ ಭಿನ್ನಭಿನ್ನ ಪ್ರಕೃತಿಯವರಾಗಿರುತ್ತಾರೆ. ಹೀಗಿದ್ದರೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಅವರೊಂದಿಗೆ ಅತ್ಯಂತ ನಮ್ರತೆಯಿಂದ ಆತ್ಮೀಯತೆಯನ್ನು ಸಾಧಿಸಿ ಸಾಧಕರಿಗೆ ತಮ್ಮ ಚೈತನ್ಯದ ಲಾಭವನ್ನು ಮಾಡಿಕೊಡುತ್ತಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಸಂಪರ್ಕದಿಂದಾಗಿ ಅನೇಕ ಸಂತರು ಸನಾತನ ಸಂಸ್ಥೆಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತಮ್ಮ ಸಾಧನಾ ಮಾರ್ಗಕ್ಕನುಸಾರ ಅನೇಕ ಅನುಷ್ಠಾನ ಮಾಡಿದರು ಮತ್ತು ಸನಾತನಕ್ಕೆ ಆಧ್ಯಾತ್ಮಿಕ ಬಲ ಒದಗಿಸಿದರು.

ಕೃತಜ್ಞತೆ

ಸಂತರು ಅನೇಕ ಕಷ್ಟ ಸಹಿಸಿಯೂ ಹಸನ್ಮುಖಿಯಾಗಿರುತ್ತಾರೆ. ಇದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿಯೂ ಗಮನಕ್ಕೆ ಬರುತ್ತದೆ. ಅವರ ಬಗ್ಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯಾಗಿದೆ.’ – ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ಸನಾತನ ಪ್ರಭಾತ. (೧೯.೧೧.೨೦೨೪)