
ಪ್ರಶ್ನೆ : ‘ಮನೆಯಲ್ಲಿ, ಹಾಗೂ ಹೊಲದಲ್ಲಿ ಬರುವ ಹಾನಿಕರ ಕೀಟಗಳನ್ನು ಅಥವಾ ಪ್ರಾಣಿಗಳನ್ನು ಉದಾ. ಸೊಳ್ಳೆ, ತಿಗಣೆ, ಹಲ್ಲಿ, ಇಲಿ, ಚೇಳು, ಹೆಗ್ಗಣ ಇತ್ಯಾದಿಗಳನ್ನು ತಮ್ಮ ಅಥವಾ ತಮ್ಮ ಮನೆಯ ರಕ್ಷಣೆಗಾಗಿ ಕೊಲ್ಲಬೇಕಾಗುತ್ತದೆ. ಆಗ ಆ ವ್ಯಕ್ತಿಗೆ ಅದರ ಪಾಪ ತಗಲುತ್ತದೆಯೇ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಈ ಮೇಲಿನ ವಿಷಯದ ಕುರಿತು ನನಗೆ ದೇವರ ಕೃಪೆಯಿಂದ ದೊರಕಿದ ಜ್ಞಾನವನ್ನು ಮುಂದೆ ಕೊಟ್ಟಿದ್ದೇನೆ.
೧. ಮನೆ, ದೇವಸ್ಥಾನಗಳು, ಆಶ್ರಮ ಮತ್ತು ಹೊಲ ಇಂತಹ ಸ್ಥಳಗಳಲ್ಲಿ ಹಾನಿಕರ ಉಪದ್ರವಿ ಕೀಟಗಳು ಮತ್ತು ಪ್ರಾಣಿಗಳು ಬರುವುದರ ಹಿಂದಿನ ಆಧ್ಯಾತ್ಮಿಕ ಕಾರಣಗಳು !
೧ ಅ. ಹಿಂದಿನ ಜನ್ಮದ ಶತ್ರುತ್ವ : ವ್ಯಕ್ತಿಯು ಅವನ ಹಿಂದಿನ ಜನ್ಮಗಳಲ್ಲಿ ಮಾಡಿದ ಕೆಲವು ಅಯೋಗ್ಯ ಕರ್ಮಗಳಿಂದ ತಿಳಿದು ಅಥವಾ ತಿಳಿಯದೇ ಕೆಲವು ಜೀವಗಳನ್ನು ನೋಯಿಸಿರುತ್ತಾನೆ. ಇಂತಹ ಜೀವಗಳು ಆ ವ್ಯಕ್ತಿಯ ಈ ಜನ್ಮದಲ್ಲಿ ಉಪದ್ರವಕಾರಿ ಕೀಟಗಳು ಅಥವಾ ಪ್ರಾಣಿಗಳ ರೂಪಗಳಲ್ಲಿ ಜನ್ಮ ಪಡೆದು ಆ ವ್ಯಕ್ತಿಗೆ ತೊಂದರೆ ಕೊಡುತ್ತವೆ. ಹೀಗೆ ಮಾಡಿ ಆ ಜೀವವು ತನ್ನ ಮನಸ್ಸಿನಲ್ಲಿನ ಆ ವ್ಯಕ್ತಿಯ ಬಗೆಗಿನ ದ್ವೇಷ ಅಥವಾ ಕ್ಲೇಶವನ್ನು ವ್ಯಕ್ತಪಡಿಸುತ್ತವೆ. ಇಂತಹ ಕೀಟಗಳು ಅಥವಾ ಪ್ರಾಣಿಗಳು ಆ ವ್ಯಕ್ತಿಯ ಈ ಜನ್ಮದಲ್ಲಿನ ಶತ್ರುಗಳಾಗಿರಬಹುದು. ಆದ್ದರಿಂದ ಇಂತಹ ಕೀಟಗಳು ಅಥವಾ ಪ್ರಾಣಿಗಳನ್ನು ಆ ವ್ಯಕ್ತಿಯ ‘ಗತ ಶತ್ರುಗಳು’ ಎಂದು ಕರೆಯಲಾಗುತ್ತದೆ.
೧ ಆ. ಪೂರ್ವಜನ್ಮದ ಸ್ನೇಹ : ಮನೆಯಲ್ಲಿ ಹಾಗೂ ಹೊಲದಲ್ಲಿ ಓಡಾಡುವಾಗ ಕೆಲವು ಹಾನಿಕರ ಕೀಟಗಳು ಮತ್ತು ಪ್ರಾಣಿಗಳು ಮನೆಗೆ ಅಥವಾ ಅಲ್ಲಿನ ವ್ಯಕ್ತಿಗಳಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. ಇಂತಹ ಕೀಟಗಳು ಮತ್ತು ಪ್ರಾಣಿಗಳ ಆ ಮನೆಯಲ್ಲಿನ ವ್ಯಕ್ತಿಗಳೊಂದಿಗೆ ಹಿಂದಿನ ಜನ್ಮದ ಸ್ನೇಹ ಇರಬಹುದು. ಆದ್ದರಿಂದ ಇಂತಹ ಕೀಟಗಳು ಮತ್ತು ಪ್ರಾಣಿಗಳು ಈ ಜನ್ಮದಲ್ಲಿ ಸ್ನೇಹಿತನ ಮನೆಯಲ್ಲಿ ಯಾರಿಗೂ ತೊಂದರೆಯನ್ನು ಕೊಡದೇ ವಾಸಿಸುತ್ತವೆ. ಆದ್ದರಿಂದ ಇಂತಹ ಜೀವಗಳಿಗೆ ಆ ಮನೆಯಲ್ಲಿನ ವ್ಯಕ್ತಿಯ ‘ಗತಮಿತ್ರ’ (ಹಿಂದಿನ ಜನ್ಮದ ಸ್ನೇಹಿತ) ಎನ್ನಲಾಗುತ್ತದೆ.
೧ ಇ. ಹಿಂದಿನ ಜನ್ಮಗಳಲ್ಲಿನ ಹಿತಚಿಂತಕರು, ಸಂಬಂಧಿಕರು ಅಥವಾ ಅತೃಪ್ತ ಪೂರ್ವಜರು ಇರಬಹುದು : ಕೆಲವು ಹಾನಿಕರ ಕೀಟಗಳು ಮತ್ತು ಪ್ರಾಣಿಗಳು ವ್ಯಕ್ತಿಯ ಹಿಂದಿನ ಜನ್ಮಗಳಲ್ಲಿನ ಹಿತಚಿಂತಕರು, ಸಂಬಂಧಿಕರು ಅಥವಾ ಅತೃಪ್ತ ಪೂರ್ವಜರು ಇರಬಹುದು. ಅವರಿಗೆ ಹಿಂದಿನ ಜನ್ಮಗಳಲ್ಲಿನ ಪಾಪಕರ್ಮಗಳಿಂದ ಈ ಜನ್ಮದಲ್ಲಿ ಹಾನಿಕರ ಕೀಟ ಅಥವಾ ಪ್ರಾಣಿಗಳ ರೂಪಗಳಲ್ಲಿ ಜನ್ಮ ಪಡೆದಿರುತ್ತವೆ. ಇಂತಹ ಜೀವಗಳಿಗೆ ಅವರ ಇಷ್ಟದ ವ್ಯಕ್ತಿಗಳು, ಹತ್ತಿರದ ಸಂಬಂಧಿಕರು ಅಥವಾ ಪ್ರೀತಿಸುವ ವ್ಯಕ್ತಿಗಳ ಸಂಸಾರವನ್ನು ಹತ್ತಿರದಿಂದ ನೋಡುವ ಇಚ್ಛೆ ಇರುತ್ತದೆ. ಅದಕ್ಕಾಗಿ ಹಾನಿಕರ ಕೀಟಗಳು ಅಥವಾ ಪ್ರಾಣಿಗಳು ಆ ವ್ಯಕ್ತಿಯ ಮನೆಯಲ್ಲಿ ಅಥವಾ ಹೊಲದಲ್ಲಿ ವಾಸಿಸುತ್ತವೆ; ಆದರೆ ಅವುಗಳು ಆ ಕುಟುಂಬಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ.
೧ ಈ. ನೈಸರ್ಗಿಕ ಪರಿಸ್ಥಿತಿ : ಮನೆಯ ಸುತ್ತಮುತ್ತಲೂ ನಿಸರ್ಗವಿದ್ದರೂ (ಗಿಡಮರಗಳಿದ್ದರೂ) ಮನೆಯಲ್ಲಿ ಹಾನಿಕರ ಕೀಟಗಳು ಅಥವಾ ಪ್ರಾಣಿಗಳು ಬರುತ್ತವೆ.
೧ ಉ. ಮುಕ್ತಿಹೊಂದುವ ಇಚ್ಛೆ : ಕೆಲವು ಹಾನಿಕರ ಕೀಟಗಳು ಅಥವಾ ಪ್ರಾಣಿಗಳು ಈ ಯೋನಿಯಿಂದ ಬೇಗ ಮುಕ್ತವಾಗಲು ಬಯಸುತ್ತವೆ. ಅದಕ್ಕಾಗಿ ಅವು ದೇವಸ್ಥಾನ ಅಥವಾ ಆಶ್ರಮದಲ್ಲಿ ವಾಸಿಸುತ್ತವೆ. ಅಲ್ಲಿ ಯಾವುದೇ ಕಾರಣದಿಂದ ಮರಣ ಬಂದರೂ ಹಾನಿಕರ ಕೀಟಗಳಿಗೆ ಅಥವಾ ಪ್ರಾಣಿಗಳಿಗೆ ಮುಂದಿನ ಜನ್ಮವು ಬೇಗ ದೊರಕುತ್ತದೆ.
೧ ಊ. ಸ್ಥಾನದೇವತೆಯ ಕೋಪ : ಊರಲ್ಲಿನ ಜನರ ಪಾಪಗಳು ಹೆಚ್ಚಾದರೆ ಅಥವಾ ಅವರು ಸನಾತನ ಧರ್ಮದಿಂದ ದೂರ ಹೋದರೆ ಅಲ್ಲಿನ ಸ್ಥಾನದೇವತೆ ಸಿಟ್ಟಾಗುತ್ತಾರೆ. ಆಗ ಆ ಸ್ಥಾನದಲ್ಲಿನ ಮನೆಗಳಲ್ಲಿ ಅಥವಾ ಹೊಲಗಳಲ್ಲಿ ಹಾನಿಕರ ಕೀಟಗಳ ಮತ್ತು ಪ್ರಾಣಿಗಳ ಸಂಖ್ಯೆ ತುಂಬಾ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಅಲ್ಲಿನ ಜನರು ಧರ್ಮಾಚರಣಿಯಾಗಿ ಸ್ಥಾನದೇವತೆಯನ್ನು ಪೂಜಿಸಿದರೆ ಈ ಸಂಕಟಗಳು ಕಡಿಮೆಯಾಗುತ್ತವೆ.
೨. ಹಾನಿಕರ ಕೀಟಗಳನ್ನು ಮತ್ತು ಪ್ರಾಣಿಗಳನ್ನು ಕೊಂದ ಪಾಪ ತಗಲದಿರಲು ಗಮನದಲ್ಲಿಡುವ ಅಂಶಗಳು
೨ ಅ. ಬೇರೆ ಮಾರ್ಗ ಇಲ್ಲದೇ ಇದ್ದಾಗ ಕೊಲ್ಲುತ್ತಿದ್ದೇನೆ ಎಂಬ ಭಾವನೆ ಮಹತ್ವದ್ದಾಗಿದೆ : ಪ್ರತಿಯೊಂದು ಕೀಟ ಮತ್ತು ಪ್ರಾಣಿಗಳ ಜನ್ಮ-ಮರಣವು ಪ್ರಾರಬ್ಧಕ್ಕನುಸಾರ ಆಗುತ್ತಿರುತ್ತದೆ. ಈ ಲೆಕ್ಕಾಚಾರವು ಅತ್ಯಂತ ಸೂಕ್ಷ್ಮವಾಗಿದೆ. ಹಾನಿಕರ ಕೀಟಗಳು ಮತ್ತು ಪ್ರಾಣಿಗಳು ‘ತನ್ನ ಹಿಂದಿನ ಗೆಳೆಯರು, ಹಿಂದಿನ ಶತ್ರುಗಳು, ಹಿತ ಚಿಂತಕರು ಅಥವಾ ಅತೃಪ್ತ ಪೂರ್ವಜರಾಗಿರುತ್ತಾರೆ’, ಎಂಬುದು ಅವನಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಆ ವ್ಯಕ್ತಿಯು ‘ಹಾನಿಕರ ಕೀಟಗಳನ್ನು ಮತ್ತು ಪ್ರಾಣಿಗಳನ್ನು ದ್ವೇಷ ದಿಂದ ಕೊಲ್ಲದೇ ಬೇರೆ ಮಾರ್ಗ ಇಲ್ಲದೇ ಅನಿವಾರ್ಯವಾಗಿ, ಸ್ವರಕ್ಷಣೆ ಅಥವಾ ವಾಸ್ತುವಿನ ರಕ್ಷಣೆಗಾಗಿ ಕೊಲ್ಲುತ್ತಿದ್ದೇನೆ’, ಎಂಬ ಅರಿವನ್ನು ಇಡುವುದು ಮಹತ್ವದ್ದಾಗಿದೆ.
೨ ಆ. ಅಹಂರಹಿತ ಕೃತಿ ಮಾಡುವುದು ಆವಶ್ಯಕವಾಗಿದೆ : ಹಾನಿಕರ ಕೀಟ ಮತ್ತು ಪ್ರಾಣಿಗಳನ್ನು ನಾಮಜಪಿಸುತ್ತಾ ಕೊಲ್ಲುವುದು ಅಂದರೆ ಕರ್ತೃತ್ವವನ್ನು ದೇವರಿಗೆ ಅರ್ಪಿಸುವುದು ಮಹತ್ವದ್ದಾಗಿದೆ. ಇಲ್ಲದಿದ್ದರೆ ಅಹಂಯುಕ್ತ ಕೃತಿಯಿಂದ ಆ ವ್ಯಕ್ತಿಗೆ ಪಾಪ ತಗಲುತ್ತದೆ.’ – ಶ್ರೀ. ರಾಮ ಹೋನಪ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೪.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !