
ಸನಾತನ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಬಹುಪಯೋಗಿ ಸಾತ್ತ್ವಿಕ ಉಡುಗೊರೆ ಪೆಟ್ಟಿಗೆ (‘ಗಿಫ್ಟ್ ಬಾಕ್ಸ್’) ಯನ್ನು ತಯಾರಿಸಲಾಗಿದೆ. ಅದರ ಆಕಾರವು (೧೦ ಇಂಚು ೬ ಇಂಚು ೧.೮ ಇಂಚು) ಹೀಗಿದೆ. ಈ ಉಡುಗೊರೆ ಪೆಟ್ಟಿಗೆಯ ಮೇಲಿನ ಬಣ್ಣದ ರಚನೆ, ಅಕ್ಷರಗಳು, ವಿನ್ಯಾಸ ಇತ್ಯಾದಿ ‘ಅದನ್ನು ತೆಗೆದುಕೊಳ್ಳುವವರಿಗೆ ಮತ್ತು ಕೊಡುವವರಿಗೆ ಹೆಚ್ಚು ಸಾತ್ವಿಕತೆ ದೊರೆಯಲಿ,’ ಎಂಬ ಉದ್ದೇಶದಿಂದ ತಯಾರಿಸಲಾಗಿದೆ. ಈ ಪೆಟ್ಟಿಗೆಯ ಮೇಲೆ ಸಂತರ ಸಂದೇಶಗಳು ಮತ್ತು ಸಾಧನೆಯ ಬಗೆಗಿನ ಮಾರ್ಗದರ್ಶನವೂ ಇದೆ. ಆದ್ದರಿಂದ, ಈ ಉಡುಗೊರೆ ಪೆಟ್ಟಿಗೆಯನ್ನು ಬಳಸುವವರಿಗೆ ತಾನಾಗಿಯೇ ಧರ್ಮಪ್ರಸಾರದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೆ. ಈ ಉಡುಗೊರೆ ಪೆಟ್ಟಿಗೆಯ ಅರ್ಪಣೆ ಮೌಲ್ಯ ೩೦ ರೂಪಾಯಿಗಳು ಇರುತ್ತದೆ.
ಸಾತ್ತ್ವಿಕ ಉಡುಗೊರೆ ಪೆಟ್ಟಿಗೆಯ ಬಳಕೆಯನ್ನು ಈ ಕೆಳಗಿನಂತೆ ಮಾಡಬಹುದು !
೧. ಈ ಉಡುಗೊರೆ ಪೆಟ್ಟಿಗೆಯಲ್ಲಿ ಸನಾತನದ ಪೂಜಾಪಯೋಗಿ ಉತ್ಪನ್ನಗಳು (ಅತ್ತರ, ಕರ್ಪೂರ, ಕುಂಕುಮ, ಊದುಬತ್ತಿ, ಅಷ್ಟಗಂಧ, ಗೋಮೂತ್ರ ಅರ್ಕ), ನಿತ್ಯೋಪಯೋಗಿ ಉತ್ಪನ್ನಗಳು (ಸಾಬೂನು, ದಂತಮಂಜನ, ತ್ರಿಫಲಾ ಚೂರ್ಣ, ಉಟಣೆ, ಕೇಶತೈಲ, ಸಂಸ್ಕಾರ ವಹಿ), ಹಾಗೆಯೇ ಗ್ರಂಥ ಮತ್ತು ಕಿರುಗ್ರಂಥಗಳನ್ನು ಆಕರ್ಷಕ ರೀತಿಯಲ್ಲಿ ಇಟ್ಟು ಇತರರಿಗೆ ನೀಡಿದರೆ, ಅದು ಒಂದು ‘ಸಾತ್ತ್ವಿಕ ಉಡುಗೊರೆ’ ಆಗುತ್ತದೆ. (‘ಈ ಉಡುಗೊರೆಯಲ್ಲಿ ಯಾವ ಉತ್ಪನ್ನಗಳು ಮತ್ತು ಗ್ರಂಥಗಳನ್ನು ಇಡಬೇಕು ?’, ಎಂಬುದನ್ನು ಹಿತಚಿಂತಕರು ತಮ್ಮ ಇಚ್ಛೆಗನುಸಾರ ನಿರ್ಧರಿಸಬಹುದು. ಉತ್ಪನ್ನಗಳು ಅಥವಾ ಗ್ರಂಥಗಳ ಸಂಖ್ಯೆಗೆ ಅನುಗುಣವಾಗಿ ಉಡುಗೊರೆ ವಸ್ತುಗಳ ಮೊತ್ತ ನಿರ್ಧಾರವಾಗುತ್ತದೆ.)
೨. ದೀಪಾವಳಿಯ ನಿಮಿತ್ತ ವಾಣಿಜ್ಯ ಸಂಕೀರ್ಣಗಳು (‘ಶಾಪಿಂಗ್ ಮಾಲ್ಸ್’, ‘ಸೂಪರ್ ಬಜಾರ್’ ಇತ್ಯಾದಿ), ಬಟ್ಟೆ ಮಳಿಗೆಗಳು, ಸಿಹಿ ತಿಂಡಿ ಅಂಗಡಿಗಳು (‘ಸ್ವೀಟ್ ಮಾರ್ಟ್’) ಇತ್ಯಾದಿಗಳ ಮಾಲೀಕರು ಗ್ರಾಹಕರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಈ ಉಡುಗೊರೆಗಳನ್ನು ಈ ಆಕರ್ಷಕ ಉಡುಗೊರೆ ಪೆಟ್ಟಿಗೆಯಲ್ಲಿ ಹಾಕಿ ನೀಡಬಹುದು.
೩. ವಿವಾಹ, ನಾಮಕರಣ ವಿಧಿ, ಹುಟ್ಟುಹಬ್ಬ, ವಾಸ್ತುಶಾಂತಿ ಇತ್ಯಾದಿ ಕಾರ್ಯಕ್ರಮಗಳ ನಿಮಿತ್ತ ಇತರರಿಗೆ ಉಡುಗೊರೆಗಳನ್ನು ನೀಡುವಾಗ ಅದನ್ನು ಬಣ್ಣದ ಕಾಗದದಲ್ಲಿ ಸುತ್ತಿ ಕೊಡುವ ಬದಲು ಈ ಪೆಟ್ಟಿಗೆಯಲ್ಲಿ ಹಾಕಿ ಕೊಡಬಹುದು.
೪. ಪೂಜಾ ಸಾಮಾಗ್ರಿಗಳು, ಹಾಗೆಯೇ ನಿತ್ಯೋಪಯೋಗಿ ಸಾಮಗ್ರಿಗಳನ್ನು ಇಡಲು ಸಹ ಈ ಪೆಟ್ಟಿಗೆ ಉಪಯುಕ್ತವಾಗಿದೆ. ಕೇವಲ ದೀಪಾವಳಿ ಇತ್ಯಾದಿ ಹಬ್ಬಗಳ ನಿಮಿತ್ತವಷ್ಟೆ ಅಲ್ಲ, ಆದರೆ ವರ್ಷಪೂರ್ತಿಯೂ ಈ ಬಹುಪಯೋಗಿ ಪೆಟ್ಟಿಗೆಯನ್ನು ಬಳಸಬಹುದು.
೫. ಸಾಧಕರು ಈ ಪೆಟ್ಟಿಗೆಯಲ್ಲಿ ವೈಯಕ್ತಿಕ ಉಪಾಯಗಳ ಸಾಮಗ್ರಿಗಳನ್ನೂ ಇಟ್ಟುಕೊಳ್ಳಬಹುದು. ಈ ವೈಶಿಷ್ಟ್ಯಪೂರ್ಣ ಮತ್ತು ಸಾತ್ತ್ವಿಕ ಉಡುಗೊರೆ ಪೆಟ್ಟಿಗೆಯನ್ನು ಖರೀದಿಸಲು ಹಿತಚಿಂತಕರು ಸ್ಥಳೀಯ ವಿತರಕರನ್ನು ಸಂಪರ್ಕಿಸಬೇಕು ಅಥವಾ ೯೩೨೨೩೧೫೩೧೭ ಈ ಸಂಪರ್ಕ ಕ್ರಮಾಂಕಕ್ಕೆ ಕರೆ ಮಾಡಿ ಬೇಡಿಕೆ ಸಲ್ಲಿಸಬಹುದು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !