ಮಕ್ಕಳಲ್ಲಿ ಧರ್ಮ, ಪರಂಪರೆ ಮತ್ತು ಸಂಸ್ಕಾರ ಇದರ ಅಭಿಮಾನ ಮೂಡಲು ಕೃತಿ ಮಾಡುವುದು, ಧರ್ಮಪ್ರೇಮಿ ಹಿಂದೂಗಳ ಜವಾಬ್ದಾರಿ !

೧. ತಂದೆ ತಾಯಿಯರು ತಮ್ಮ ಮಕ್ಕಳಲ್ಲಿ ಧರ್ಮಾಚರಣೆಯ ಸಂಸ್ಕಾರ ಮಾಡಿದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ !

ನಾವು ಅನೇಕ ಸಂಪ್ರದಾಯ, ಸಿದ್ಧಾಂತ ಮತ್ತು ಉಪಾಸನೆಗಳಲ್ಲಿ ವಿಭಜಿತರಾಗಿದ್ದೇವೆ. ಆದ್ದರಿಂದ ನಾವು ಮುಕ್ತವಾಗಿ ಹಿಂದೂ ಎಂದು ಒಟ್ಟಾಗಿ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಭಾವಿ ಪೀಳಿಗೆಗೆ ತಮ್ಮನ್ನು ಹಿಂದೂ ಎಂದೆನಿಸಿಕೊಳ್ಳಲು ಅಭಿಮಾನ ಅನಿಸುವುದಿಲ್ಲ. ಇದನ್ನು ನಾವೆಲ್ಲರೂ ಬಹಳ ಗಂಭೀರವಾಗಿಯೆ ಯೋಚಿಸುವುದು ಅವಶ್ಯಕವಾಗಿದೆ. ಕಳೆದ ೭ ವರ್ಷಗಳಿಂದ ನಾವು ಗ್ಲೋಬಲ್‌ ಮಹಾನುಭವ ಸಂಘದ ಮಾಧ್ಯಮದಿಂದ ನವ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ಆಗ ಕೆಲವು ವಿಷಯಗಳ ಅರಿವಾಯಿತು. ಭಗವಾನ್‌ ಶ್ರೀಕೃಷ್ಣನು ತನ್ನ ಕಿರುಬೆರಳಿನ ಮೇಲೆ ಪರ್ವತ ಎತ್ತಿ ಹಿಡಿದು ಎಲ್ಲಾ ಗೋಪಗೋಪಿಯರನ್ನು ಧಾರಾಕಾರ ಮಳೆಯಿಂದ ರಕ್ಷಿಸಿದ್ದನು. ಆಗ ಅವನಿಗೆ ಎಲ್ಲರು ಸಹಾಯ ಮಾಡಿದ್ದರು. ನಾವು ನಮ್ಮ ಕುಟುಂಬದಲ್ಲಿ ನಮ್ಮ ಸಹೋದರ, ಸ್ನೇಹಿತ, ನಮ್ಮ ಜನರಿಗೆ ಸಹಾಯ ಮಾಡಲು ಹೇಳುತ್ತೇವೆ. ನೀನು ನಿಮ್ಮ ತಂದೆ, ಸಹೋದರಿ ಸ್ನೇಹಿತರನ್ನು ಪ್ರೀತಿಸಬೇಕು, ಅಷ್ಟೇ ಅಲ್ಲದೆ ನೀನು ನಿನ್ನ ಧರ್ಮವನ್ನು ಕೂಡ ಪ್ರೀತಿಸಬೇಕು ಮತ್ತು ಅದರ ಕುರಿತು ಅಚಲವಾದ ನಿಷ್ಠೆ ಇಟ್ಟುಕೊಳ್ಳಬೇಕು. ನಿನಗೆ ನಿನ್ನ ಧರ್ಮದ ಬಗ್ಗೆ ಅಭಿಮಾನ ಇರಬೇಕು, ಹೀಗೆ ತಾಯಿ ತಂದೆ ಅವರ ಮಕ್ಕಳಿಗೆ ಕಲಿಸುವುದಿಲ್ಲ, ಅಲ್ಲಿಯವರೆಗೆ ಹಿಂದೂ ರಾಷ್ಟ್ರದ ಪುನರ್ಸ್ಥಾಪನೆ ಹೇಗೆ ಆಗುವುದು ? ನಾವು ಇದರ ಯೋಚನೆ ಬಹಳ ಗಾಂಭೀರ್ಯದಿಂದ ಮಾಡಬೇಕು.

ಪೂ. ಸುದರ್ಶನ ಮಹಾರಾಜ ಕಪಾಟೆ

೨. ನಮ್ಮ ಧರ್ಮದಲ್ಲಿನ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವುದು ಆವಶ್ಯಕ

ಈಗ ಪ್ರತಿಯೊಬ್ಬರೂ ಅವರ ಮಕ್ಕಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳದ ಎಂದರೆ ಸಿ.ಬಿ.ಎಸ್‌.ಇ.ಯ ಶಿಕ್ಷಣ ನೀಡುತ್ತಾರೆ. ಎಷ್ಟು ಪೋಷಕರು ಮಕ್ಕಳಿಗೆ ಅವರ ಮಕ್ಕಳಿಗೆ ವೇದಗಳ ಜ್ಞಾನ ಸಿಗಬೇಕು ಎಂದು ಪ್ರಯತ್ನ ಮಾಡುತ್ತಾರೆ ? ಯಾರು ಇಲ್ಲ. ಇತ್ತೀಚೆಗೆ ನಾವು ಮಹರ್ಷಿ ಸಂದೀಪನಿ ವೇದ ವಿದ್ಯಾಲಯಕ್ಕೆ ಹೋಗಿದ್ದೆವು. ಅಲ್ಲಿ ವೇದಗಳ ಶಿಕ್ಷಣ ನೀಡಲಾಗುತ್ತದೆ. ಅದಕ್ಕಾಗಿ ಅವರಿಗೆ ಅನೇಕ ಅಡಚಣೆಗಳು ಎದುರಿಸಬೇಕಾಗುತ್ತದೆ. ನಿಮಗೆ ಅಂತಹ ಯಾವ ಅಡಚಣೆ ಇದೆ, ನಾವು ನಮ್ಮ ಮಕ್ಕಳಿಗೆ ವೈದಿಕ ಶಾಲೆಗಳಿಗೆ ಕಳಿಸಲು ಸಿದ್ಧರಿಲ್ಲ ? ನಾವು ಹಿಂದೂ ರಾಷ್ಟ್ರದ ಚರ್ಚೆ ಮಾಡುತ್ತೇವೆ. ಅದಕ್ಕೆ ಯಾರ ವಿರೋಧ ಇದೆ. ಅವರು ಶುಕ್ರವಾರ ನಮಾಜದ ಸಮಯವಾದರೆ, ಅಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ತಲೆಯ ಮೇಲೆ ದುಂಡನೆ ಟೋಪಿ ಹಾಕಿರುವುದು ಕಾಣುತ್ತದೆ. ಇದರಿಂದ ಅವರು ಅವರ ಮಕ್ಕಳಿಗೆ ಧರ್ಮದ ಕುರಿತು ಮತಾಂಧತೆ ಕಲಿಸುತ್ತಾರೆ. ಅವರು ಅವರಿಗೆ ಕುರಿಗಳನ್ನು ಸಾಕುವುದು ಮತ್ತು ನಂತರ ಅವುಗಳನ್ನು ಕೊಲ್ಲುವುದನ್ನೂ ಕಲಿಸುತ್ತಾರೆ. ನಾವು ನಮ್ಮ ಮಕ್ಕಳಿಗೆ ಅದನ್ನು ಕಲಿಸುವುದು ಬೇಡ. ಆದರೆ ಕನಿಷ್ಠ ನಮ್ಮ ಧರ್ಮದ ಸಂಸ್ಕಾರಗಳನ್ನಾದರೂ ಧಾರ್ಮಿಕ ಪರಂಪರೆ ಎಂದು ಮುಂದಿನ ಪೀಳಿಗೆಗೆ ಕಲಿಸುವುದು ಆವಶ್ಯಕವಾಗಿದೆ.

೩. ಹಿಂದೂಗಳು ಧರ್ಮಬಾಂಧವರಿಗೆ ಸಹಾಯ ಮಾಡಬೇಕು !

ಕೆಲವು ತಿಂಗಳ ಹಿಂದೆ ಒಬ್ಬ ಹುಡುಗಿಯನ್ನು ಒಬ್ಬ ನರಾಧಮನು ಕಲ್ಲಿನಿಂದ ಜಜ್ಜಿ ಸಾಯಿಸಿರುವ ಘಟನೆ ನಡೆದಿತ್ತು. ಅದರ ಚಿತ್ರೀಕರಣ ಎಲ್ಲರೂ ನೋಡಿದರು. ಅದರಲ್ಲಿ ಯಾವಾಗ ಆ ಪಾತಕಿ ಆಕೆಯನ್ನು ಕೊಲ್ಲುತ್ತಿದ್ದನು, ಆಗ ನಮ್ಮಂತಹ ಅನೇಕ ಜನರು ಅಲ್ಲಿಂದ ಹೋಗುತ್ತಿದ್ದರು ಆದರೆ ಯಾರೂ ಕೂಡ ಆಕೆಯನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ.

ನನ್ನ ಮೇಲೆ ದಾಳಿ ನಡೆದರೆ, ಆಗ ನಾನು ನೋಡಿಕೊಳ್ಳುವೆನು, ಈ ರೀತಿಯ ಮಾನಸಿಕತೆ ತಪ್ಪಾಗಿದೆ. ಯಾರಾದರೊಬ್ಬ ಮುಸಲ್ಮಾನನು ತೊಂದರೆಯಲ್ಲಿ ಇದ್ದರೆ, ಆಗ ಅವನ ಸಹಾಯಕ್ಕಾಗಿ ೧೦-೧೫ ಮುಸಲ್ಮಾನರು ತಕ್ಷಣ ಹೋಗುತ್ತಾರೆ. ತದ್ವಿರುದ್ಧ ಯಾವುದಾದರೂ ಹಿಂದೂ ಬಾಂಧವನು ತೊಂದರೆಯಲ್ಲಿದ್ದರೆ, ಆಗ ನಾವು ಅವನನ್ನು ನೋಡಿ ಹಾಗೆ ಮುಂದೆ ಹೋಗುತ್ತೇವೆ, ಏಕೆಂದರೆ ನಮಗೆ ಬಹಳ ಕೆಲಸಗಳಿರುತ್ತವೆ. ಅವನಿಗೆ ಸಹಾಯ ಮಾಡುವುದು ಮಹತ್ವದ್ದು ಎನಿಸುವುದಿಲ್ಲ, ಹೀಗೆ ಏಕೆ ಆಗುತ್ತದೆ ?

೪. ಧರ್ಮದ್ರೋಹಿಗಳನ್ನು ವಿರೋಧಿಸಲು ಹಿಂದೂ ಮಕ್ಕಳಿಗೆ ಧರ್ಮಶಿಕ್ಷಣ ಸಿಗುವುದು ಆವಶ್ಯಕ !

ಶ್ರೀಮದ್‌ ಭಗವದ್ಗೀತೆಯನ್ನು ಹೇಳಿರುವವನು, ಗೋವರ್ಧನ ಪರ್ವತ ಎತ್ತುತ್ತಿರುವವನು, ಕಂಸನನ್ನು ವಧಿಸಿರುವವನು ಭಗವಾನ ಶ್ರೀಕೃಷ್ಣ; ಆದರೆ ನಮ್ಮ ಮಕ್ಕಳ ಮುಂದೆ ೧೬ ಸಾವಿರದ ೧೦೮ ಕನ್ಯೆಯರನ್ನು ಅಪಹರಿಸಿದವನು, ಬೆಣ್ಣೆ ಕದಿಯುವ ಮತ್ತು ಸ್ನಾನ ಮಾಡುವ ಗೋಪಿಯರ ವಸ್ತ್ರಗಳನ್ನು ಕದಿಯುವ ಈ ರೂಪದಲ್ಲಿ ಭಗವಾನ್‌ ಶ್ರೀಕೃಷ್ಣನನ್ನು ಬಣ್ಣಿಸುತ್ತಾರೆ. ಅವುಗಳ ಬಗ್ಗೆ ನಮ್ಮ ಮಕ್ಕಳೇ ಹಾಸ್ಯ ಮಾಡುತ್ತಾರೆ; ಆದರೆ ಅದರ ಹಿಂದಿನ ಕಾರ್ಯಕಾರಣಭಾವ ಹೇಳÀÄವುದಿಲ್ಲ. ನಾವು ಭಗವಂತನ ಲೀಲೆ ಗಳನ್ನು ತಿಳಿಯಲು ಸಾಧ್ಯವಿಲ್ಲ. ನಮಗೆ ಗುರುಗಳು ಏನು ಹೇಳಿದ್ದಾರೆ ಅದನ್ನು ನಾವು ಮುಂದೆ ಪ್ರಸಾರ ಮಾಡಬೇಕು.

೫. ಹೊಸ ಪೀಳಿಗೆಗೆ ಅಭಿಮಾನ ಅನಿಸುವಂತಹ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ನಮ್ಮ ಕರ್ತವ್ಯ !

ಎಲ್ಲಿ ಹಿಂದೂಗಳು ನಿದ್ರಿಸುತ್ತಿದ್ದಾರೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಈಗ ನಾವು ನಿದ್ರೆಯಿಂದ ಜಾಗೃತ ರಾಗಬೇಕು. ಜಗತ್ತಿನಲ್ಲಿ ಎಲ್ಲಾ ದೇಶದ ಜನ್ಮದಿನ ನಮಗೆ ತಿಳಿದಿರುತ್ತದೆ; ಆದರೆ ಭಾರತ ಎಂತಹ ದೇಶವಾಗಿದೆಯೆಂದರೆ ಅದಕ್ಕೆ ಜನ್ಮವೇ ಇಲ್ಲ. ಈ ದೇಶ ಅನಾದಿಕಾಲದಿಂದಲೂ ಇದೆ ಮತ್ತು ಇಂತಹ ಮಹಾನ್‌ ದೇಶದಲ್ಲಿ ಭಗವಂತನಿಗೆ ಮತ್ತೆ ಮತ್ತೆ ಅವತಾರ ತಾಳುವ ಇಚ್ಛೆಯಾಗುತ್ತಿದೆ. ಇಲ್ಲಿ ಜನ್ಮ ಪಡೆದಿರುವ ಜೀವ ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು ಮತ್ತು ಈಶ್ವರನ ಜ್ಞಾನ ಪಡೆಯಬಹುದು. ಇಂತಹ ಭೂಮಿಯ ರಕ್ಷಣೆ ಮಾಡುವುದಕ್ಕಾಗಿ ನಾವು ಬಹಳ ಕಡಿಮೆ ಬೀಳುತ್ತಿದ್ದೇವೆ. ಇಂದು ಈ ಅಖಂಡ ಹಿಂದೂ ರಾಷ್ಟ್ರಕ್ಕಾಗಿ ಒಗ್ಗೂಡಿರುವ ಎಲ್ಲರೂ ಹೇಗೆ ವಿಚಾರ ಮಾಡಬೇಕೆಂದರೆ, ನಾವು ನಮ್ಮ ಜೀವನ ಅವನಿಗೆ ಸಮರ್ಪಿಸಿದ್ದೇವೆ; ಆದರೆ ಈ ಹಿಂದೂ ರಾಷ್ಟ್ರಕ್ಕಾಗಿ, ನಮ್ಮ ಧರ್ಮ, ಪರಂಪರೆ ಮತ್ತು ಸಂಸ್ಕಾರ ಇದರ ಅಭಿಮಾನ ನಮ್ಮ ಮಕ್ಕಳಿಗೆ ಅನಿಸಬೇಕು. ಹೀಗೆ ಏನಾದರೂ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.

– ಪೂ. ಸುದರ್ಶನ ಮಹಾರಾಜ ಕಪಾಟೆ, ಅಧ್ಯಕ್ಷರು, ಗ್ಲೋಬಲ ಮಹಾನುಭವ ಸಂಘ, ಛತ್ರಪತಿ ಸಂಭಾಜಿ ನಗರ, ಮಹಾರಾಷ್ಟ್ರ