ಸಮರ್ಪಿತಭಾವದಿಂದ ಗುರುಕಾರ್ಯವನ್ನು ಮಾಡುವ ಮತ್ತು ಸತತವಾಗಿ ಇತರರ ವಿಚಾರ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ!

ಎಡದಿಂದ ಶ್ರೀ. ಶೀತಲ ಮೋದಿ, ಸೌ. ಸ್ಡಾತಿ ಮೋದಿ, ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಪೂ.(ಶ್ರೀಮತಿ) ಸುಶೀಲಾ ಮೋದಿ ಮತ್ತು ಶ್ರೀ. ಶೈಲೇಶ ಮೋದಿ

‘ರಾಜಸ್ಥಾನದ ಜಯಪುರದ ಸಂತರು ಮತ್ತು ಸಾಧಕರಿಗೆ ಅರಿವಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಪೂ. (ಶ್ರೀಮತಿ) ಸುಶೀಲಾ ಮೋದಿ (ಸನಾತನದ ೬೩ ನೇ ಸಮಷ್ಟಿ ಸಂತರು, ವಯಸ್ಸು ೭೪ ವರ್ಷ), ಜೋಧಪುರ, ರಾಜಸ್ಥಾನ.

೧ ಅ. ‘ಒಮ್ಮೆ ನಾವು ಕುಟುಂಬದವರೆಲ್ಲ ಕಾಂಚೀಪುರಂಗೆ ಹೋಗಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಾಸ್ತವ್ಯವು ಕಾಂಚೀಪುರಂನಲ್ಲಿರುತ್ತದೆ. ನಾನು ಅವರ ನಿವಾಸಸ್ಥಳವನ್ನು ಪ್ರವೇಶಿಸುತ್ತಿರುವಾಗ ‘ನಾನು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಮತ್ತು ಸಾಕ್ಷಾತ್‌ ವೈಕುಂಠಕ್ಕೆ ಬಂದಿದ್ದೇನೆ,’ ಎಂದು ನನಗೆ ಅನಿಸಿತು. ನಿವಾಸಸ್ಥಾನದಲ್ಲಿ ಪ್ರತಿಯೊಂದು ವಸ್ತುವಿನ ರಚನೆಯು ಸಾತ್ತ್ವಿಕವಾಗಿತ್ತು. ಎಲ್ಲ ವಸ್ತುಗಳನ್ನು ಆಯಾ ಜಾಗದಲ್ಲಿ ಮತ್ತು ಎಲ್ಲರಿಗೂ ಸಹಜವಾಗಿ ಸಿಗುವಂತೆ ಇಡಲಾಗಿತ್ತು.

೧ ಆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರು ಈಶ್ವರೀ ಗುಣಗಳ ಮೂರ್ತಿಯಾಗಿದ್ದಾರೆ: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಾತೃವಾತ್ಸಲ್ಯದಿಂದ ಎಲ್ಲ ಸಾಧಕರನ್ನು ಪ್ರೀತಿಸುತ್ತಾರೆ. ಪ್ರೀತಿಯು ಅವರ ಅಂತಃಕರಣದಲ್ಲಿಯೇ ಇದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ‘ಸಹಜತೆ, ಪ್ರೀತಿ, ಉತ್ಸಾಹ, ಆತ್ಮೀಯತೆ ಮತ್ತು ವಾತ್ಸಲ್ಯಭಾವ’ ಇವುಗಳ ಸಾಕಾರರೂಪವಾಗಿದ್ದಾರೆ. ಅವರು ಅನೇಕ ಈಶ್ವರೀ ಗುಣಗಳ ಭಂಡಾರವಾಗಿದ್ದಾರೆ. ಅವರ ಸಾನಿಧ್ಯದಲ್ಲಿದ್ದರೆ ನಮಗೆ ಅವರಲ್ಲಿನ ಈಶ್ವರೀ ಗುಣಗಳ ದರ್ಶನವಾಗುತ್ತದೆ. ಅವರು ಯಾವಾಗಲೂ ತುಂಬಾ ಉತ್ಸಾಹದಿಂದಿರುತ್ತಾರೆ. ಅವರು ಪ್ರತಿಯೊಂದು ಸೇವೆಯನ್ನು ಪರಿಪೂರ್ಣವಾಗಿ ಮಾಡುತ್ತಾರೆ.

೧ ಇ. ಇತರರ ವಿಚಾರ ಮಾಡುವುದು: ಒಮ್ಮೆ ನಾನು ಅಲ್ಲಿನ ಮೆಟ್ಟಲುಗಳನ್ನು ಇಳಿಯುವಾಗ ಮೆಟ್ಟಲಿನ ಮೇಲಿನ ದೀಪ ಹಚ್ಚಿರಲಿಲ್ಲ; ಏಕೆಂದರೆ ಕೆಳಗಿನ ಕೋಣೆಯಲ್ಲಿನ ದೀಪದ ಬೆಳಕು ಮೆಟ್ಟಲುಗಳ ಮೇಲೆ ಬರುತ್ತಿತ್ತು. ನಾನು ಮೆಟ್ಟಲು ಇಳಿಯುತ್ತಿದ್ದಂತೆಯೇ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸ್ವತಃ ಕೋಣೆಯಿಂದ ಹೊರಗೆ ಬಂದರು ಮತ್ತು ಅವರು ಮೆಟ್ಟಿಲಿನ ಮೇಲಿನ ದೀಪವನ್ನು ಹಚ್ಚಿದರು. ಆಗ ನನಗೆ ‘ಅವರು ಸತತವಾಗಿ ಇತರರ ವಿಚಾರ ಮಾಡುತ್ತಾರೆ’, ಎಂದು ಅನಿಸಿತು.

೧ ಈ. ತನ್ನನ್ನು ಮರೆತು ಗುರುಕಾರ್ಯದಲ್ಲಿ ಸಮರ್ಪಿತರಾಗುವುದು: ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರವರು ಜೋಧಪುರದಲ್ಲಿ ನಮ್ಮ ಮನೆಗೆ ಬಂದಾಗ ತಮ್ಮದೇ ಮನೆಗೆ ಬಂದಂತೆ ಅವರು ಎಲ್ಲ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಒಮ್ಮೆ ನಾನು ಅವರಿಗೆ, ”ನೀವು ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿದ್ದೀರಿ,’’ ಎಂದು ಹೇಳಿದೆನು. ಆಗ ಅವರು, ”ಸದ್ಗುರು, ಉತ್ತರಾಧಿಕಾರಿ, ಹೀಗೇನೂ ಇಲ್ಲ. ಮೊದಲು ನಮಗೆ ಈ ಸೇವಾಕೇಂದ್ರದ ಮತ್ತು ಇತರ ಸೇವೆಗಳನ್ನು ವ್ಯವಸ್ಥಿತಗೊಳಿಸಬೇಕು. ಪ್ರತಿಯೊಂದು ಸೇವಾಕೇಂದ್ರವು ವೈಕುಂಠಕ್ಕೆ ಸಮಾನವಾಗಬೇಕು,’’ ಎಂದು ಹೇಳಿದರು. ಅವರು ಎಲ್ಲ ಗುರುಕಾರ್ಯಗಳಲ್ಲಿ ಸಮರ್ಪಿತರಾಗುತ್ತಾರೆ.

೨. ಸೌ. ಸ್ವಾತಿ ಮೋದಿ, ಜೋಧಪುರ, ರಾಜಸ್ಥಾನ.

ಅ. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬವು ಮಾರ್ಗಶಿರ ಚತುರ್ದಶಿ, ಅಂದರೆ ದತ್ತಜಯಂತಿಯ ಹಿಂದಿನ ತಿಥಿಯಂದು ಇರುತ್ತದೆ. ನನಗೆ ಅವರಲ್ಲಿ ಯಾವಾಗಲೂ ದತ್ತಾತ್ರೇಯ ದೇವತೆಯ ದರ್ಶನವಾಗುತ್ತದೆ.

ಆ. ಅವರು ನನ್ನ ಮೇಲೆ ತೋರಿಸುವ ಪ್ರೀತಿಯಿಂದ ನನ್ನ ಎಲ್ಲ ದುಃಖಗಳು ದೂರವಾಗುತ್ತವೆ. ನನ್ನ ಮೇಲೆ ಯಾವುದಾದರೊಂದು ಸಂಕಟ ಬಂದರೆ ನಾನು ಅವರಿಗೆ ಶರಣಾಗುತ್ತೇನೆ. ಆಗ ನನ್ನ ಎಲ್ಲ ದುಃಖಗಳು ದೂರವಾಗುತ್ತವೆ.’

೩. ಸೌ. ರಾಖಿ ಮೋದಿ (ಆಧ್ಯಾತ್ಮಿಕ ಮಟ್ಟ ಶೇ. ೬೨, ವಯಸ್ಸು ೪೩ ವರ್ಷ), ಜೋಧಪುರ, ರಾಜಸ್ಥಾನ.

೩ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಈಶ್ವರನಂತೆ ಕಾಣಿಸುವುದು: ‘ಈಶ್ವರನು ತನ್ನ ಭಕ್ತರ ತೊಂದರೆಗಳನ್ನು ತನ್ನ ಮೇಲೆ ತೆಗೆದುಕೊಳ್ಳುತ್ತಾನೆ. ಈಶ್ವರನಿಗೆ ನಮ್ಮ ಮನಸ್ಸಿನಲ್ಲಿನ ವಿಚಾರ, ಸುಖ-ದುಃಖಗಳನ್ನು ಹೇಳಿದಾಗ ನಮ್ಮ ಮನಸ್ಸು ಸಂಪೂರ್ಣವಾಗಿ ಶಾಂತವಾಗುತ್ತದೆ. ಈಶ್ವರನು ನಿರಂತರ ಆನಂದದಲ್ಲಿ ಇರುತ್ತಾನೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರೇ ನನ್ನ ಈಶ್ವರನಾಗಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ನೋಡಿದಾಗ ಮತ್ತು ಅವರ ಮಾತುಗಳನ್ನು ಕೇಳಿದಾಗ ನನಗೆ ಆನಂದ ಸಿಗುತ್ತದೆ. ಅವರು ನುಡಿದ ಪ್ರತಿಯೊಂದು ವಾಕ್ಯವು ಪರಮಸತ್ಯವಾಗಿರುತ್ತದೆ.

೩ ಆ. ಮಿತವ್ಯಯ: ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ತಮ್ಮ ಹತ್ತಿರ ಅಗತ್ಯವಿರುವಷ್ಟು ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳುತ್ತಾರೆ ಮತ್ತು ವಸ್ತುಗಳನ್ನು ಜಾಗರೂಕತೆಯಿಂದ ಬಳಸುತ್ತಾರೆ. (ಲೇಖನದಲ್ಲಿನ ಎಲ್ಲ ಅಂಶಗಳ ದಿನಾಂಕ: ೧.೧೨.೨೦೨೪)