‘ಸ್ಪಾಟ್‌ ರಿಡಕ್ಷನ್’ ಈ ವ್ಯಾಯಾಮದ ಪದ್ಧತಿಯಿಂದ ಶರೀರದ ನಿರ್ದಿಷ್ಟ ಭಾಗದ ಕೊಬ್ಬು ಕಡಿಮೆಯಾಗುತ್ತದೆಯೇ ?

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೫

‘ಶರೀರದ ನಿರ್ದಿಷ್ಟ ಭಾಗದ ವ್ಯಾಯಾಮ ಮಾಡಿ ಆ ಭಾಗದ ಕೊಬ್ಬು ಕಡಿಮೆ ಮಾಡುವುದು’, ಈ ವ್ಯಾಯಾಮದ ಪದ್ಧತಿಯು ಇತ್ತೀಚೆಗೆ ಪ್ರಚಲಿತವಾಗಿದೆ, ಉದಾ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೊಟ್ಟೆಯ ವ್ಯಾಯಾಮ ಮಾಡುವುದು, ತೊಡೆಗಳ ಕೊಬ್ಬನ್ನು ಕಡಿಮೆ ಮಾಡಲು ಉಟಾಬಸಿ ಮಾಡುವುದು ಇತ್ಯಾದಿಗಳು. ಈ ಪದ್ಧತಿಗೆ ‘ಸ್ಪಾಟ್‌ ರಿಡಕ್ಷನ್‌’, ಎಂದು ಕರೆಯುತ್ತಾರೆ; ಆದರೆ ಅದಕ್ಕಾಗಿ ಯಾವುದೇ ವೈಜ್ಞಾನಿಕ ಸಾಕ್ಷಿಗಳು ಲಭ್ಯವಿಲ್ಲ. ವ್ಯಾಯಾಮವನ್ನು ಪ್ರಾರಂಭಿಸಿದ ನಂತರ ಶರೀರವು ಕೇವಲ ಆ ನಿರ್ದಿಷ್ಟ ಭಾಗದ ಮೇಲೆ ಕಾರ್ಯವನ್ನು ಮಾಡುತ್ತದೆ ಹಾಗೂ ಸಂಪೂರ್ಣ ಶರೀರದಲ್ಲಿನ ಕೊಬ್ಬು ಕಡಿಮೆ (ಫ್ಯಾಟ್‌ ಬರ್ನ) ಮಾಡಲು ಆರಂಭಿಸುತ್ತದೆ. ಆದ್ದರಿಂದ ಕೊಬ್ಬು ಕಡಿಮೆಯಾಗಲು ಶರೀರದಲ್ಲಿಯೇ ಸಂಪೂರ್ಣ ಪ್ರಕ್ರಿಯೆ ನಡೆಯುತ್ತದೆ.

ಶ್ರೀ. ನಿಮಿಷ ಮ್ಹಾತ್ರೆ

ನಿರ್ದಿಷ್ಟ ಭಾಗದ ವ್ಯಾಯಾಮವನ್ನು ಮಾಡುವುದರಿಂದ ಅಲ್ಲಿನ ಸ್ನಾಯುಗಳಲ್ಲಿ ಹೆಚ್ಚು ಸ್ಫೂರ್ತಿ ಬಂದು ಆ ಭಾಗದ ಆಕಾರವು ಬದಲಾಗುತ್ತ ಹೋಗುತ್ತದೆ. ಈ ಪ್ರಕ್ರಿಯೆಗೆ ‘ಖಿಚಿಡಿಗೆಣಎಜ ಖಿಒಟೀಟಿಗ್’, ಎಂದು ಕರೆಯುತ್ತಾರೆ. ಕೊಬ್ಬು ಕಡಿಮೆ ಯಾಗುವ ಬದಲು ಕೇವಲ ಶರೀರಕ್ಕೆ ಆಕಾರ ನೀಡುವ ಉದ್ದೇಶ ಇದ್ದರೆ ಈ ಪ್ರಕ್ರಿಯೆಯನ್ನು ಅವಲಂಬಿಸಲು ಸಾಧ್ಯವಾಗುತ್ತದೆ.

ಶರೀರದ ನಿರ್ದಿಷ್ಟ ಭಾಗದಲ್ಲಿನ ಕೊಬ್ಬು ಕಡಿಮೆ ಮಾಡುವುದಾದರೂ, ‘ನಿಯಮಿತವಾಗಿ ವ್ಯಾಯಾಮ, ಸಮತೋಲನ ಆಹಾರ ಮತ್ತು ಯೋಗ್ಯ ಜೀವನಶೈಲಿ’, ಇವುಗಳ ಒಟ್ಟು ಪ್ರಕ್ರಿಯೆಯಿಂದ ದೇಹದಲ್ಲಿನ ಒಟ್ಟು ಕೊಬ್ಬು ಕಡಿಮೆ ಮಾಡುವುದು ಆವಶ್ಯಕವಾಗಿದೆ. ‘ಸಂಪೂರ್ಣ ಶರೀರದ ಪರಿಶ್ರಮವಾಗುವ ದೃಷ್ಟಿಯಿಂದ ವ್ಯಾಯಾಮ ಮಾಡುವುದು ಮತ್ತು ಯೋಗ್ಯ ದಿನಚರಿ’, ಇದು ಕೊಬ್ಬು ಕಡಿಮೆ ಮಾಡುವ ಉದ್ದೇಶವನ್ನು ಸಾಧ್ಯಗೊಳಿಸುವ ಮತ್ತು ಒಟ್ಟು ಆರೋಗ್ಯವನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರತಜ್ಞರು (ಫಿಜಿಯೋಥೆರಪಿಸ್ಟ್‌), ಫೋಂಡಾ, ಗೋವಾ. (೩೦.೯.೨೦೨೪)