‘ಜಗದ್ಗುರು ಭಗವಾನ ಶ್ರೀಕೃಷ್ಣ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ನಾನು ವಂದಿಸುತ್ತೇನೆ. ನಾನು ೪ ವರ್ಷಗಳಿಂದ ಸಾಧನೆ ಮಾಡುತ್ತಿದ್ದೇನೆ. ನಾನು ಬಾಲಸಂಸ್ಕಾರವರ್ಗವನ್ನು ತೆಗೆದುಕೊಳ್ಳುತ್ತೇನೆ ಮತ್ತು ಧರ್ಮಶಿಕ್ಷಣವರ್ಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತೇನೆ. ಧರ್ಮಶಿಕ್ಷಣವರ್ಗದಿಂದ ನಮ್ಮ ಪರಿಸರದಲ್ಲಿನ ವ್ಯಕ್ತಿಗಳಲ್ಲಿ ಮತ್ತು ವರ್ಗದಲ್ಲಿನ ಜಿಜ್ಞಾಸುಗಳಲ್ಲಿ ಬದಲಾವಣೆ ಆಗುತ್ತಿವೆ. ಅವುಗಳಲ್ಲಿನ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೧. ಧರ್ಮಶಿಕ್ಷಣವರ್ಗದಲ್ಲಿ ಬರುವ ವ್ಯಕ್ತಿಗಳು ನಾಮಜಪ ಮಾಡಲು ಪ್ರಾರಂಭಿಸುವುದು ಮತ್ತು ಅವರ ಸ್ವಭಾವದಲ್ಲಿ ಬದಲಾವಣೆಯಾಗುವುದು
೧೩.೩.೨೦೨೫ ರಿಂದ ಬೆಂಗಳೂರಿನ ನಾಗದೇವನಹಳ್ಳಿಯ ನಮ್ಮ ಮನೆಯಲ್ಲಿ ಧರ್ಮಶಿಕ್ಷಣವರ್ಗ ನಡೆಯುತ್ತಿದೆ. ಈ ಹಿಂದೆ ನಮ್ಮ ಮನೆಯ ಪರಿಸರದ ಜನರು ಪರಸ್ಪರರಲ್ಲಿ ಅನಾವಶ್ಯಕ ಮಾತನಾಡುತ್ತಿದ್ದರು. ಆದ್ದರಿಂದ ಅವರಲ್ಲಿ ತುಂಬಾ ಜಗಳವಾಗುತ್ತಿದ್ದವು. ನಮ್ಮ ಮನೆಯಲ್ಲಿ ಧರ್ಮಶಿಕ್ಷಣವರ್ಗವು ಪ್ರಾರಂಭವಾದ ನಂತರ ವರ್ಗಕ್ಕೆ ಬರುವ ಪರಿಸರದಲ್ಲಿನ ಪ್ರತಿಯೊಬ್ಬರು ನಾಮಜಪ ಮಾಡುತ್ತಿದ್ದಾರೆ. ಆದ್ದರಿಂದ ಆ ವ್ಯಕ್ತಿಗಳ ಸ್ವಭಾವದಲ್ಲಿ ಬದಲಾವಣೆ ಆಯಿತು. ಈಗ ಅವರು ಅಗತ್ಯವಿರುವಷ್ಟೇ ಮಾತನಾಡುತ್ತಾರೆ.
೨. ಧರ್ಮಶಿಕ್ಷಣವರ್ಗದಲ್ಲಿ ಬರುವ ಜಿಜ್ಞಾಸುಗಳ ಮನೆಗಳಲ್ಲಿಯೂ ತುಂಬಾ ಬದಲಾವಣೆ ಆಗಿದೆ. ಆದ್ದರಿಂದ ಎಲ್ಲ ಧರ್ಮಪ್ರೇಮಿಗಳಿಗೆ ಆನಂದವಾಗುತ್ತಿದೆ.
೩. ಧರ್ಮಾಭಿಮಾನಿ ಲಕ್ಷ್ಮಿ ಸಂತೋಷ ಇವರಿಗೆ ಬಂದ ಅನುಭೂತಿಗಳು
ಧರ್ಮಶಿಕ್ಷಣವರ್ಗಕ್ಕೆ ಬರುವ ಧರ್ಮಾಭಿಮಾನಿ ಲಕ್ಷ್ಮಿ ಸಂತೋಷ ಇವರ ಮನೆಯ ಮೇಲೆ ಒಮ್ಮೆ ನವಿಲು ಕುಳಿತಿತ್ತು. ಆದ್ದರಿಂದ ಅವರಿಗೆ ‘ಮನೆಯಲ್ಲಿನ ನಕಾರಾತ್ಮಕತೆ ದೂರವಾಗುತ್ತಿದೆ’, ಎಂದೆನಿಸಿತು. ಅವರಿಗೆ ‘ನಾಮಜಪದಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗಿದೆ’, ಎಂದೆನಿಸಿತು. ಅವರಿಗೆ ‘ಗುರುದೇವರು ಶ್ರೀಕೃಷ್ಣನ ರೂಪದಲ್ಲಿ ಕೊಳಲನ್ನು ನುಡಿಸುತ್ತ ಓಡಾಡುತ್ತಿದ್ದಾರೆ’, ಎಂದೆನಿಸಿತು. ಇದನ್ನು ಕೇಳಿ ನನಗೆ ತುಂಬಾ ಆನಂದವಾಯಿತು.
೪. ನಾನು ೪ ವರ್ಷಗಳಿಂದ ಸಾತ್ತ್ವಿಕ ಉತ್ಪಾದನೆಗಳ ವಿತರಣೆ ಮಾಡುತ್ತಿದ್ದೇನೆ. ಸನಾತನ ಊದುಬತ್ತಿಗಳನ್ನು ತೆಗೆದು ಕೊಳ್ಳುವ ಜಿಜ್ಞಾಸುಗಳು ಧರ್ಮಶಿಕ್ಷಣವರ್ಗಕ್ಕೆ ಬರುತ್ತಾರೆ. ಅವರು, “ಈ ಊದುಬತ್ತಿಗಳಿಂದ ಮನೆಯಲ್ಲಿನ ವಾತಾವರಣದಲ್ಲಿ ಬದಲಾವಣೆ ಆಗಿದೆ,” ಎಂದು ಹೇಳಿದರು.
‘ಗುರುದೇವರು ಎಷ್ಟು ಮಹಾನರಾಗಿದ್ದಾರೆ ! ಗುರುದೇವರೇ ನನ್ನಿಂದ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬುದು ನನಗೆ ಅರಿವಾಗುತ್ತದೆ ಮತ್ತು ನನಗೆ ಅವರ ಬಗ್ಗೆ ಕೃತಜ್ಞತೆ ಎನಿಸುತ್ತದೆ.’
– ಸೌ. ಸ್ಮಿತಾ ವಿನೋದ ಗೌಡ, ಬೆಂಗಳೂರು (೨೨.೮.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !