
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಯ ಬಳಕೆ ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಪ್ರಸಾರಮಾಧ್ಯಮ ಮತ್ತು ಕಲಾ ಕ್ಷೇತ್ರಗಳಲ್ಲಿಯೂ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಯಾವುದೇ ಕೆಲಸ ಬೇಗನೆ ಮತ್ತು ಕಡಿಮೆ ಶ್ರಮದಲ್ಲಿ ಆಗಬೇಕೆಂದು ಬಯಸುತ್ತಾರೆ. ಇದು ಸಮಯದ ಆವಶ್ಯಕತೆಯೂ ಹೌದು; ಆದರೆ ಇದರ ಉಪಯೋಗಗಳ ಜೊತೆಗೆ ಕೆಲವು ನಷ್ಟಗಳೂ ಹೊರಬರುತ್ತಿವೆ. ಒಂದೇ ಕ್ಷಣದಲ್ಲಿ ಸಿದ್ಧಪಡಿಸಿದ ಸೂತ್ರಬದ್ಧ ಮಾಹಿತಿಯನ್ನು ಪಡೆಯುವುದು ‘ಎಐ’ ನ ದೊಡ್ಡ ಪ್ರಯೋಜನವಾಗಿದೆ; ಆದರೆ, ಪತ್ರಕರ್ತರು ಅದರಿಂದ ಪೂರ್ತಿ ಸುದ್ದಿಯನ್ನೇ ಅಥವಾ ವಿದ್ಯಾರ್ಥಿಗಳು ಪೂರ್ತಿ ಪ್ರಬಂಧವನ್ನೇ ಅಥವಾ ಲೇಖಕರು ಕಥೆಯನ್ನೇ ‘ಎಐ’ನಿಂದಲೇ ಬರೆಸಿಕೊಂಡರೆ ಮತ್ತು ಎಲ್ಲೆಡೆ ಇದರ ಪುನರಾವರ್ತನೆ ಹೆಚ್ಚಾದರೆ, ಅದರಲ್ಲಿನ ಕೃತಕತೆಯು ‘ಬುದ್ಧಿಮತ್ತೆಯ ಆಚೆಗಿನದು’ ಆಗಿರುತ್ತದೆ ! ಇದು ಬಹುಪಾಲು ಜನರ ಸೃಜನಶೀಲತೆಯನ್ನು ಕುಂಠಿತಗೊಳಿಸುತ್ತದೆ ಮತ್ತು ‘ಎಐ’ ಗೆ ಬುದ್ಧಿಮತ್ತೆಯನ್ನು ಪೂರೈಸುವವರದ್ದು ಮಾತ್ರ ಅದು ಹೆಚ್ಚಿಸುತ್ತದೆ.

ಕೃತಕ ಬುದ್ಧಿಮತ್ತೆಯ ಲಾಭ ಮತ್ತು ನಷ್ಟಗಳು ಕಾಲಾಂತರದಲ್ಲಿ ಹೆಚ್ಚು ಸ್ಪಷ್ಟವಾಗುತ್ತವೆ. ಆದರೆ ಅಲ್ಲಿಯವರೆಗೆ, ಮಾನವನು ಬುದ್ಧಿಯನ್ನು ಬಳಸದ ಕಾರಣ ಉಂಟಾಗುವ ಹಾನಿ ಎಷ್ಟು ಹೆಚ್ಚಾಗಿರುತ್ತದೆಂದರೆ, ಅದನ್ನು ಮತ್ತೆ ಚುರುಕುಗೊಳಿಸಲು ಬಹುಶಃ ‘ಎಐ’ ಬಳಿಯೇ ಹೋಗಬೇಕಾಗಬಹುದು ! ಈಗ ಎತ್ತರ ಹೆಚ್ಚಿಸುವಂತೆಯೇ ಬುದ್ಧಿಮತ್ತೆಯನ್ನು ಹೆಚ್ಚಿಸುವ ಔಷಧಿಗಳ ಜಾಹೀರಾತುಗಳೂ ಪ್ರಸಾರವಾಗುತ್ತಿವೆ. ಒಂದು ವೇಳೆ ಕೃತಕ ಬುದ್ಧಿಮತ್ತೆಯನ್ನು ಸರಿಯಾದ ಮತ್ತು ಸೀಮಿತ ಪ್ರಮಾಣದಲ್ಲಿ ಬಳಸಿ, ಮಾನವನ ಬುದ್ಧಿಯನ್ನು ಹೆಚ್ಚು ಉಪಯೋಗಿಸಿದರೆ ಮತ್ತು ಅಥರ್ವಶೀರ್ಷಾದಿ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ, ಬುದ್ಧಿಯನ್ನು ಹೆಚ್ಚಿಸುವ ಔಷಧಿಗಳ ಆವಶ್ಯಕತೆ ಇರುವುದಿಲ್ಲ. ಅಮೇರಿಕದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳು ಗಣಿತದಲ್ಲಿ ಹೆಚ್ಚು ಬುದ್ಧಿವಂತರು ಎಂದು ಹೇಳಲಾಗುತ್ತದೆ. ಭಾರತೀಯ ವಿದ್ಯಾರ್ಥಿಗಳ ಕೈಯಲ್ಲಿ ಅಲ್ಲ, ಆದರೆ ಅವರ ತಲೆಯಲ್ಲಿ ‘ಕ್ಯಾಲಕ್ಯುಲೇಟರ್'(ಗಣಕಯಂತ್ರ) ಇರುತ್ತದೆ.
ಪ್ರಸ್ತುತ, ಕೃತಕ ಬುದ್ಧಿಮತ್ತೆಯ ಒಂದು ಪ್ರಮುಖ ದೋಷವು ಕಣ್ಣಿಗೆ ರಾಚುತ್ತಿದೆ. ಅದು ಎಂದರೆ ‘ಎಐ’ ಮೂಲಕ ರಚಿಸಲಾದ ಕೆಲವು ಚಿತ್ರಗಳಲ್ಲಿ ಮುಖಗಳು, ಬಟ್ಟೆಗಳು, ಕೂದಲು ಸುಂದರವಾಗಿ ಕಂಡರೂ, ದೇಹದ ಆಕಾರ ಸಾಮಾನ್ಯ ಮಾನವ ಶರೀರದ ಮಾಪನಗಳಿಗೆ ಅನುಗುಣವಾಗಿರುವುದಿಲ್ಲ. ಅನೇಕ ಬಾರಿ ತಲೆ ದೊಡ್ಡದಾಗಿ ಮತ್ತು ದೇಹವು ಚಿಕ್ಕದಾಗಿರುತ್ತದೆ. ಇಂತಹ ಚಿತ್ರಗಳಿಂದ ಸರಿಯಾದ ಸ್ಪಂದನಗಳು ಬರುವುದಿಲ್ಲ. ನಿಜವಾದ ಮನುಷ್ಯನಲ್ಲಿ ತಲೆ ದೊಡ್ಡದಾಗಿದ್ದು ಮತ್ತು ದೇಹ ಚಿಕ್ಕದಾಗಿದ್ದರೆ ನಾವು ಅವನನ್ನು ನೋಡಲು ಸಾಧ್ಯವೇ ? ಈ ಚಿತ್ರಗಳ ಪ್ರಭಾವಕ್ಕೆ ಒಳಗಾಗಿ ಈಗ ಮೂರ್ತಿಕಾರರೂ ಇಂತಹ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ದುರ್ಗಾಪೂಜೆಗಾಗಿ ತಯಾರಿಸುತ್ತಿದ್ದ ಮೂರ್ತಿಯಲ್ಲಿ ದೇವಿಯ ಮುಖ ದೊಡ್ಡದಾಗಿ ಮತ್ತು ಅದೂ ವಿಚಿತ್ರ ಗೊಂಬೆಯಂತೆ ಮತ್ತು ಕೈಗಳು ಮಾತ್ರ ತೆಳುವಾಗಿ ಇರುವಂತಹ ಮೂರ್ತಿಯನ್ನು ತಯಾರಿಸಲಾಗುತ್ತಿತ್ತು. ಹಿಂದುತ್ವನಿಷ್ಠ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ, ‘ದೇವಿಯ ಮೂರ್ತಿ ಸಾಂಪ್ರದಾಯಿಕವಾಗಿರಬೇಕು’ ಎಂದು ಸ್ಪಷ್ಟವಾಗಿ ಹೇಳಿವೆ. ಆದರೆ ಈ ಘಟನೆಯಿಂದ ‘ಎಐ’ ನ ಬಳಕೆ ವಿಕೃತಿಯನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದು ಖಂಡಿತವಾಗಿಯೂ ಸ್ಪಷ್ಟವಾಗುತ್ತದೆ.
– ಸೌ. ರೂಪಾಲಿ ಅಭಯ ವರ್ತಕ, ಸನಾತನ ಆಶ್ರಮ, ದೇವದ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !