ವಿಚಾರಗಳ ವಿಸರ್ಜನೆ…. ಪಯಾಣ ಮನಸ್ಸಿನ !

ಲಕ್ಷಾಂತರ ಜನರನ್ನು ಕೊಂದ ಕ್ರೂರ ಹಿಟ್ಲರ್‌ ಕೊನೆಗೆ ಆತ್ಮಹತ್ಯೆ ಮಾಡಿಕೊಂಡನು ! ಏಕೆ ಗೊತ್ತಾ ? ಅವನು ಮನಸ್ಸಿನಿಂದ ದುರ್ಬಲನಾಗಿದ್ದನೆ ? ಹಾಗಾದರೆ ಅವನಿಗೆ ಇಂತಹ ಪರಿಸ್ಥಿತಿ ಏಕೆ ಬಂತು ? ಎಲ್ಲರ ಮನಸ್ಸಿನಲ್ಲಿ ಈ ಕುತೂಹಲ ಇರುತ್ತದೆ. ಸುಂದರ ವಿಚಾರಗಳನ್ನು ನೀಡುವ ಸಾನೆಗುರುಜಿ ಇವರು ಆತ್ಯಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಸಿದ್ಧ ಕಲಾ ನಿರ್ದೇಶಕ ನಿತೀನ ದೇಸಾಯಿ ಇವರು ಸಹ ಬಹಳ ಸಾಲ ಮಾಡಿದುದರಿಂದ ಆತ್ಯಹತ್ಯೆ ಮಾಡಿ ಕೊಂಡರು. ಕೆಲವು ತಿಂಗಳು ಹಿಂದಷ್ಟೇ ‘ನಿರಾಶೆಯೊಂದಿಗೆ ಹೋರಾಡುವುದು ಹೇಗೆ ?’, ಎಂಬ ಬಗ್ಗೆ ಕಲಿಸುತ್ತಿದ್ದ ಶೀತಲ್‌ (ಆಮಟೆ) ಕರಜಗಿ ಇವರು ತಮ್ಮ ಬದುಕನ್ನು ಕೊನೆಗೊಳಿಸಿದರು. ಉನ್ನತ ವಿದ್ಯಾಭ್ಯಾಸ ಪಡೆದ, ದಿವಂಗತ ಕುಲಗುರುಗಳ ಪತ್ನಿ, ಹಾಗೆಯೇ ರಾಷ್ಟ್ರಸಂತ ತುಕಡೋಜಿ ಮಹಾರಾಜ ನಾಗಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಮುಖ ಡಾ. ಜ್ಯೋತ್ಸ್ನಾ ಮೇಶ್ರಾಮ ಇವರು ನಿರಾಶೆಯಿಂದಾಗಿ ೯ ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂತಹ ಎಷ್ಟೋ ಉದಾಹರಣೆಗಳು ನಮಗೆ ಕಾಣಿಸುತ್ತವೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಇಂತಹ ಹೋರಾಟವು ಇದ್ದೇ ಇರುತ್ತದೆ; ಆದರೆ ಆತ್ಮಹತ್ಯೆಯು ಅದಕ್ಕೆ ಮಾರ್ಗವಲ್ಲ ಅಥವಾ ಪರಿಹಾರವಲ್ಲ. ಮನಸ್ಸಿನ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಹೊರಹಾಕಿ ಸೂಕ್ತ ಮಾರ್ಗದರ್ಶನ ಪಡೆದು ಜೀವನದಲ್ಲಿ ಮುಂದೆ ಸಾಗುವುದು ಆವಶ್ಯಕವಾಗಿರುತ್ತದೆ.

ಮನಸ್ಸಿನ ವಿಚಾರಗಳಿಗೆ ಯೋಗ್ಯ ದಿಶೆ ಸಿಗುವುದು ಆವಶ್ಯಕವಾಗಿದೆ. ಆವಶ್ಯಕ, ಅನಾವಶ್ಯಕ, ಹಾಗೆಯೇ ನಮಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳನ್ನು ಗುರುತಿಸಲು ಬರಬೇಕು. ಅಂತರ್ಮುಖ ಮತ್ತು ಸ್ಥಿರ ಬುದ್ಧಿಯ ಮನುಷ್ಯನೇ ಇದನ್ನು ಮಾಡಬಹುದು. ‘ಮನ ಎವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ |’

(ಮೈತ್ರಾಯಣ್ಯುಪನಿಷದ್, ಪ್ರಪಾಠಕ ೪, ಶ್ಲೋಕ ೧೪), ಇದರ ಅರ್ಥ ‘ಮನಸ್ಸೇ ಮನುಷ್ಯರ ಬಂಧನಕ್ಕೆ ಮತ್ತು ಮುಕ್ತಿಗೆ ಕಾರಣವಾಗಿದೆ.’ ಸಮರ್ಥ ರಾಮದಾಸಸ್ವಾಮಿಗಳು ಕೇವಲ ಮನಸ್ಸಿನ ಬಗ್ಗೆ ೧೦೮ ಶ್ಲೋಕಗಳನ್ನು ಬರೆದಿದ್ದಾರೆ. ‘ಮನಾಚೆ ಶ್ಲೋಕ’ ಎಂದು ಅದು ಪ್ರಸಿದ್ಧವಾಗಿದೆ. ಮನಸ್ಸೇ ಎಲ್ಲದರ ಮೂಲ ಕಾರಣವಾಗಿರುತ್ತದೆ. ರೋಗಗಳಿಂದ ಷಡ್ರಿಪುಗಳ ವರೆಗೆ ಎಲ್ಲವೂ ಮನಸ್ಸಿನ ಸ್ಥಿತಿ ಕೆಟ್ಟರೆ, ಅವು ಹೆಚ್ಚಾಗುತ್ತವೆ. ಮನಸ್ಸಿನಲ್ಲಿ ಸಂಗ್ರಹವಾದ ವಿಚಾರಗಳನ್ನು ಹೊರಹಾಕುವುದು ಅಷ್ಟೇ ಆವಶ್ಯಕವಾಗಿದೆ. ಆದುದರಿಂದ ಮನಸ್ಸು ಹಗುರವಾಗುವುದು ಮಹತ್ವದ್ದಾಗಿದೆ. ಮನಸ್ಸಿನ ಈ ಹೊರಹಾಕುವಿಕೆಯೂ ಸೂಕ್ತ ಸ್ಥಳದಲ್ಲಿ ಆಗುವುದು ಬಹಳ ಮುಖ್ಯ. ಯಾರೊಂದಿಗಾದರೂ ಮಾತನಾಡಿದೆ ಮನಸ್ಸು ಹಗುರವಾಯಿತು’, ಎಂದು ಅನಿಸುತ್ತದೆ. ಅದು ತಾತ್ಕಾಲಿಕವಾಗಿರುತ್ತದೆ; ಏಕೆಂದರೆ ಪುನಃ ಅಂತಹ ವಿಚಾರಗಳೇ ಮನಸ್ಸಿನಲ್ಲಿ ಬರುತ್ತಲೇ ಇರುತ್ತವೆ.

‘ಅಯೋಗ್ಯ ವಿಚಾರಗಳು ಮನಸ್ಸಿನಲ್ಲಿ ಪುನಃ ಬರುವುದೇ ಇಲ್ಲ’, ಎಂಬಂತಹ ಪರಿಹಾರಯೋಜನೆ ಎಂದರೆ ಆ ವಿಚಾರಗಳ ಮೂಲವನ್ನು ಕಂಡು ಹಿಡಿಯುವುದು. ಈ ಮೂಲವು ಎಲ್ಲಿಯೋ ನಮ್ಮ ಸ್ವಭಾವದೋಷಗಳಲ್ಲಿಯೇ ಇರುತ್ತದೆ. ಅದನ್ನು ಹುಡುಕಿ ಆ ದೋಷಗಳ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ. ಇದಕ್ಕಾಗಿ ನಮಗೆ ಯೋಗ್ಯ ದಿಶೆಯನ್ನು ತೋರಿಸುವ ಸಮರ್ಥ ಆಧ್ಯಾತ್ಮಿಕ ವ್ಯಕ್ತಿಯು ಬೇಕು, ಹಾಗೆಯೇ ಮನಸ್ಸಿನ ಶಕ್ತಿಯು ಸರಿಯಾದ ಕಡೆಗೆ ಉಪಯೋಗಿಸಲ್ಪಡಬೇಕು ಮತ್ತು ಸದ್ವಿವೇಕಬುದ್ಧಿಯು ಉತ್ಪನ್ನವಾಗಬೇಕು, ಎಂಬುದಕ್ಕಾಗಿ ನಾಮಜಪ ಮುಂತಾದ ಸಾಧನೆಗಳನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಸರಿಯಾದ ಸಾಧನೆ ಮಾಡಿದರೆ ನಿರಾಶೆಯು ದೂರವಾಗಿ ಅಲ್ಪಾವಧಿಯಲ್ಲಿ ಲಾಭವಾಗಿ ನಮ್ಮ ಜೀವನವು ಆನಂದಮಯವಾಗುತ್ತದೆ.

– ಸೌ. ಗೌರಿ ವೈಭವ ಆಫಳೆ, ಗೋವಾ.