ಮಕ್ಕಳಿಗೆ ಹೆಸರಿಡುವಾಗ ವಿಚಾರ ಹೇಗಿರಬೇಕು ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಇದರ ಆದರ್ಶ ಉದಾಹರಣೆ !

‘ಸಂತ ಜ್ಞಾನೇಶ್ವರ ಮಹಾರಾಜರ ತಂದೆ ಓರ್ವ ಉತ್ತಮ ಸಾಧಕರಾಗಿದ್ದರು. ಗುರುಗಳ ಆಜ್ಞೆಯಿಂದ ಅವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ‘ಗೃಹಸ್ಥಾಶ್ರಮದಲ್ಲಿದ್ದೂ ಸಾಧನೆಯ ಮಾರ್ಗದಲ್ಲಿನ ಜೀವನದ ಧ್ಯೇಯವು ಸತತವಾಗಿ ಅವರ ಕಣ್ಮುಂದಿರಬೇಕು’, ಎಂಬ ಉದ್ದೇಶದಿಂದ ಅವರು ತಮ್ಮ ಮಕ್ಕಳಿಗೆ ಹೆಸರುಗಳನ್ನು ಇಟ್ಟರು. ಅವರು ಇಟ್ಟಿರುವ ಹೆಸರುಗಳಿಂದ ಮುಂದಿನ ಬೋಧ ಆಗುತ್ತದೆ.

ಸಂತ ಜ್ಞಾನೇಶ್ವರ

‘ನಿವೃತ್ತಿ’ನಾಥ : ಸಂಸಾರದಿಂದ ನಿವೃತ್ತನಾದ ಮೇಲೆ, ಮಾಯೆಯ ಆಸಕ್ತಿಯನ್ನು ಕಡಿಮೆ ಮಾಡಿದಾಗ ಅಥವಾ ತ್ಯಜಿಸಿದಾಗ, ಸಾಧನೆ ಆಗತೊಡಗುತ್ತದೆ.

‘ಜ್ಞಾನ’ದೇವ : ನಿವೃತ್ತ ಆಗಿರುವ ಸಾಧಕನಿಗೆ ನಿಜವಾದ ‘ಜ್ಞಾನ’ ಲಭಿಸುತ್ತದೆ.

‘ಸೋಪಾನ’ದೇವ : ಜ್ಞಾನವನ್ನು ಪಡೆದ ಸಾಧಕನು ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡತೊಡಗುತ್ತಾನೆ.

‘ಮುಕ್ತಾ’ಬಾಯಿ : ಇಂತಹ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡುವ ಸಾಧಕನು, ಅವನ ಸಾಧನೆಯ ಫಲ ಪೂರ್ಣವಾದಾಗ ಮುಕ್ತನಾಗುತ್ತಾನೆ.

‘ಹಿಂದಿನ ಕಾಲದಲ್ಲಿ ಜನರು ಪ್ರತಿಯೊಂದು ವಿಷಯದಲ್ಲಿ ಎಷ್ಟು ಸೂಕ್ಷ್ಮವಾಗಿ ವಿಚಾರ ಮಾಡುತ್ತಿದ್ದರು ?’, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ