ಡಿಸೆಂಬರ್ ೧೩ ಮತ್ತು ೧೪ ರಂದು ನಡೆಯಲಿದೆ ಮಹೋತ್ಸವ!

ನವದೆಹಲಿ, ನವೆಂಬರ್ ೮ (ವರದಿ) – ಸನಾತನ ರಾಷ್ಟ್ರದ ಪುನರ್ವೈಭವವನ್ನು ಮರಳಿ ಪಡೆಯಲು, ಅದಕ್ಕಾಗಿ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉಳಿಸಿಕೊಳ್ಳಲು, ಹಾಗೂ ರಾಷ್ಟ್ರದ ಸುರಕ್ಷತೆ ಇತ್ಯಾದಿ ವಿವಿಧ ವಿಷಯಗಳ ಕುರಿತು ಚರ್ಚೆಯ ಮೂಲಕ ಮಾರ್ಗದರ್ಶನವನ್ನು ನಿರ್ಧರಿಸಲು ದೆಹಲಿಯ ‘ಭಾರತ್ ಮಂಟಪಂ’ನಲ್ಲಿ ಸನಾತನ ಸಂಸ್ಥೆಯ ವತಿಯಿಂದ ಡಿಸೆಂಬರ್ ೧೩ ಮತ್ತು ೧೪ ರಂದು ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವವನ್ನು ಆಯೋಜಿಸಲಾಗಿದೆ. ಸಂತಗಣರೊಂದಿಗೆ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು, ರಾಷ್ಟ್ರ, ಧರ್ಮ ಮತ್ತು ಹಿಂದುತ್ವಕ್ಕಾಗಿ ಕರ್ತವ್ಯ ಭಾವನೆಯಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರ-ಧರ್ಮ ಪ್ರೇಮಿಗಳು ಈ ಮಹೋತ್ಸವದಲ್ಲಿ ಉಪಸ್ಥಿತರಿರುತ್ತಾರೆ. ಈ ಮಹೋತ್ಸವಕ್ಕೆ ವಿವಿಧ ಗಣ್ಯರಿಗೆ ಆಹ್ವಾನವನ್ನು ನೀಡಲಾಗುತ್ತಿದೆ.
ಡಿಸೆಂಬರ್ ೧೩ ರಂದು ಈ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಈ ಮಹೋತ್ಸವದಲ್ಲಿ ಭಾರತದ ಸುರಕ್ಷತೆಯ ದೃಷ್ಟಿಯಿಂದ ನಕ್ಸಲ್ವಾದ ಮತ್ತು ಭಯೋತ್ಪಾದನೆ ಸಮಸ್ಯೆಗಳ ಕುರಿತು ಮಾರ್ಗದರ್ಶನ, ಹಾಗೂ ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆ ಇತ್ಯಾದಿ ವಿಷಯಗಳ ಕುರಿತು ವಿವಿಧ ಕ್ಷೇತ್ರಗಳ ಗಣ್ಯರು ವಿಚಾರಗಳನ್ನು ಮಂಡಿಸಲಿದ್ದಾರೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ದ ಕೋಶಾಧ್ಯಕ್ಷ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರು ಈ ಮಹೋತ್ಸವಕ್ಕೆ ಆಶೀರ್ವಾದ ನೀಡಿದ್ದಾರೆ.
ಮಹೋತ್ಸವದ ವೈಶಿಷ್ಟ್ಯಛತ್ರಪತಿ ಶಿವಾಜಿ ಮಹಾರಾಜರ ಭವಾನಿ ಖಡ್ಗದ ದರ್ಶನ, ಹಾಗೂ ಅವರ ಕಾಲದಲ್ಲಿ ಬಳಸಲಾದ ವಿವಿಧ ಶಸ್ತ್ರಾಸ್ತ್ರಗಳ ಪ್ರದರ್ಶನ, ಇದು ಈ ಮಹೋತ್ಸವದ ಮುಖ್ಯ ವೈಶಿಷ್ಟ್ಯವಾಗಿದೆ. ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹೂರಕರ್ ಅವರು ‘ಈ ಪ್ರದರ್ಶನಕ್ಕೆ ಸಮಸ್ತ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಭೇಟಿ ನೀಡಬೇಕು’ ಎಂದು ಆಹ್ವಾನ ನೀಡಿದ್ದಾರೆ. |
ವಿವಿಧ ಗಣ್ಯರಿಗೆ ಆಹ್ವಾನ!
೧. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ. ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಅವರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಹ್ವಾನವನ್ನು ನೀಡಿದರು.

೨. ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತ ರಾಜ್ಯಗಳ ಸಮನ್ವಯಕ ಶ್ರೀ. ಶಂಭು ಗವಾರೆ ಮತ್ತು ‘ಭಾರತ ಜಾಗರಣ ಪರಿಷತ್’ನ ಸಂಸ್ಥಾಪಕ ಶ್ರೀ. ಅಂಕಿತ ಕೋಠಾರಿ ಅವರು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಸಂಸ್ಥಾಪಕ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಅವರಿಗೆ ಮಹೋತ್ಸವದ ಆಹ್ವಾನವನ್ನು ನೀಡಿದರು.
|
|
|
೩. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ ವರ್ತಕ ಅವರು ‘ಎಬಿಪಿ ಮಾಝಾ’ ಸುದ್ದಿ ವಾಹಿನಿಯ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಶ್ರೀ. ರಾಜೀವ ಖಾಂಡೇಕರ್ ಮತ್ತು ‘ಎಬಿಪಿ ನ್ಯೂಸ್’ನ ಡಿಜಿಟಲ್ ವಿಭಾಗದ ಮುಖ್ಯಸ್ಥ ತುಷಾರ್ ಬ್ಯಾನರ್ಜಿ ಅವರಿಗೆ ಮಹೋತ್ಸವದ ಆಹ್ವಾನವನ್ನು ನೀಡಿದರು.

೪. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಅವರು ದೆಹಲಿಯ ‘ಛತ್ರಪತಿ ಶಿವಾಜಿ ಮಹಾರಾಜ ರಾಷ್ಟ್ರೀಯ ಸ್ಮಾರಕ ಸಮಿತಿ’ಯ ಮುಖ್ಯ ಕಾರ್ಯದರ್ಶಿ ಕರ್ನಲ್ ಮೋಹನ್ ಕಾಕಟೀಕರ್ (ನಿವೃತ್ತ) ಅವರಿಗೆ ಮಹೋತ್ಸವದ ಆಹ್ವಾನವನ್ನು ನೀಡಿದರು.


ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ