ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಧಾರವಾಡದ ಚಿ. ಶ್ರೀಹರಿ ಬಸವರಾಜ ಗೋರವರ (ವಯಸ್ಸು ೫ ವರ್ಷ) !

ಚಿ. ಶ್ರೀಹರಿ ಗೋರವರ

      ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಚಿ. ಶ್ರೀಹರಿ ಬಸವರಾಜ ಗೋರವರ ಇವನು ಈ ಪೀಳಿಗೆಯಲ್ಲೊಬ್ಬನು !

ಡಾ. (ಸೌ.) ಸ್ಫೂರ್ತಿ ಗೋರವರ

೧. ವಯಸ್ಸು ೧ ರಿಂದ ೨ ವರ್ಷ

ಅ. ‘ಶ್ರೀಹರಿಗೆ ಸಾತ್ತ್ವಿಕ ಆಹಾರ ಇಷ್ಟವಾಗುತ್ತದೆ.

ಆ. ಶ್ರೀಹರಿ ಒಂದು ವರ್ಷದವನಿದ್ದಾಗ ಅವನು ‘ಸನಾತನ ಪ್ರಭಾತ’

ಮತ್ತು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಲ್ಲಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಛಾಯಾಚಿತ್ರಗಳ ಕಡೆಗೆ ನೋಡಿ ನಮಸ್ಕಾರ ಮಾಡುತ್ತಿದ್ದನು.

ಇ. ಅವನು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದಲ್ಲಿನ ಛಾಯಾಚಿತ್ರಗಳನ್ನು ಅನೇಕ ಬಾರಿ ನೋಡುತ್ತಿದ್ದನು.

೧ ಈ. ದೇವರ ಬಗ್ಗೆ ಸೆಳೆತ

೧. ಶ್ರೀಹರಿಗೆ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೇಳಲು ಇಷ್ಟವಾಗುತ್ತಿತ್ತು. ಗಮನಕೊಟ್ಟು ಕೇಳುತ್ತಿದ್ದನು.

೨. ಮನೆಯ ವ್ಯಕ್ತಿಗಳು ದೇವಸ್ಥಾನಕ್ಕೆ ಹೋಗುವಾಗ ಶ್ರೀಹರಿಯು ತಕ್ಷಣ ‘ನಾನೂ ಬರುತ್ತೇನೆ’, ಎಂದು ಹೇಳಿ ಅವರ ಜೊತೆಗೆ ಹೋಗುತ್ತಾನೆ.

೧ ಉ. ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಭಾವ : ಅವನು, ”ನಾನು ರಾಮನಾಥಿ ಆಶ್ರಮಕ್ಕೆ ಹೋಗಿ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ದರ್ಶನವನ್ನು ಪಡೆಯುತ್ತೇನೆ,” ಎಂದು ಹೇಳುತ್ತಾನೆ. ಅವನು ಪ್ರತಿದಿನ ಬೆಳಗ್ಗೆ ಎದ್ದ ನಂತರ ಗುರುದೇವರ ಪಾದಪೂಜೆಯನ್ನು ಮಾಡಲು ಪ್ರಯತ್ನಿಸುತ್ತಾನೆ.

೨. ವಯಸ್ಸು ೨ ರಿಂದ ೪ ವರ್ಷ

೨ ಅ. ಉತ್ತಮ ಗ್ರಹಣಕ್ಷಮತೆ : ನಾವು ಶ್ರೀಹರಿಗೆ ಒಂದೇ ಸಲ ಶ್ಲೋಕವನ್ನು ಹೇಳಿದರೂ ಅವನಿಗೆ ಆ ಶ್ಲೋಕವು ಬಾಯಿಪಾಠವಾಗುತ್ತದೆ. ಅವನು ಅನೇಕ ಶ್ಲೋಕಗಳನ್ನು ಸ್ಪಷ್ಟ ಉಚ್ಚಾರಣೆಯೊಂದಿಗೆ ಹೇಳುತ್ತಾನೆ.

೨ ಆ. ಕಲಿಯುವ ವೃತ್ತಿ

೧. ಅವನು ಅನೇಕ ವಿಷಯಗಳ ಬಗ್ಗೆ ಜಿಜ್ಞಾಸುವೃತ್ತಿಯಿಂದ ಕೇಳುತ್ತಾನೆ. ಅವನು ಮನೆಯಲ್ಲಿನ ವಿದ್ಯುತ್‌ ಉಪಕರಣಗಳ ಮತ್ತು ಯಂತ್ರಗಳ ಬಗ್ಗೆ ಕೇಳಿಕೊಂಡು ಅವುಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.

೨. ಅವನು ನಾವು ಮಾಡುತ್ತಿರುವ ಸೇವೆಯನ್ನು ಕಲಿಯಲು ಮತ್ತು ನಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಾನೆ.

೨ ಇ. ನಾಮಜಪಾದಿ ಉಪಾಯಗಳನ್ನು ಮಾಡುವ ಆಸಕ್ತಿ : ನಾವು ಪ್ರತಿದಿನ ನಾಮಜಪಾದಿ ಉಪಾಯಗಳನ್ನು ಮಾಡುತ್ತೇವೆ. ಅವನು ನಾವು

ಮಾಡುವುದನ್ನು ನೋಡಿ ಆ ರೀತಿ ಮಾಡಲು ಪ್ರಯತ್ನಿಸುತ್ತಾನೆ.

೨ ಈ. ದೇವರ ಬಗೆಗಿನ ಭಾವ

೧. ಅವನು ಮಕ್ಕಳೊಂದಿಗೆ ಆಟವಾಡುವಾಗ ಅವರಿಗೆ, ”ಎಲ್ಲೆಡೆ ದೇವರಿದ್ದಾನೆ ಮತ್ತು ಅವನು ಎಲ್ಲವನ್ನೂ ನೋಡುತ್ತಿರುತ್ತಾನೆ. ಆದ್ದರಿಂದಲೇ ಭಕ್ತ ಪ್ರಹ್ಲಾದನಿಗೆ ದೇವರು ದರ್ಶನವನ್ನು ನೀಡಿದನು,” ಎಂದು ಹೇಳುತ್ತಾನೆ.

೨. ಅವನು ತನ್ನ ಆಟದಸಾಮಾನುಗಳಿಗೆ, ಉದಾ. ಚತುಶ್ಚಕ್ರ ವಾಹನ, ಸೈಕಲ್‌ ಇವುಗಳಿಗೆ ದೇವತೆಗಳ ನಾಮಪಟ್ಟಿಗಳನ್ನು ಹಚ್ಚುತ್ತಾನೆ.

– ಡಾ. (ಸೌ.) ಸ್ಫೂರ್ತಿ ಬಸವರಾಜ ಗೋರವರ (ಚಿ. ಶ್ರೀಹರಿಯ ತಾಯಿ), ಧಾರವಾಡ (೧೭.೭.೨೦೨೪)