ಫ್ರಾನ್ಸ್ ಅಧ್ಯಕ್ಷರ ವಾಸ್ತವ್ಯದ ಸಮೀಪ 4 ಬಾಂಬ್ ಸ್ಫೋಟ : Syria Blast News

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಭೇಟಿಯ ಸಮಯದಲ್ಲಿ ಈ ದಾಳಿ ನಡೆದಿದೆ.

ದಮಸ್ಕಸ್ (ಸಿರಿಯಾ) – ಸಿರಿಯಾದ ರಾಜಧಾನಿ ದಮಸ್ಕಸ್‌ನಲ್ಲಿ ಜುಲೈ 7 ರಂದು ಸತತ 4 ಬಾಂಬ್ ಸ್ಫೋಟಗಳು ಸಂಭವಿಸಿದವು. ಇದರಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಸಿರಿಯಾದ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನದಲ್ಲಿದ್ದಾಗ, ನಗರದ ‘ಫೋರ್ ಸೀಸನ್ಸ್’ ಹೋಟೆಲ್ ಆವರಣದಲ್ಲಿ ಈ ಸ್ಫೋಟಗಳು ಸಂಭವಿಸಿದವು. ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಹೋಟೆಲ್‌ನಿಂದ ಹೊರಬಂದು ಕೇವಲ 25 ನಿಮಿಷಗಳಷ್ಟೇ ಆಗಿತ್ತು. ಸದ್ಯ ಯಾವುದೇ ಸಂಘಟನೆಯು ಈ ಘಟನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಭದ್ರತಾ ಪಡೆಗಳು ಈ ಪ್ರಕರಣದ ತನಿಖೆ ನಡೆಸುತ್ತಿವೆ. ಸಿರಿಯಾದಲ್ಲಿ ಹೊಸ ಸರಕಾರ ರಚನೆಯಾದ ನಂತರ ಯುರೋಪಿಯನ್ ನಾಯಕರೊಬ್ಬರು ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ.