ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

‘ಕೆಲವು ಜಿಲ್ಲೆಗಳಿಂದ ರಾಮನಾಥಿ ಆಶ್ರಮಕ್ಕೆ ಬಂದಿರುವ ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವ ಕೆಲವು ಸಾಧಕರೊಂದಿಗೆ ೨೯.೯.೨೦೨೩ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಅನೌಪಚಾರಿಕ ಸಂಭಾಷಣೆಯನ್ನು ಮಾಡಿದರು. ಆ ಸಮಯದಲ್ಲಿ ಸಾಧಕರು ಅವರಲ್ಲಿ ವಿಚಾರಿಸಿದ ಪ್ರಶ್ನೆಗಳನ್ನು ಮತ್ತು ಅವರು ಸಾಧಕರಿಗೆ ನೀಡಿದ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ.

೧. ಹಿಂದೂ ರಾಷ್ಟ್ರವನ್ನು ಮೊದಲು ನಮ್ಮಲ್ಲಿ ತರುವುದಿದೆ, ಅದಕ್ಕಾಗಿ ಅಂತರ್ಮುಖರಾಗಿ ನಮ್ಮಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ

೧ ಅ. ಮೊದಲನೆ ಸಾಧಕಿ : ನನ್ನ ಮರೆವು ದೋಷ ಹೆಚ್ಚಾಗಿದೆ. ಅದಕ್ಕಾಗಿ ನನ್ನಿಂದ ಅಪೇಕ್ಷೆಯಾಗುತ್ತದೆ. ‘ಈ ಮೊದಲು ನಾನು ಎಷ್ಟು ಮಾಡಿದ್ದೇನೆ ?’, ಎಂದು ಅನಿಸುತ್ತದೆ. ಈಗ ಮರೆವು ಹೆಚ್ಚಾಗಿರುವುದರಿಂದ ನನ್ನಲ್ಲಿ ಸಿಡಿಮಿಡಿತನವೂ ಹೆಚ್ಚಾಗಿದೆ. ಅದಕ್ಕೆ ನನಗೆ ಯಜಮಾನರು ಸಿಟ್ಟು ಮಾಡುತ್ತಾರೆ. ಆಗ ನನಗೆ ನನ್ನ ಬಗ್ಗೆ ನಕಾರಾತ್ಮಕ ವಿಚಾರಗಳು ಬರುತ್ತವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಕಾಕಾ (ಸಾಧಕಿಯ ಯಜಮಾನರಿಗೆ), ನೀವು ಕಾಕುರವರಿಗೆ ಸಹಾಯ ಮಾಡಿರಿ.

ಸಾಧಕಿಯ ಯಜಮಾನರು : ನಾನು ಸಹಾಯ ಮಾಡುತ್ತೇನೆ. ನೆನಪೂ ಮಾಡಿಕೊಡುತ್ತೇನೆ.

ಕು. ಮೇಘಾ ಚವ್ಹಾಣ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಅ. ನೀವು ನೆನಪಿಸಿ; ಆದರೆ ಸಿಟ್ಟು ಮಾಡದೇ ಸಹಾಯವೆಂದು ನೆನಪಿಸಿ. ನೀವು ಸಿಟ್ಟು ಮಾಡಿದರೆ ನಿಮ್ಮ ‘ಕೋಪ’ ಈ ಸ್ವಭಾವದೋಷದ ಸಂಸ್ಕಾರವು ಇನ್ನು ಹೆಚ್ಚಾಗುತ್ತದೆ.

ಆ. ನಿಮಗೆ ಕಾಕುರವರ ಸ್ವಭಾವದೋಷಗಳು ಗಮನಕ್ಕೆ ಬಂದರೆ ಅವುಗಳ ಬಗ್ಗೆ ಅವರ ಜವಾಬ್ದಾರ ಸಾಧಕರಿಗೆ ಹೇಳಿರಿ. ಕಾಕುರವರೂ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ? ನನ್ನಿಂದ ಎಲ್ಲೆಲ್ಲಿ ತಪ್ಪಾಗುತ್ತದೆ ?’, ಎಂಬುದನ್ನು ಅಂತರ್ಮುಖವಾಗಿ ನೋಡಬೇಕು. ನಾವು ಎಷ್ಟೇ ಪ್ರಯತ್ನಿಸಿದರೂ, ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನನ್ನು ಬದಲಾಯಿಸುವುದು ನನ್ನ ಸಾಧನೆಯಾಗಿದೆ. ಅದನ್ನೇ ನಾನು ಮಾಡಬೇಕು. ಅದಕ್ಕಾಗಿ ಸ್ವಯಂಸೂಚನೆಗಳನ್ನು ಕೊಡಬೇಕು.

ಇ. ‘ಸಾಧನೆಯಿಂದ ನಮಗೆ ಕೊಡುಕೊಳ್ಳುವ ಲೆಕ್ಕಾಚಾರವನ್ನು ಕಡಿಮೆ ಮಾಡುವುದಿರುತ್ತದೆ; ಆದರೆ ಇಂತಹ ವಾದ-ವಿವಾದಗಳಿಂದ ನಾವು ಅದನ್ನು ಹೆಚ್ಚಿಸುತ್ತೇವೆಯೋ ಅಥವಾ ಕಡಿಮೆ ಮಾಡುತ್ತೇವೆ ? ನಾವು ಸಾಧನೆಗಾಗಿ ಬಂದಿದ್ದೇವೆ. ಇದರಿಂದ ಸಾಧನೆಯ ದಿಶೆ ವಿರುದ್ಧವಾಗುತ್ತದೆ’, ಇದನ್ನು ಗಮನದಲ್ಲಿಡಬೇಕು.

ಈ. ಸಾಧನೆಯೆಂದರೆ ತಾನು ಸ್ವತಃ ಅಂತರ್ಮುಖವಾಗುವುದು ಮತ್ತು ಬದಲಾಗುವುದು. ಇತರರಿಗೆ ಸಹಾಯವೆಂದು ಹೇಳುವಾಗ ಯೋಗ್ಯ ರೀತಿಯಲ್ಲಿ ಹೇಳಬೇಕು. ಮನುಷ್ಯ ಜನ್ಮದ ಸಾರ್ಥಕವಾಗಬೇಕು. ನಾವು ತಪ್ಪಾಗಿ ನಡೆದುಕೊಂಡರೆ ಅದರ ಬಗ್ಗೆ ನಮಗೇ ನೋವಾಗುತ್ತದೆಯಲ್ಲ ? ಈಗ ಇಬ್ಬರೂ ತಮ್ಮನ್ನು ಬದಲಾಯಿಸುವ ಧ್ಯೇಯವನ್ನಿಡಿ.

ಉ. ಎಲ್ಲರೂ ಗಮನದಲ್ಲಿಡಿ, ಹಿಂದೂ ರಾಷ್ಟ್ರವನ್ನು ಮೊದಲು ನಮ್ಮಲ್ಲಿ ತರುವುದಿದೆ. ನಂತರ ಅದನ್ನು ಮನೆ, ಊರು, ಜಿಲ್ಲೆ… ಹೀಗೆ ವ್ಯಾಪಕವಾಗುವುದಿದೆ. ಸನಾತನದ ಪ್ರತಿಯೊಬ್ಬ ಸಾಧಕನ ಮನೆಯು ಆಶ್ರಮವಾಗಿದೆ, ಎಂಬುದನ್ನು ಸತತವಾಗಿ ನೆನಪಿನಲ್ಲಿಡಬೇಕು.

೨. ಪ್ರಯತ್ನದಲ್ಲಿ ಸಾತತ್ಯ ಬರಲು ಅಂತರ್ಮನಸ್ಸಿಗೆ ಅರಿವಾಗುವುದು ಅವಶ್ಯಕವಾಗಿದೆ, ಆದುದರಿಂದ ತನ್ನಿಂದ ಪ್ರಯತ್ನಗಳಾಗದಿದ್ದರೆ ಶಿಕ್ಷೆಯನ್ನು ತೆಗೆದುಕೊಳ್ಳಬೇಕು !

೨ ಅ. ಎರಡನೆ ಸಾಧಕಿ : ನನ್ನ ಬಳಿ ಸೇವೆಯ ಜವಾಬ್ದಾರಿ ಇದೆ. ನಾನು ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಧ್ಯೇಯವನ್ನಿಟ್ಟು ಮಾಡುತ್ತೇನೆ; ಆದರೆ ಕೃತಿ ಮಾಡಲು ಕಡಿಮೆ ಬೀಳುತ್ತೇನೆ. ನನ್ನ ಮನಸ್ಸಿನಲ್ಲಿ ಅದರ ಬಗ್ಗೆ ಖೇದವಿರುತ್ತದೆ. ಆದ್ದರಿಂದ ನನಗೆ ಸಮಾಧಾನ ಅಥವಾ ಆನಂದ ಸಿಗುವುದಿಲ್ಲ. ಮನೆಯಲ್ಲಿನ ಜನರು ನನಗೆ, ”ನಿನ್ನ ಮುಖದ ಮೇಲೆ ಅದು (ಸಮಾಧಾನ) ಕಾಣಿಸುವುದಿಲ್ಲ.” ಎಂದು ಹೇಳುತ್ತಾರೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನಿಮಗೆ ಏನು ಅನಿಸುತ್ತದೆಯೋ, ಅದು ಬಾಹ್ಯಮನಸ್ಸಿಗೆ ಅನಿಸುತ್ತದೆ, ಯಾವಾಗ ಅಂತರ್ಮನಸ್ಸಿಗೆ ಅನಿಸುತ್ತದೆಯೋ, ಆಗ ನಮ್ಮಿಂದ ಕೃತಿಗಳು ಆಗುತ್ತವೆ. ಅಂತರ್ಮನಸ್ಸಿಗೆ ಅರಿವಾಗಲು ತಮ್ಮಿಂದ ಪ್ರಯತ್ನಗಳಾಗದಿದ್ದರೆ ಶಿಕ್ಷೆಯನ್ನು ತೆಗೆದುಕೊಳ್ಳಬೇಕು. ಇಂದು ಪಟ್ಟಿಯನ್ನು ಬರೆಯುವುದು ಮತ್ತು ಸ್ವಯಂಸೂಚನೆಸತ್ರಗಳನ್ನು ಮಾಡದ ಹೊರತು ನಾನು ಊಟ ಮಾಡುವುದಿಲ್ಲ, ಎಂದು ಮನಸ್ಸಿಗೆ ಬಂಧನವನ್ನು ಹಾಕಿಕೊಳ್ಳಬೇಕು. ಪ್ರಯತ್ನಗಳು ಪೂರ್ಣವಾದ ನಂತರವೇ ಸಮಯಕ್ಕೆ ಸರಿಯಾಗಿ ಊಟ ಮಾಡಲು ಬರುತ್ತದೆ. ಯಾವಾಗ ಮೇಲುಮೇಲಿನಿಂದ ಅನಿಸುತ್ತದೆಯೋ, ಅದರಿಂದ ಏನು ಆಗುವುದಿಲ್ಲ. ಮಧುಮೇಹ ಆಗಿರುವವನಿಗೆ ಇನ್ಸೂಲಿನ ಮಹತ್ವವು ಹೇಗೆ ಗೊತ್ತಿರುತ್ತದೆಯೋ, ಹಾಗೆ ನಮ್ಮ ಮನಸ್ಸಿಗೆ ಸಾಧನೆಯ ಪ್ರಯತ್ನದ ಮಹತ್ವ ತಿಳಿಯಬೇಕು, ಆಗಲೇ ಕೃತಿಯಾಗುತ್ತದೆ.’ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಬೇಕು. ಎಷ್ಟು ಯೋನಿಗಳಿಂದ ಬಂದ ನಂತರ ನಮಗೆ ಈ ಜನ್ಮ ಮತ್ತು ಗುರುಗಳು ದೊರಕಿದ್ದಾರೆ. ಇಂತಹ ಜನ್ಮ ಮತ್ತು ಗುರುಗಳು ಪುನಃ ಸಿಗಲಾರರು. ಆಪತ್ಕಾಲದಲ್ಲಿ ವೇಗದಿಂದ ಸಾಧನೆಯಾಗುವುದು, ಅದಕ್ಕಾಗಿ ಸಂಕಲ್ಪವು ಕಾರ್ಯನಿರತವಾಗಿದೆ. ಭವಸಾಗರದಿಂದ ಮುಕ್ತವಾಗಬೇಕಾಗಿದೆ.’

– ಕು. ಮೇಘಾ ಚವ್ಹಾಣ, (ಎಲ್ಲ ಅಂಶಗಳ ದಿನಾಂಕ : ೨೯.೯.೨೦೨೩)