
ಇತ್ತೀಚೆಗೆ ಬಿಸಿಲು ಮತ್ತು ಸೆಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಕಾಮಗಾರಿಯ ಕೆಲಸಗಳು ಹೆಚ್ಚುತ್ತಿರುವ ಈ ಯುಗದಲ್ಲಿ, ಸೆಕೆಯಿಂದ ಸೂಕ್ಷ್ಮ ಧೂಳು ಮತ್ತೊಮ್ಮೆ ಗಾಳಿಯಲ್ಲಿ ಹಾರತೊಡಗುತ್ತದೆ, ಅದರಿಂದಾಗಿ ಸೋಂಕು ದೇಹದಲ್ಲಿ ಬೆಳೆಯಲು ಹೆಚ್ಚಿನ ಅವಕಾಶ ಸಿಗುತ್ತದೆ. ಇದರಿಂದಾಗಿ ಗಂಟಲು ನೋವು, ನೆಗಡಿ, ಕೆಮ್ಮು ಇರುವ ರೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಅದರೊಂದಿಗೆ, ದೇಹದ ತುರಿಕೆ, ಚರ್ಮ ಒಣಗುವುದು, ಹೊಟ್ಟೆ ಕೆಡುವುದು ಇಂತಹ ಸಮಸ್ಯೆಗಳೂ ಹೆಚ್ಚಾಗಿವೆ. ಇವುಗಳಿಗೆ ಪರಿಹಾರವೆಂದು, ಈ ಕೆಳಗಿನ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.

೧. ದೇಹಕ್ಕೆ ಕೊಬ್ಬರಿಎಣ್ಣೆ ಹಚ್ಚಲು ಆರಂಭಿಸಬೇಕು. ಈ ಮೊದಲೇ ಹಚ್ಚುತ್ತಿದ್ದರೆ ಅದು ಉತ್ತಮ !
೨. ಬೆಚ್ಚಗಿನ ನೀರಿಗೆ ಅರಿಶಿನ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
೩. ಶುಂಠಿ, ಜ್ಯೇಷ್ಠಮಧು, ಅರಿಶಿನದಂತಹ ವಸ್ತುಗಳನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳಿ. ಇದರಿಂದ ತೊಂದರೆಯಾದಾಗ ವೈದ್ಯರ ಸಲಹೆ ಪಡೆದು ಅವುಗಳನ್ನು ಬಳಸಬಹುದು.
೪. ಹುಳಿ, ಉಪ್ಪು ಮತ್ತು ಖಾರದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಮುಖ್ಯವಾಗಿ ಚೈನೀಸ್, ಸೋಯಾಸಾಸ್, ಮದ್ಯಪಾನ,
ಹಸಿರು ಖಾರದ ಮೆಣಸಿನಕಾಯಿ ಇರುವ ಪದಾರ್ಥಗಳನ್ನು ತಿನ್ನಬೇಡಿ.
೫. ಜ್ವರದ ನಂತರ ಒಣ ಕೆಮ್ಮು ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆ ನಿಟ್ಟಿನಲ್ಲಿ ಕೇವಲ ‘ಕಫ್ ಸಿರಪ್’ ಇದು ಹೆಚ್ಚಾಗಿ ನಿಷ್ಪ್ರಯೋಜಕವಾಗಿರುತ್ತದೆ. ವೈದ್ಯರ ಸಲಹೆ ಪಡೆದು ಮೊದಲೇ ನೆಕ್ಕುವ ಚೂರ್ಣ ಮತ್ತು ಹಠಾತ್ತಾಗಿ ಜ್ವರ ಬಂದರೆ ತೆಗೆದುಕೊಳ್ಳಲು ಕೆಲವು ಔಷಧಿಗಳನ್ನು ತಂದಿಟ್ಟುಕೊಂಡರೆ ಸಮಯ ವ್ಯರ್ಥವಾಗದೆ ತಕ್ಷಣ ಔಷಧಿಗಳನ್ನು ಆರಂಭಿಸಬಹುದು.
೬. ಚಿಕ್ಕ ಮಕ್ಕಳ ದೃಷ್ಟಿಯಿಂದ ಮಕ್ಕಳಿಗೆ ಪ್ರತಿದಿನವೂ ತೆಗೆದುಕೊಳ್ಳು ವಂತಹ ಮತ್ತು ನೆಗಡಿ ಮತ್ತು ಕೆಮ್ಮಿಗೆ ಉಪಯುಕ್ತವಾಗುವಂತಹ ಪದ್ಧತಿಯ ಔಷಧಿಗಳನ್ನು ನೀಡಬಹುದು. ಇದರಿಂದ ನೆಗಡಿ ಮತ್ತು ಕೆಮ್ಮು ಗುಣಮುಖವಾಗುವುದು; ನೆಗಡಿ, ಕೆಮ್ಮು ಆದರೆ ಕಡಿಮೆ ಪ್ರಮಾಣದಲ್ಲಿ ಆಗುವುದು ಮತ್ತು ಜ್ವರದ ಹಂತಕ್ಕೆ ಹೋಗುವುದಿಲ್ಲ. ಇಂತಹ ಮೂರು ಬಗೆಯ ಪ್ರಯೋಜನವಾಗುತ್ತದೆ.
೭. ವಾಹನದಲ್ಲಿ ಹೋಗುವಾಗ ಮುಖಪಟ್ಟಿ (ಮಾಸ್ಕ್) ಧರಿಸುವುದು, ನಮಗೆ ರೋಗಲಕ್ಷಣಗಳಿರುವಾಗ ಬೇರೆ ಕೋಣೆಯಲ್ಲಿರುವುದು (ಐಸೊಲೇಟ್) ಈ ಬಗ್ಗೆ ನಾವು ಜಾಗರೂಕರಾಗಿ ಅರ್ಥಮಾಡಿ ಕೊಂಡು ಪಾಲಿಸಬೇಕು. ‘ಕೋವಿಡ್’ ಸಾಂಕ್ರಾಮಿಕ ರೋಗದಿಂದ ಹೊರಬಂದಿದ್ದರೂ, ಜನರಲ್ಲಿ ಈ ಬಗ್ಗೆ ಜಾಗೃತಿ ಬಹಳಷ್ಟು ಕಡಿಮೆ ಇರುವುದು ಕಂಡುಬರುತ್ತದೆ. ಕೆಮ್ಮುವಾಗ ಬಾಯಿಗೆ ಕರವಸ್ತ್ರವನ್ನು ಅಡ್ಡ ಹಿಡಿದು ಮುಖವನ್ನು ಪಕ್ಕಕ್ಕೆ ತಿರುಗಿಸು ವುದು ಅಥವಾ ಅನಾರೋಗ್ಯದ ಸಮಯದಲ್ಲಿ ನಮ್ಮ ಮಕ್ಕಳಿಂದ ದೂರವಿರುವುದು, ನೆಗಡಿಯಾದಾಗ ತಂದೆ-ತಾಯಿ ತಮ್ಮ ಕರವಸ್ತ್ರವನ್ನು ಮಕ್ಕಳಿಗೆ ಬಳಸಲು ಕೊಡದಿರುವುದು, ವೈದ್ಯರ ಬಳಿಗೆ ಹೋಗುವಾಗ ‘ಮಾಸ್ಕ್’ ಧರಿಸುವುದು ಇವೆಲ್ಲ ವಿಷಯಗಳು ನಮಗೆ ಅರ್ಥವಾಗಬೇಕು. ಮನೆಯಲ್ಲಿ ನಮ್ಮ ಕುಟುಂಬದವರಿಗೆ ಮತ್ತು ಡಾಕ್ಟರರ (ವೈದ್ಯರ) ಬಳಿಗೆ ಹೋಗುವಾಗ, ಕಾಯುವ ಕೋಣೆಯಲ್ಲಿರುವ ಇತರ ರೋಗಿಗಳಿಗೆ, ಹಾಗೆಯೇ ವೈದ್ಯರು ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಆ ಸೋಂಕನ್ನು ನಾವು ಅರಿವಿಲ್ಲದೆ ಹರಡುತ್ತೇವೆ. ಎಲ್ಲರೂ ಈ ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ಎಲ್ಲರ ಆರೋಗ್ಯವೂ ಸಂರಕ್ಷಿಸಲ್ಪಡುತ್ತದೆ.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೧೦.೯.೨೦೨೫)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !