ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಯಾರಾದರೂ ನಮಸ್ಕಾರ ಮಾಡಿದರೆ ಅವರು ಆಂತರ್ಯದಲ್ಲಿ ಏನು ಅನುಭವಿಸುತ್ತಾರೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಎಲ್ಲ ಸಾಧಕರ ಮೇಲೆ ಪರಾತ್ಪರ ಗುರು ಡಾಕ್ಟರರ ಸೂಕ್ಷ್ಮದಲ್ಲಿನ ಛಾಯೆ ಇರುತ್ತದೆ’ ಆಕಾಶದ ಛಾಯೆ ಯಾರಿಗೂ ಕಾಣಿಸುವುದಿಲ್ಲ. ಅದರಂತೆ ಪರಾತ್ಪರ ಗುರು ಡಾ. ಆಠವಲೆಯವರ ಛಾಯೆ (ನೆರಳು) ಯಾರಿಗೂ ಕಾಣಿಸುವುದಿಲ್ಲ. ಸಾಧಕರು ಎಲ್ಲಿದ್ದರೂ, ಅವರ ಛಾಯೆಯು ಆಕಾಶದಂತೆ ಸೂಕ್ಷ್ಮದಿಂದ ಸತತವಾಗಿ ಸಾಧಕರೊಂದಿಗೆ ಇರುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಮಾಡಿದ ನಮಸ್ಕಾರವು ಪರಾತ್ಪರ ಗುರು ಡಾಕ್ಟರರಿಗೇ ಮಾಡಿದ ನಮಸ್ಕಾರವಾಗಿರುತ್ತದೆ

”ನಮಗೆ ಮಾಡಿದ ನಮಸ್ಕಾರವು ಪರಾತ್ಪರ ಗುರು ಡಾ. ಆಠವಲೆಯವರಿಗೇ ಮಾಡಿದ ನಮಸ್ಕಾರವಾಗಿರುತ್ತದೆ. ನಮ್ಮಲ್ಲಿನ ಗುರುತತ್ತ್ವಕ್ಕೆ ಈ ನಮಸ್ಕಾರ ಇರುತ್ತದೆ. ಆ ಸಮಯದಲ್ಲಿ ಸ್ಥೂಲದಲ್ಲಿ ನಾವು ಕಾಣಿಸುತ್ತಿದ್ದರೂ, ಸೂಕ್ಷ್ಮದಲ್ಲಿ ನಮ್ಮ ಜಾಗದಲ್ಲಿ ಪರಾತ್ಪರ ಗುರು ಡಾಕ್ಟರ ಆಠವಲೆಯವರೇ ಇರುತ್ತಾರೆ. ನಮ್ಮ ಭಾವವೂ ಹಾಗೇ ಇರುತ್ತದೆ. ಸಂತರಿಗೆ ಮಾಡಿದ ನಮಸ್ಕಾರವು ಎಂದಿಗೂ ವ್ಯರ್ಥವಾಗುವುದಿಲ್ಲ. ‘ಯಾರ ಭಾವ ಹೇಗಿರುತ್ತದೆಯೋ, ಹಾಗೆ ದೇವರು ಅವನಿಗೆ ಆಶೀರ್ವಾದದ ಫಲವನ್ನು ನೀಡುತ್ತಾನೆ.’

೨. ಸಮಾಜದಲ್ಲಿನ ಸಾಧನೆ ಮಾಡದಿರುವ ಜೀವಗಳು -‘ಈ ಜೀವಗಳಿಂದ ದೇವರಿಗೆ ಅಪೇಕ್ಷಿತವಿರುವಸಾಧನೆ ಆಗಲಿ’, ಎಂದು ಪ್ರಾರ್ಥನೆಯಾಗುತ್ತದೆ

ಸಮಾಜದಲ್ಲಿ ಸಾಧನೆ ಮಾಡದಿರುವ ಹೆಚ್ಚಿನ ಜನರು ಮಾಯೆಯ ವಿಷಯದಲ್ಲಿನ, ಅಂದರೆ ಮಕ್ಕಳು-ಮರಿ, ನೌಕರಿ-ಉದ್ಯೋಗ, ಹಾಗೆಯೇ ಕುಟುಂಬ ಇವುಗಳಿಗಾಗಿ ಆಶೀರ್ವಾದ ವನ್ನು ಬೇಡುತ್ತಾರೆ. ಆಗ ಅವರಿಂದ ತಮಗಾಗಿ ದೇವರ ಹತ್ತಿರ ಮಾಯೆಯ ಬಗೆಗಿನ ಬೇರೆ ಯಾವುದೇ ಪ್ರಾರ್ಥನೆ ಆಗುವುದಿಲ್ಲ. ಅವರ ಕರ್ಮಕ್ಕನುಸಾರ ಈಶ್ವರನು ಅವರಿಗೆ ಕೊಡುವವನೇ ಇದ್ದಾನೆ, ಇಂತಹ ಎಲ್ಲ ಜೀವಗಳಿಂದ ದೇವರಿಗೆ ಅಪೇಕ್ಷಿತವಿರುವ ಸಾಧನೆಯಾಗಲಿ’, ಎಂದು ದೇವರಿಗೆ ಹೇಳಲಾಗುತ್ತದೆ.

೩. ಸಾಧನೆ ಮಾಡುವ ಸನಾತನದ ಸಾಧಕರು – ಸಾಧಕರ ಒಳಿತಿಗಾಗಿ ಈಶ್ವರನೇ ಅಗತ್ಯವಿರುವುದನ್ನು ಮಾತನಾಡಿಸಿಕೊಳ್ಳುತ್ತಾನೆ ಮತ್ತು ಇದೇ ‘ಗುರುಕೃಪಾಯೋಗ’ ಆಗಿದೆ

ಯಾವಾಗ ಸಾಧಕರು ನಮಸ್ಕಾರ ಮಾಡುತ್ತಾರೋ, ಆಗ ಆ ಸಾಧಕನ ಭಾವ ಮತ್ತು ಸಾಧನೆಯ ತಳಮಳಕ್ಕೆ ಅನುಗುಣವಾಗಿ, ಒಳ್ಳೆಯ ಮಾತುಗಳು ತಾನಾಗಿಯೇ ಬಾಯಿಯಿಂದ ಹೊರಬರುತ್ತವೆ. ಆ ಸಮಯದಲ್ಲಿ ದೇವರೇ ಮಾತನಾಡುತ್ತಿರುತ್ತಾನೆ ಮತ್ತು ನಮ್ಮ ಮನಸ್ಸು ಹಾಗೂ ಬುದ್ಧಿ ಕಾರ್ಯನಿರತವಾಗಿರುವುದಿಲ್ಲ. ‘ನಮ್ಮ ಮನಸ್ಸಿಗೆ ಏನೋ ಅನಿಸುತ್ತದೆ; ಅದನ್ನು ನಾವು ಮಾತನಾಡಿದೆವು, ಆಗ ಸಾಧಕರಿಗೆ ಏನೋ ಹೇಳಿದೆವು’ ಹೀಗೆ ಆಗುವುದಿಲ್ಲ. ಸಾಧಕರ ಒಳಿತಿಗಾಗಿ ಏನು ಆವಶ್ಯಕ ಇರುತ್ತದೆಯೋ ಅದನ್ನು ಈಶ್ವರನೇ ನಮ್ಮಿಂದ ಮಾತನಾಡಿಸಿಕೊಳ್ಳುತ್ತಾನೆ. ಇದೇ ‘ಗುರುಕೃಪಾಯೋಗವಾಗಿದೆ’ ! ಗುರುಗಳೇ ನಮ್ಮ ಬಾಯಿಯಿಂದ ಮಾತನಾಡುತ್ತಾರೆ. ಸಾಧಕನ ಸಾಧನೆ ಉತ್ತಮವಾಗಬೇಕು ಎಂಬ ಉದ್ದೇಶದಿಂದ, ಆ ಸಾಧಕನಿಂದ ಏನಾದರೂ ತಪ್ಪಾಗುತ್ತಿದ್ದರೆ ಅಥವಾ ಸಾಧನೆಯಲ್ಲಿ ಏನಾದರೂ ಕೊರತೆ ಇದ್ದರೆ ಆ ವಿಷಯದಲ್ಲಿ ಅವನಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಆ ಸಮಯದಲ್ಲಿ ಆ ಸಾಧಕನು, ”ನೀವು ನನಗೆ ಆವಶ್ಯಕ ಇರುವುದನ್ನೇ ಹೇಳಿದ್ದೀರಿ’’ ಎಂದು ಹೇಳುತ್ತಾನೆ.

ಈ ರೀತಿಯಲ್ಲಿ ಸಂತರ ಹೃದಯದಲ್ಲಿನ ಈಶ್ವರೀ ತತ್ತ್ವ್ವವು ಆಶೀರ್ವಾದದ ರೂಪದಲ್ಲಿ ಆ ಸಾಧಕನಿಗಾಗಿ ಆವಶ್ಯಕತೆಗನುಸಾರ ಕಾರ್ಯ ಮಾಡುತ್ತದೆ.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ