
ಕಿಶೋರವಯಸ್ಸಿನಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಕಾಯಿಲೆ ಮತ್ತು ಅನಾರೋಗ್ಯಗಳ ಹಿನ್ನೆಲೆಯಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ನೆರವೇರಿದ ಸಮೀಕ್ಷೆಯ ನಿಷ್ಕರ್ಷ ಕ್ಕನುಸಾರ ಇಡೀ ಕುಟುಂಬದೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವ ಮಕ್ಕಳಲ್ಲಿ ನಕಾರಾತ್ಮಕ ಭಾವ, ಜಂಕ್ ಫುಡ್ ತಿನ್ನುವ ರೂಢಿ ಇರುವುದಿಲ್ಲ, ಅವರು ಆನಂದದಿಂದಿರುತ್ತಾರೆ. ಅಧ್ಯಯನದಲ್ಲಿಯೂ ಅವರ ಕ್ಷಮತೆಯು ಇತರ ವಿದ್ಯಾರ್ಥಿಗಳ ತುಲನೆಯಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಈ ಸಮೀಕ್ಷೆಯಿಂದ ಭಾರತೀಯ ಕುಟುಂಬವ್ಯವಸ್ಥೆಯ ವೈಶಿಷ್ಟ್ಯವು ಮತ್ತೊಮ್ಮೆ ಸಿದ್ಧವಾಯಿತು.
‘ಇಡೀ ಕುಟುಂಬದವರೊಂದಿಗೆ ಒಟ್ಟಿಗೆ ಕುಳಿತು ಊಟವನ್ನು ಮಾಡುವುದು’, ಇದು ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನವಿಲ್ಲದೇ ಯಾವುದೂ ಇಲ್ಲ. ಭಾರತೀಯ ಪರಂಪರೆ ಮತ್ತು ವ್ಯವಸ್ಥೆಯು ದೇಶಕಾಲಕ್ಕನುಗುಣವಾಗಿ ವಿಜ್ಞಾನದೊಂದಿಗೆ ನಿಕಟ ಸಂಬಂಧ ಗಳಿವೆ. ಇಡೀ ಕುಟುಂಬದವರೊಂದಿಗೆ ಒಟ್ಟಿಗೆ ಕುಳಿತು ಊಟವನ್ನು ಮಾಡುವುದರಿಂದ ಪರಸ್ಪರರಲ್ಲಿ ಚರ್ಚೆಯಾಗಿ ಸ್ನೇಹ ಬೆಳೆಯುತ್ತದೆ. ಪರಸ್ಪರರಲ್ಲಿ ಪ್ರೀತಿ ಮತ್ತು ಆತ್ಮೀಯತೆ ಬೆಳೆಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಬುದ್ಧಿ ತೀಕ್ಷ್ಣವಾಗುತ್ತದೆ ಮತ್ತು ದಕ್ಷತೆ ಹೆಚ್ಚಾಗತೊಡಗುತ್ತದೆ. ಮನುಷ್ಯನ ದೇಹದ ಪೂರ್ಣ ರಚನೆಯು ಮನಸ್ಸು, ಬುದ್ಧಿ ಮತ್ತು ದೇಹ ಒಟ್ಟಿಗೆ ಸೇರಿರುವುದರಿಂದ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಆರೋಗ್ಯವು ಉತ್ತಮವಾಗಿರುತ್ತದೆ.

ಭಾರತದಲ್ಲಿ ಸಮತೋಲನ ಆಹಾರವನ್ನು ಸೇವಿಸುವ ಪರಂಪರೆಯು ಅನಾದಿಕಾಲದಿಂದಲೂ ಬಂದಿದೆ. ಭಾರತೀಯ ಭೋಜನಪದ್ಧತಿಯ ಬಗ್ಗೆ ವಿಚಾರ ಮಾಡಿದರೆ ಷಡ್ರಸಯುಕ್ತ ಆಹಾರಗಳು (ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರು) ಹೊಟ್ಟೆಗೆ ಹೋಗಬೇಕು, ಆ ದೃಷ್ಟಿಯಿಂದ ಪಾಕಶಾಸ್ತ್ರದ ರಚನೆಯಾಗಿದೆ. ನಕಾರಾತ್ಮಕಭಾವವಿರುವ ಚಾಕಲೇಟ್, ಪಿಜ್ಜಾ, ಬರ್ಗರ್, ಮೊಮೋಜ್ ಇಂತಹ ತಿನಿಸುಗಳು ಭಾರತದಲ್ಲಿಲ್ಲ. ಭಾರತೀಯ ಚಿಕಿತ್ಸಾಪದ್ಧತಿಯಲ್ಲಿ ಆಯುರ್ವೇದದಲ್ಲಿ ಆಹಾರ-ವಿಹಾರಕ್ಕೆ ಮಹತ್ವವನ್ನು ನೀಡಲಾಗಿದೆ. ಅದರಿಂದಲೇ ಎಲ್ಲ ಸಮಾಜವು ಅನೇಕ ವರ್ಷಗಳಿಂದ ಕಾರ್ಯನಿರತವಾಗಿದೆ. ಆಹಾರ-ವಿಹಾರವು ಭಾರತದ ಶಕ್ತಿಯಾಗಿದೆ; ಆದರೆ ಭಾರತೀಯರಿಗೆ ಪ್ರಸ್ತುತ ವಿದೇಶಿಯರ ಅಂಧಾನುಕರಣೆ ಮಾಡುವ ರೂಢಿಯಾಗಿದೆ. ವಿದೇಶಿ ಸಂಸ್ಥೆಗಳು (ಕಂಪನಿಗಳು) ಮತ್ತು ವಿಶೇಷವಾಗಿ ಚೈನೀಸ್ ಹಾಗೂ ಅಮೇರಿಕನ್ ಸಂಸ್ಥೆಗಳು ಈ ಶಕ್ತಿಗಳ ಮೇಲೆ ದಾಳಿ ಮಾಡಿ ಯಾವುದೇ ಆಡಂಬರವಿಲ್ಲದೇ ಈ ವ್ಯವಸ್ಥೆಯನ್ನು ನಾಶಗೊಳಿಸುವ ಷಡ್ಯಂತ್ರ ನಡೆಸುತ್ತಿವೆ.
ಮೂಲದಲ್ಲಿ ಈ ಎಲ್ಲ ಆಕ್ರಮಣಗಳಿಂದ ಮತ್ತು ಮೋಹ ಜಾಲದಿಂದ ಮಕ್ಕಳನ್ನು ರಕ್ಷಿಸುವುದು, ಅವುಗಳನ್ನು ಮಕ್ಕಳಿಂದ ದೂರವಿಡುವುದು, ಇದು ಪಾಲಕರ ಜವಾಬ್ದಾರಿಯಾಗಿದೆ. ಮನೆಯಲ್ಲಿ ಮಕ್ಕಳು ಆನಂದದಿಂದಿರಬೇಕೆಂದು ಪಾಲಕರು ಮಕ್ಕಳ ಇಷ್ಟವಾದ ಪಿಝ್ಝಾ, ಬರ್ಗರ್ ಇಂತಹ ತಿನಿಸುಗಳನ್ನು ತಂದುಕೊಡುತ್ತಾರೆ. ಅವರು ಇಷ್ಟಪಡುವುದನ್ನು ಕೊಡದೇ ಅವರ ಆರೋಗ್ಯಕ್ಕಾಗಿ ಆವಶ್ಯಕವಾಗಿರುವ ಆಹಾರವನ್ನು ನೀಡುವುದು, ಪಾಲಕರ ಆದ್ಯಕರ್ತವ್ಯವಾಗಿದೆ. ಆವಾಗಲೇ ಆರೋಗ್ಯಶಾಲಿ ಪೀಳಿಗೆ ಸಿದ್ಧಪಡಿಸಲು ಸಾಧ್ಯ !
– ಶ್ರೀಮತಿ ಧನಶ್ರೀ ದೇಶಪಾಂಡೆ, ರಾಮನಾಥಿ, ಗೋವಾ.
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು