
‘ಪ್ರಸ್ತುತ ಏಳನೇ ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳು ಸಾಧಕರ ಶ್ರದ್ಧೆಯನ್ನು ಭಂಗಗೊಳಿಸಿ ಅವರನ್ನು ಸಾಧನೆಯಿಂದ ವಿಮುಖಗೊಳಿಸಲು ‘ಶಬ್ದ ಶಕ್ತಿ’ಯ ಮೂಲಕ ದೊಡ್ಡ ಪ್ರಮಾಣದಲ್ಲಿ ಸೂಕ್ಷ್ಮ ಯುದ್ಧವನ್ನು ಮಾಡುತ್ತಿವೆ. ವಾಣಿ ಮತ್ತು ಬರಹದಲ್ಲಿನ ಶಬ್ದಗಳ ಮೂಲಕ ಸಂಸ್ಥೆ, ಸಂತರು ಮತ್ತು ಸಾಧಕರ ಬಗ್ಗೆ ನಕಾರಾತ್ಮಕತೆಯನ್ನು ಹರಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಸೂಕ್ಷ್ಮ ಯುದ್ಧದಲ್ಲಿ ಕೆಟ್ಟ ಶಕ್ತಿಗಳು ಸಮಾಜದ ವಿರೋಧಿಗಳನ್ನು ಹಾಗೂ ನಕಾರಾತ್ಮಕ ವಿಚಾರಗಳ ಪ್ರಭಾವದಲ್ಲಿರುವ ಸಾಧಕರನ್ನು ಮಾಧ್ಯಮವನ್ನಾಗಿ ಮಾಡಿಕೊಂಡು, ಅವರ ಬರಹ ಮತ್ತು ವಾಣಿಯ ಮೂಲಕ ಇತರ ಸಾಧಕರಲ್ಲಿ ವಿಕಲ್ಪಗಳನ್ನು ಮೂಡಿಸಲು ಕಾರ್ಯನಿರತವಾಗಿವೆ. ಸಾಧಕನ ಶ್ರದ್ಧೆಯ ಮೇಲೆ ಪೆಟ್ಟು ಬಿದ್ದಾಗ ಅವನ ಮನಸ್ಸಿನಲ್ಲಿ ವಿಕಲ್ಪಗಳು ಉಂಟಾಗಿ ಅವನ ಸಾಧನೆಯಲ್ಲಿ ಅಧೋಗತಿಯಾಗುತ್ತದೆ.
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡುತ್ತಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಈ ಷಡ್ಯಂತ್ರಕ್ಕೆ ಬಲಿಯಾಗದೆ, ಉತ್ಸಾಹದಿಂದ ನಿಮ್ಮ ಸಾಧನೆಯನ್ನು ಹೆಚ್ಚಿಸಿ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೮.೩.೨೦೨೬)
ಯಾರಾದರೂ ಸನಾತನ ಸಂಸ್ಥೆ, ಸನಾತನದ ಸಂತರು ಮತ್ತು ಸಾಧಕರ ಬಗ್ಗೆ ವಿಕಲ್ಪಗಳನ್ನು ಹರಡುವಂತಹ ಆಕ್ಷೇಪಾರ್ಹ ಬರಹ ಅಥವಾ ಮಾತುಗಳನ್ನು ಆಡುತ್ತಿದ್ದರೆ, ಆ ಬಗ್ಗೆ ನಿಮ್ಮ ಕ್ಷೇತ್ರದ ಜವಾಬ್ದಾರ ಧರ್ಮಪ್ರಚಾರಕ ಸಂತರಿಗೆ ತಿಳಿಸಬೇಕು.
– ವಿಶ್ವಸ್ತರು, ಸನಾತನ ಸಂಸ್ಥೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !