
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು, ಭಾರತೀಯ ಮೂಲದ, ಜಿಹಾದಿ ಭಯೋತ್ಪಾದಕರಿಗೆ ಆದರ್ಶ ಮತ್ತು ಭಾರತದಿಂದ ಪರಾರಿಯಾಗಿರುವ ಇಸ್ಲಾಮಿಕ್ ಧರ್ಮಪ್ರಚಾರಕ ಡಾ. ಝಾಕಿರ್ ನಾಯಿಕ ಗೆ ದೇಶಕ್ಕೆ ಪ್ರವೇಶ ನೀಡದಿರಲು ನಿರ್ಧರಿಸಿದೆ. ಈ ನಿರ್ಧಾರವನ್ನು ಇತ್ತೀಚೆಗೆ ಗೃಹ ಸಚಿವಾಲಯದಲ್ಲಿ ನಡೆದ ‘ಕಾನೂನು ಮತ್ತು ಸುವ್ಯವಸ್ಥೆ ಸಮಿತಿ’ಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ‘ಝಾಕಿರ್ ಬಾಂಗ್ಲಾದೇಶಕ್ಕೆ ಬಂದರೆ ಭಾರೀ ಜನಸಂದಣಿ ಉಂಟಾಗಬಹುದು. ಆ ಜನಸಂದಣಿಯನ್ನು ನಿಯಂತ್ರಿಸಲು ದೊಡ್ಡ ಸಂಖ್ಯೆಯ ಭದ್ರತಾ ಪಡೆಗಳ ಅವಶ್ಯಕತೆ ಇರುತ್ತದೆ; ಆದರೆ ಸದ್ಯಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಿಲ್ಲ,’ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಪ್ರವೇಶ ನಿರಾಕರಿಸಲು ಕಾರಣ ನೀಡಿದ್ದಾರೆ.
1. ಈ ಹಿಂದೆ ‘ಸ್ಪಾರ್ಕ್ ಇವೆಂಟ್ ಮ್ಯಾನೇಜಮೆಂಟ್’ ಎಂಬ ಖಾಸಗಿ ಸಂಸ್ಥೆಯು ನವೆಂಬರ್ ಅಂತ್ಯದಲ್ಲಿ ಝಾಕಿರ್ ನನ್ನು ಬಾಂಗ್ಲಾದೇಶಕ್ಕೆ ಕರೆತರಲಾಗುವುದು ಎಂದು ಘೋಷಿಸಿತ್ತು; ಆದರೆ ಈಗ ಸರಕಾರದ ಈ ನಿರ್ಧಾರದ ನಂತರ ಆ ಕಾರ್ಯಕ್ರಮದ ಮೇಲೆ ಅನಿಶ್ಚಿತತೆಯ ಕರಿನೆರಳು ಆವರಿಸಿದೆ.
2. ಅಧಿಕಾರಿಗಳು, ‘ಭಾರತ ಸೇರಿದಂತೆ ಯಾವುದೇ ದೇಶವು ಮತ್ತೊಂದು ದೇಶದ ಆರೋಪಿ ಅಥವಾ ಪರಾರಿಯಾದ ವ್ಯಕ್ತಿಗಳಿಗೆ ಆಶ್ರಯ ನೀಡಬಾರದು ಎಂದು ನಾವು ಭಾವಿಸುತ್ತೇವೆ,’ ಎಂದೂ ಹೇಳಿದ್ದಾರೆ.
ಭಾರತವು ಸದ್ಯ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿದೆ, ಇದರ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ. (ರಾಜಕೀಯ ಆಶ್ರಯ ಬೇರೆ ಮತ್ತು ಅಪರಾಧಿಗೆ ಆಶ್ರಯ ನೀಡುವುದು ಬೇರೆ, ಇದು ಬಾಂಗ್ಲಾದೇಶದ ಅಧಿಕಾರಿಗಳಿಗೆ ತಿಳಿದಿದ್ದರೂ ಅವರು ಭಾರತವನ್ನು ಕೆಣಕಲು ಪ್ರಯತ್ನಿಸುತ್ತಿದ್ದಾರೆ. ಭಾರತವು ಇಂತಹ ಬಾಂಗ್ಲಾದೇಶಿಗಳಿಗೆ ಪಾಠ ಕಲಿಸುವುದು ಅವಶ್ಯಕವಾಗಿದೆ ! – ಸಂಪಾದಕರು)
3. ಝಾಕಿರ್ 2016 ರಿಂದ ಭಾರತದಿಂದ ಹೊರಗಿದ್ದಾನೆ. ಆತನ ವಿರುದ್ಧ ಆರ್ಥಿಕ ಅಕ್ರಮಗಳು ಮತ್ತು ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದ ಅನೇಕ ಅಪರಾಧಗಳು ದಾಖಲಾಗಿವೆ. ಅವನು ಭಾರತದಿಂದ ಪರಾರಿಯಾಗಿದ್ದು, ಸದ್ಯ ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾನೆ. ಅನೇಕ ದೇಶಗಳಲ್ಲಿ ಆತನ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ.
4. 2016 ರಲ್ಲಿ ಬಾಂಗ್ಲಾದೇಶದ ಹೋಲಿ ಆರ್ಟಿಸನ್ ಬೇಕರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ದಾಳಿಕೋರರ ಮೇಲೆ ಝಾಕಿರ್ ನ ಭಾಷಣಗಳ ಪ್ರಭಾವವಿತ್ತು ಎಂಬ ವರದಿಗಳು ಹೊರಬಂದಿದ್ದವು.
ಝಾಕಿರ್ ಬಾಂಗ್ಲಾದೇಶಕ್ಕೆ ಬಂದರೆ ನಮ್ಮ ವಶಕ್ಕೆ ನೀಡಿ! – ಭಾರತದಿಂದ ಬೇಡಿಕೆ ಇತ್ತು
ಝಾಕಿರ್ ಬಾಂಗ್ಲಾದೇಶಕ್ಕೆ ಬರಲಿದ್ದಾನೆ ಎಂಬ ವರದಿಯ ನಂತರ ಭಾರತವು ಅಧಿಕೃತವಾಗಿ ಆಕ್ಷೇಪಣೆ ಸಲ್ಲಿಸಿತ್ತು. ಭಾರತೀಯ ವಿದೇಶಾಂಗ ಸಚಿವಾಲಯವು, ಝಾಕಿರ್ ಬಾಂಗ್ಲಾದೇಶಕ್ಕೆ ಬಂದರೆ, ಆತನನ್ನು ಭಾರತದ ವಶಕ್ಕೆ ಒಪ್ಪಿಸಬೇಕು ಎಂದು ತಿಳಿಸಿತ್ತು.
ಶೇಖ್ ಹಸೀನಾ ಕೂಡ ನಿಷೇಧ ಹೇರಿದ್ದರು
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರಕಾರವು 2016 ರಲ್ಲಿ ಝಾಕಿರ್ ನಿಗೆ ದೇಶದಲ್ಲಿ ಬರುವುದರ ಮೇಲೆ ನಿಷೇಧ ಹೇರಿತ್ತು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
೫ ರಾಜ್ಯಗಳಲ್ಲಿ ಲವ್ ಜಿಹಾದ್ ನ ೭ ಪ್ರಕರಣಗಳು ಬೆಳಕಿಗೆ!
ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಇಡೀ ಇರಾನ್ ಅನ್ನು ನಾಶಪಡಿಸಲಾಗುವುದು! : Donald Trump
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಬಾರಾಬಂಕಿಯಲ್ಲಿ (ಉತ್ತರ ಪ್ರದೇಶ) ಮುಸ್ಲಿಮರಿಂದ ಹಿಂದೂಗಳ ಮತಾಂತರ ಮುಂದುವರಿಕೆ !