ದಾವಣಗೆರೆ ವ್ಯಾಯಾಮಶಾಲೆಯ ಮಾಲೀಕ ಇಸ್ಮಾಯಿಲ್ ಹಿಂದೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ

ದಾವಣಗೆರೆ – ನಗರದ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಅವರ ವಿಡಿಯೋಗಳನ್ನು ಮಾಡಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ‘ಪವರ್ ಫಿಟ್ನೆಸ್ ಜಿಮ್’ನ ಮಾಲೀಕ ಮತ್ತು ತರಬೇತುದಾರ ಇಸ್ಮಾಯಿಲ್ ಅನ್ನು ಮುಸ್ಲಿಂ ಸಮುದಾಯದ ನಾಯಕರು ತಕ್ಷಣವೇ ಸಮಾಜದಿಂದ ಬಹಿಷ್ಕರಿಸಬೇಕು ಎಂದು ಭಾಜಪ ಜಿಲ್ಲಾಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ಆಗ್ರಹಿಸಿದ್ದಾರೆ. ಇಸ್ಮಾಯಿಲ್‌ನಂತಹ ವ್ಯಕ್ತಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಮತ್ತು ಧಾರ್ಮಿಕ ಸಾಮರಸ್ಯ ಹದಗೆಡುವ ಭೀತಿಯಿದೆ ಎಂದು ನಾಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀರಾಮ ಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಜಂಟಿ ಕಾರ್ಯಾಚರಣೆ ನಡೆಸಿ ಈ ‘ಜಿಮ್ ಜಿಹಾದ್’ ಅನ್ನು ಬಯಲಿಗೆಳೆದಿದೆ. ಪೊಲೀಸರು ಇಸ್ಮಾಯಿಲ್‌ನಂತಹ ಅಪರಾಧಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಾಗಪ್ಪ ಹೇಳಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಭಾಜಪ ನಾಯಕರಾದ ಅನಂತ ನಾಯ್ಕ್, ಕೊಳೆನಹಳ್ಳಿ ಸತೀಶ್, ಧನಂಜಯ್ ಕಡ್ಲೆಬಾಳು, ವಿಶ್ವಾಸ್ ಎಚ್.ಪಿ. ಮತ್ತು ಇತರರು ಉಪಸ್ಥಿತರಿದ್ದರು.
ಏನಿದು ಪ್ರಕರಣ
ದಾವಣಗೆರೆ ನಗರದ ಸರಸ್ವತಿ ನಗರದಲ್ಲಿ ಆರೋಪಿ ಇಸ್ಮಾಯಿಲ್ ತಾನು ಹಿಂದೂ ಎಂದು ಸುಳ್ಳು ಹೇಳಿ ‘ಪವರ್ ಫಿಟ್ನೆಸ್’ ಜಿಮ್ ನಡೆಸುತ್ತಿದ್ದನು. ಅವನು ತನ್ನ ಗುರುತನ್ನು ಮರೆಮಾಚಿ 10ಕ್ಕೂ ಹೆಚ್ಚು ಹಿಂದೂ ಯುವತಿಯರು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅವನು ಈ ಲೈಂಗಿಕ ಕೃತ್ಯಗಳ ರಹಸ್ಯ ವಿಡಿಯೋಗಳನ್ನು ಮಾಡಿ, ಅವುಗಳ ಆಧಾರದ ಮೇಲೆ ಸಂತ್ರಸ್ತರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪವೂ ಅವನ ಮೇಲಿದೆ. ಇಸ್ಮಾಯಿಲ್ ವಿವಾಹಿತನಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ ಅವರು ಬಯಲಿಗೆಳೆದಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !