
ದೇಶ-ವಿದೇಶಗಳ ಹಿಂದೂ ನಾಯಕರನ್ನು ಒಂದೇ ವೇದಿಕೆಯಲ್ಲಿ ತರುವುದು, ಇದು ಸನಾತನ ಸಂಸ್ಥೆಯ ಒಂದು ಅದ್ಭುತ ಮತ್ತು ಊಹಿಸಲಸಾಧ್ಯ ದೈವಿಕಾರ್ಯ !
‘ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪೆಯಿಂದ ಗೋವಾದಲ್ಲಿ ೩ ದಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಅತ್ಯಂತ ಯಶಸ್ವಿಯಾಗಿದೆ. ಅದನ್ನು ವರ್ಣಿಸಲು ಶಬ್ದಗಳೇ ಸಾಲದು. ಭಾಗವಹಿಸಿದವರೆಲ್ಲರ ಚಿಕ್ಕ ಕುಂಭಮೇಳದಲ್ಲಿದ್ದೇವೆಂದು ಆನಂದದಿಂದ ತೇಲಾಡಿದರು. ರಾಷ್ಟ್ರೀಯ ವಿಚಾರದ ಗಂಗೆಯಲ್ಲಿ, ಭಾವ-ಭಾವನೆ ಮತ್ತು ಪ್ರೀತಿ ಆತ್ಮೀಯತೆಯ ಯಮುನೆಯಲ್ಲಿ ಹಾಗೂ ಗುರುಜಿಯವರ (ಪ.ಪೂ. ಡಾ. ಆಠವಲೆಯವರ) ಆಧ್ಯಾತ್ಮಿಕ ಜನಜಾಗೃತಿ ಮತ್ತು ಉತ್ಕೃಷ್ಠ ಮಾರ್ಗದರ್ಶನದ ಸರಸ್ವತಿ ನದಿಯಲ್ಲಿ ಮಿಂದು ಪಾವನಗೊಂಡೆವು. ‘ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಇದ್ದಲ್ಲಿ ಏನÀನ್ನೂ ಸಾಧಿಸಬಹುದು’, ಎಂಬುದಕ್ಕೆ ಶಂಖನಾದ ಮಹೋತ್ಸವವು ಸಾಕ್ಷಿಯಾಗಿದೆ. ದೇವದುರ್ಲಭ ಕಾರ್ಯಕರ್ತರು, ನಿಸ್ವಾರ್ಥ ಸಾಧಕರು ರಾಷ್ಟ್ರದ ಬಗ್ಗೆ ಅಪ್ರತಿಮ ನಿಷ್ಠೆ ಹಾಗೂ ಗುರುಗಳ ಬಗ್ಗೆ ಪಾರದರ್ಶಕ ಪ್ರೀತಿ-ಗೌರವವೂ ಇವೇ ಈ ಸಮಾವೇಶದ ಯಶಸ್ಸಿಗೆ ಆಧಾರಸ್ತಂಭಗಳಾದವು. ಸಾಧಕರು ಯಾವಾಗಲೂ ನಗುಮುಖದಿಂದ ಇರುತ್ತಿದ್ದರು. ಪ್ರತಿನಿಧಿಗಳಿಗೆ ಉತ್ಸಾಹ ಮೂಡಿಸುತ್ತಿತ್ತು. ಸಾಧಕರ ಮುಖದಲ್ಲಿ ಬೇಸರ, ದಣಿವು ಇರುತ್ತಿರಲಿಲ್ಲ. ಶಾಂತತೆ, ಆತ್ಮೀಯತೆಯ ಭಾವ, ಉತ್ಸಾಹದ ಚಿಲುಮೆ ಸಮಾಧಾನದಿಂದ ಉತ್ತರ ನೀಡುವುದು ಇವೆಲ್ಲವೂ ಭಾಗವಹಿಸಿದವರಿಗೆ ಪ್ರೇರಣೆ ಸಿಕ್ಕಿತು.
೧. ದೇಶದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳನ್ನು ಒಂದೇ ಸೂರಿನಡಿಗೆ ತರುವುದು ದೇವದುರ್ಲಭ ಕಾರ್ಯ
ವಿವಿಧ ಭಾಷಿಕರನ್ನು, ದೇಶದ ಎಲ್ಲ ರಾಜ್ಯಗಳನ್ನು ವಿಭಿನ್ನ ವಿಚಾರಧಾರೆಗಳಿರುವವರನ್ನು, ಉದ್ಯಮಿ, ವ್ಯಾಪಾರಿ, ವಿವಿಧ ಸಂಘಟನೆಗಳನ್ನು ಮತ್ತು ಸಂಘಟಕರನ್ನು ಒಂದೇ ಸೂರಿನಡಿಗೆ ಒಂದೇ ವಿಚಾರಧಾರೆಗೆ ಒಟ್ಟುಗೂಡಿಸುವುದು ದೇವದುರ್ಲಭ ಕಾರ್ಯವಾಗಿದೆ. ಇದು ಪ.ಪೂ. ಗುರುದೇವರಿಂದ ಮಾತ್ರ ಸಾಧ್ಯವೆಂದು ಗಟ್ಟಿಯಾಗಿ ಹೇಳಬಹುದು. ಹಿಂದೂ ಸಂಘಟನೆಗಳು ಒಂದಾಗಬೇಕು, ಹಿಂದೂಗಳು ಒಗ್ಗಟ್ಟಾಗಬೇಕು. ಜಾಗೃತರಾಗಬೇಕು ಎಂದು ಭಾಷಣದಲ್ಲಿ ಮಾತನಾಡುವವರೇ ಹೆಚ್ಚಾಗಿದ್ದಾರೆ. ಸನಾತನ ಸಂಸ್ಥೆಯ ಮೂಲಕ ಪ.ಪೂ. ಗುರುದೇವರು ದೇಶದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ನಾಯಕರನ್ನು ಒಂದೇ ವೇದಿಕೆಗೆ ಬರುವಂತೆ ಮಾಡಿದ್ದೂ ಇದೊಂದು ಆದ್ಭುತವಾಗಿದೆ ಹಾಗೂ ಕಲ್ಪನಾತೀತವಾಗಿದೆ. ಇಂತಹ ಸಾಧನೆ-ಸಾಹಸ ಪ.ಪೂ. ಗುರುದೇವರಿಗೆ ಮಾತ್ರ ಸಾಧ್ಯವೆಂದು ಎದೆ ತಟ್ಟಿ ಹೇಳಬಹುದು. ಗುರುಗಳ ತಪಸ್ಸು ತ್ಯಾಗದ ಪ್ರತೀಕವಾದ ಸನಾತನ ಸಂಸ್ಥೆಯು ಇಪ್ಪತೈದು ವರ್ಷ ಪೂರೈಸಿ ಇತಿಹಾಸ ನಿರ್ಮಿಸಿದೆ.
೨. ಪ.ಪೂ. ಡಾ. ಆಠವಲೆಯವರ ದೂರದೃಷ್ಟಿ
ದುರ್ಲಕ್ಷಿತ ಮತ್ತು ಉಪೇಕ್ಷಿಸಿದ ಹಿಂದೂ ನಾಯಕರನ್ನು, ಕಾರ್ಯಕರ್ತರನ್ನು ಪ.ಪೂ. ಗುರುಗಳು ಅಂತರಾಳದಿಂದ ಆಯ್ಕೆ ಮಾಡಿ ಅವರಿಗೆ ‘ಹಿಂದೂ ರಾಷ್ಟ್ರ ರತ್ನ’ ಮತ್ತು ‘ಸನಾತನ ಧರ್ಮಶ್ರೀ ಪುರಸ್ಕಾರ’ವನ್ನು ನೀಡಿ ಸನ್ಮಾನಿಸಿದರು, ಇದು ಅತ್ಯುತ್ತಮವಾಗಿದೆ. ಹಿಂದೂ ಸಂಘಟನೆಯು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಪ್ರಭಾವಿಯೋ ಅಥವಾ ಪರಿಣಾಮಕಾರಿಯೋ, ಎಂಬುದನ್ನು ಗಮನಿಸಿದರೆÉ ಇವತ್ತಿನ ದೇಶದ ಪರಿಸ್ಥಿತಿಗನುಸಾರ ಕೇವಲ ಆವಶ್ಯಕತೆಯ ವಿಚಾರ ಮಾಡಿದರು, ಇದು ಪ.ಪೂ. ಡಾ. ಆಠವಲೆಯವರ ದೂರದೃಷ್ಟಿಯನ್ನು ತೋರಿಸುತ್ತದೆ.
೩. ಮಹೋತ್ಸವದಲ್ಲಿ ವಿವಿಧ ವೈಚಾರಿಕತೆಯ ಪ್ರವಾಹ ಹರಿಯುವುದು
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ವೈಚಾರಿಕತೆಯ ಪ್ರವಾಹ ಹರಿಯುತ್ತಿತ್ತು. ಇಂದಿನ ಅಗತ್ಯಗನುಸಾರ ವಿಷಯಗಳನ್ನು ಕಲಿಸಲಾಯಿತು. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಧಾರ್ಮಿಕ ಆಚರಣೆಯ ಶಕ್ತಿ ಮತ್ತು ಹೋರಾಟದ ವೃತ್ತಿಯ ಬಗ್ಗೆ ಅಗತ್ಯಗನುಸಾರ ವಿವಿಧ ವಕ್ತಾರರಿಂದ ಮಾರ್ಗದರ್ಶನವಾಯಿತು. ಸಂತರ ವಾಣಿ, ತಜ್ಞರ ಮಾರ್ಗದರ್ಶನ, ಯುವಕರ ಘರ್ಜನೆ, ವಿದೇಶಿ ಹಿಂದೂ ನಾಯಕರ ಆಕ್ರಂದನ ಇಂತಹ ಅತ್ಯಂತ ಸಮರ್ಪಕ ವಿಷಯಗಳಿಂದ ಪ್ರಬೋಧಿಸಲಾಯಿತು. ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಅರ್ಹ ನಾಯಕರಿಗೆ ಪ್ರೇರಣೆ ಕೊಟ್ಟು ಆಯ್ದ ಕೆಲವರಿಗೆ ಪುರಸ್ಕರಿಸಿದ್ದು ಯೋಗ್ಯವಾಗಿತ್ತು. ಆದ್ದರಿಂದ ಹಿಂದೂಗಳಿಗೆ ಪ್ರೇರಣೆ, ಪ್ರೋತ್ಸಾಹ ಮತ್ತು ಅನುಸರಿಸಲು ಮಾರ್ಗದರ್ಶನ ಸಿಕ್ಕಿತು.
೪. ತನಗೆ ದೊರಕಿದ ‘ಸನಾತನ ಧರ್ಮಶ್ರೀ’ ಪುರಸ್ಕಾರವೆಂದರೆ ‘ಪ.ಪೂ. ಡಾ. ಆಠವಲೆಯವರ ಆಶೀರ್ವಾದ’ !

ಪ.ಪೂ. ಡಾ. ಆಠವಲೆಯವರಿಂದ ನನಗೂ ‘ಸನಾತನ ಧರ್ಮಶ್ರೀ’ ಪುರಸ್ಕಾರ ಸಿಕ್ಕಿತು. ಆದ್ದರಿಂದ ನನ್ನ ಜೀವನವು ಸಾರ್ಥಕವಾಯಿತು. ನನಗೆ ಈ ಹಿಂದೆ ಕೆಲವು ಸಂಘಟನೆಯವರು ನನ್ನನ್ನು ಪುರಸ್ಕರಿಸುವುದು ದೂರದ ಮಾತು; ಆದರೆ ಅವರು ನನ್ನನ್ನು ಹೀಯಾಳಿಸುವುದು, ಅವಮಾನಿಸುವುದು ಮತ್ತು ನನ್ನ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿದರೂ ಸಾಕು; ಅದುವೇ ನನ್ನ ಕಾರ್ಯಕ್ಕೆ ಮಾನ್ಯತೆ ಪಡೆದ ಹಾಗೆ ಅನಿಸುತ್ತದೆ. ೨೦೦೬ ರಲ್ಲಿ ಡಾ. ಪ್ರವೀಣ ತೊಗಾಡಿಯಾ ಇವರು ಒಂದು ಮಾತು ಹೇಳಿದ್ದರು, ”ಅವರು ಮುಸಲ್ಮಾನರನ್ನು ಹತ್ತಿರ ತೆಗೆದುಕೊಳ್ಳುತ್ತಾರೆ; ಆದರೆ ಮುತಾಲಿಕರೇ, ನಿಮ್ಮನ್ನು ಸ್ವೀಕರಿಸುವುದಿಲ್ಲ,’ ಎಂದು ಹೇಳಿದ್ದರು. ಇದು ಸತ್ಯವಾಯಿತು. ಪ.ಪೂ. ಡಾ. ಆಠವಲೆಯವರು ನನ್ನಂತಹ ಅಲ್ಪನನ್ನು ಪುರಸ್ಕರಿಸಿ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದ್ದಾರೆ. ಅದನ್ನು ನಾನು ಸಹರ್ಷವಾಗಿ ಸ್ವೀಕರಿಸುತ್ತೇನೆ. ಈ ಪುರಸ್ಕಾರವೆಂದರೆ ನಾನು ‘ಪ.ಪೂ. ಡಾ. ಆಠವಲೆಯವರ ಆಶೀರ್ವಾದ’ ಎಂದು ಸ್ವೀಕರಿಸಿದ್ದೇನೆ.
೫. ಸನಾತನ ಸಂಸ್ಥೆಯ ರಜತ ಮಹೋತ್ಸವ : ಪ.ಪೂ. ಡಾ. ಆಠವಲೆಯವರ ತಪಸ್ಸಿನ ಫಲ !
ಸನಾತನ ಸಂಸ್ಥೆಯ ರಜತ ಮಹೋತ್ಸವವೆಂದರೆ ಒಂದು ದೊಡ್ಡ ವೈಚಾರಿಕ ವಿಜಯವಾಗಿದೆ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರವು ಸನಾತನ ಸಂಸ್ಥೆಯ ಸಾಧಕರಿಗೆ ಅದೆಷ್ಟು ಚಿತ್ರಹಿಂಸೆ, ಅವಮಾನ, ಅಪಪ್ರಚಾರ ನೀಡಿತು ಹಾಗೂ ಬಂಧನ ಮತ್ತು ಪ್ರಕರಣಗಳನ್ನು ದಾಖಲಿಸಿತು. ಅಷ್ಟೇ ಅಲ್ಲದೇ, ಸುಳ್ಳು ಆರೋಪಗಳಿಂದಾಗಿ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರುವ ಬಗ್ಗೆಯೂ ಚರ್ಚೆಯಾಯಿತು. ಇದೆಲ್ಲವನ್ನೂ ಶಾಂತಿಯುತವಾಗಿ ಸಹಿಸಿ ಕೊಂಡು ಕಾನೂನಾತ್ಮಕ ಹೋರಾಡಿ ಮತ್ತು ವೈಚಾರಿಕವಾಗಿ ಎದುರಿಸಿ ಗೆಲ್ಲುವುದೆಂದರೆ, ಇದು ಪ.ಪೂ. ಡಾ. ಆಠವಲೆಯವರ ತಪಸ್ಸಿನ ಫಲವಾಗಿದೆ. ಇಂದು ಚಿತ್ರಹಿಂಸೆ ಮಾಡಿದ ಸರಕಾರಗಳು ಬದಲಾಗಿವೆ ಮತ್ತು ಈಗಿನ ಸರಕಾರವು ಸನಾತನ ಸಂಸ್ಥೆಗೆ ಸನ್ಮಾನ, ಮನ್ನಣೆ ಮತ್ತು ಗೌರವವನ್ನು ತೋರಿಸಿತು, ಇದು ಒಂದು ದೊಡ್ಡ ಸಾಧನೆಯಾಗಿದೆ. ಸನಾತನ ಸಂಸ್ಥೆಗೆ ಸಾವಿರ-ಸಾವಿರ ಅಭಿನಂದನೆ ಮತ್ತು ಪ.ಪೂ. ಡಾ. ಆಠವಲೆಯವರಿಗೆ ಕೃತಜ್ಞತಾಪೂರ್ವಕ ನಮಸ್ಕಾರಗಳು !
– ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ. (೨೯.೫.೨೦೨೫)
ಗದಗದಲ್ಲಿ ಓರ್ವ ಪೂಜ್ಯ ಸ್ವಾಮೀಜಿಯವರಿಂದ ಪ್ರಮೋದ ಮುತಾಲಿಕ ಇವರಿಗೆ ‘ಸನಾತನ ಧರ್ಮಶ್ರೀ’ ಪುರಸ್ಕಾರ ದೊರಕಿದ ಬಗ್ಗೆ ಅಭಿನಂದನೆ !ಗದಗದಲ್ಲಿನ ಓರ್ವ ಪೂಜ್ಯ ಸ್ವಾಮೀಜಿಯವರು ನನಗೆ ‘ಸನಾತನ ಧರ್ಮಶ್ರೀ’ ಪುರಸ್ಕಾರ ದೊರಕಿದ ಬಗ್ಗೆ ಅಭಿನಂದನೆ ಮಾಡಿದರು. ಅವರು ನನಗೆ, ”ಮುತಾಲಿಕರೇ ದೇಶದ ಎರಡನೇ ಅತೀದೊಡ್ಡ ಹಿಂದೂ ಸಂಸ್ಥೆ, ಸನಾತನ ಸಂಸ್ಥೆಯು ನಿಮ್ಮನ್ನು ಗುರುತಿಸಿ ಕೊಟ್ಟ ಪುರಸ್ಕಾರ, ಇದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಸರಕಾರಿ ಪುರಸ್ಕಾರಗಳನ್ನು ಹಣದಿಂದ ಖರೀದಿಸಲಾಗುತ್ತದೆ ಅಥವಾ ಶಾಸಕರ, ಸಂಸದರ, ಮಂತ್ರಿಗಳ ಪ್ರಭಾವದಿಂದ ಪಡೆಯಲಾಗುತ್ತದೆ; ಆದರೆ ನಿಮಗೆ ನೀಡಿರುವ ಪ್ರಶಸ್ತಿಯನ್ನು ಸತತ ಪರಿಶ್ರಮ, ತ್ಯಾಗ ಮತ್ತು ಹಿಂದೂತ್ವಕ್ಕಾಗಿ ಹೋರಾಡಿದ ಹಿಂದೂವೀರರಿಗೆ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಮೊದಲು ಸನಾತನ ಸಂಸ್ಥೆ ಮತ್ತು ಪ.ಪೂ. ಆಠವಲೆಜಿ ಇವರನ್ನು ಅಭಿನಂದಿಸುತ್ತೇನೆ. ಆಮೇಲೆ ನಿಮಗೂ ಅಭಿನಂದನೆ !’’ ಎಂದು ಹೇಳಿದರು – ಶ್ರೀ. ಪ್ರಮೋದ ಮುತಾಲಿಕ |
ಶಾಲೆ-ಕಾಲೇಜುಗಳಲ್ಲಿ ಕೇಸರಿ ವಸ್ತ್ರ ಹಂಚಲು ಪೊಲೀಸರಿಂದ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ನಿಷೇಧ
‘ಗೋಕುಲ್’ ನ ಹಲಾಲ್ ಪ್ರಮಾಣಪತ್ರವನ್ನು ತಕ್ಷಣ ರದ್ದುಗೊಳಿಸಿ : ಕೊಲ್ಲಾಪುರದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಆಕ್ರೋಶ !
ಕಲ್ಯಾಣ್ನ ದುರ್ಗಾಡಿ ಕೋಟೆಯ ಬಳಿ ಘಂಟಾನಾದ ಆಂದೋಲನ ನಡೆಸಿದ ಶಿವಸೈನಿಕರ ವಿರುದ್ಧ ದೂರು ದಾಖಲು!
ಹಿಂದುತ್ವನಿಷ್ಠರ ಸಂಘಟಿತ ಬೇಡಿಕೆಯ ನಂತರ ಪುಣೆಯ ಸಾರಸಬಾಗ್ ಉದ್ಯಾನವನ ಎರಡು ದಿನಗಳ ಕಾಲ ಬಂದ್ !
‘ಗೋಕುಲ್’ ಹಾಲು ಉತ್ಪಾದನಾ ಒಕ್ಕೂಟದ ವಿವಿಧ ಉತ್ಪನ್ನಗಳಿಗೆ ‘ಹಲಾಲ್’ ಪ್ರಮಾಣಪತ್ರ!
ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ೫೦ ಕ್ಕೂ ಹೆಚ್ಚು ಹಸುಗಳ ರಕ್ಷಣೆ!