ಮನೆಯ ಕೆಲಸಗಳನ್ನು ಆಶ್ರಮಸೇವೆಯೆಂದು ಮಾಡುವ ಮತ್ತು ಗುರುದೇವರ ಬಗ್ಗೆ ಶ್ರದ್ಧೆ ಇರುವ ಮಂಗಳೂರಿನ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಮೋಕ್ಷಾ ವಿಜಯೇಂದ್ರ ಕುಡ್ವ (ವಯಸ್ಸು ೧೫ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ! ಕು. ಮೋಕ್ಷಾ ವಿಜಯೇಂದ್ರ ಕುಡ್ವ ಇವಳು ಈ ಪೀಳಿಗೆಯಲ್ಲಿ ಒಬ್ಬಳಾಗಿದ್ದಾಳೆ !

(ವರ್ಷ ೨೦೨೫ ರಲ್ಲಿ ಕು. ಮೋಕ್ಷಾ ವಿಜಯೇಂದ್ರ ಕುಡ್ವಳ ಆಧ್ಯಾತ್ಮಿಕ ಮಟ್ಟವು ಶೇ. ೫೧ ರಷ್ಟಿತ್ತು. – ಸಂಕಲನಕಾರರು)

‘ಕು. ಮೋಕ್ಷಾ ವಿಜಯೇಂದ್ರ ಕುಡ್ವ ಇವಳ ಬಗ್ಗೆ ಅವಳ ತಾಯಿಯ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.’

ಕು. ಮೋಕ್ಷಾ ಕುಡ್ವ

೧. ಪರಿಸ್ಥಿತಿಯನ್ನು ಸ್ವೀಕರಿಸುವುದು ಮತ್ತು ಸ್ಥಿರವಾಗಿರುವುದು

‘೨೦೨೦ ರ ಕೊರೊನಾದ ಅವಧಿಯಲ್ಲಿ ನಾವು ಮಂಗಳೂರಿಗೆ ಬರಲು ನಿರ್ಧರಿಸಿದಾಗ ಮೋಕ್ಷಳಿಗೆ ತುಂಬಾ ಆನಂದವಾಯಿತು. ಅವಳು ಎಲ್ಲಾ ಪರಿಸ್ಥಿತಿಗಳಲ್ಲಿ ಸಕಾರಾತ್ಮಕವಾಗಿದ್ದಳು. ‘ಮಂಗಳೂರಿನಲ್ಲಿ ಇರಲು ಹೋದರೆ ಸೇವಾಕೇಂದ್ರವು ಮನೆಯಿಂದ ಬಹಳ ಹತ್ತಿರವಿರುತ್ತದೆ, ಆದುದರಿಂದ ಅಮ್ಮನಿಗೆ ಸೇವೆ ಮಾಡಲು ಸಾಧ್ಯವಾಗುತ್ತದೆ’ ಎನ್ನುವ ಭಾವ ಅವಳದ್ದಾಗಿತ್ತು. ನನಗೆ ಸೇವೆ ಮಾಡಲು ಪೂರಕ ವಾತಾವರಣವನ್ನು ನಿರ್ಮಿಸಿಕೊಡುವ ಪ್ರಯತ್ನ ಅವಳದ್ದಾಗಿತ್ತು. ತದನಂತರ ಅವಳಲ್ಲಿ ಸ್ಥಿರತೆ ಬಂದು, ಅವಳ ನಾಮಜಪವು ಇನ್ನೂ ಉತ್ತಮ ರೀತಿಯಲ್ಲಿ ನಡೆಯಲಾರಂಭಿಸಿತು.

೨. ಧರ್ಮಾಚರಣೆಯ ಬಗ್ಗೆ ಆಸಕ್ತಿ

೨೦೨೨ ರಲ್ಲಿ ಮೋಕ್ಷಳ ಹನ್ನೆರಡನೇ ಜನ್ಮದಿನದಂದು ಅವಳ ಅತ್ತೆ ಕೇಕ್ ತಂದಿದ್ದರು; ಆದರೆ ಮೋಕ್ಷಳಿಗೆ ‘ಅನ್ನಬ್ರಹ್ಮ’ನ ಮೇಲೆ ಚಾಕು ಬಳಸಿ ಕೇಕ್ ಕತ್ತರಿಸುವುದು ಇಷ್ಟವಾಗಲಿಲ್ಲ; ಹಾಗಾಗಿ ಅವಳು ತುಂಬಾ ಅಳತೊಡಗಿದಳು. ‘ನೀನು ಹಾಗೆ ಮಾಡದಿದ್ದರೆ ಮನೆಯವರಿಗೆ ಬೇಜಾರಾಗಬಹುದು’ ಎಂದು ಅವಳಿಗೆ ಹೇಳಿದಾಗ, ಅವಳು ಚಮಚದಿಂದ ಕೇಕ್‌ಅನ್ನು ತೆಗೆದು ಎಲ್ಲರಿಗೂ ಹಂಚಿದಳು. ಅವಳು ನನಗೆ, ‘ಇನ್ನು ಮುಂದೆ ಕೇಕ್ ತರಬೇಡ ಎಂದು ನೀನು ಮನೆಯವರಿಗೆಲ್ಲ ಹೇಳು’, ಎಂದಳು. ಅವಳು ಇದನ್ನು ಹೇಳುತ್ತಿರುವಾಗ, ಅವಳಲ್ಲಿ ಸಾಧನೆಯ ಗಾಂಭೀರ್ಯ ಮತ್ತು ತಳಮಳ ಇರುವುದು ನನಗೆ  ಅರಿವಾಯಿತು.

೩. ಮನೆಯ ಕೆಲಸಗಳನ್ನು ಆಶ್ರಮ ಸೇವೆಯೆಂದು ಮಾಡುವುದು

ಅವಳು ನನಗೆ ಪ್ರತಿಯೊಂದು ಸೇವೆಯಲ್ಲಿ ಸಹಕರಿಸುತ್ತಾಳೆ. ನನಗೆ ಪ್ರತಿದಿನ ಸಂಜೆ ಸತ್ಸಂಗವಿರುತ್ತದೆ. ಮೋಕ್ಷಾಳ ತಂದೆ ಸಂಜೆ ೭ ಗಂಟೆಗೆ ಮನೆಗೆ ಬಂದಾಗ, ಮೋಕ್ಷಾ ಅವರಿಗಾಗಿ ತಿಂಡಿ ತಯಾರಿಸುತ್ತಾಳೆ ಮತ್ತು ಚಹಾ ಮಾಡಿಕೊಡುತ್ತಾಳೆ. ಅವಳಿಗೆ ೭ ವರ್ಷವಿರುವಾಗಿನಿಂದಲೇ ಮನೆಯ ಕಸವನ್ನು ಗುಡಿಸುತ್ತಾಳೆ ಮತ್ತು ನೆಲ ಒರೆಸುತ್ತಾಳೆ. ಅವಳು ನನಗೆ, “ಮನೆಯ ಕಸ ಗುಡಿಸುವುದು ಮತ್ತು ನೆಲ ಒರೆಸುವುದು’ ಇದನ್ನು ನಾನು ಆಶ್ರಮ ಸೇವೆಯೆಂದು ಮಾಡುತ್ತೇನೆ”, ಎಂದು ಹೇಳುತ್ತಾಳೆ.

೪. ‘ಸೇವೆ ಮತ್ತು ಸಾಧನೆ’ಯ ತಳಮಳ

ಅವಳು ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ ಮತ್ತು ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಪ್ರಚಾರಕ್ಕಾಗಿ ಮನೆಮನೆಗಳಿಗೆ ಹೋಗಿ ಮನಃಪೂರ್ವಕ ಸೇವೆ ಮಾಡುತ್ತಾಳೆ. ತನಗೆ ನೀಡಿದ ಸೇವೆಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾಳೆ.

೫. ಕಲಿಯುವ ವೃತ್ತಿ

ನಾವು ಅವಳಿಗೆ ಹೇಳಿದ ವಿಷಯವನ್ನು ಅವಳು ತಕ್ಷಣವೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಅವಳಲ್ಲಿ ಕಲಿಯುವ ವೃತ್ತಿ ಹೆಚ್ಚಿದೆ ಮತ್ತು ಅವಳಲ್ಲಿ ಸಾಧಕತ್ವ ಇದೆ.

೬. ಆಸಕ್ತಿ ಇಲ್ಲದಿರುವುದು

ನಾನು ನನಗಾಗಿ ಸೀರೆ ಖರೀದಿಸಲು ಹೋದಾಗ, ಮೋಕ್ಷಾಳಿಗೆ ‘ನಿನಗೆ ಹೊಸ ಉಡುಪು ತೆಗೆದುಕೊಳ್ಳಬೇಕು ಎಂದು ಅನಿಸುವುದಿಲ್ಲವೇ ?’ ಎಂದು ಕೇಳುತ್ತೇನೆ. ಆಗ ಅವಳು, ‘ನೀನು ಹಿಂದೂ ರಾಷ್ಟ್ರ-ಜಾಗೃತಿ ಸಭೆ, ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಮತ್ತು ಪ್ರವಚನ ಮಾಡುವುದು ಈ ಸೇವೆಗಳ ನಿಮಿತ್ತ ಸೀರೆಗಳನ್ನು ಖರೀದಿಸುತ್ತಿ. ನನ್ನ ಬಳಿ ಬಹಳಷ್ಟು ಉಡುಪುಗಳಿವೆ’ ಎಂದು ಹೇಳುತ್ತಾಳೆ. ಆಗ ‘ನಾನು ಸಾಧನೆಯಲ್ಲಿ ಹಿಂದೆ ಇದ್ದೇನೆ’ ಎಂದು ನನಗೆ ಅನಿಸಿತು. ಮೋಕ್ಷಾಳಿಗೆ ‘ಇದು ಬೇಕು, ಅದು ಬೇಕು’ ಎಂಬ ಹಠ ಅಥವಾ ವೃತ್ತಿಯಿಲ್ಲ.

೭. ಗುರುದೇವರ ಬಗ್ಗೆ ಅಪಾರ ಶ್ರದ್ಧೆ

೨೦೨೩ ರಲ್ಲಿ ಗೋವಾದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ ನಡೆದಿತ್ತು. ಆಗ ಮೋಕ್ಷಾಳಿಗೆ ಗೋವಾಕ್ಕೆ ಹೋಗುವ ಅವಕಾಶ ಸಿಕ್ಕಾಗ, ‘ಇದು ನನ್ನ ಪರಮ ಭಾಗ್ಯದ ದಿನವಾಗಿದೆ’ ಎಂದು ಹೇಳಿದಳು. ಅಲ್ಲಿ ಗುರುದೇವರ ದರ್ಶನವಾದ ನಂತರ ಅವಳು, “ನನ್ನ ಜನ್ಮ ಸಾರ್ಥಕವಾಯಿತು. ಸಾಕ್ಷಾತ್ ಮಹಾವಿಷ್ಣುರೂಪಿ ಗುರುದೇವರ ದರ್ಶನವಾಯಿತು’, ಎಂದು ಹೇಳಿದಳು. ಬ್ರಹ್ಮೋತ್ಸವದ ಕಾರ್ಯಕ್ರಮಕ್ಕೆ ಹೋಗುವ ಮೊದಲು ಗೋವಾಕ್ಕೆ ಹೋಗಿ ಗುರುದೇವರನ್ನು ನೋಡಬೇಕೆಂದು ಅವಳಿಗೆ ಬಹಳ ಇಚ್ಛೆಯಿತ್ತು. ಬ್ರಹ್ಮೋತ್ಸವದ ಕಾರ್ಯಕ್ರಮಕ್ಕೆ ಹೋಗಿ ಬಂದ ನಂತರ ಈಗ ಅವಳು ಗೋವಾಕ್ಕೆ ಹೋಗುವ ಬಗ್ಗೆ ಕೇಳುತ್ತಿಲ್ಲ.’

– ಸೌ. ಪವಿತ್ರಾ ಕುಡ್ವ (ಕು. ಮೋಕ್ಷಾಳ ತಾಯಿ, ಆಧ್ಯಾತ್ಮಿಕ ಮಟ್ಟ ಶೇ. ೬೦), ಮಂಗಳೂರು. (೨೬.೫.೨೦೨೪)