ಮಂದಿರ ಮತ್ತು ವಿಗ್ರಹ ಧ್ವಂಸ
ಮುಖ್ಯ ಆರೋಪಿಯನ್ನು ಹಿಡಿದಿಟ್ಟ ಸ್ಥಳೀಯ ಹಿಂದೂಗಳು

ಢಾಕಾ (ಬಾಂಗ್ಲಾದೇಶ) – ಪಂಚಗಢ್ ಜಿಲ್ಲೆಯ ಅತ್ವಾರಿ ಉಪ ಜಿಲ್ಲೆಯಲ್ಲಿರುವ ಐತಿಹಾಸಿಕ ಶ್ರೀ ಕಾಳಿಮಾತಾ ಮಂದಿರವನ್ನು ಕೆಲವು ಮತಾಂಧ ಮುಸ್ಲಿಮರು ಗುರಿ ಮಾಡಿದ್ದಾರೆ. ಮಂದಿರದ ಕಟ್ಟಡವನ್ನು ಧ್ವಂಸಗೊಳಿಸಿದ್ದಲ್ಲದೆ, ಮಂದಿರದಲ್ಲಿದ್ದ ಪವಿತ್ರ ಶ್ರೀ ಕಾಳಿಮಾತೆಯ ವಿಗ್ರಹವನ್ನು ಅತ್ಯಂತ ಅಮಾನುಷವಾಗಿ ವಿರೂಪಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯ ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಮುಖ್ಯ ಆರೋಪಿಯನ್ನು ಹಿಡಿದ ಸ್ಥಳೀಯರು
ಈ ಪ್ರಕರಣದ ಮುಖ್ಯ ಆರೋಪಿಯನ್ನು ಜಾಕೇರ್ ಇಸ್ಲಾಂ ಎಂದು ಗುರುತಿಸಲಾಗಿದೆ. ದಾಳಿಯ ನಂತರ ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ, ಸ್ಥಳೀಯ ಹಿಂದೂಗಳು ಅತ್ಯಂತ ಜಾಗರೂಕತೆ ಮತ್ತು ತತ್ಪರತೆ ತೋರಿಸಿ ಆತನನ್ನು ಹಿಡಿದಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಸ್ಥಳೀಯರು ಆತನನ್ನು ಹಿಡಿದಾಗ, ವಿರೂಪಗೊಳಿಸಲಾಗಿದ್ದ ಶ್ರೀ ಕಾಳಿಮಾತೆಯ ವಿಗ್ರಹದ ಶಿರ (ತಲೆ) ಆತನ ಕೈಯಲ್ಲಿತ್ತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ,”ನಮ್ಮ ಈ ಪುರಾತನ ಶ್ರೀ ಕಾಳಿಮಾತಾ ಮಂದಿರ ಮತ್ತು ಈ ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ಧ್ವಂಸಗೊಳಿಸಲಾಗಿದೆ. ಹಗಲು ಹೊತ್ತಿನಲ್ಲಿ ಎಲ್ಲರ ಸಮ್ಮುಖದಲ್ಲೇ ಇಂತಹ ಘಟನೆಗಳು ನಡೆದರೆ, ನಾವು ಹಿಂದೂಗಳು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು? ನಾವು ನಮ್ಮ ಹಬ್ಬಗಳು, ನಮ್ಮ ಪ್ರಾಣ ಮತ್ತು ನಮ್ಮ ಧರ್ಮವನ್ನು ಹೇಗೆ ರಕ್ಷಿಸಿಕೊಳ್ಳಬೇಕು?” ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯು ಈ ಪ್ರಕರಣದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ ಮಂದಿರದ ಭೂಮಿಗೆ ಶಾಶ್ವತ ರಕ್ಷಣೆ ನೀಡಬೇಕು ಮತ್ತು ಜಾಕೇರ್ ಇಸ್ಲಾಂ ಸೇರಿದಂತೆ ಈ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border