
‘ಮಹರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ದೈವೀತತ್ತ್ವವನ್ನು ಅರಿತುಕೊಂಡು ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ಅವರ ಹೆಸರಿನ ಮೊದಲು ‘ಶ್ರೀಚಿತ್‌ಶಕ್ತಿ’ ಎಂಬ ಬಿರುದನ್ನು ನೀಡಿದ್ದಾರೆ. ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ‘ಸಚ್ಚಿದಾನಂದ ಪರಬ್ರಹ್ಮ’ ಇವರ ದೈವೀ ಗುಣಗಳಂತೂ ಇದ್ದೇ ಇದೆ; ಅದರ ಜೊತೆ ಅವರ ಸಂಪರ್ಕಕ್ಕೆ ಬಂದನಂತರ ಅಧ್ಯಾತ್ಮದ ಬಗ್ಗೆ ಹೆಚ್ಚಿನ ಪರಿಚಯ ಇಲ್ಲದಿರುವ ಜನಸಾಮಾನ್ಯರಿಗೆ ಅವರ ದೈವೀ ಗುಣಗಳು ತಕ್ಷಣ ಅರಿವಾಗುತ್ತವೆ. ಅವರು ಅವರನ್ನು ಇಷ್ಟಪಡುತ್ತಾರೆ. ಆ ಗುಣಗಳೆಂದರೆ ಅವರಲ್ಲಿನ ಆತ್ಮೀಯತೆ, ಪ್ರೀತಿಯಿಂದ ಮಾತನಾಡುವುದು ಮತ್ತು ಸಾಮೀಪ್ಯವನ್ನು ಸಾಧಿಸುವುದು!

ವ್ಯವಹಾರದಲ್ಲಿಯೂ ಯಾವ ಕೆಲಸಗಳು ನಮ್ಮ ಬುದ್ಧಿಯಿಂದ ಆಗುವುದಿಲ್ಲವೋ, ಆ ಕೆಲಸವು ಪ್ರೇಮಭಾವ ಮತ್ತು ಅದಕ್ಕಿಂತಲೂ ಶ್ರೇಷ್ಠವಾದ ಪ್ರೀತಿ ಈ ಗುಣದಿಂದ ಸುಲಭವಾಗಿ ಸಾಧಿಸಲ್ಪಡುತ್ತದೆ; ಏಕೆಂದರೆ ಪ್ರೀತಿಯಿಂದ ಜನರು ಶಾಶ್ವತವಾಗಿ ನಮ್ಮವರಾಗುತ್ತಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಅನೇಕ ಗುಣಗಳಿದ್ದರೂ ಅವರಲ್ಲಿರುವ ಅತ್ಯಂತ ಮಹತ್ವದ ಗುಣವೇ ಪ್ರೀತಿ!

೧. ‘ಪ್ರೀತಿ’ ಈ ಗುಣದ ವೈಶಿಷ್ಟ್ಯ
ಅಧ್ಯಾತ್ಮದಲ್ಲಿ **’ಪ್ರೀತಿ’**ಯು ಸರ್ವೋಚ್ಚ ಗುಣವಾಗಿದೆ. ಅದು ಪಂಚಮಹಾಭೂತಗಳಲ್ಲಿ ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶವು ಎಲ್ಲರನ್ನು ಹೇಗೆ ತನ್ನೊಳಗೆ ಸೇರಿಸಿಕೊಳ್ಳುತ್ತದೆಯೋ, ಹಾಗೆಯೇ ಪ್ರೀತಿ ಈ ಗುಣದಿಂದ ನಾವು ಎಲ್ಲರನ್ನು ನಮ್ಮಲ್ಲಿ ಸೇರಿಸಿಕೊಳ್ಳಬಹುದು. ಆಧ್ಯಾತ್ಮಿಕ ಪ್ರಗತಿಯಾಗಲು ‘ಪ್ರೀತಿ’ ಈ ಗುಣದ ಯೋಗದಾನವು ಅತ್ಯಂತ ಮಹತ್ವದ್ದಾಗಿರುತ್ತದೆ. ಅದು ನಮ್ಮಲ್ಲಿ ಬರಬೇಕಾದರೆ ಇತರರನ್ನು ಗೌರವಿಸುವುದು, ಇತರರ ಮಾತುಗಳನ್ನು ಕೇಳುವುದು, ಅವರಿಗೆ ಸ್ಪಂದಿಸುವುದು, ಅವರು ಮಾಡಿದ ಸಹಾಯದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು, ಇಂತಹ ಅಂಶಗಳು ನಮ್ಮಲ್ಲಿರುವುದು ಆವಶ್ಯಕವಾಗಿರುತ್ತದೆ. ಈ ಎಲ್ಲ ಅಂಶಗಳು ನಮ್ಮಲ್ಲಿ ಬರಲು ನಮ್ಮ ಅಹಂ ಕಡಿಮೆ ಇರಬೇಕಾಗುತ್ತದೆ.
೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ‘ಪ್ರೀತಿ’ ಈ ಗುಣವು ಜನ್ಮದತ್ತವಾಗಿದೆ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅವರಲ್ಲಿನ ಪ್ರೀತಿಯ ಗುಣವು ಸಾಧನೆಯ ನಂತರ ವೃದ್ಧಿಸಿದ್ದಲ್ಲ, ಬದಲಾಗಿ ಬಾಲ್ಯದಿಂದಲೇ, ಅಂದರೆ ಜನ್ಮತಃ ಬಂದ ದೈವದತ್ತ ಕೊಡುಗೆಯಾಗಿದೆ. ಅವರು ಎಲ್ಲಿ ಹೋದರೂ ಅವರ ಸುತ್ತಲೂ ಅನೇಕರು ಸೇರುತ್ತಾರೆ. ಅದೇ ರೀತಿ ಚಿಕ್ಕಂದಿನಿಂದಲೂ ಶಾಲೆಯಿರಲಿ ಅಥವಾ ಯಾವುದೇ ಕೌಟುಂಬಿಕ ಕಾರ್ಯಕ್ರಮ ಇರಲಿ, ಅವರ ಸುತ್ತ ಅನೇಕರು ಸೇರುತ್ತಾರೆ. ಇದರಲ್ಲಿ ಕಿರಿಯರು-ಹಿರಿಯರು ಎಲ್ಲರೂ ಇರುತ್ತಾರೆ. ಚಿಕ್ಕಂದಿನಿಂದ ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಿಗೆ ಕುಟುಂಬದವರಿಂದ ಕೌಟುಂಬಿಕ ಕಾರ್ಯಕ್ರಮಕ್ಕೆ ಆಮಂತ್ರಣವಿರುತ್ತದೆ. ಅವರು ಎಲ್ಲರಿಗೂ ಬೇಕಾದವರಾಗಿರುತ್ತಾರೆ. ಅದರ ಮುಖ್ಯ ಕಾರಣವೆಂದರೆ ಅವರು ಆತ್ಮೀಯತೆ ಹಾಗೂ ಪ್ರೀತಿಯಿಂದ ಮಾತನಾಡುವುದು. ಆದ್ದರಿಂದ ಅವರು ಎಲ್ಲರ ಅಚ್ಚುಮೆಚ್ಚಿನವರಾಗಿದ್ದಾರೆ.
೩. ಸಾಧಕರಾಗಿರಲಿ ಅಥವಾ ಸಾಧಕಿಯರಾಗಿರಲಿ ಎಲ್ಲರೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಮನಮುಕ್ತತೆಯಿಂದ ಮಾತನಾಡುತ್ತಾರೆ!

ಯಾವ ವಿಷಯವು ಕುಟುಂಬದವರಲ್ಲಿ ಕಂಡುಬಂದಿತೋ, ಅದೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಸಾಧನೆಯಲ್ಲಿ ಬಂದನಂತರ ಸಾಧಕರ ವಿಷಯದಲ್ಲಿಯೂ ಕಂಡುಬಂದಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ‘ಎಲ್ಲರೊಂದಿಗೆ ಆತ್ಮೀಯತೆಯಿಂದ ವರ್ತಿಸುವುದು ಮತ್ತು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುವುದು’ ಈ ಗುಣಗಳಿಂದ ಸಾಧಕರು ಅವರೊಂದಿಗೆ ಸಹಜವಾಗಿ ಮಾತನಾಡುತ್ತಾರೆ, ಸಾಧಕನಾಗಿರಲಿ ಅಥವಾ ಸಾಧಕಿಯಾಗಿರಲಿ! ಮಾತನಾಡುವಾಗ ಯಾರಿಗೂ ತಮ್ಮ ವಯಸ್ಸಿನ ಪ್ರಶ್ನೆ ಉದ್ಭವಿಸುವುದಿಲ್ಲ. ಚಿಕ್ಕವರು-ದೊಡ್ಡವರು ಹೀಗೆ ಎಲ್ಲರೂ ಅವರೊಂದಿಗೆ ಮಾತನಾಡುತ್ತಾರೆ. ಸಾಧನೆಯಲ್ಲಿನ ಮನಸ್ಸಿನ ಅಡತಡೆಗಳನ್ನು ದೂರಗೊಳಿಸಲು ಮತ್ತು ಮನಸ್ಸು ಹಗುರವಾಗಲು ಸಾಧಕರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರೊಂದಿಗೆ ಮಾತನಾಡಲು ಹೇಳಲಾಗುತ್ತಿತ್ತು. ಈ ಸಮಯದಲ್ಲಿ ಸಾಧಕರು ಮತ್ತು ಸಾಧಕಿಯರು ಇಬ್ಬರೂ ಭೂತಕಾಲದಲ್ಲಿ ಜೀವನದಲ್ಲಿ ಬಂದ ಸಮಸ್ಯೆಗಳು ಮತ್ತು ಘಟಿಸಿದ ಕಹಿ ಪ್ರಸಂಗಗಳನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಿಗೆ ಮನಮುಕ್ತತೆಯಿಂದ ತಿಳಿಸಿದರು. ಇದರಿಂದ ಸಾಧಕರ ಮನಸ್ಸಿನಲ್ಲಿನ ಬಹಳಷ್ಟು ಒತ್ತಡ ಮತ್ತು ಅಪರಾಧಿತನವು ದೂರವಾಯಿತು ಮತ್ತು ಅವರಿಗೆ ಸಾಧನೆಯಲ್ಲಿನ ಮುಂದಿನ ಮಾರ್ಗಕ್ರಮಣದ ಬಗ್ಗೆ ಗುರುಕೃಪೆಯಿಂದ ದೃಷ್ಟಿಕೋನ ಸಿಕ್ಕಿತು.
೪. ಆಶ್ರಮಕ್ಕೆ ಬಂದ ಸಮಾಜದ ಸಂತರು ಅಥವಾ ಗಣ್ಯ ವ್ಯಕ್ತಿಗಳೊಂದಿಗೆ ಸಹಜವಾಗಿ ಸಾಮೀಪ್ಯವನ್ನು ಸಾಧಿಸುವುದು, ‘ಅತಿಥಿ ದೇವೋ ಭವ’ ಎಂಬ ಭಾವದಿಂದ ಅವರ ಅತಿಥಿ ಸತ್ಕಾರ ಮಾಡುವುದು ಮತ್ತು ಇದರಿಂದ ಆ ವ್ಯಕ್ತಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರನ್ನು ವಿಶೇಷವಾಗಿ ನೆನೆಪಿಸುವುದು
ಗೋವಾದಲ್ಲಿನ ರಾಮನಾಥಿ ಆಶ್ರಮದಲ್ಲಿ ಸಮಾಜದಿಂದ ಯಾರಾದರೊಬ್ಬ ಸಂತರು ಅಥವಾ ಗಣ್ಯ ವ್ಯಕ್ತಿಗಳು ಬಂದಾಗ, ಅವರ ಪರಿಚಯ ಮಾಡಿಕೊಳ್ಳುವುದು, ಅವರ ಕಾರ್ಯದ ಬಗ್ಗೆ ತಿಳಿದುಕೊಳ್ಳುವುದು, ಅವರಿಗೆ ಸನಾತನ ಸಂಸ್ಥೆಯ ಕಾರ್ಯ, ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದ ಬಗೆಗಿನ ಮಾಹಿತಿಯನ್ನು ನೀಡಿ ‘ಅದರಲ್ಲಿ ಇನ್ನೂ ಏನು ಮಾಡಬಹುದು?’, ಎಂಬುದರ ಬಗ್ಗೆ ಅವರಿಂದ ತಿಳಿದುಕೊಳ್ಳುವುದು ಇತ್ಯಾದಿ ಸೇವೆಗಳನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಸಹಜವಾಗಿ ಮಾಡುತ್ತಾರೆ. ಅದನ್ನು ಮಾಡುವಾಗ ಅವರು ‘ಅತಿಥಿ ದೇವೋ ಭವ’, ಎಂಬ ಭಾವದಿಂದ ಆ ಅತಿಥಿಗಳ ಯೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಆ ಸಂತರು ಅಥವಾ ಗಣ್ಯ ವ್ಯಕ್ತಿಗಳು ಮೊದಲನೇ ಭೇಟಿಯಲ್ಲಿಯೇ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದರು, ಹಾಗೆಯೇ ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರನ್ನು ವಿಶೇಷವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ೨೦೧೨ ರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಧರ್ಮ ಮತ್ತು ಸಂಸ್ಕೃತಿಯ ಸಂವರ್ಧನೆಗಾಗಿ ಭಾರತದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಆಶ್ರಮದಲ್ಲಿ ಬಂದು ಹೋದ ಸಮಾಜದಲ್ಲಿನ ಸಂತರು ಅಥವಾ ಗಣ್ಯ ವ್ಯಕ್ತಿಗಳು ಪುನಃ ಇನ್ನೊಂದು ಕಡೆ ಭೇಟಿಯಾದರೆ ಮತ್ತು ಅವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಪುನಃ ಆಶ್ರಮಕ್ಕೆ ಬರಲು ಆಮಂತ್ರಿಸಿದಾಗ ಅವರು, ‘ನೀವು ಯಾವಾಗ ಆಶ್ರಮದಲ್ಲಿ ಇರುವಾಗಲೇ ನಾವು ಬರುತ್ತೇವೆ!’ ಎಂದು ಹೇಳುತ್ತಾರೆ.
೫. ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ಭಾರತದಾದ್ಯಂತ ಪ್ರವಾಸ ಮಾಡಿ ತಮ್ಮ ‘ಪ್ರೀತಿ’ ಗುಣದಿಂದ ಅಮೂಲ್ಯ ಜ್ಞಾನ ಮತ್ತು ಸಂಸ್ಕೃತಿಯ ಸಂಗ್ರಹವನ್ನು ಕಾಪಾಡುವುದು, ಹಾಗೆಯೇ ವಿವಿಧ ಕ್ಷೇತ್ರಗಳ ಸಂತರು ಮತ್ತು ಗಣ್ಯರನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸಿಡುವುದು
ಭಾರತವು ಧರ್ಮ ಮತ್ತು ಸಂಸ್ಕೃತಿಯ ವಿಷಯದಲ್ಲಿ ಅತ್ಯಂತ ಸಮೃದ್ಧ ದೇಶವಾಗಿದೆ. ಭಾರತಕ್ಕೆ ಪೌರಾಣಿಕ ಮಹತ್ವವಿದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರು ವರ್ಷ ೨೦೧೨ ರಿಂದ ಭಾರತದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದುವರೆಗೆ ಅವರು ೭-೮ ಲಕ್ಷ ಕಿಲೋಮೀಟರ್‌ಗಳಷ್ಟು ಪ್ರವಾಸ ಮಾಡಿದ್ದಾರೆ. ಭಾರತದಾದ್ಯಂತ ಪ್ರವಾಸ ಮಾಡುವ ಅವರ ಉದ್ದೇಶವೇನೆಂದರೆ ಅತೀಪ್ರಾಚೀನ ಮತ್ತು ಅಮೂಲ್ಯವಾದ ಹಿಂದೂ ಸಂಸ್ಕೃತಿಯ ಸಂಶೋಧನೆ ಮತ್ತು ರಕ್ಷಣೆ ಮಾಡುವುದು. ಅವರು ಇದುವರೆಗೆ ಭಾರತದಲ್ಲಿನ ವಿವಿಧ ಕ್ಷೇತ್ರಗಳು, ಮಠಗಳು, ದೇವಸ್ಥಾನಗಳು, ಕಲಾಕ್ಷೇತ್ರಗಳು ಇತ್ಯಾದಿ ಸ್ಥಳಗಳಿಗೆ ಹೋಗಿ ಹಿಂದೂ ಸಂಸ್ಕೃತಿ, ಪರಂಪರೆಯ ಚಿತ್ರೀಕರಣ ಮಾಡುವುದು, ಅಲ್ಲಿನ ಸಂತ-ಮಹಂತರ ಪರಿಚಯ ಮಾಡಿಕೊಳ್ಳುವುದು, ಅಲ್ಲಿನ ಗಣ್ಯರ ಸಂದರ್ಶನ ತೆಗೆದುಕೊಳ್ಳುವುದು, ಅವರಲ್ಲಿನ ಅಮೂಲ್ಯ ಸಂಗ್ರಹ ನೋಡುವುದು, ಇಂತಹ ಸೇವೆಗಳನ್ನು ಮಾಡಿದ್ದಾರೆ. ಚಿತ್ರೀಕರಣ ಮತ್ತು ಸಂದರ್ಶನದಿಂದ ಹಲವೆಡೆ ಅಮೂಲ್ಯ ಸಂಗ್ರಹವನ್ನು ಜೋಪಾನವಾಗಿಡಲಾಗುತ್ತಿದೆ, ಅಲ್ಲದೇ ಅಮೂಲ್ಯ ವಸ್ತುಗಳು ಸಂಗ್ರಹಕ್ಕಾಗಿ ದೊರಕುತ್ತಿವೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಲ್ಲಿನ ‘ಪ್ರೀತಿ’ ಗುಣದಿಂದ ಇದು ಸಾಧ್ಯವಾಗುತ್ತಿದೆ. ವಾಸ್ತವದಲ್ಲಿ ಯಾರು ತಮ್ಮಲ್ಲಿನ ಮಾಹಿತಿಯನ್ನು ಹೇಳುವುದಿಲ್ಲ ಅಥವಾ ತಮ್ಮಲ್ಲಿನ ಅಮೂಲ್ಯ ಸಂಗ್ರಹವನ್ನು ಬಹಿರಂಗ ಪಡಿಸುವುದಿಲ್ಲ, ಆದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಲ್ಲಿನ ‘ಪ್ರೀತಿಯಿಂದ ಮಾತನಾಡುವುದು’, ‘ಅವರಲ್ಲೇ ಒಬ್ಬರಾಗಿ ಹೋಗುವುದು’ ಇತ್ಯಾದಿ ಗುಣಗಳಿಂದ ಸಮಾಜದಲ್ಲಿನ ಸಂತರು, ಗಣ್ಯ ವ್ಯಕ್ತಿಗಳು, ಅರ್ಚಕರು ಮೊದಲ ಭೇಟಿಯಲ್ಲಿಯೇ ತಮ್ಮಲ್ಲಿನ ಎಲ್ಲ ಮಾಹಿತಿಯನ್ನು ಹೇಳಲು, ಚಿತ್ರೀಕರಣ ಮಾಡಲು ಒಪ್ಪಿಗೆ ನೀಡುತ್ತಾರೆ. ಅಲ್ಲದೇ, ಆ ವ್ಯಕ್ತಿಗಳು ಸನಾತನ ಸಂಸ್ಥೆಯೊಂದಿಗೆ ಶಾಶ್ವತವಾಗಿ ಜೋಡಿಸಲ್ಪಡುತ್ತಾರೆ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರ ಸಾಧನೆಯಿಂದ ಅವರ ಬಗ್ಗೆ ಸಮಾಜದ ಆ ವ್ಯಕ್ತಿಗಳಿಗೆ ಒಳ್ಳೆಯ ಅನುಭೂತಿಗಳು ಸಹ ಬರುತ್ತವೆ.
ಕೃತಜ್ಞತೆ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಇವರಲ್ಲಿನ ‘ಪ್ರೀತಿ’ ಈ ಗುಣದಿಂದ ಅವರು ಮಾಡಿದ ದೊಡ್ಡ ಜನಸಂಗ್ರಹ, ಅವರು ಮಾಡುತ್ತಿರುವ ಎಲ್ಲರ ವಿಚಾರ ಮತ್ತು ಆ ವ್ಯಕ್ತಿಗಳೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರನ್ನು ಹೇಗೆ ಪ್ರಶಂಸೆ ಮಾಡುತ್ತಾರೆ ಮತ್ತು ಅವರ ಬಳಿ ಇರುವುದನ್ನೆಲ್ಲವನ್ನು ಅರ್ಪಿಸುತ್ತಾರೆ, ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಇದೆ. ನನಗೆ ಶ್ರೀಚಿತ್‌ಶಕ್ತಿಯವರ ಬಗ್ಗೆ ಬರೆಯಲು ಸಾಧ್ಯವಾಯಿತು, ಅದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಪತಿ), ಪಿಎಚ್.ಡಿ., ಗೋವಾ. (೨೫.೧೧.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !