‘ಆಕ್ಸಿಸ್ ಬ್ಯಾಂಕ್’‌ನಿಂದ ನವರಾತ್ರಿಯ ಕ್ರೈಸ್ತೀಕರಣ : ದಾಂಡಿಯಾ ಕಾರ್ಯಕ್ರಮದಲ್ಲಿ ‘ಸಾಂಟಾ ಕ್ಲಾಸ್’ ಪ್ರದರ್ಶನ!

ನವರಾತ್ರಿಯಿಂದ ಕ್ರಿಸ್ಮಸ್ ವರೆಗೆ ಬ್ಯಾಂಕಿನ ಅನೇಕ ಆಕರ್ಷಕ ಕೊಡುಗೆಗಳು (ಆಫರ್) ಇವೆ ಎಂಬ ಸಂದೇಶ!

ನವದೆಹಲಿ – ಭಾರತದ ಪ್ರಸಿದ್ಧ ಬ್ಯಾಂಕ್‌ಗಳಲ್ಲಿ ಒಂದಾದ ‘ಆಕ್ಸಿಸ್ ಬ್ಯಾಂಕ್’ ಹಿಂದೂಗಳ ನವರಾತ್ರಿ ಉತ್ಸವವನ್ನು ಕ್ರೈಸ್ತೀಕರಣಗೊಳಿಸುವ ಪ್ರಯತ್ನ ಮಾಡಿದೆ. ಬ್ಯಾಂಕ್ ತನ್ನ ಸಾಮಾಜಿಕ ಮಾಧ್ಯಮದ ವೀಡಿಯೊದಲ್ಲಿ (‘ರೀಲ್’ನಲ್ಲಿ) ನವರಾತ್ರಿಯ ದಾಂಡಿಯಾ ಕಾರ್ಯಕ್ರಮದ ಮಧ್ಯದಲ್ಲಿ ಸಾಂಟಾ ಕ್ಲಾಸ್ ಅನ್ನು ತೋರಿಸಿದೆ. ಜೊತೆಗೆ, ಆತನ ಕೈಯಲ್ಲಿ ದಾಂಡಿಯಾ ಕಡ್ಡಿಗಳನ್ನೂ ನೀಡಲಾಗಿದೆ. ‘ಆಕ್ಸಿಸ್ ಬ್ಯಾಂಕಿನ ಆಫರ್‌ಗಳು ನವರಾತ್ರಿಯಿಂದ ಕ್ರಿಸ್ಮಸ್‌ವರೆಗೆ ಮುಂದುವರಿಯುತ್ತವೆ’ ಎನ್ನುವ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಇದಕ್ಕೆ ಹಿಂದೂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಈ ಕುರಿತು ಬ್ಯಾಂಕ್ ಯಾವುದೇ ಸ್ಪಷ್ಟೀಕರಣ ನೀಡಿರುವ ವಿಷಯ ಇನ್ನೂ ತಿಳಿದುಬಂದಿಲ್ಲ.

ಕೆಲವು ಪ್ರಮುಖ ಪ್ರತಿಕ್ರಿಯೆಗಳು!

೧. ‘ಆಕ್ಸಿಸ್ ಬ್ಯಾಂಕ್’ ನವರಾತ್ರಿ ಉತ್ಸವದ ಈ ಅಪಚಾರವನ್ನು ನಿಲ್ಲಿಸದಿದ್ದರೆ, ನಾನು ಬ್ಯಾಂಕಿನಲ್ಲಿರುವ ನನ್ನ ೪ ಖಾತೆಗಳನ್ನು ಮುಚ್ಚುತ್ತೇನೆ! – ಶ್ರೀ. ಸಂಜಯ್ ದೀಕ್ಷಿತ್, ಮಾಜಿ ಆಡಳಿತಾಧಿಕಾರಿ ಮತ್ತು ‘ದಿ ಜೈಪುರ ಡೈಲಾಗ್ಸ್’ ಎಂಬ ಹಿಂದೂತ್ವನಿಷ್ಠ ಸಂಘಟನೆಯ ಸಂಸ್ಥಾಪಕ

೨. ಇದು ಯಾವ ರೀತಿಯ ಹಾಸ್ಯ? ನೀವು ಮಿತಿಯಲ್ಲಿರಲು ಕಲಿಯಿರಿ. ನಿಮ್ಮ ಲಾಭಕ್ಕಾಗಿ ನಮ್ಮ ಹಬ್ಬಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ! – ರಿತು ಪ್ರಿಯಾ

೩. ಈ ರೀತಿಯ ಜಾಹೀರಾತನ್ನು ಈದ್ ಅಥವಾ ಮುಸ್ಲಿಮರಿಗೆ ಸಂಬಂಧಿಸಿದಂತೆ ತಯಾರಿಸಲು ಸಾಧ್ಯವೇ? – ವೈಶಾಲಿ ಮಿಶ್ರಾ

ಸಂಪಾದಕೀಯ ನಿಲುವು

  • ಹಿಂದೂ ಧರ್ಮಕ್ಕೆ ಈ ರೀತಿ ಅವಮಾನ ಮಾಡಿದ ‘ಆಕ್ಸಿಸ್ ಬ್ಯಾಂಕ್’ ಅನ್ನು ಖಂಡಿಸುತ್ತೇವೆ! ಈ ಭಾರತೀಯ ಬ್ಯಾಂಕಿನ ಲಕ್ಷಾಂತರ ಖಾತೆದಾರರಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದಾರೆ. ಹಾಗಾಗಿ, ಈಗ ಹಿಂದೂಗಳು ಈ ಜಾಹೀರಾತಿನ ಬಗ್ಗೆ ಬ್ಯಾಂಕನ್ನು ಪ್ರಶ್ನಿಸಬೇಕು!
  • ಇದು ಹಿಂದೂ ಹಬ್ಬಗಳ ಒಂದು ರೀತಿಯ ಜಾತ್ಯತೀತೀಕರಣವಾಗಿದೆ. ಕಟ್ಟರ ಕ್ರಿಶ್ಚಿಯನ್ನರು ಎಂದಿಗೂ ಹಿಂದೂ ಹಬ್ಬಗಳ ಪ್ರಸಾದವನ್ನು ತಿನ್ನುವುದಿಲ್ಲ. ಹೀಗಿರುವಾಗ ಸಾಂಟಾ ಕ್ಲಾಸ್ ದೇವಿಯ ಪ್ರಸಾದವನ್ನು ತಿನ್ನುತ್ತಿರುವಂತೆ ತೋರಿಸುವ ಧೈರ್ಯವನ್ನು ಬ್ಯಾಂಕ್ ಏಕೆ ತೋರಿಸುತ್ತಿಲ್ಲ?