
ಒಂದು ಕಾರ್ಯಕ್ರಮದಲ್ಲಿ ‘ಮಿರಾಯ್ (Mirai) ಚಲನಚಿತ್ರದ ನಟ ತೇಜಾ ಸಜ್ಜಾ ಇವರಿಗೆ ಹಿಂದಿ ಚಿತ್ರರಂಗದ ಒಬ್ಬ ಪತ್ರಕರ್ತರು, “ನೀವು ತುಂಬಾ ಧಾರ್ಮಿಕರಾಗಿದ್ದು, ನಿಮ್ಮ ಚಲನಚಿತ್ರಗಳಲ್ಲಿ ಮೇಲಿಂದ ಮೇಲೆ ಧಾರ್ಮಿಕತೆ ಕಾಣಿಸುತ್ತದೆ, ಹೀಗೇಕೆ ? ಎಂದು ಕೇಳಿದರು. ಆಗ ಅವರು, “ಪ್ರೇಮಕಥೆಗಳು ಎಷ್ಟೋ ಸಲ ನಿರ್ಮಾಣವಾದರೂ ಅಥವಾ ಹಾಲಿವುಡ್‌ನಲ್ಲಿ ‘ಸ್ಪೈಡರ್‌ಮ್ಯಾನನ್ನು ೮ ಬಾರಿ ಪುನಃ ನಿರ್ಮಿಸಿದರೂ ಯಾರೂ ಪ್ರಶ್ನೆಗಳನ್ನು ಕೇಳುವುದಿಲ್ಲ; ಆದರೆ ನಾನು ಹಿಂದೂ ಧರ್ಮ ಮತ್ತು ಇತಿಹಾಸದ ಯಾವುದಾದರೂ ಒಂದು ಒಳ್ಳೆಯ ವಿಷಯವನ್ನು ತೋರಿಸಿದಾಗ ಮಾತ್ರ ತಕ್ಷಣ ಪ್ರಶ್ನೆಗಳು ಉದ್ಭವಿಸುತ್ತವೆ; ಅದರ ಬದಲು ಇದು ನಮ್ಮ ಭೂಮಿ, ಇದೇ ನಮ್ಮ ಸಂಸ್ಕೃತಿಯಾಗಿದೆ ಎಂದು ಹೆಮ್ಮೆ ಎನಿಸಬೇಕು. ಚಲನಚಿತ್ರದ ಜಾಹಿರಾತಿನಲ್ಲಿ ೩ ನಿಮಿಷ ೧೦ ಸೆಕೆಂಡ್‌ಗಳಲ್ಲಿ ಕೇವಲ ೧೦ ಸೆಕೆಂಡ್‌ಗಳ ಕಾಲ ಭಗವಾನ ಶ್ರೀರಾಮನ ಒಂದು ಕ್ಷಣಚಿತ್ರವನ್ನು ತೋರಿಸಲಾಗಿದೆ ಮತ್ತು ಅದರ ಮೇಲೆಯೇ ಧರ್ಮದ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ. ಹೊಸ ಪೀಳಿಗೆಯು ಭಾರತೀಯ ಇತಿಹಾಸದೊಂದಿಗೆ ಬೆರೆತು ಅದನ್ನು ಅಳವಡಿಸಿಕೊಳ್ಳಬೇಕೆಂದು, ನಾವು ಇತಿಹಾಸವನ್ನು ನೂತನ ಮತ್ತು ಆಕರ್ಷಕವಾಗಿ ಪ್ರಸ್ತುತಪಡಿಸುತ್ತಿದ್ದೇವೆ, ಎಂದರು.
ವಾಸ್ತವದಲ್ಲಿ, ಈ ಎಲ್ಲ ಪ್ರಶ್ನೆಗಳ ಹಿಂದೆ ಹೊಸ ಪೀಳಿಗೆಯನ್ನು ಅದರ ಮೂಲ ಧರ್ಮ-ಸಂಪ್ರದಾಯಗಳಿಂದ ದೂರವಿಡುವ ಒಂದು ‘ಅಜೆಂಡಾ ಅಡಗಿದೆ. ಧರ್ಮವನ್ನು ತೋರಿಸಿದಾಗ, ‘ಜಾತ್ಯತೀತತೆ ಅಪಾಯದಲ್ಲಿದೆ ಎಂದು ತಕ್ಷಣ ಹೇಳುವುದು ಅದರದ್ದೆ ಒಂದು ಭಾಗವಾಗಿದೆ. ಹಿಂದೂಗಳ ಶ್ರದ್ಧಾಸ್ಥಾನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು, ಅವರ ಸಂಪ್ರದಾಯಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇಡುವುದು, ಇದನ್ನೇ ‘ಪ್ರಗತಿಪರ ಆಗಿರುವ ಲಕ್ಷಣವೆಂದು ಪರಿಗಣಿಸಲಾಗುತ್ತದೆ, ಎಂಬುದು ಇದರಿಂದ ತಿಳಿದುಬರುತ್ತದೆ. ಹಾಲಿವುಡ್‌ನಲ್ಲಿ ಪೌರಾಣಿಕ ಕಥೆಗಳು, ಸೂಪರ್ ಹೀರೊಗಳು, ‘ಮಾರ್ವೆಲ್ನ ದೇವತಾ ಸದೃಶ (ದೇವತೆಗಳಿಗೆ ಹೋಲುವ) ಪಾತ್ರಗಳು ಪ್ರಶಂಸೆಗೆ ಪಾತ್ರವಾದಾಗ, ಭಾರತೀಯ ದೇವರು-ಇತಿಹಾಸಗಳ ಆಧಾರಿತ ಕಲಾಕೃತಿಗಳ ಮೇಲೆ ಮಾತ್ರ ಸಂದೇಹ ಮತ್ತು ಧರ್ಮವಾದದ ಮುದ್ರೆ ಬೀಳುತ್ತದೆ. ಈ ಬೌದ್ಧಿಕ ಅಪ್ರಾಮಾಣಿಕತೆಯನ್ನು ಬಯಲಿಗೆಳೆಯುವುದು ಅವಶ್ಯಕವಾಗಿದೆ. ಇತರ ಯಾವುದೇ ಧರ್ಮದ ಮೇಲಿನ ಶ್ರದ್ಧೆ, ಪ್ರಸಂಗಗಳ ಕುರಿತು ಇಂತಹ ಪ್ರಶ್ನೆಗಳನ್ನು ಕೇಳಲು ಯಾರೂ ಧೈರ್ಯ ತೋರಿಸುವುದಿಲ್ಲ; ಏಕೆಂದರೆ ಆ ಸಮಾಜದಿಂದ ತೀವ್ರ ಪ್ರತಿಕ್ರಿಯೆ ಬರುತ್ತದೆ ಎಂದು ಅವರಿಗೆ ತಿಳಿದಿದೆ. ಹಾಗಾದರೆ ಹಿಂದೂಗಳ ಶ್ರದ್ಧೆಯನ್ನೇ ಏಕೆ ಗೇಲಿ ಮಾಡಬೇಕು ? ಭಾರತೀಯ ಚಲನಚಿತ್ರಗಳಲ್ಲಿ ಹಿಂಸೆ, ಅಶ್ಲೀಲತೆಯನ್ನು ತೋರಿಸಿದಾಗ ಯಾರೂ ಆಕ್ಷೇಪಿಸುವುದಿಲ್ಲ; ಆದರೆ ಶ್ರೀರಾಮನ ಕ್ಷಣಚಿತ್ರವನ್ನು ತೋರಿಸಿದರೂ ವಾದ ಸೃಷ್ಟಿಯಾಗುತ್ತದೆ. ‘ಮಿರಾಯ್ ಈ ಚಲನಚಿತ್ರದಲ್ಲಿ ಧರ್ಮಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ತೋರಿಸಲಾಗಿದೆ. ಕಥಾನಕದಲ್ಲಿ ‘ಮಿರಾಯ್ ಎಂಬ ದಿವ್ಯ ಶಸ್ತ್ರವನ್ನು ಶ್ರೀರಾಮನೊಂದಿಗೆ ಜೋಡಿಸಲಾಗಿದ್ದು, ರಾಮಾಯಣದ ವಾನರರು ಮತ್ತು ಜಟಾಯು ಮುಂತಾದವರ ಸಂದರ್ಭಗಳನ್ನು ಬಳಸಲಾಗಿದೆ. ಧರ್ಮ, ನ್ಯಾಯ, ತ್ಯಾಗ, ನೈತಿಕತೆ ಮುಂತಾದ ಮೌಲ್ಯಗಳ ಆಧಾರದ ಮೇಲೆ ಮುಖ್ಯ ಪಾತ್ರದ ಪಯಣವನ್ನು ತೋರಿಸಲಾಗಿದ್ದು, ಆಶ್ರಮ, ಸಾಧು-ಸಂತರು, ಭವಿಷ್ಯಕಾರರ ಪಾತ್ರಗಳನ್ನೂ ತೋರಿಸಲಾಗಿದೆ. ಕೆಲವು ಕಲಾವಿದರು ತಮ್ಮ ನಾಡು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಾರೆ, ಇದು ತೇಜಾ ಸಜ್ಜಾ ಅವರ ಚಲನಚಿತ್ರದಿಂದ ಮತ್ತು ಪ್ರತಿಕ್ರಿಯೆಯಿಂದ ಗಮನಕ್ಕೆ ಬರುತ್ತದೆ. ಸಮಾಜವೂ ಅವರನ್ನು ಬೆಂಬಲಿಸಿದರೆ, ಹಿಂದೂ ಸಂಸ್ಕೃತಿಯ ವಿರುದ್ಧದ ಈ ಮಾನಸಿಕ ಗುಲಾಮಗಿರಿ ಮುರಿದು ಬೀಳುತ್ತದೆ ! – ಸೌ. ಅಪರ್ಣಾ ಜಗತಾಪ್, ಪುಣೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು