
ಯುಗೊಸ್ಲಾವಿಯಾದ ಅಧ್ಯಕ್ಷ ಸತ್ತಾಗ, ‘ಜಗತ್ತಿನ ಅತ್ಯಂತ ಶ್ರೀಮಂತ ಸಾಮ್ಯವಾದಿ ಸತ್ತನು ಎಂಬ ಲೇಖನ ಪ್ರಕಟವಾಗಿತ್ತು. ಸಾಮ್ಯವಾದದ ಇದಕ್ಕಿಂತ ದೊಡ್ಡ ವಿಡಂಬನೆ ಇನ್ನೇನಿದೆ ? ಸಮಾನತೆಯ ಬಗ್ಗೆ ಹರಟೆ ಹೊಡೆಯುವುದು ಸುಲಭ. ಸಮಾನತೆಯನ್ನು ಸ್ಥಾಪಿಸಲು ನಿಸ್ವಾರ್ಥ ಭೂಮಿಕೆಯನ್ನು ಸ್ವೀಕರಿಸಬೇಕಾಗುತ್ತದೆ. ಅದರ ನೆರಳೂ ಎಲ್ಲೂ ಕಾಣಿಸುವುದಿಲ್ಲ. ಜವಾನ್(ಪ್ಯೂನ್)ನಿಂದ ಹಿಡಿದು ಬ್ಯಾಂಕಿನ ದೊಡ್ಡ ಅಧಿಕಾರಿಯ ವರೆಗೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಹಿಡಿದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವರೆಗೆ ಎಲ್ಲರೂ ವೇತನ ಹೆಚ್ಚಳಕ್ಕಾಗಿ ನಿತ್ಯದ ಕೆಲಸವನ್ನು ನಿಲ್ಲಿಸುತ್ತಾರೆ, ಅಂದರೆ ‘ಸ್ಟ್ರೈಕ್ ಮಾಡುತ್ತಾರೆ. ಲೋಕಸಭೆ ಮತ್ತು ವಿಧಾನಸಭೆಯ ಸದಸ್ಯರ ವೇತನ ಹೆಚ್ಚಳದ ಸಮಯದಲ್ಲಿ ಎಲ್ಲ ಪಕ್ಷಗಳು ಒಮ್ಮತದಿಂದ ಒಪ್ಪಿಗೆ ಕೊಡುತ್ತವೆ, ಇದೆಲ್ಲವನ್ನು ಸಮಾಜದ ಕಲ್ಯಾಣಕ್ಕಾಗಿ ಮಾಡಲಾಗುತ್ತಿದೆ ಎಂದು ಹೇಳಲು ಸಾಧ್ಯವೇ ? ಪರಂಪರೆಯ ಅಸಮಾನತೆಯನ್ನು ಟೀಕಿಸುವಾಗ, ಯಾರೂ ತಮ್ಮ ಕಾಲುಗಳ ಕೆಳಗೆ ಏನು ಉರಿಯುತ್ತಿದೆ, ಅಂದರೆ ತಾವೇನು ಮಾಡುತ್ತಿದ್ದೇವೆ ಎಂಬುದನ್ನು ನೋಡುವುದಿಲ್ಲ. ಅವರಿಗೆ ಎಲ್ಲ ರೀತಿಯ ಅಧಿಕಾರ ಇರುವುದರಿಂದ, ಅವರು ತಮಗೆ ಇಷ್ಟಬಂದಂತೆ ವರ್ತಿಸಿ, ಪ್ರಸಾರ ಮಾಧ್ಯಮಗಳ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಾರೆ. ಒಬ್ಬ ಸಚಿವನ ನಿವಾಸ ಇನ್ನೊಬ್ಬ ಸಚಿವನಿಗೆ ಸಿಕ್ಕಾಗ, ಆ ಸಚಿವ ತನ್ನ ಇಚ್ಛೆಗನುಸಾರ ಸುಧಾರಣೆಗಳನ್ನು ಮಾಡಲು ೫-೧೦ ಲಕ್ಷ ರೂಪಾಯಿಗಳನ್ನು ಸಹಜವಾಗಿಯೇ ಖರ್ಚು ಮಾಡುತ್ತಾನೆ. ಅದು ಸರಕಾರದ, ಅಂದರೆ ಸಾಮಾನ್ಯ ಜನರ ಹಣ ಅಲ್ಲವೇ ? ಸಮಾಜದ ಬಹುಪಾಲು ಜನರು ಬಡತನದ ರೇಖೆಗಿಂತ ಕೆಳಗೆ ವಾಸಿಸುತ್ತಿರುವಾಗ, ಸಚಿವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ತಮ್ಮನ್ನು ತಾವು ‘ಸಮಾನತೆಯ ಪ್ರತಿಪಾದಕರು ಎಂದು ಕರೆಸಿಕೊಳ್ಳುತ್ತಾರೆ. ಈ ವಾಸ್ತವಕ್ಕೆ ನಿರ್ಲಜ್ಜತನವನ್ನು ಹೊರತುಪಡಿಸಿ ಬೇರೆ ಯಾವ ಹೆಸರನ್ನು ಕೊಡಬೇಕು ?
ಸಾಮ್ಯವಾದವೆಂದರೆ ಕನಿಕರ ಹುಟ್ಟಿಸುವ ದುಃಖಾಂತ !
‘ರಷ್ಯಾದ ಮೊದಲಿನ ರಾಷ್ಟ್ರಾಧ್ಯಕ್ಷರಾದ ಮಿಖಾಯಿಲ್ ಗೋರ್ಬಚೇವ್ ಮತ್ತು ಬೋರಿಸ್ ಯೆಲ್ತಸಿನ್ ಇವರು ನಮ್ಮ ದೇಶದಲ್ಲಿ ಸಾಮ್ಯವಾದದ ಪ್ರಯೋಗ ನಡೆಯಿತು, ಇದು ನಮ್ಮ ಜನರ ಒಂದು ಕನಿಕರ ಹುಟ್ಟಿಸುವ ದುಃಖಾಂತವಾಗಿದೆ ಎಂದು ಹೇಳಿದ್ದರು. ರಷ್ಯಾದ ಈ ಘಟನೆಯು, ಅಸಮಾನತೆ ನಾಶವಾಗುವ ವಸ್ತುವಲ್ಲ ಎಂಬುದನ್ನು ಸಾಬೀತುಪಡಿಸಿದೆ. ಅಸಮಾನತೆಯನ್ನು ಸ್ವೀಕರಿಸುವುದು ಅನಿವಾರ್ಯವಾಗಿದ್ದರೆ, ಉದ್ಯೋಗ ಮತ್ತು ವ್ಯವಹಾರವನ್ನು ವಿಕೇಂದ್ರೀಕರಿಸುವ ವರ್ಣವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಸೂಕ್ತ. ಅದು ಮೂಲತಃ ಜನ್ಮಾಧಾರಿತವಾಗಿದೆ; ಆದ್ದರಿಂದಲೇ ಅದನ್ನು ಕೇವಲ ತ್ಯಾಜ್ಯ ಎಂದು ಪರಿಗಣಿಸುವುದು ಸರಿಯಲ್ಲ. ಸಂಪೂರ್ಣ ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಮ್ಯವಾದಿ ವಿಚಾರಧಾರೆಯನ್ನು ಸ್ವೀಕರಿಸಲಾಯಿತು. ಅದಕ್ಕಾಗಿ ಕ್ರಾಂತಿಯನ್ನು ನಡೆಸಿ, ಸಾಮ್ಯವಾದಿಗಳು ತಮ್ಮ ಪದ್ಧತಿಯ ಪ್ರಕಾರ ನಿರಂಕುಶವಾಗಿ ಸರಕಾರವನ್ನು ನಡೆಸಿದರು. ಸರಕಾರದ ಆದೇಶಗಳನ್ನು ಪಾಲಿಸದವರನ್ನು ಕ್ರೂರವಾಗಿ ಕೊಲ್ಲಲಾಯಿತು.
– ಪ.ಪೂ ಸ್ವಾಮಿ ವರದಾನಂದ ಭಾರತಿ
(ಆಧಾರ : ‘ಮನುಸ್ಮೃತಿ ಭೂಮಿಕಾ ಮತ್ತು ‘ಪೂರ್ವರಂಗ ತರಂಗಿಣಿ ಈ ಗ್ರಂಥಗಳಿಂದ)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !