ಅಮೆರಿಕಾದ ಆಡಳಿತಾರೂಢ ಪಕ್ಷದ ನಾಯಕನ ಹಿಂದೂದ್ವೇಷ ತಿಳಿಯಿರಿ !

ಫಲಕ ಪ್ರಸಿದ್ಧಿಗಾಗಿ

ಟೆಕ್ಸಾಸ್‌ನಲ್ಲಿರುವ ಅಲೆಕ್ಸಾಂಡರ್ ಡಂಕನ್ ಮತ್ತು ಹನುಮಂತನ ಪ್ರತಿಮೆ

೧. ಇದು ಹಿಂದೂಗಳಿಗೆ ಲಜ್ಜಾಸ್ಪದ !

ಮುಂಬಯಿನ ಗೋವಂಡಿ ಬಳಿಯ ಅಣ್ಣಾಭಾವು ಸಾಠೆ ನಗರದಲ್ಲಿ ನವರಾತ್ರಿಯ ಪ್ರಯುಕ್ತ ಒಂದು ಮಸೀದಿಯ ಸಮೀಪದಿಂದ ದೇವಿಯ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ, ಮುಸಲ್ಮಾನರು ದೇವಿಯ ಜಪದ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಶಾಂತಿಯುತವಾಗಿ ಮೂರ್ತಿಯನ್ನು ಕೊಂಡೊಯ್ಯುವಂತೆ ಹಿಂದೂಗಳಿಗೆ ಹೇಳಿದರು. ಆದರೆ, ಹಿಂದೂಗಳು ಅದಕ್ಕೆ ನಿರಾಕರಿಸಿದಾಗ, ಮುಸಲ್ಮಾನರು ಮೂರ್ತಿಯನ್ನು ಭಗ್ನಗೊಳಿಸಿದರು.

೨. ಅಮೆರಿಕಾದ ಆಡಳಿತಾರೂಢ ಪಕ್ಷದ ನಾಯಕನ ಹಿಂದೂದ್ವೇಷ ತಿಳಿಯಿರಿ !

ಅಮೆರಿಕಾದ ಟೆಕ್ಸಾಸ್‌ನಲ್ಲಿ ಶ್ರೀ ಹನುಮಾನನ ೯೦ ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸಿದ ನಂತರ, ಆಡಳಿತ ಪಕ್ಷವಾದ ರಿಪಬ್ಲಿಕನ್ ಪಕ್ಷದ ನಾಯಕ ಅಲೆಕ್ಸಾಂಡರ್ ಡಂಕನ್ ಹೀಗೆ ಹೇಳಿದರು, “ನಾವು ಒಂದು ಸುಳ್ಳು ಹಿಂದೂ ದೇವತೆಯ ಮೂರ್ತಿಯನ್ನು ಟೆಕ್ಸಾಸ್‌ನಲ್ಲಿ ಏಕೆ ನಿರ್ಮಿಸಲು ಅವಕಾಶ ನೀಡುತ್ತಿದ್ದೇವೆ ? ನಮ್ಮದು ಕ್ರೈಸ್ತ ರಾಷ್ಟ್ರವಾಗಿದೆ”

೩. ಸನಾತನ ಸಂಸ್ಥೆಯ ನಿರಪರಾಧಿತ್ವ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಿದ್ಧವಾಯಿತು !

ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿ, ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಿಜಯ ರೋಕಡೆ ಸಲ್ಲಿಸಿದ್ದ ಅರ್ಜಿಯ ಕುರಿತು ಮುಂಬೈ ಉಚ್ಚ ನ್ಯಾಯಾಲಯವು ರೋಕಡೆ ಅವರಿಗೆ ‘ಅರ್ಜಿಯನ್ನು ಹಿಂಪಡೆಯುತ್ತೀರಾ ಅಥವಾ ನಾವೇ ಅದನ್ನು ವಜಾ ಮಾಡಬೇಕೆ ?’ ಎಂಬ ಕಠಿಣ ಮಾತುಗಳಲ್ಲಿ ಛೀಮಾರಿ ಹಾಕಿದ ನಂತರ ಅವರು ಅರ್ಜಿಯನ್ನು ಹಿಂಪಡೆದರು.

೪. ಹಿಂದೂ ರಾಷ್ಟ್ರದ ಅವಶ್ಯಕತೆ ತಿಳಿಯಿರಿ !

ಗುಜರಾತಿನ ಬಹಿಯಾಲ್ ಗ್ರಾಮದಲ್ಲಿ ‘ಐ ಲವ್ ಮಹಾದೇವ’ ಪೋಸ್ಟ್‌ರನ ಕಾರಣಕ್ಕೆ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಹಾಗೆಯೇ ದಾವಣಗೆರೆಯಲ್ಲಿ ಹಿಂದೂಗಳ ಮನೆಗಳ ಬಾಗಿಲುಗಳ ಮೇಲೆ ‘ಐ ಲವ್ ಮೊಹಮ್ಮದ್’ ಎಂದು ಬರೆದ ಫಲಕಗಳನ್ನು ಅಂಟಿಸಿದ್ದನ್ನು ವಿರೋಧಿಸಿದ ನಂತರ ಮುಸಲ್ಮಾನರು ಹಿಂದೂಗಳ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದರು.

೫. ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ದೇಶಾದ್ಯಂತ ಮುಸಲ್ಮಾನ ಸಂಘಟನೆಗಳಿಂದ ‘ಐ ಲವ್ ಮೊಹಮ್ಮದ್’ ಅಭಿಯಾನವನ್ನು ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಬೀಡನ ಮಾಜಲಗಾಂವ್‌ನಲ್ಲಿಯೂ ಈ ಕುರಿತು ಕಾರ್ಯಕ್ರಮ ಆಯೋಜಿಸಿದಾಗ ಮೌಲಾನಾ ಅಶ್ಫಾಕ್ ನಿಸಾರ್ ಶೇಖ್ ಇವನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಹೂತು ಹಾಕುವುದಾಗಿ ಬೆದರಿಕೆ ಹಾಕಿದನು.

೬. ಇಂತಹವರಿಗೆ ಗಲ್ಲು ಶಿಕ್ಷೆಯಾಗಬೇಕು !

ಕುಲಾಬಾ (ಮುಂಬಯಿ) ಇಲ್ಲಿನ‘ಮಸ್ಕಾರಾ ಎಂಬ ಕಲಾ ಗ್ಯಾಲರಿಯಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಶ್ರೀ ಮಹಾಕಾಳಿದೇವಿ ಮತ್ತು ಭಗವಾನ್ ಶಿವ ಅವರ  ಚಿತ್ರಗಳನ್ನು ಬೆತ್ತಲೆ, ಅಶ್ಲೀಲ ಹಾಗೂ ಸಂಭೋಗನಿರತರಿದ್ದಾರೆ ಎಂಬಂತೆ ಚಿತ್ರಿಸಿ ಪ್ರದರ್ಶನದಲ್ಲಿ ಇಡಲಾಗಿದೆ. ಪೊಲೀಸರು ಚಿತ್ರಕಾರ ಟಿ. ವೆಂಕಣ್ಣ ಮತ್ತು ಕಲಾ ಗ್ಯಾಲರಿಯ ಮಾಲೀಕ ಅಭಯ ಮಸ್ಕಾರಾ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.