‘ಬ್ರಾಹ್ಮಣ, ‘ಕ್ಷತ್ರಿಯ, ‘ವೈಶ್ಯ ಮತ್ತು ‘ಶೂದ್ರ – ಈ ನಾಲ್ಕು ವರ್ಣಗಳಲ್ಲಿ ‘ಬ್ರಾಹ್ಮಣರಿಗೆ ಎಲ್ಲಕ್ಕಿಂತ ಹೆಚ್ಚು ಬಂಧನಗಳಿರುವುದರ ಹಿಂದಿನ ಶಾಸ್ತ್ರವನ್ನು ಇಲ್ಲಿ ನೀಡಲಾಗಿದೆ.

೧. ನಾಲ್ಕು ವರ್ಣಗಳೆಂದರೆ ಜೀವದ ತ್ಯಾಗ ಮಾಡುವ ಕ್ಷಮತೆ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ – ಈ ನಾಲ್ಕು ವರ್ಣಗಳು ವ್ಯಕ್ತಿಯ ಬೇರೆ ಬೇರೆ ಕ್ಷಮತೆಯನ್ನು ತೋರಿಸುತ್ತವೆ. ವ್ಯಕ್ತಿಗೆ ತನ್ನ ಕ್ಷಮತೆಗನುಸಾರ ಸಾಧನೆ ಮಾಡಿ ಪ್ರಗತಿಯನ್ನು ಮಾಡಿಕೊಳ್ಳಲು ವರ್ಣವ್ಯವಸ್ಥೆಯನ್ನು ಮಾಡಲಾಗಿದೆ. ಸಾಧನೆಯಲ್ಲಿ ಪ್ರಗತಿಯಾಗಲು, ವ್ಯಕ್ತಿಯ ಕ್ಷಮತೆಗನುಸಾರ ತ್ಯಾಗ ಮಾಡುವುದು ಅವಶ್ಯಕವಾಗಿರುತ್ತದೆ. ಧನ ಸಂಪಾದನೆ ಮಾಡುವುದು ಕೂಡ ಒಂದು ಕ್ಷಮತೆಯಾಗಿದೆ. ಯಾವುದೇ ವ್ಯಕ್ತಿಗೆ ಧನಸಂಪಾದಿಸುವ ಕ್ಷಮತೆ ಇಲ್ಲದಿದ್ದರೆ, ಸಾಧನೆಯ ದೃಷ್ಟಿಯಿಂದ ಅವನು ಹಣವನ್ನು ತ್ಯಾಗ ಮಾಡುವ ಅವಶ್ಯಕತೆಯಿರುವುದಿಲ್ಲ. ಆದರೆ, ಯಾವುದಾದರೊಬ್ಬ್ಬನ ಬಳಿ ಹಣವಿದ್ದರೆ, ಅವನು ತನು, ಮನ ಮತ್ತು ಧನ ಮೂರನ್ನೂ ತ್ಯಾಗ ಮಾಡುವುದು ಅವಶ್ಯಕವಾಗಿರುತ್ತದೆ.
೨. ವರ್ಣಾನುಸಾರ ತ್ಯಾಗ ಮಾಡುವ ಕ್ಷಮತೆ
೨ ಅ. ಶೂದ್ರ : ತನು ಮತ್ತು ಮನಸ್ಸನ್ನು ತ್ಯಾಗ ಮಾಡುವವನು.
೨ ಆ. ವೈಶ್ಯ : ತನು,ಮನ ಮತ್ತು ಧನವನ್ನು ತ್ಯಾಗ ಮಾಡುವವನು.
೨ ಇ. ಕ್ಷತ್ರಿಯ : ತನು, ಮನ, ಧನ, ಬುದ್ಧಿ ಮತ್ತು ಪ್ರಸಂಗ ಬಂದರೆ ಪ್ರಾಣವನ್ನು ತ್ಯಾಗ ಮಾಡುವವನು.
೨ ಈ. ಬ್ರಾಹ್ಮಣ : ತನು, ಮನ, ಧನ, ಬುದ್ಧಿ, ಪ್ರಾಣ ಮತ್ತು ಅಹಂಕಾರವನ್ನು ತ್ಯಾಗ ಮಾಡುವವನು.
೩. ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿರದೇ, ಅದು ಪ್ರತಿದಿನ ಮಾಡುವ ಪ್ರಕ್ರಿಯೆ ಆಗಿದೆ !
ಅನೇಕ ಜನರ ಪ್ರಕಾರ, ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿದೆ, ಆದರೆ, ಅಧ್ಯಾತ್ಮಶಾಸ್ತ್ರದ ಪ್ರಕಾರ, ತ್ಯಾಗವು ಒಮ್ಮೆ ಮಾಡುವ ಕೃತಿಯಾಗಿರದೇ, ಅದು ಪ್ರತಿದಿನ ಮಾಡುವ ಪ್ರಕ್ರಿಯೆಯಾಗಿದೆ. ಒಬ್ಬ ಶಿಷ್ಯನು ತನ್ನ ಸಂಪೂರ್ಣ ಹಣವನ್ನು ಗುರುವಿನ ಚರಣಗಳಿಗೆ ಒಮ್ಮೆ ಅರ್ಪಿಸಿದರೂ, ಅವನಿಗೆ ಹಣ ಸಂಪಾದಿಸುವ ಕ್ಷಮತೆ ಹಾಗೆಯೇ ಇರುತ್ತದೆ. ಇದರಿಂದ ಅವನ ಸಂಪೂರ್ಣ ತ್ಯಾಗವಾಗುವುದಿಲ್ಲ. ಯಾವಾಗ ಧನಾರ್ಜನೆಯ ಉದ್ದೇಶವನ್ನು ಬಿಟ್ಟು ಗುರುವು ಹೇಳಿದಂತೆ ತನ್ನ ಜೀವನವನ್ನು ಕಳೆಯುತ್ತಾನೆಯೋ ಆಗ ಮಾತ್ರ ಅವನಿಂದ ಧನದ ನಿಜವಾದ ತ್ಯಾಗ ಆಗುತ್ತಿರುತ್ತದೆ. ಇದೇ ನಿಯಮ ತನು, ಮನ, ಬುದ್ಧಿ ಮತ್ತು ಇತರ ವಿಷಯಗಳಿಗೂ ಅನ್ವಯಿಸುತ್ತದೆ.
೪. ಇತರ ವರ್ಣಗಳಿಗೆ ಹೋಲಿಸಿದರೆ ಬ್ರಾಹ್ಮಣರ ಕ್ಷಮತೆ ಹೆಚ್ಚಿರುವುದರಿಂದ, ಅವರಿಂದ ಪರಿಪೂರ್ಣ ತ್ಯಾಗವಾಗಬೇಕೆಂದು ಅವರಿಗೆ ಅತ್ಯಧಿಕ ನಿರ್ಬಂಧಗಳನ್ನು ವಿಧಿಸಲಾಗಿದೆ
ಇತರ ವರ್ಣಗಳಿಗೆ ಹೋಲಿಸಿದರೆ ಬ್ರಾಹ್ಮಣರ ಕ್ಷಮತೆ ಹೆಚ್ಚು. ಆದ್ದರಿಂದ ತನು, ಮನ, ಧನ, ಬುದ್ಧಿ ಮತ್ತು ಅಹಂ ಇವುಗಳ ತ್ಯಾಗ ಪ್ರತಿದಿನವೂ ಆಗಿ ಬ್ರಾಹ್ಮಣರ ಸಾಧನೆ ಆಗಬೇಕು ಎಂದು ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರಿಗೆ ಅತಿ ಹೆಚ್ಚು ನಿರ್ಬಂಧಗಳನ್ನು ಹೇಳಲಾಗಿದೆ. ಈ ನಿರ್ಬಂಧಗಳಿಂದ ಬ್ರಾಹ್ಮಣರಿಗೆ ‘ನಿರ್ಬಂಧ ಗಳನ್ನು ಪಾಲಿಸುವುದು ಸಾಧನೆಯಾಗಿದ್ದು ಮತ್ತು ನಿರ್ಬಂಧಗಳನ್ನು ಪಾಲಿಸದಿರುವುದು ತಪ್ಪು ಆಗಿದೆ ಎಂಬ ಯೋಗ್ಯ ಅಯೋಗ್ಯ ಹೀಗೆ ಎರಡೂ ಕರ್ಮಗಳ ಜ್ಞಾನ ಅವರಿಗೆ ಬರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ರಾಹ್ಮಣರಿಂದ ತಪ್ಪುಗಳಾಗ ಬಾರದು ಮತ್ತು ಅವರ ಸಾತ್ತ್ವಿಕತೆ ಹಾಗೇ ಉಳಿಯಬೇಕು – ಈ ಎರಡೂ ಉದ್ದೇಶಗಳಿಗಾಗಿ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರಿಗೆ ಹೆಚ್ಚು ನಿರ್ಬಂಧಗಳನ್ನು ಹಾಕಲಾಗಿದೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ) (ವರ್ಷ ೨೦೨೫ ರ ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೬.೨೦೨೩, ಮಧ್ಯಾಹ್ನ ೪.೧೦ ರಿಂದ ೫.೧೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !